ಪೊಲೀಸರನ್ನು ಬೆಚ್ಚಿ ಬೀಳಿಸಿದ ರೌಡಿ ಶೀಟರ್‌ನ ವೈರಲ್ 'ಗನ್' ವಿಡಿಯೋ..!

Viral Video: ಸ್ಥಳೀಯ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾದ ಘಟನೆಯ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಕಾರಿನ ಬಾನೆಟ್‌ ಮೇಲೆ ಕುಳಿತಿದ್ದು, ಸುತ್ತಲೂ ಜನರು ಗುಂಪುಗೂಡಿದ್ದರೂ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಕೆಲವರಿಗೆ ತಾವು ಸುದ್ದಿಯಾಗಬೇಕೆಂಬ ಹಪಾಹಪಿ ಇದ್ದೇ ಇರುತ್ತದೆ. ಇದಕ್ಕೆ ಏನು ಬೇಕಾದರೂ ಮಾಡಲು ತಯಾರಾಗಿರುತ್ತಾರೆ. ಇದೇ ರೀತಿ ತೆಲಂಗಾಣದ ನಿಜಾಮಾಬಾದ್‌ನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ರೌಡಿಶೀಟರ್‌ವೊಬ್ಬ ಮತ್ತೆ ಸುದ್ದಿಯಾಗಿದ್ದಾನೆ. ಇದಕ್ಕೆ ಕಾರಣ ವೈರಲ್‌ ವಿಡಿಯೋ. ಈ ವೈರಲ್‌ ವಿಡಿಯೋ ಕೆಲ ಕಾಲ ಪೊಲೀಸರ ತಲೆ ಕೆಡಿಸಿತ್ತು. ಆ ವಿಡಿಯೋದಲ್ಲಿ ಅಂತಹದ್ದೇನು ಇದೆ ಅಂತೀರಾ..? ಆತ ಗನ್‌ ಹಿಡಿದು ಪಾರ್ಟಿಯಲ್ಲಿ ಸುತ್ತಲೂ ಹಲವು ಜನರಿರುವಾಗ ಗಾಳಿಯಲ್ಲಿ ಗುಂಡು ಹಾರಿಸಿದ್ದ..! ಹೌದು, ಈ ರೀತಿಯ ವಿಡಿಯೋವೊಂದು ವೈರಲ್‌ ಆದ ತಕ್ಷಣ ಇದು ಪೊಲೀಸರನ್ನೇ ನಿದ್ದೆ ಗೆಡಿಸಿತ್ತು. ನಂತರ ಆತನನ್ನು ಹುಡುಕಿ ಮತ್ತೆ ವಶಕ್ಕೆ ತೆಗೆದುಕೊಂಡ ಬಳಿಕವೇ ಅಸಲಿ ಸತ್ಯ ಬಯಲಿಗೆ ಬಂತು. ಅದೇನು ಅಂತೀರಾ.. ಮುಂದೆ ಓದಿ..


ಪ್ರಿವೆಂಟೀವ್‌ ಡಿಟೆನ್ಷನ್‌ ಕಾಯ್ದೆಯಡಿ ಬಂಧನವಾಗಿದ್ದ ರೌಡಿಶೀಟರ್‌ ಆರಿಫ್‌ನನ್ನು ಏಪ್ರಿಲ್‌ನಲ್ಲಿ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಆದರೆ, ಇತ್ತೀಚೆಗೆ ಪಾರ್ಟಿಯಲ್ಲಿ ಈತ ಗಾಳಿಯಲ್ಲಿ ಗುಂಡು ಹಾರಿಸಿರುವ ವಿಡಿಯೋವೊಂದು ವೈರಲ್‌ ಆಗಿದ್ದು, ಇದರಿಂದ ತೆಲಂಗಾಣ ಪೊಲೀಸರು ಕೆಲ ಕಾಲ ವಿಚಲಿತರಾಗಿದ್ದರು.


ನಂತರ ಆತನನ್ನು ಪೊಲೀಸರು ವಶಕ್ಕೆ ಪಡೆದ ನಂತರ ವಿಚಾರಣೆ ವೇಳೆ ಆ ವೈರಲ್‌ ವಿಡಿಯೋದ ಅಸಲಿ ಸತ್ಯ ಬಯಲಾಯ್ತು. ಆ ಬಂದೂಕು ಡಮ್ಮಿ ಎಂಬುದು ಪೊಲೀಸರ ಗಮನಕ್ಕೆ ಬಂದಿದೆ. ಅಲ್ಲದೆ, ಗುಂಡು ಹಾರಿಸಿದ ಸದ್ದನ್ನು ಸಹ ಎಡಿಟ್‌ ಮಾಡಲಾಗಿದೆ ಎಂದೂ ನಿಜಾಮಾಬಾದ್‌ ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: ಓಣಂ ಸದ್ಯದ ಜಾಹೀರಾತಿನಲ್ಲಿ ಇಡ್ಲಿ ದೋಸೆ ಬಳಸಿ ಪೇಚಿಗೆ ಸಿಲುಕಿದ ಬಟ್ಟೆ ಬ್ರ್ಯಾಂಡ್

ಸ್ಥಳೀಯ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾದ ಘಟನೆಯ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಕಾರಿನ ಬಾನೆಟ್‌ ಮೇಲೆ ಕುಳಿತಿದ್ದು, ಸುತ್ತಲೂ ಜನರು ಗುಂಪುಗೂಡಿದ್ದರೂ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ.


ತೆಲಂಗಾಣದ ನಿಜಾಮಾಬಾದ್‌ನ ಅತಿಥಿಗೃಹದಲ್ಲಿ ಭಾನುವಾರ ನಡೆದ ಪಾರ್ಟಿಯ ವಿಡಿಯೋ ಇದಾಗಿದ್ದು, ರೌಡಿ ಶೀಟರ್ ಆರಿಫ್ ತನ್ನ ಕಾರಿನಲ್ಲಿ 'ಗನ್' ಸಾಗಿಸುತ್ತಿರುವುದು ಸಹ ಕಂಡುಬಂದಿದೆ.


ಆದರೆ, ಆರಿಫ್ ನಕಲಿ ಆಯುಧವನ್ನು ಇ-ಕಾಮರ್ಸ್ ವೆಬ್‌ಸೈಟ್‌ ಮೂಲಕ ಖರೀದಿಸಿದ್ದು, ಗಾಳಿಯಲ್ಲಿ ಗುಂಡು ಹಾರಿಸಲಾಯಿತು ಎಂಬ ಅಭಿಪ್ರಾಯ ಬರುವಂತೆ ಮಾಡಲು ಅಪರಿಚಿತ ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ಎಡಿಟ್‌ ಮಾಡಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ. ಆ ವ್ಯಕ್ತಿಯ ಉದ್ದೇಶವೆಂದರೆ ಆತ ನಿಜವಾದ ಬಂದೂಕನ್ನು ಹೊಂದಿದ್ದಾನೆ ಮತ್ತು ಜನರನ್ನು ಬೆದರಿಸಲು ಈ ರೀತಿ ಗಾಳಿಯಲ್ಲಿ ಗುಂಡು ಹಾರಿಸಿರುವಂತೆ ತೋರಿಸುವುದು ಎಂದು ನಿಜಾಮಬಾದ್‌ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ತನ್ನನ್ನು ತಾನು ಪ್ರಚಾರ ಮಾಡಿಕೊಳ್ಳಲು ವಿಡಿಯೋ ಚಿತ್ರೀಕರಿಸಿದಂತೆ ತೋರುತ್ತದೆ. ಆದರೂ, ನಕಲಿ ಬಂದೂಕನ್ನು ಬಳಸುವುದು ಮತ್ತು ಅದನ್ನು ನೈಜ ಅಸ್ತ್ರದಂತೆ ಚಿತ್ರಿಸುವುದು ಮತ್ತು ಬ್ರ್ಯಾಂಡ್‌ ಮಾಡುವುದು ಕಾನೂನುಬಾಹಿರ. ಈ ಹಿನ್ನೆಲೆ ರೌಡಿ ಶೀಟರ್ ಆರೀಫ್ ವಿರುದ್ಧ ಸ್ಥಳೀಯ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದು, ಆತನನ್ನು ಇನ್ನೂ ವಿಚಾರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: