ಸಂಸತ್​​ಗೆ PM Modi ಆಗಮಿಸುತ್ತಿದ್ದಂತೆ ‘ಮೋದಿ..ಮೋದಿ..’ ಘೋಷಣೆ: ಕಾಂಗ್ರೆಸ್ಸಿಗರಿಗೆ ಇರಿಸುಮುರಿಸು!

ಸಂಸದರು ಸದನದೊಳಗೆ 'ಮೋದಿ, ಮೋದಿ' ಎಂದು ಘೋಷಣೆ ಕೂಗಿದರು. ಈ ವೇಳೆ ಪ್ರಧಾನಿ ಮೋದಿ ಸದನದಲ್ಲಿ ಹಾಜರಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಇತರ ವಿರೋಧ ಪಕ್ಷದ ನಾಯಕರು ಕೂಡ ಸದನದಲ್ಲಿ ಉಪಸ್ಥಿತರಿದ್ದರು.

ಪಿಎಂ ಮೋದಿ (ಫೈಲ್​ ಫೋಟೋ)

ಪಿಎಂ ಮೋದಿ (ಫೈಲ್​ ಫೋಟೋ)

  • Share this:
ನವದೆಹಲಿ: ಇತ್ತೀಚೆಗಷ್ಟೇ ಚುನಾವಣೆ (Assembly Election Result) ನಡೆದ ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಬಿಜೆಪಿ (BJP) ಜಯಭೇರಿ ಬಾರಿಸಿದ್ದು, ಇಂದು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಅವರಿಗೆ ಬಿಜೆಪಿ ನೇತೃತ್ವದ ಸಂಸದರು ಅದ್ದೂರಿ ಸ್ವಾಗತ ಕೋರಿದರು.  ಬಜೆಟ್ ಅಧಿವೇಶನದ ಎರಡನೇ ಭಾಗದ ಮೊದಲ ದಿನ ಸಂಸದರು ಸದನದೊಳಗೆ 'ಮೋದಿ, ಮೋದಿ' ಎಂದು ಘೋಷಣೆ ಕೂಗಿದರು. ಈ ವೇಳೆ ಪ್ರಧಾನಿ ಮೋದಿ ಸದನದಲ್ಲಿ ಹಾಜರಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಇತರ ವಿರೋಧ ಪಕ್ಷದ ನಾಯಕರು ಕೂಡ ಸದನದಲ್ಲಿ ಉಪಸ್ಥಿತರಿದ್ದರು. ಬಿಜೆಪಿಗೆ ಸೇರಿದ ಸಂಸದರು ಸದನದಲ್ಲಿ ಪ್ರಧಾನಿ ಮೋದಿಯವರಿಗೆ ಚಪ್ಪಾಳೆ ತಟ್ಟಿದರು, ಡೆಸ್ಕ್‌ಗಳನ್ನು ಬಡಿದರು ಸಂಭ್ರಮಿಸಿದರು. ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿದಂತೆ ಎಲ್ಲ ಕೇಂದ್ರ ಸಚಿವರು ಆಡಳಿತ ಪಕ್ಷದ ಸಂಸದರೊಂದಿಗೆ ಸೇರಿ ಪ್ರಧಾನಿಯನ್ನು ಸದನಕ್ಕೆ ಸ್ವಾಗತಿಸಿದರು.

ಆಸ್ಟ್ರಿಯಾದ ಸಂಸದೀಯ ನಿಯೋಗ ಎದುರು ಮೋದಿ ಗುಣಗಾನ

ಸದನ ಸ್ಪೆಷಲ್​​ ಬಾಕ್ಸ್​​ನಲ್ಲಿ ಕುಳಿತು ಕಲಾಪವನ್ನು ವೀಕ್ಷಿಸುತ್ತಿದ್ದ ಆಸ್ಟ್ರಿಯಾದ ಸಂಸದೀಯ ನಿಯೋಗದ ಕುರಿತು ಸ್ಪೀಕರ್ ಓಂ ಬಿರ್ಲಾ ಮಾತನಾಡುತ್ತಿದ್ದಾಗ ಪ್ರಧಾನಿ ಮೋದಿ ಸದನವನ್ನು ಪ್ರವೇಶಿಸಿದರು. ಪ್ರಧಾನಮಂತ್ರಿ, ಕೇಂದ್ರ ಮಂತ್ರಿಗಳು ಮತ್ತು ಬಿಜೆಪಿ ಸಂಸದರು ಆಸೀನತಾದ ನಂತರ ಸ್ಪೀಕರ್ ಅವರು ಆಸ್ಟ್ರಿಯಾ ನಿಯೋಗವನ್ನು ಸ್ವಾಗತಿಸಿದರು. ಸದನದ ಜೊತೆಗೆ, ಭಾರತದ ಜನತೆಗೆ ಆಸ್ಟ್ರಿಯಾ ಸಂಸತ್ತು, ಆಸ್ಟ್ರಿಯಾ ಸರ್ಕಾರ ಮತ್ತು ಆಸ್ಟ್ರಿಯಾದ ಜನರಿಗೆ ಶುಭಾಶಯಗಳನ್ನು ತಿಳಿಸಿದರು. ನಿಯೋಗದ ನೇತೃತ್ವವನ್ನು ಆಸ್ಟ್ರಿಯಾದ ರಾಷ್ಟ್ರೀಯ ಮಂಡಳಿಯ ಅಧ್ಯಕ್ಷ ವೋಲ್ಫ್ಗ್ಯಾಂಗ್ ಸೊಬೋಟ್ಕಾ ವಹಿಸಿದ್ದರು.

ಇದನ್ನೂ ಓದಿ: CWC Meeting: ರಾಹುಲ್ ಗಾಂಧಿ ಬೇಗ ಎಐಸಿಸಿ ಅಧ್ಯಕ್ಷರಾಗಬೇಕೆಂದು ಕೂಗು: ಕಾಂಗ್ರೆಸ್ ‘ಆತ್ಮಾವಲೋಕನ’ ಹೇಗಿತ್ತು?

ಮಾರ್ಚ್ 13 ರಂದು ಆಸ್ಟ್ರಿಯಾ ತಂಡವು ಭಾರತಕ್ಕೆ ಆಗಮಿಸಿದ್ದು, ಈಗಾಗಲೇ ಆಗ್ರಾಕ್ಕೆ ಭೇಟಿ ನೀಡಿದೆ ಎಂದು ಬಿರ್ಲಾ ಹೇಳಿದರು. ಮಾರ್ಚ್ 17 ರಂದು ಆಸ್ಟ್ರಿಯಾಕ್ಕೆ ಹಿಂದಿರುಗುವ ಮೊದಲು ಹೈದರಾಬಾದ್‌ಗೆ ತೆರಳುತ್ತಾರೆ.  ಇತ್ತೀಚಿಗೆ ಮೂವರು ಮಾಜಿ ಸದಸ್ಯರಾದ ಎಸ್ ಸಿಂಗರವಡಿವೇಲ್, ಎಚ್ ಬಿ ಪಾಟೀಲ್ ಮತ್ತು ಹೇಮಾನಂದ ಬಿಸ್ವಾಲ್ ಅವರ ನಿಧನದ ಬಗ್ಗೆ ಸ್ಪೀಕರ್ ಸದನಕ್ಕೆ ಮಾಹಿತಿ ನೀಡಿದರು.

ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ದಿಗ್ವಿಜಯ

ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಯ ಮೆಗಾ ಗೆಲುವಿನ ನಂತರ ಸಂಸತ್ತು ಮೊದಲ ಬಾರಿಗೆ ಸೇರುತ್ತಿರುವುದು ಗಮನಾರ್ಹವಾಗಿದೆ. ಚುನಾವಣೆಗೂ ಮುನ್ನ ನಾಲ್ಕು ರಾಜ್ಯಗಳಲ್ಲಿ ಕೇಸರಿ ಪಕ್ಷ ಆಡಳಿತ ನಡೆಸಿತ್ತು. ಆದಾಗ್ಯೂ, ಪಂಜಾಬ್‌ನಲ್ಲಿ ಪಕ್ಷವು ಪ್ರಬಲ ಹೋರಾಟವನ್ನು ನೀಡಲು ವಿಫಲವಾಗಿದೆ. ಪಕ್ಷವು ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಗಳನ್ನು ಎದುರಿಸಿತು. ಪಂಜಾಬ್​​ನಲ್ಲಿ ಬಿಜೆಪಿ ಪಕ್ಷ 2 ಸ್ಥಾನಗಳನ್ನು ಮಾತ್ರ ಗೆದ್ದಿದೆ.

ಇದನ್ನೂ ಓದಿ: ನವೀನ್ ಮೃತದೇಹ ತರಲು PM Modi ಮಹತ್ವದ ಸೂಚನೆ: Ukraineನಲ್ಲಿದ್ದ ಭಾರತೀಯ ರಾಯಭಾರ ಕಚೇರಿ ಶಿಫ್ಟ್

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಮರುದಿನ ಪ್ರಧಾನಿ ಮೋದಿ ತವರು ರಾಜ್ಯ ಗುಜರಾತ್​ ಗೆ ಭೇಟಿ ನೀಡಿದ್ದರು. ಮೋದಿ ಅವರಿಗೆ ರಾಜ್ಯದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ವಡೋದರದಲ್ಲಿ ಮೆಗಾ ರೋಡ್​ ಶೋ ನಡೆಸಿದರು. ಎರಡು ದಿನಗಳ ಕಾಲ ಅವರು ಗುಜರಾತ್ ಪ್ರವಾಸ ನಡೆಸಿದರು. ಉತ್ತರ ಪ್ರದೇಶದ 403 ಸ್ಥಾನಗಳಿದ್ದು ಸರ್ಕಾರ ರಚನೆಗೆ 202 ಸ್ಥಾನಗಳು ಅಗತ್ಯವಿತ್ತು. ಆದರೆ ಬಿಜೆಪಿ 274 ಸ್ಥಾನಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ಇನ್ನು ಎಸ್‌ಪಿ 124 ಸ್ಥಾನಗಳನ್ನು ಪಡೆದಿದ್ದರೆ, 2 ಸ್ಥಾನಗಳಲ್ಲಷ್ಟೇ ಕಾಂಗ್ರೆಸ್ ಜಯ ಸಾಧಿಸಿದೆ. ಇನ್ನುಳಿದಂತೆ ಬಿಎಸ್‌ಪಿ 1 ಸ್ಥಾನ ಗಳಿಸಿದ್ರೆ, 2 ಸ್ಥಾನಗಳಲ್ಲಿ ಇತರರು ಜಯ ಸಾಧಿಸಿದ್ದಾರೆ.
Published by:Kavya V
First published: