ಅಫ್ಘಾನಿಸ್ತಾನದ ಅಮೆರಿಕ ರಾಯಭಾರಿ ಕಚೇರಿ ಬಳಿ ಬಾಂಬ್ ದಾಳಿ; 9/11 ದಾಳಿಯ ವಾರ್ಷಿಕೋತ್ಸವವನ್ನು ನೆನಪಿಸಿದ ತಾಲಿಬಾನ್ ಉಗ್ರರು!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧದ ಅಮೆರಿಕ ಯುದ್ಧವನ್ನು ಕೊನೆಗೊಳಿಸುವ ಸಲುವಾಗಿ ಆಯೋಜಿಸಲಾಗಿದ್ದ ಒಪ್ಪಂದವನ್ನೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹಠಾತ್ತನೆ ರದ್ದುಗೊಳಿಸಿದ್ದರು. ಇದೇ ಕಾರಣಕ್ಕೆ ತಾಲಿಬಾನ್ ಉಗ್ರರು ಕಾಬೂಲ್​ನಲ್ಲಿ ರಾಕೆಟ್ ದಾಳಿ ಸಂಘಟಿಸಿರಬಹುದು ಎಂದು ಹೇಳಲಾಗುತ್ತಿದೆ.

MAshok Kumar | news18-kannada
Updated:September 11, 2019, 8:57 AM IST
ಅಫ್ಘಾನಿಸ್ತಾನದ ಅಮೆರಿಕ ರಾಯಭಾರಿ ಕಚೇರಿ ಬಳಿ ಬಾಂಬ್ ದಾಳಿ; 9/11 ದಾಳಿಯ ವಾರ್ಷಿಕೋತ್ಸವವನ್ನು ನೆನಪಿಸಿದ ತಾಲಿಬಾನ್ ಉಗ್ರರು!
ಬಾಂಬ್ ದಾಳಿಗೊಳಗಾಗಿರುವ ಕಾಬೂಲ್ ನಗರ.
MAshok Kumar | news18-kannada
Updated: September 11, 2019, 8:57 AM IST
ಕಾಬೂಲ್ (ಅಫ್ಘಾನಿಸ್ತಾನ್); ಅಮೇರಿಕದ ಇತಿಹಾಸದಲ್ಲಿ ಕರಾಳವಾಗಿ ಉಳಿದುಹೋದ 9/11 ಭಯೋತ್ಪದಾಕ ದಾಳಿಯ ವಾರ್ಷಿಕೋತ್ಸವವಾಗಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಎದುರು ಬುಧವಾರ ಬೆಳಗಿನ ಜಾವ ತಾಲಿಬಾನ್ ಉಗ್ರರು ಮತ್ತೊಂದು ರಾಕೆಟ್ ಬಾಂಬ್ ದಾಳಿ ಸಂಘಟಿಸುವ ಮೂಲಕ ಕ್ರೌರ್ಯ ಮೆರೆದಿದ್ದಾರೆ.

ಅಮೆರಿಕದ ಪೆಂಟಗನ್ ಅವಳಿ ಕಟ್ಟಗಳ ಮೇಲೆ ತಾಲಿಬಾನ್ ಉಗ್ರರು 2001 ಸೆಪ್ಟೆಂಬರ್ 11 ರಂದು ವಿಮಾನದ ಮೂಲಕ ದಾಳಿ ಸಂಘಟಿಸಿ ಎರಡೂ ಕಟ್ಟಗಳನ್ನು ಧ್ವಂಸಗೊಳಿಸಿದ್ದರು. ಈ ಘಟನೆಯಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದರೆ, ಸುಮಾರು 10 ಸಾವಿರ ಜನ ಗಂಭೀರವಾಗಿ ಗಾಯಗೊಂಡಿದ್ದರು.

ಈ ಘಟನೆಯ ವಾರ್ಷಿಕೋತ್ಸವವನ್ನು ನೆನಪಿಸುವ ಸಲುವಾಗಿ ಅಫ್ಘಾನಿಸ್ತಾನದ ತಾಲಿಬಾನ್ ಉಗ್ರರು ಈ ಬಾಂಬ್ ದಾಳಿಯನ್ನು ಸಂಘಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ದಾಳಿಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ : 63 ಜನರ ಪ್ರಾಣ ತೆಗೆದ ಕಾಬೂಲ್​ ದಾಳಿ ಬಳಿಕ ಅಘ್ಘಾನ್​ನ ಜಲಾಲಾಬಾದ್​ನಲ್ಲಿ ಸರಣಿ ಬಾಂಬ್​ ಸ್ಫೋಟ; 34 ಮಂದಿಗೆ ಗಾಯ

ಮಧ್ಯರಾತ್ರಿ ಅಮೆರಿಕಾ ರಾಯಭಾರಿ ಕಚೇರಿ ಎದುರು ಹಠಾತ್ ರಾಕೆಟ್ ದಾಳಿ ನಡೆದ ಪರಿಣಾಮ ಸ್ಥಳದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದೆ. ಈ ವೇಳೆ ಅಧಿಕಾರಿಗಳು ಸೈರನ್ ಮೂಲಕ ರಾಯಭಾರಿ ಕಚೇರಿ ನೌಕರರಿಗೆ ಎಚ್ಚರಿಕೆ ನೀಡಿ ಕಟ್ಟಡದಿಂದ ಹೊರಗೆ ಬರದಂತೆ ಸೂಚಿಸಿದ್ದಾರೆ. ಈ ಸ್ಪೋಟದ ಕುರಿತು ಅಫ್ಘಾನಿಸ್ತಾನ್ ಸರ್ಕಾರ ಈವರೆಗೆ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಆದರೆ, ಅಮೆರಿಕದ ನ್ಯಾಟೋ ಮಿಷನ್ ಸ್ಪೋಟವನ್ನು ಖಚಿತ ಪಡಿಸಿದ್ದು ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

ಕಳೆದ ವಾರ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿ ತಾಲಿಬಾನ್ ಉಗ್ರರು ಎರಡು ಕಾರ್ ಬಾಂಬ್ ಸ್ಫೋಟಿಸಿದ್ದರು. ಈ ಬಾಂಬ್ ದಾಳಿಯಲ್ಲಿ ಹಲವಾರು ನಾಗರೀಕರು ಸಾವನ್ನಪ್ಪಿದ್ದರು. ಅಲ್ಲದೆ, ನ್ಯಾಟೋ ಕಾರ್ಯಾಚರಣೆಯ ಇಬ್ಬರು ಸದಸ್ಯರು ಸಹ ಮೃತಪಟ್ಟಿದ್ದರು. ಈ ದಾಳಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಟುವಾಗಿ ವಿಮರ್ಶಿಸಿದ್ದರು.

ಅಲ್ಲದೆ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧದ ಅಮೆರಿಕ ಯುದ್ಧವನ್ನು ಕೊನೆಗೊಳಿಸುವ ಸಲುವಾಗಿ ಆಯೋಜಿಸಲಾಗಿದ್ದ ಒಪ್ಪಂದವನ್ನೂ ಸಹ ಅವರು ಹಠಾತ್ತನೆ ರದ್ದುಗೊಳಿಸಿದ್ದರು. ಇದೇ ಕಾರಣಕ್ಕೆ ತಾಲಿಬಾನ್ ಉಗ್ರರು ಕಾಬೂಲ್​ನಲ್ಲಿ ರಾಕೆಟ್ ದಾಳಿ ಸಂಘಟಿಸಿರಬಹುದು ಎಂದು ಹೇಳಲಾಗುತ್ತಿದೆ.
Loading...

2001 ಸೆಪ್ಟೆಂಬರ್ 11 ರಲ್ಲಿ ತಾಲಿಬಾನ್ ಉಗ್ರರು ಅಮೆರಿಕದಲ್ಲಿ ಸಂಘಟಿಸಿದ ಭಯೋತ್ಪಾದಕ ದಾಳಿಯ ನಂತರ ಅಮೆರಿಕ ತಾಲಿಬಾನ್ ಉಗ್ರರ ವಿರುದ್ಧ ಯುದ್ಧ ಘೋಷಿಸಿತ್ತು. ಅಫ್ಘಾನಿಸ್ತಾನದಲ್ಲಿ ಕಳೆದ 18 ವರ್ಷಗಳಿಂದ ಅಮೆರಿಕ ನಡೆಸುತ್ತಿರುವ ಸೈನಿಕ ಕಾರ್ಯಾಚರಣೆಯಲ್ಲಿ ಸುಮಾರು 1 ಲಕ್ಷ ಅಮೆರಿಕದ ಸೈನಿಕರು ಪಾಲ್ಗೊಂಡಿದ್ದಾರೆ. 2011ರಲ್ಲಿ ಪಾಕಿಸ್ತಾನದಲ್ಲಿ ಅಡಗಿದ್ದ ಉಗ್ರ ಒಸಾಮ ಬಿನ್ ಲಾಡೆನ್​ನನ್ನೂ ಸಹ ಅಮೆರಿಕ ಸೇನೆ ಹೊಡೆದುರುಳಿಸಿತ್ತು. ಈಗಲೂ 14 ಸಾವಿರ ಸೈನಿಕರು ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಪಡೆಯನ್ನು ಸ್ವದೇಶಕ್ಕೆ ಮರಳಿ ವಾಪಾಸ್​ ಕರೆಸಿಕೊಳ್ಳುವ ಕುರಿತು ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೇಳಿಕೆ ನೀಡಿದ್ದರು. ಅಲ್ಲದೆ, ಈ ಕುರಿತ ಮಾತುಕತೆಗೂ ಅವರು ಸಿದ್ದವಾಗಿದ್ದರು. ಆದರೆ, ಈ ನಡುವೆ ಕಳೆದ ಎರಡು ವಾರದಲ್ಲಿ ಕಾಬುಲ್ ನಗರದಲ್ಲಿ ತಾಲಿಬಾನ್ ಉಗ್ರರು ಸಂಘಟಿಸಿರುವ ಈ ಮೂರು ಬಾಂಬ್ ದಾಳಿಗಳು ಅಮೆರಿಕ ಸೇನೆ ಮತ್ತು ಭಯೋತ್ಪಾದಕರ ನಡುವಿನ ಕದನಕ್ಕೆ ಅಫ್ಘಾನಿಸ್ತಾನ ಮತ್ತೆ ಯುದ್ಧಭೂಮಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಇದನ್ನೂ ಓದಿ : ಕಾಬೂಲ್​ನಲ್ಲಿ ಶಿಯಾ ಮಸೀದಿ ಬಳಿ ಆತ್ಮಹತ್ಯಾ ದಾಳಿ: 29 ಸಾವು

First published:September 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...