ಪಣಜಿ(ನ29): ಗೋವಾದಲ್ಲಿ ನಡೆದ ಭಾರತದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರರ ಮಂಡಳಿಯು 'ದಿ ಕಾಶ್ಮೀರ್ ಫೈಲ್ಸ್' (The Kashmir Files) ಚಿತ್ರದ ಕುರಿತು ಅದರ ಮುಖ್ಯಸ್ಥ ನಾದವ್ ಲ್ಯಾಪಿಡ್ (Nadav Lapid) ಅವರ ಹೇಳಿಕೆಗಳಿಂದ ತನ್ನನ್ನು ತಾನು ದೂರವಿಟ್ಟಿದೆ. ಈ ಕಾಮೆಂಟ್ಗಳು ಸಂಪೂರ್ಣವಾಗಿ ನಾದವ್ ಅವರ ವೈಯಕ್ತಿಕ ಅಭಿಪ್ರಾಯ ಎಂದು ಮಂಡಳಿ ಹೇಳಿದೆ. ಮಂಡಳಿಯು ಅವರ ವೈಯಕ್ತಿಕ ಅಭಿಪ್ರಾಯಗಳನ್ನು ಅನುಮೋದಿಸುವುದಿಲ್ಲ. ಇಸ್ರೇಲಿ ಚಲನಚಿತ್ರ ನಿರ್ದೇಶಕ ನಾದವ್ ಲ್ಯಾಪಿಡ್ ಅವರು ಕಟು ಭಾಷೆಯಲ್ಲಿ ಟೀಕಿಸಿದ್ದು, “ದಿ ಕಾಶ್ಮೀರ್ ಫೈಲ್ಸ್ ಒಂದು ಪ್ರೊಪಗಾಂಡ ಹಾಗೂ ಅಸಭ್ಯ ಚಲನಚಿತ್ರ, ಅಂತಹ ಚಿತ್ರ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾತ್ಮಕ ವಿಭಾಗಕ್ಕೆ ಸೂಕ್ತವಲ್ಲ” ಎಂದು ಹೇಳಿದ್ದಾರೆ.
'ದಿ ಕಾಶ್ಮೀರ್ ಫೈಲ್ಸ್' ಅನ್ನು ವಿವೇಕ್ ಅಗ್ನಿಹೋತ್ರಿ ರಚಿಸಿ, ನಿರ್ದೇಶಿಸಿದ್ದಾರೆ ಎಂಬುವುದು ಉಲ್ಲೇಖನೀಯ. 90ರ ದಶಕದಲ್ಲಿ ಕಾಶ್ಮೀರಿ ಕಣಿವೆಯಿಂದ ಕಾಶ್ಮೀರಿ ಪಂಡಿತರ ವಲಸೆ ಮತ್ತು ಉಗ್ರಗಾಮಿತ್ವದ ಉತ್ತುಂಗವನ್ನು ಆಧರಿಸಿ ಚಿತ್ರದ ಕಥೆ ಇದೆ. ಈ ಚಿತ್ರವು ಭಾರತೀಯ ಬಾಕ್ಸಾಫೀಸ್ನಲ್ಲಿ ದಾಖಲೆಗಳನ್ನು ಮುರಿಯಿತು. ಕೊರೋನಾದಿಂದಾದಿ ಲಾಕ್ಡೌನ್ ಹೇರಿದ್ದ ಸಂದರ್ಭದಲ್ಲಿ ಇಷ್ಟು ದೊಡ್ಡ ದಾಖಲೆ ನಿರ್ಮಾಣವಾಗಿತ್ತೆಂಬುವುದು ಉಲ್ಲೇಖನೀಯ.
ಇದನ್ನೂ ಓದಿ: ನೀಳ ಕೇಶರಾಶಿಯಲ್ಲಿ ಸೌಂದರ್ಯ ಮರೆ ಮಾಚಿಕೊಂಡ ಸುಂದರಿ ಉರ್ಫಿ, ಹೊಸ ಅವತಾರ ಫುಲ್ ಧಗ ಧಗ
'ದಿ ಕಾಶ್ಮೀರ್ ಫೈಲ್ಸ್' ಮಾರ್ಚ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಇದು IFFI ಯ 'ಭಾರತೀಯ ಪನೋರಮಾ ವಿಭಾಗದ' ಭಾಗವಾಗಿತ್ತು ಮತ್ತು ನವೆಂಬರ್ 22 ರಂದು ಪ್ರದರ್ಶಿಸಲಾಯಿತು. ಇದರಲ್ಲಿ ನಟರಾದ ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಶಿ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
'ದಿ ಕಾಶ್ಮೀರ್ ಫೈಲ್ಸ್' ನೋಡಿ ಅಸಮಾಧಾನಗೊಂಡ ನಾದವ್
IFFI 2022ರ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ, ನಾದವ್ ಲ್ಯಾಪಿಡ್, "ನಾವೆಲ್ಲರೂ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದಿಂದ ತೊಂದರೆ ಹಾಗೂ ಆಘಾತಕ್ಕೊಳಗಾಗಿದ್ದೇವೆ. ಅಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಮತ್ತು ಸ್ಪರ್ಧಾತ್ಮಕ ವಿಭಾಗಕ್ಕೆ ಇದು ಸೂಕ್ತವಲ್ಲದ ಅಸಭ್ಯ ಚಿತ್ರ ಎಂದಿದ್ದಾರೆ.
International Film Festival Of India Jury President Nadav Lapid calls ‘The Kashmir Files’ a propoganda movie. Reportedly he is Pandit Aashish Dubey's good friend and deeply hurt that @vivekagnihotri cheated his friend for 1 Lac rupees. pic.twitter.com/ykRrnw39Ol
— Rofl Gandhi 2.0 🏹 (@RoflGandhi_) November 28, 2022
ಈ ವಿಚಾರಕ್ಕೆ ಒತ್ತು ಕೊಟ್ಟ ನಾದವ್
ನಾದವ್ ಲ್ಯಾಪಿಡ್ ಈ ಬಗ್ಗೆ ಮತ್ತಷ್ಟು ಮಾತನಾಡುತ್ತಾ, "ಈ ಭಾವನೆಯನ್ನು ನಿಮ್ಮೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ನನಗೆ ಹಿಂಜರಿಕೆ ಇಲ್ಲ. ಏಕೆಂದರೆ ಹಬ್ಬದ ಉತ್ಸಾಹವು ಕಲೆ ಮತ್ತು ಜೀವನಕ್ಕೆ ಅಗತ್ಯವಾದ ವಿಮರ್ಶಾತ್ಮಕ ಚರ್ಚೆಯನ್ನು ನಿಜವಾಗಿಯೂ ಸ್ವೀಕರಿಸುತ್ತದೆ" ಎಂದಿದ್ದಾರೆ.
ಇದನ್ನೂ ಓದಿ: The Kashmir Files: ಮನೆಯಲ್ಲೇ ಕುಳಿತು ಕನ್ನಡದಲ್ಲೇ ನೋಡಿ 'ದಿ ಕಾಶ್ಮೀರ್ ಫೈಲ್ಸ್'! ಎಲ್ಲಿ, ಯಾವಾಗ ಸ್ಟ್ರೀಮಿಂಗ್ ಇಲ್ಲಿದೆ
ಕಳೆದ ವಾರ ಉತ್ಸವದಲ್ಲಿ ದಿ ಕಾಶ್ಮೀರ್ ಫೈಲ್ ಚಿತ್ರವನ್ನು ಪ್ರದರ್ಶಿಸಲಾಗಿತ್ತು. ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ನಿರ್ದೇಶಿರುವ ಈ ಚಿತ್ರವನ್ನು ಮಾರ್ಚ್ 11 ರಂದು ಥಿಯೇಟರ್ಗಳಲ್ಲಿ ಬಿಡುಗಡೆಗೊಳಿಸಲಾಗಿತ್ತು. ಕಾಶ್ಮೀರ ಮುಸ್ಲಿಮರ ವಿರುದ್ಧ ಧ್ವೇಷವನ್ನು ಹರಡುವಂತಿದೆ ಎಂದು ಈ ಚಿತ್ರವನ್ನು ಸಿಂಗಾಪುರ ಚಲನಚಿತ್ರ ಮಂಡಳಿಯು ನಿರ್ಬಂಧಿಸಿತ್ತು. ಬಿಜೆಪಿ ನೇತೃತ್ವದ ಸರ್ಕಾರಗಳು ಈ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ನೀಡಿದ್ದು, ನರೇಂದ್ರ ಮೋದಿ, ಅಮಿತ್ ಶಾ, ಆದಿತ್ಯನಾಥ್ ಮೊದಲಾದ ಬಿಜೆಪಿ ನಾಯಕರೇ ಈ ಚಿತ್ರವನ್ನು ವೀಕ್ಷಿಸಿ ಬೆಂಬಲಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ