ಭಾರೀ ಹಿಮಪಾತವಾಗುತ್ತಿರುವ ಹಿನ್ನಲೆಯಲ್ಲಿ ವಿಶ್ವದ ಅತ್ಯಂತ ದೂರದ ಅಂಚೆ ಕಚೇರಿಯಾದ ಅಂಟಾರ್ಟಿಕಾದಲ್ಲಿ (Antarctica) ಕಾರ್ಯನಿರ್ವಹಿಸುತ್ತಿರುವ ನಾಲ್ವರು ಮಹಿಳೆಯರನ್ನು ಸಂರಕ್ಷಿಸಲು ರಾಯಲ್ ನೇವಿ ಸೇನೆಯವರು ಬಂದಿದ್ದು ಮಹಿಳೆಯರನ್ನು ಸಂರಕ್ಷಿಸಲಾಗಿದೆ ಎಂಬುದಾಗಿ ವರದಿಯಾಗಿದೆ. ಕ್ಲೇರ್, ಮೇರಿ ಹಿಲ್ಟನ್, ನಟಾಲಿಯಾ ಹಾಗೂ ಲೂಸಿ ಹೆಸರಿನ ನಾಲ್ವರು ಮಹಿಳೆಯರು ಗೌಡಿಯರ್ ದ್ವೀಪದಲ್ಲಿನ ಐತಿಹಾಸಿಕ ತಾಣ ಪೋರ್ಟ್ ಲಾಕ್ರಾಯ್ನಲ್ಲಿ (Port Lockroyal) ನೆಲೆಯಾಗಿರುವ ವಿಶ್ವದ ಅತ್ಯಂತ ದೂರದ ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವರ್ಷದ ಅಕ್ಟೋಬರ್ನಲ್ಲಿ (October) ಈ ನಾಲ್ವರು ಉದ್ಯೋಗಕ್ಕೆ ಸೇರಿದ್ದರು ಎಂದು ವರದಿಯಾಗಿದೆ. ಅಂಚೆ ಕಚೇರಿಯ ಕಟ್ಟಡವು ಹಿಮದಿಂದ ಸಂಪೂರ್ಣವಾಗಿ ಮುಚ್ಚಿಹೋಗಿದ್ದು ರಾಯಲ್ ಸೇನೆ ಇದೀಗ ಕಟ್ಟಡವನ್ನು ಹಿಮದಿಂದ ಮುಕ್ತಗೊಳಿಸಿದೆ.
ಅಂಟಾರ್ಕ್ಟಿಕಾದಲ್ಲಿ ವಿಶ್ವದ ಅತ್ಯಂತ ದೂರದ ಅಂಚೆ ಕಚೇರಿಯನ್ನು ನಡೆಸಲು ಮತ್ತು ಅಲ್ಲಿನ ಪೆಂಗ್ವಿನ್ಗಳನ್ನು ಎಣಿಸಲು ನಾಲ್ಕು ಮಹಿಳೆಯರನ್ನು ಆಯ್ಕೆ ಮಾಡಲಾಗಿತ್ತು. ಈ ನಾಲ್ವರು ದಾಖಲೆ ಸಂಖ್ಯೆಯ ಅರ್ಜಿದಾರರನ್ನು ಸೋಲಿಸಿ ಗೌಡಿಯರ್ ದ್ವೀಪದಲ್ಲಿ ಐತಿಹಾಸಿಕ ತಾಣ ಪೋರ್ಟ್ ಲಾಕ್ರಾಯ್ ಅನ್ನು ನಿರ್ವಹಿಸುವ ಜವಾಬ್ದಾರಿಯುತ ತಂಡವೆಂದೆನಿಸಿತ್ತು.
ಹಿಮ ಅಗೆಯಲು ಎರಡು ದಿನಗಳನ್ನು ತೆಗೆದುಕೊಂಡಿರುವ ತಂಡ!
ಸುದ್ದಿಗಳ ಪ್ರಕಾರ ದಕ್ಷಿಣ ಗೋಳಾರ್ಧದಲ್ಲಿ ನವೆಂಬರ್ನಿಂದ ಫೆಬ್ರವರಿಯವರೆಗೆ ಇರುವ ಆಸ್ಟ್ರಲ್ ಬೇಸಿಗೆಗಾಗಿ ಕಚೇರಿಯ ಸಿಬ್ಬಂದಿ ಸಹಾಯದಿಂದ ನಾಲ್ವರು ಮಹಿಳೆಯರು ತೆರಳುವವರಿದ್ದರು, ಈ ಸಮಯದಲ್ಲೇ 6-12 ಅಡಿಗಳಷ್ಟು ಭಾರೀ ಹಿಮಪಾತ ಉಂಟಾಗಿದೆ ಎಂದು ತಿಳಿದು ಬಂದಿದೆ.
HMS ಪ್ರೊಟೆಕ್ಟರ್ನ ನಾವಿಕರು ಮತ್ತು ರಾಯಲ್ ಮೆರೀನ್ಗಳು ಪೋರ್ಟ್ ಲಾಕ್ರಾಯ್ ಸೈಟ್ ಅನ್ನು ಅಗೆಯಲು ಎರಡು ದಿನಗಳನ್ನು ವಿನಿಯೋಗಿಸಿದ್ದಾರೆ. ಪ್ಲೈಮೌತ್ನಲ್ಲಿ ನೆಲೆಗೊಂಡಿರುವ HMS ಪ್ರೊಟೆಕ್ಟರ್ನ ತಂಡವು ಇಂಗ್ಲೆಂಡ್ನಲ್ಲಿ ಹಲವಾರು ಟನ್ಗಳಷ್ಟು ಹಿಮವನ್ನು ಸ್ಥಳಾಂತರಿಸಿದ್ದು ತಾತ್ಕಾಲಿಕ ದುರಸ್ತಿಗಳನ್ನು ನಡೆಸಿತು ಎಂದು ವರದಿ ಮಾಡಿದೆ.
ನೌಕಾ ತಂಡದ ಸಹಾಯ
ಮರದ ಸಂಗ್ರಹಣೆ ಹಾಗೂ ಅಡಿಗಲ್ಲುಗಳನ್ನು ಸ್ಥಿರಗೊಳಿಸಲು ನೌಕಾ ಹಡಗು ನಿಯಂತ್ರಣಗಳನ್ನು ತಂಡವು ಬಳಸಿದೆ ಎಂದು ಎಂಜಿನಿಯರ್ಗಳು ತಿಳಿಸಿದ್ದಾರೆ.
ಐಸ್ ಪೆಟ್ರೋಲ್ ಶಿಪ್ಗಳು ಹಿಮದಿಂದ ಹೆಪ್ಪುಗಟ್ಟಿದ ಅಂತಾರಾಷ್ಟ್ರೀಯ ಸ್ಥಳಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತದೆ ಹಾಗೂ ಅಲ್ಲಿ ಸಂರಕ್ಷಣೆ ಕಾರ್ಯಗಳು ಮತ್ತು ದುರಸ್ತಿ ಕೆಲಸಗಳನ್ನು ನಿರ್ವಹಿಸುತ್ತದೆ. ಪೋರ್ಟ್ ಲಾಕ್ರಾಯ್ನಂತಹ ಸಂಸ್ಥೆಗಳು ಆಹಾರ ವಸ್ತುಗಳು ಮೊದಲಾದ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುತ್ತದೆ ಹಾಗೂ ಯುಕೆ ಇನ್ನಿತರ ದೇಶಗಳ ವೈಜ್ಞಾನಿಕ ಸಂಶೋಧನೆಗಳಿಗೆ ಬೆಂಬಲ ನೀಡುತ್ತದೆ ಎಂಬುದು ತಿಳಿದುಬಂದಿದೆ.
ಇದನ್ನೂ ಓದಿ: ಯುಕೆ ಪ್ರಜೆಗಳಿಗೆ ಮತ್ತೆ ಇ-ವೀಸಾಗಳನ್ನು ಅನುಮತಿಸುತ್ತಿರುವ ಭಾರತ,ಕೋವಿಡ್ ನಂತರ ಇದೇ ಮೊದಲ ಬಾರಿಗೆ ಇ-ವೀಸಾಗೆ ಅನುಮತಿ!
ರಕ್ಷಣಾ ತಂಡದ ಭಾಗವಾಗಿರುವ ಲೀ ತೀವ್ರ ಪ್ರಮಾಣದ ಹಿಮಪಾತದಿಂದ ಆಘಾತಗೊಂಡಿರುವುದಾಗಿ ತಿಳಿಸಿದ್ದು, ಕಟ್ಟಡಗಳೆಲ್ಲವೂ ಹಿಮದಿಂದ ಮುಚ್ಚಿಹೋಗಿದೆ ಎಂದು ತಿಳಿಸಿದ್ದಾರೆ.
ದ್ವೀಪದಲ್ಲಿ ಮೂಲಸೌಕರ್ಯಗಳೇ ಇಲ್ಲ
ಪೋರ್ಟ್ ಲಾಕ್ರಾಯ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯರಿಗೆ ನೀರು ಹಾಗೂ ಫ್ಲಶಿಂಗ್ ಟಾಯ್ಲೆಟ್ ಅಂತೆಯೇ ವೈ-ಫೈ ವ್ಯವಸ್ಥೆ ಇದ್ದಿರಲಿಲ್ಲ ಹಾಗೂ ತಮ್ಮ ಮನೆಯವರೊಂದಿಗೆ ಕರೆಮಾಡಿ ಮಾತನಾಡಲು ಇವರಿಗೆ 10 ನಿಮಿಷಗಳ ಕಾಲಾವಕಾಶ ಮಾತ್ರ ದೊರೆಯುತ್ತಿತ್ತು. ಅದಾಗ್ಯೂ ಈ ನಾಲ್ವರು ಇಂತಹ ದ್ವೀಪದಲ್ಲಿ ಕೆಲಸ ಮಾಡುವುದು ತಮಗೆ ಕಷ್ಟವೆಂದೆನಿಸುವುದಿಲ್ಲ ಎಂದೇ ತಿಳಿಸಿದ್ದಾರೆ.
ಪೆಂಗ್ವಿನ್ಗಳನ್ನು ಎಣಿಕೆ ಮಾಡುವ ಕೆಲಸ
ಬೇಸಿಗೆ ಕಾಲದಲ್ಲಿ ಸುಮಾರು 20,000 ಜನರು ಭೇಟಿ ನೀಡುವ ಪ್ರವಾಸಿ ಆಕರ್ಷಣೆಯಾಗಿ ಈ ಸ್ಥಳವು ಪ್ರಪಂಚದ ಅತ್ಯಂತ ದೂರದ ಅಂಚೆ ಕಚೇರಿಗೆ ಹೆಸರುವಾಸಿಯಾಗಿದೆ.
ಇದು ಪ್ರತಿ ವರ್ಷ ಸುಮಾರು 80,000 ಕಾರ್ಡ್ಗಳನ್ನು 100 ಕ್ಕೂ ಹೆಚ್ಚು ದೇಶಗಳಿಗೆ ಮೇಲ್ ಮಾಡುತ್ತದೆ. ಇಲ್ಲಿರುವ ಪೆಂಗ್ವಿನ್ಗಳನ್ನು ಎಣಿಕೆ ಮಾಡುವ ಕೆಲಸವನ್ನು ಮೇಲ್ವಿಚಾರಣೆಯ ತಂಡವು ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ