RRB Recruitment 2020: ಆರ್​ಆರ್​ಬಿಯಿಂದ ಮೆಗಾ ನೇಮಕಾತಿ ರ‍್ಯಾಲಿ : 1 ಲಕ್ಷಕ್ಕೂ ಅಧಿಕ ಖಾಲಿ ಹುದ್ದೆಗಳಿಗೆ ಪ್ರವೇಶ ಪರೀಕ್ಷೆ

RRB Recruitment 2020 : ಭಾರತೀಯ ರೈಲ್ವೆ ಸಿಇಎನ್ 03/2019 ರ ಅಡಿಯಲ್ಲಿ ನೇಮಕಾತಿ ಪರೀಕ್ಷೆಯನ್ನು 2020ರ ಡಿಸೆಂಬರ್ 15 ರಿಂದ ಡಿಸೆಂಬರ್ 18 ರವರೆಗೆ ಮೂರು ಹಂತಗಳಲ್ಲಿ ಎರಡು ಪಾಳಿಯಲ್ಲಿ ಅಂದರೆ ಬೆಳಿಗ್ಗೆ 10: 30 ರಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಮತ್ತು ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ನಡೆಯಲಿದೆ

jobs

jobs

 • Share this:
  RRB Recruitment 2020 : ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ತನ್ನ ಮೆಗಾ ನೇಮಕಾತಿ ರ‍್ಯಾಲಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ಇಂದಿನಿಂದ ಪರೀಕ್ಷೆ ಆರಂಭವಾಗಿದೆ. ಭಾರತೀಯ ರೈಲ್ವೆ ಸಿಇಎನ್ 03/2019 ರ ಅಡಿಯಲ್ಲಿ ನೇಮಕಾತಿ ಪರೀಕ್ಷೆಯನ್ನು 2020ರ ಡಿಸೆಂಬರ್ 15 ರಿಂದ ಡಿಸೆಂಬರ್ 18 ರವರೆಗೆ ಮೂರು ಹಂತಗಳಲ್ಲಿ ಎರಡು ಪಾಳಿಯಲ್ಲಿ ಅಂದರೆ ಬೆಳಿಗ್ಗೆ 10. 30 ರಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಮತ್ತು ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ನಡೆಸಲಿದೆ.

  ಪ್ರವೇಶ ಪತ್ರ, ಪರೀಕ್ಷೆಯ ದಿನಾಂಕ ಮತ್ತು  ಪರೀಕ್ಷೆ ನಡೆಯುವ ಸ್ಥಳದ ಮಾಹಿತಿಯನ್ನು ಈಗಾಗಲೇ ರೈಲ್ವೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡಲಾಗಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು  COVID-19 ಮಾರ್ಗಸೂಚಿಗಳನ್ನು ಅನುಸರಿಸಬೇಕು.

  1. ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಮಾಸ್ಕ್ ತರುವುದು​​​ ಕಡ್ಡಾಯ

  2. ಕೋವಿಡ್ ಪರೀಕ್ಷೆ ಮಾಡಿಸಿಕೊಂಡ ಸ್ವಯಂ ಘೋಷಣೆ ಪತ್ರ ತರುವುದು ಕಡ್ಡಾಯ

  3.ಅಭ್ಯರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು

  4. ಅಭ್ಯರ್ಥಿಗಳ ದೇಹದ ಉಷ್ಣಾಂಶ ಪರೀಕ್ಷಿಸಲಾಗುತ್ತದೆ.

  ಮತ್ತೊಂದೆಡೆ, ರೈಲ್ವೆ ನೇಮಕಾತಿ ಮಂಡಳಿಯು ಡಿಸೆಂಬರ್ 28 ರಿಂದ ಆರ್‌ಆರ್‌ಬಿ ಎನ್‌ಟಿಪಿಸಿ ಪರೀಕ್ಷೆಯನ್ನು ಮಾರ್ಚ್ 2021 ರವರೆಗೆ ಮುಂದುವರಿಯುತ್ತದೆ. ಇದಕ್ಕಾಗಿ, ಪರೀಕ್ಷೆಯನ್ನು ಪ್ರಾರಂಭಿಸುವ 4 ದಿನಗಳ ಮೊದಲು ಅಭ್ಯರ್ಥಿಗಳಿಗೆ ಪ್ರವೇಶ ಪತ್ರಗಳನ್ನು ನೀಡಲಾಗುತ್ತದೆ ಎಂದು ರೈಲ್ವೆ ನೇಮಕಾತಿ ಮಂಡಳಿತಿಳಿಸಿದೆ.

  ಇದನ್ನೂ ಓದಿ : Facebook Fuel For India 2020 – ಗಮನ ಸೆಳೆಯಿತು ಮಾರ್ಕ್ ಝುಕರ್​ಬರ್ಗ್ ಮತ್ತು ಅಂಬಾನಿ ಸಂವಾದ

  ಐಸೋಲೇಟೆಡ್‌ ಮತ್ತು ಮಿನಿಸ್ಟ್ರೇರಿಯಲ್ ಕೆಟಗರಿ ಅಡಿಯಲ್ಲಿ 1663 ಹುದ್ದೆಗಳ ಭರ್ತಿಗೆ ಪರೀಕ್ಷೆಯು ಡಿಸೆಂಬರ್ 15 ರಿಂದ ಆರಂಭಗೊಳ್ಳಲಿದೆ. ಡಿಸೆಂಬರ್ 23, 2020 ರಂದು ಕೊನೆಗೊಳ್ಳಲಿದೆ.

  ಆರ್‌ಆರ್‌ಬಿ ಗ್ರೂಪ್ ಡಿ (ಲೆವೆಲ್‌-1) ನೇಮಕಾತಿ ಪರೀಕ್ಷೆಯನ್ನು 1.03 ಲಕ್ಷ ಹುದ್ದೆಗಳಿಗೆ 2021 ರ ಏಪ್ರಿಲ್ 15 ರಿಂದ ಜೂನ್‌ ನಡುವೆ ನಡೆಯಲಿದೆ.

  ರೈಲ್ವೆ ನೇಮಕಾತಿ ಮಂಡಳಿಯು ಗ್ರೂಪ್ ಡಿ ಕೆಟಗರಿ ಅಡಿಯಲ್ಲಿ ಟ್ರ್ಯಾಕ್ ಮೇಂಟೆನರ್ಸ್‌, ಪಾಯಿಂಟ್ಸ್‌ಮನ್ ಮತ್ತು ಇತರೆ ಹುದ್ದೆಗಳು ಸೇರಿದಂತೆ ಒಟ್ಟು 1,03,749 ಹುದ್ದೆಗಳನ್ನು ನೇಮಕ ಮಾಡಲಿದೆ. ಅಧಿಕೃತ ಮೂಲಗಳ ಪ್ರಕಾರ ಈ ಹುದ್ದೆಗಳಿಗೆ 1.15 ಕೋಟಿ ಅರ್ಜಿಗಳನ್ನು ಆರ್‌ಆರ್‌ಬಿ ಸ್ವೀಕರಿಸಿದೆ.
  Published by:G Hareeshkumar
  First published: