ಮಾಜಿ ಸಿಎಂ ತಿವಾರಿ ಮಗನ ಹತ್ಯೆ ಪ್ರಕರಣ; ಇದು ಯಾವುದೇ ಕ್ರೈಂ ಥ್ರಿಲ್ಲರ್​ ಸಿನಿಮಾ ಕತೆಗಿಂತ ಕಡಿಮೆ ಇಲ್ಲ!

ವೈವಾಹಿಕ ಬಿಕ್ಕಟ್ಟೊಂದು  ಕೊಲೆಯಲ್ಲಿ ಅಂತಿಮಗೊಂಡಿದೆ. ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುವ ಅಪೂರ್ವ ನಾವು ಸುಖ ಸಂಸಾರ ನಡೆಸುತ್ತಿರಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ.

Seema.R | news18
Updated:April 25, 2019, 12:44 PM IST
ಮಾಜಿ ಸಿಎಂ ತಿವಾರಿ ಮಗನ ಹತ್ಯೆ ಪ್ರಕರಣ; ಇದು ಯಾವುದೇ ಕ್ರೈಂ ಥ್ರಿಲ್ಲರ್​ ಸಿನಿಮಾ ಕತೆಗಿಂತ ಕಡಿಮೆ ಇಲ್ಲ!
ರೋಹಿತ್​ ಶೇಖರ್​ ತಿವಾರಿ
  • News18
  • Last Updated: April 25, 2019, 12:44 PM IST
  • Share this:
ನವದೆಹಲಿ (ಏ.25): ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್​ಡಿ ತಿವಾರಿ ಮಗನ ಹತ್ಯೆ ಹಿಂದೆ ಆತನ ಹೆಂಡತಿಯ ಕೈವಾಡವಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ರೋಹಿತ್​ ಶೇಖರ್ ತಿವಾರಿಯನ್ನು ಕತ್ತು ಹಿಸುಕಿ ಕೊಂದಿರುವುದು ವಿಧಿ ವಿಜ್ಞಾನ ಪರೀಕ್ಷೆಯಲ್ಲಿ ಸಾಬೀತಾಗಿದೆ.

ಈ ಕುರಿತು ಮಾತನಾಡಿರುವ ದೆಹಲಿ ಪೊಲೀಸರು, ವೈವಾಹಿಕ ಬಿಕ್ಕಟ್ಟೊಂದು  ಕೊಲೆಯಲ್ಲಿ ಅಂತಿಮಗೊಂಡಿದೆ. ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುವ ಅಪೂರ್ವ ನಾವು ಸುಖ ಸಂಸಾರ ನಡೆಸುತ್ತಿರಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ.

ಮದುವೆಯಾಗಿ ಒಂದು ವರ್ಷ ಕಳೆಯುವುದರಳೊಗೆ ಕೊಲೆಯಲ್ಲಿ ತಮ್ಮ ಸಂಬಂಧವನ್ನು ಅಂತ್ಯಗೊಳಿಸಿರುವ ಅಪೂರ್ವ ಶುಕ್ಲಾರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೊದಲು ತಾನು ಮುಗ್ದೆ ಎಂದು ಬಿಂಬಿಸಿಕೊಂಡ ಅಪೂರ್ವ ಕೊಲೆ ಮಾಡಲು ಮುಂದಾಗಿರುವ ಕತೆ ಯಾವುದೇ ಥ್ರಿಲ್ಲರ್​ ಸಿನಿಮಾಗಿಂತ ಕಡಿಮೆ ಇಲ್ಲ.

ರೋಹಿತ್​ ಕೈ ಹಿಡಿಯುವ ಮುನ್ನವೇ ಅಪೂರ್ವ ಬೇರೆ ಹುಡುಗನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. ಆಕೆಯ ಕುಟುಂಬ ಯಾವಾಗಲೂ ಹಣಕ್ಕೆ ಹಪಹಪಿಸುತ್ತಿದ್ದರಿಂದ ಅಪೂರ್ವ ಮದುವೆಯಾಗುವ ಹುಡುಗ ಚೆನ್ನಾಗಿ ಆಸ್ತಿ ಹೊಂದಿರಬೇಕು ಎಂಬ ಅಪೇಕ್ಷೆ ಹೊಂದಿದ್ದರು. ಇದೇ ಕಾರಣಕ್ಕೆ ರೋಹಿತ್​ ರನ್ನು ಕೈ ಹಿಡಿದ ಅಪೂರ್ವ ಡಿಫೆನ್ಸ್​ ಕಲೋನಿಯಲ್ಲಿದ್ದ ರೋಹಿತ್​ ಹಾಗೂ ಸಿದ್ಧಾರ್ಥ್​​ ಆಸ್ತಿಯ ಮೇಲೆ ಕಣ್ಣಿಟ್ಟಿದ್ದರು ಎಂದು ರೋಹಿತ್​ ಅಮ್ಮ ಉಜ್ವಲ ತಿಳಿಸಿದ್ದಾರೆ.

ಎನ್​ಡಿ ತಿವಾರಿಗೆ ವಿಶೇಷ ಅಧಿಕಾರಿಯಾಗಿದ್ದ ರಾಜೀವ್​, 40 ವರ್ಷಗಳ ಕಾಲ ನನ್ನ ಗಂಡನ ಸೇವೆ ಮಾಡಿದ್ದರು. ಇದೇ ಕೃತಜ್ಞತೆ ಭಾವ ನನ್ನ ಮಕ್ಕಳಾದ ರೋಹಿತ್​ ಹಾಗೂ ಸಿದ್ಧಾರ್ಥ್​​ಗೆ ರಾಜೀವ್​ ಮೇಲೆ ಇತ್ತು. ಇದರಿಂದಾಗಿ ರಾಜೀವ್​ ಮಗನಿಗೆ ತಮ್ಮ ಆಸ್ತಿಯಲ್ಲಿ ಪಾಲು ನೀಡಬೇಕು ಎಂದು ಬಯಸಿದ್ದರು. ಆದರೆ, ಇದು ಅಪೂರ್ವಗೆ ಇಷ್ಟವಿರಲಿಲ್ಲ ಎಂದಿದ್ದಾರೆ.

ಇನ್ನು ರೋಹಿತ್​ ಸಾವಿನ ಬಳಿಕ ಭಾನುವಾರ ಪೊಲೀಸರ ವಿಚಾರಣೆ ವೇಳೆ ಮಾತನಾಡಿದ ಅಪೂರ್ವ, ಈ ಹಿಂದೆ ತಾನು ಇಂದೋರ್​ನ ಇಂಡಿಯನ್​ ನ್ಯಾಷನಲ್​ ಟ್ರೆಡ್​ ಯೂನಿಯನ್​ ಕಾಂಗ್ರೆಸ್​ನ ಅಧ್ಯಕ್ಷೆಯಾಗಿದ್ದೆ. ರಾಜಕೀಯವಾಗಿ ಬೆಳೆಯಬೇಕು ಎಂಬುದು ನನ್ನ ಆಕಾಂಕ್ಷೆಯಾಗಿತ್ತು. ಆದರೆ ರೋಹಿತ್​ ಮದುವೆಯಾದ ಬಳಿಕ ಇದು ಸಾಧ್ಯವಾಗಲಿಲ್ಲ ಎಂದಿದ್ದರು. ಆದರೆ, ಮೂಲಗಳ ಪ್ರಕಾರ ಅಪೂರ್ವ ಶುಕ್ಲಾ, ಮ್ಯಾಟ್ರಿಮೋನಿಯಲ್ ನಿಂದ ಪರಿಚಯವಾಗಿ ಮದುವೆಯಾಗಿದ್ದರು

ಕೊಲೆಯಾದ ದಿನ ಅಂದರೆ ಏಪ್ರಿಲ್​ 15ರಂದು ಉತ್ತರಾಖಂಡದಲ್ಲಿ ಮತಚಲಾಯಿಸಿ ರೋಹಿತ್​ ರಾತ್ರಿ ಮನೆಗೆ ಬಂದಿದ್ದರು. ಈ ವೇಳೆ ವಿಪರೀತವಾಗಿ ಕುಡಿದಿದ್ದರು. ಮಧ್ಯರಾತ್ರಿಯಲ್ಲೇ ಕುಡಿದ ಅಮಲಿನಲ್ಲಿದ್ದ ರೋಹಿತ್​ ಜೊತೆ ಅಪೂರ್ವ ಜಗಳ ಶುರುಮಾಡಿದರು. ಆಗ ಅಪೂರ್ವ, ಆತನಿಗೆ ಹೊಡೆದು, ಕತ್ತು ಹಿಸುಕಿದ್ದಾರೆ. ಅಮಲಿನಲ್ಲಿದ್ದ ರೋಹಿತ್​ ಆಕೆಯನ್ನು ತಡೆಯಲು ಸಾಧ್ಯವಾಗಿಲ್ಲ. ಇದಾದ ಬಳಿಕ ಒಂದೂವರೆ ಗಂಟೆಯಲ್ಲಿಯೇ ಆಕೆ ಎಲ್ಲ ಸಾಕ್ಷ ನಾಶಕ್ಕೆ ಮುಂದಾಗಿದ್ದಾಳೆ. ಅಲ್ಲದೇ ಪೊಲೀಸರ ತನಿಖೆಯನ್ನು ದಿಕ್ಕುತಪ್ಪಿಸಲು ಯತ್ನಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.ಇದನ್ನು ಓದಿ: ಮಾಜಿ ಸಿಎಂ ಎನ್​ಡಿ ತಿವಾರಿ ಮಗ ರೋಹಿತ್​​ ಶೇಖರ್​ ಸಾವು; ಹೆಂಡತಿ ಬಂಧನ

ಘಟನೆ ಸನ್ನಿವೇಶದ ಪ್ರಕಾರ ಆಕೆ ಆತನನ್ನು ಕೊಲೆ ಮಾಡಲು ಯಾವುದೇ ಯೋಜನೆ ರೂಪಿಸಿರಲಿಲ್ಲ. ಅವರ ವೈವಾಹಿಕ ಸಂಬಂಧ ಉತ್ತಮವಾಗಿರಲಿಲ್ಲ. ಅಲ್ಲದೇ ಅವರಿಬ್ಬರು ಈ ಸಂಬಂಧದಿಂದ ದೂರಾಗುವ ಚಿಂತನೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಾಜಿ ಸಿಎಂ ಎನ್​ಡಿ ತಿವಾರಿ ತಮ್ಮ ತಂದೆ ಎಂಬುದನ್ನು ಸಾಬೀತು ಮಾಡಲು ರೋಹಿತ್​ ಆರು ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದ್ದರು. ಈ ಸಂಬಂಧ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಆದರೆ ತಿವಾರಿ ಮಾತ್ರ ಈ ವಾದ ತಳ್ಳಿ ಹಾಕಿ ಡಿಎನ್​ಎ ಪರೀಕ್ಷೆಗೆ ರಕ್ತದ ಮಾದರಿ ಕೊಡಲು ನಿರಾಕರಿಸಿದ್ದರು. ಆದರೆ ನ್ಯಾಯಾಲಯದ ಆದೇಶ ಪ್ರಕರಣ 2012ರಲ್ಲಿ ಪರೀಕ್ಷೆಗೆ ಒಳಪಡಿಸಲಾಯಿತು/. 2014ರಲ್ಲಿ ದೆಹಲಿ ಹೈ ಕೋರ್ಟ್​ ರೋಹಿತ್​ ಶೇಖರ್​ ತಿವಾರಿ ಅವರ ಮಗ ಎಂದು ತೀರ್ಪು ನೀಡಿತು.

ಈ ಘಟನೆಗಳ ಬಳಿಕ 88 ವರ್ಷದ ತಿವಾರಿ ರೋಹಿತ್​ ಶೇಖರ್​ ಅವರ ತಾಯಿಯನ್ನು ಮದುವೆಯಾಗಿದ್ದರು. ಕಳೆದ ವರ್ಷ 93 ವಯಸ್ಸಿನ ತಿವಾರಿ ಸಾವನ್ನಪ್ಪಿದ್ದರು.

First published:April 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ