ಅಸ್ಸಾಂ ಜನರ ಕಂಗೆಡಿಸಿದ್ದ ಬಿನ್ ಲಾಡೆನ್ ನಿಧನ!; ಶಾಕ್ ಆಗಬೇಡಿ, ಇಲ್ಲಿದೆ ಅಸಲಿ ವಿಷಯ...

35 ವರ್ಷದ ಈ ಆನೆಯ ಉಪಟಳದಿಂದ ಅಸ್ಸಾಂನ ಗುವಾಹಟಿಯ ಜನರು ಕಂಗಾಲಾಗಿದ್ದರು. ಈ ಆನೆಯನ್ನು ಹಿಡಿಯಲು ಅರಣ್ಯಾಧಿಕಾರಿಗಳು ಡ್ರೋನ್​ಗಳನ್ನು ಬಳಸಿ ಕಾಡಿನಲ್ಲಿ ಆನೆ ಇರುವ ಜಾಗವನ್ನು ಪತ್ತೆಹಚ್ಚಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

news18-kannada
Updated:November 18, 2019, 12:19 PM IST
ಅಸ್ಸಾಂ ಜನರ ಕಂಗೆಡಿಸಿದ್ದ ಬಿನ್ ಲಾಡೆನ್ ನಿಧನ!; ಶಾಕ್ ಆಗಬೇಡಿ, ಇಲ್ಲಿದೆ ಅಸಲಿ ವಿಷಯ...
ಸಾವನ್ನಪ್ಪಿರುವ ಆನೆ ಬಿನ್ ಲಾಡೆನ್
  • Share this:
ಅಸ್ಸಾಂ (ನ. 18): ಇಡೀ ವಿಶ್ವವನ್ನೇ ನಡುಗಿಸಿದ್ದ ಅಲ್​ಖೈದಾ ಉಗ್ರ ಸಂಘಟನೆಯ ನಾಯಕ ಒಸಾಮಾ ಬಿನ್ ಲಾಡೆನ್ ಸಾವನ್ನಪ್ಪಿರುವುದು ಗೊತ್ತೇ ಇದೆ. ಆದರೆ, ಅಸ್ಸಾಂನಲ್ಲಿ ಮತ್ತೋರ್ವ ಬಿನ್ ಲಾಡೆನ್ ಮೃತಪಟ್ಟಿದ್ದಾನೆ. ಇದೇನಿದು? ಈಗಾಗಲೇ ಸತ್ತ ವ್ಯಕ್ತಿ ಮತ್ತೊಮ್ಮೆ ಸಾಯಲು ಸಾಧ್ಯವಾ? ಎಂದು ಆಶ್ಚರ್ಯಪಡಬೇಡಿ. ಅಸಲಿ ವಿಚಾರ ಇಲ್ಲಿದೆ...

ಅಸ್ಸಾಂನಲ್ಲಿ ಅಕ್ಟೋಬರ್​ ತಿಂಗಳಲ್ಲಿ ಐವರು ಗ್ರಾಮಸ್ಥರನ್ನು ಅಮಾನುಷವಾಗಿ ತುಳಿದು ಕೊಂದು ಹಾಕಿದ್ದ ಗಂಡು ಆನೆಗೆ ಬಿನ್ ಲಾಡೆನ್ ಎಂದು ಹೆಸರಿಡಲಾಗಿತ್ತು. ನಂತರ ಈ ಆನೆಯನ್ನು ಅಸ್ಸಾಂನ ಓರಂಗ್ ನ್ಯಾಷನಲ್ ಪಾರ್ಕ್​ಗೆ ಸ್ಥಳಾಂತರಿಸಿ ಕೃಷ್ಣ ಎಂದು ಮರುನಾಮಕರಣ ಮಾಡಲಾಗಿತ್ತು. ಕ್ರೂರ ನಡವಳಿಕೆ ಹೊಂದಿದ್ದ ಈ ಆನೆಗೆ ನ್ಯಾಷನಲ್ ಪಾರ್ಕ್​ನಲ್ಲಿ ಸರಿಯಾದ ತರಬೇತಿ ನೀಡಲು ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದರು. ನಂತರ ಅದು ತನ್ನ ಕ್ರೂರತನವನ್ನು ಕಡಿಮೆ ಮಾಡಿಕೊಂಡು ಸಾಮಾನ್ಯ ಆನೆಗಳಂತೆ ಜೀವಿಸುತ್ತಿತ್ತು. ಆದರೂ ಅದು ಅಲ್ಲಿಂದ ತಪ್ಪಿಸಿಕೊಳ್ಳಬಾರದು ಎಂಬ ಕಾರಣಕ್ಕೆ ಆ ಆನೆಯ ಕಾಲುಗಳನ್ನು ಸರಪಳಿಗಳಿಂದ ಕಟ್ಟಿ ಹಾಕಲಾಗಿತ್ತು.

ನ. 12ರಂದು ಅಸ್ಸಾಂನಲ್ಲಿ ಅರಣ್ಯಾಧಿಕಾರಿಗಳು ಬಿನ್ ಲಾಡೆನ್​ನನ್ನು ಸೆರೆಹಿಡಿದಿದ್ದರು


ಅಸ್ಸಾಂನ ಗುವಾಹಟಿ ವ್ಯಾಪ್ತಿಯ ಗೋಪಾಲಪುರದಲ್ಲಿ ಈ ಆನೆ ಐವರನ್ನು ತುಳಿದು ಸಾಯಿಸಿತ್ತು. ಭಾರಿ ಉಪಟಳ ಮಾಡುತ್ತಿದ್ದ ಆನೆಯನ್ನು ನ್ಯಾಷನಲ್ ಪಾರ್ಕ್​ನಲ್ಲಿ ಇರಿಸಲಾಗಿತ್ತು. ಭಾನುವಾರ ಬೆಳಗ್ಗೆ 5 ಗಂಟೆಯ ವೇಳೆಗೆ ಈ ಆನೆ ಸಾವನ್ನಪ್ಪಿದೆ. ಸಾವಿಗೆ ಕಾರಣವೇನೆಂಬ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ.

35 ವರ್ಷದ ಈ ಆನೆಯ ಉಪಟಳದಿಂದ ಅಸ್ಸಾಂನ ಗುವಾಹಟಿಯ ಜನರು ಕಂಗಾಲಾಗಿದ್ದರು. ಈ ಆನೆಯನ್ನು ಹಿಡಿಯಲು ಅರಣ್ಯಾಧಿಕಾರಿಗಳು ಡ್ರೋನ್​ಗಳನ್ನು ಬಳಸಿ ಕಾಡಿನಲ್ಲಿ ಆನೆ ಇರುವ ಜಾಗವನ್ನು ಪತ್ತೆಹಚ್ಚಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. 1 ವಾರದ ಹಿಂದಷ್ಟೆ ಬಿನ್ ಲಾಡೆನ್ ಆನೆಯನ್ನು ಸೆರೆಹಿಡಿಯಲಾಗಿತ್ತು. ಇದೀಗ ಇದ್ದಕ್ಕಿದ್ದಂತೆ ಬಿನ್ ಲಾಡೆನ್ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

First published:November 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading