ಮುಂಬೈ: 13 ವರ್ಷಗಳ ಹಿಂದೆ ಕೋರ್ಟ್ (Court) ಮೆಟ್ಟಿಲೇರಿದ್ದ ನಾಯಿ ಕಚ್ಚಿದ್ದ ಪ್ರಕರಣದ ತೀರ್ಪು ಹೊರಬಿದ್ದಿದ್ದು, ನಾಯಿ ಮಾಲೀಕನಿಗೆ ನ್ಯಾಯಾಲಯ 3 ತಿಂಗಳ ಸಾಧಾರಾಟ್ ವೀಲರ್ ಶ್ವಾನದಿಂದ ಬುಸಿನೆಸ್ ಮ್ಯಾನ್ ಜೈಲು ಪಾಲು! | rottweiler dog owner gets 3 moರಣ ಜೈಲು ಶಿಕ್ಷೆ (Jail Punishment) ವಿಧಿಸಿದೆ. 72 ವರ್ಷದ ವೃದ್ಧನಿಗೆ ರಾಟ್ ವೀಲರ್ (Rottweiler) ಮೂರು ಬಾರಿ ಕಚ್ಚಿತ್ತು. ವೃದ್ಧನ ಕೈ, ಕಾಲುಗಳು ಗಾಯವಾಗಿತ್ತು. ಗಾಯಾಳು ತಮ್ಮ ಮೇಲೆ ನಾಯಿ ದಾಳಿ ಮಾಡಲು ಕಾರಣರಾದ ಮಾಲೀಕರ ವಿರುದ್ಧ ಕೋರ್ಟ್ನಲ್ಲಿ ದಾವೆ ಹೂಡಿದ್ದರು. ಶನಿವಾರ ಈ ವಿಶೇಷ ಪ್ರಕರಣದ ತೀರ್ಪು ನೀಡಿರುವ ಮ್ಯಾಜಿಸ್ಟೇಟ್ ಕೋರ್ಟ್ ಬುಸಿನೆಸ್ ಮ್ಯಾನ್ (Businessman) ಒಬ್ಬರಿಗೆ 3 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. 12 ವರ್ಷಗಳ ಹಿಂದೆ ಬುಸಿನೆಸ್ ಮ್ಯಾನ್ ಮತ್ತು ಆತನ ಸಂಬಂಧಿಕರು ಹೊರ ಹೋಗಿದ್ದ ವೇಳೆ ನಾಯಿ 72 ವರ್ಷದ ವ್ಯಕ್ತಿಯೊಬ್ಬರಿಗೆ ಕಚ್ಚಿ ಗಾಯಗೊಳಿಸಿತ್ತು.
ನಾಯ ನಿಯಂತ್ರಣ ಯಜಮಾನನ ಕೆಲಸ
ರಾಟ್ ವೀಲರ್ ನಾಯಿ ತುಂಬಾ ಆಕ್ರಮಣಕಾರಿ ತಳಿ ಎಂಬುದು ಮಾಲೀಕನಿಗೆ ಮೊದಲೇ ತಿಳಿದಿದ್ದು, ಹೊರಗೆ ಹೋಗುವಾಗ ಅದರಿಂದ ಸಾರ್ವಜನಿಕರಿಗೆ ಯಾವುದೇ ಅಪಾಯ ಸಂಭವಿಸದಂತೆ ತಡೆಯುವುದು ಅವರ ಕರ್ತವ್ಯ. ಈ ಪ್ರಕರಣದಲ್ಲಿ ನಾಯಿಯ ಯಜಮಾನನ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ ಎಂದು ಕೋರ್ಟ್ ಭಾವಿಸಿದ್ದು, ಆರೋಪಿ ಸೈರಸ್ ಪರ್ಸಿ ಹಾರ್ಮುಸ್ಜಿ (44) ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ನ್ಯಾಯಾಲಯವು ಭಾರತೀಯ ದಂಡ ಸಂಹಿತೆ ಸೆಕ್ಷನ್ 289 (ಪ್ರಾಣಿಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವರ್ತನೆ) ಮತ್ತು 337 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕ್ರಿಯೆ) ಅಡಿ ನಾಯಿ ಮಾಲೀಕನ ವಿರುದ್ಧ ತೀರ್ಪು ನೀಡಿದೆ.
2010ರಲ್ಲಿ ಘಟನೆ
ಈ ಘಟನೆ 2010ರ ಮೇ ತಿಂಗಳಲ್ಲಿ ನಡೆದಿತ್ತು. ಮುಂಬೈನ ನೆಪಿಯನ್ ಸೀ ರೋಡ್‌ನಲ್ಲಿ ಹೊರ್ಮುಸ್ಜಿ ಅವರು ಕಾರಿನ ಬಳಿ ಇಬ್ಬರು ವ್ಯಕ್ತಿಗಳು ನಿಂತು ಆಸ್ತಿ ವಿವಾದದ ಬಗ್ಗೆ ಜಗಳವಾಡುತ್ತಿದ್ದರು. ಕಾರಿನೊಳಗಿದ್ದ ರಾಟ್ ವೀಲರ್ ಮತ್ತು ಲಾಬ್ರಡೋರ್ ನಾಯಿಗಳು ಹೊರ ನೋಡುತ್ತಾ ಬೊಗಳುತ್ತಿದ್ದವು. ಈ ವೇಳೆ ಮಾಲೀಕ ಅವುಗಳನ್ನು ಕಾರಿನಿಂದ ಹೊರಬಿಟ್ಟಿದ್ದು, ರಾಟ್ ವೀಲರ್ 72 ವರ್ಷದ ಕೇರ್ಸಿ ಇರಾನಿ ಎಂಬುವವರ ಮೇಲೆ ದಾಳಿ ಮಾಡಿತ್ತು.
ನಾಯಿಗಳು ಬೊಗಳುತ್ತಿದ್ದರಿಂದ ಕಾರಿನ ಬಾಗಿಲು ತೆರೆಯದಂತೆ ಇರಾನಿ ಮನವಿ ಮಾಡಿದರೂ ಆರೋಪಿ ಕಾರಿನ ಬಾಗಿಲನ್ನು ತೆರೆದಿದ್ದರಿಂದ ನಾಯಿ ಹೊರಬಂದು ವೃದ್ಧ ಇರಾನಿ ಮೇಲೆ ನೇರವಾಗಿ ದಾಳಿ ಮಾಡಿದೆ. ನಾಯಿ ಅವರ ಬಲಗಾಲಿಗೆ ಮತ್ತು ಬಲಗೈಗೆ ಕಚ್ಚಿತ್ತು.
ಮುಂಜಾಗ್ರತಾ ಕ್ರಮವನ್ನು ವಹಿಸಿಲ್ಲ
ರಾಟ್ ವೀಲರ್ ಅತ್ಯಂತ ಆಕ್ರಮಣಕಾರಿ ತಳಿ ಎಬುದು ಮಾಲೀಕನಿಗೆ ತಿಳಿದಿದೆ. ಹೀಗಿದ್ದರೂ ಅವರು ಮುಂಜಾಗ್ರತಾ ಕ್ರಮವನ್ನು ವಹಿಸಿಲ್ಲ. ಅದು 72 ವರ್ಷದ ವ್ಯಕ್ತಿ ಮೇಲೆ ದಾಳಿ ಮಾಡಿದೆ. ಅಂತಹ ವೃದ್ಧಾಪ್ಯದಲ್ಲಿ ಬಲವಾದ ಮತ್ತು ಆಕ್ರಮಣಕಾರಿ ನಾಯಿ ಅವರ ಮೇಲೆ ದಾಳಿ ಮಾಡಿ ಮೂರು ಬಾರಿ ಕಚ್ಚಿದೆ. ಪ್ರಬುದ್ಧ ವ್ಯಕ್ತಿಯೊಬ್ಬ ಸಾರ್ವಜನಿಕ ಸ್ಥಳಗಳಿಗೆ ಆಕ್ರಮಣಕಾರಿ ನಾಯಿಯನ್ನು ಕರೆದುಕೊಂಡು ಹೋಗುವಾಗ ಕಾಳಜಿ ವಹಿಸದಿದ್ದರೆ ಅದು ಖಂಡಿತ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಸಾರ್ವಜನಿಕ ಸುರಕ್ಷತೆಯ ಪ್ರಶ್ನೆಯಿರುವ ಸಂದರ್ಭಗಳಲ್ಲಿ, ಯಾವುದೇ ಮೃದುತ್ವ ಅನಗತ್ಯವಾಗಿದೆ ಎಂದು ಅದು ಹೇಳಿದ ನ್ಯಾಯಾಲಯ ಆರೋಪಿಗೆ ಜೈಲು ಶಿಕ್ಷೆ ವಿಧಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ