Robot Teacher: ಈ ಶಾಲೆಯಲ್ಲಿ ಶಿಕ್ಷಕರ ಬದಲಿಗೆ ರೋಬೋಟ್‌ಗಳೇ ಪಾಠ ಮಾಡ್ತವಂತೆ! ಎಲ್ಲಿ ಗೊತ್ತಾ?

ಹೈದ್ರಾಬಾದ್‌ನ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಕಲಿಸಲು ಮತ್ತು ಶಿಕ್ಷಕರು ಮಾತಾಡುವಂತೆ ಮಕ್ಕಳೊಂದಿಗೆ ಸಂವಹನ ನಡೆಸಲು ವಿಚ್ಛಿದ್ರಕಾರಕ ತಂತ್ರಜ್ಞಾನಗಳು ಮತ್ತು ಕೃತಕ ಬುದ್ಧಿಮತ್ತೆ (AI) ಹೊಂದಿರುವ ರೋಬೊಟ್‌ಗಳು ತರಗತಿಯೊಳಗೆ ಪ್ರವೇಶ ಮಾಡಿ ಶಿಕ್ಷಕರ ಹಾಗೆಯೇ ಪಾಠ ಮಾಡುತಿರುವುದು ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿದರೆ ಹೇಗಿರುತ್ತೆ ಎಂದು ಹೇಳುವುದಕ್ಕೆ ಮನುಷ್ಯರನ್ನೆ ಹೋಲುವ ಈ ರೋಬೊಟ್‌ಗಳು ಸಾಕ್ಷಿಯಾಗಿವೆ.

ರೋಬೋಟ್‌ ಶಿಕ್ಷಕರು

ರೋಬೋಟ್‌ ಶಿಕ್ಷಕರು

  • Share this:
ಹೈದ್ರಾಬಾದ್‌ : ಹೈದ್ರಾಬಾದ್‌ನ (Hyderabad) ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಕಲಿಸಲು ಮತ್ತು ಶಿಕ್ಷಕರು ಮಾತಾಡುವಂತೆ ಮಕ್ಕಳೊಂದಿಗೆ ಸಂವಹನ ನಡೆಸಲು ವಿಚ್ಛಿದ್ರಕಾರಕ ತಂತ್ರಜ್ಞಾನಗಳು (Technology) ಮತ್ತು ಕೃತಕ ಬುದ್ಧಿಮತ್ತೆ (AI) ಹೊಂದಿರುವ ರೋಬೊಟ್‌ಗಳು (Robots) ತರಗತಿಯೊಳಗೆ ಪ್ರವೇಶ ಮಾಡಿ ಶಿಕ್ಷಕರ (Teachers) ಹಾಗೆಯೇ ಪಾಠ ಮಾಡುತಿರುವುದು ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿದರೆ ಹೇಗಿರುತ್ತೆ ಎಂದು ಹೇಳುವುದಕ್ಕೆ ಮನುಷ್ಯರನ್ನೆ ಹೋಲುವ ಈ ರೋಬೊಟ್‌ಗಳು ಸಾಕ್ಷಿಯಾಗಿವೆ. ದೇಶದಲ್ಲಿಯೇ ಮೊಟ್ಟ ಮೊದಲ ಬಾರಿ ಪಾಠ ಮಾಡುವ ರೋಬೊಟ್‌ಗಳನ್ನು ಹೈದ್ರಾಬಾದ್‌ ನಗರದ ಇಂಡಸ್‌ ಇಂಟರ್‌ನ್ಯಾಷನಲ್‌ ಶಾಲೆಯು (School) ಪರಿಚಯಿಸಿದೆ. ಇದನ್ನು ಶಿಕ್ಷಣ ವ್ಯವಸ್ಥೆಯಲ್ಲಿ (Education System) ಮಹತ್ವದ ಮೈಲಿಗಲ್ಲು ಎಂದು ಹೇಳಬಹುದು.

ಶಿಕ್ಷಕರ ಬದಲಿಗೆ ರೋಬೋಟ್ 
ಈ ಶಾಲೆಯು ಈಗಲ್ ರೋಬೋಟ್‌ಗಳನ್ನು ಸರ್ಕಾರಿ ಶಾಲೆಗಳಲ್ಲಿ ನಿಯೋಜಿಸುವ ಸಾಧ್ಯತೆಯನ್ನು ಅನ್ವೇಷಿಸಲು ಇತ್ತೀಚೆಗೆ ಶಿಕ್ಷಣ ಸಚಿವೆ ಪಿ ಸಬಿತಾ ಇಂದ್ರ ರೆಡ್ಡಿ ಅವರಿಗೆ ಈ ರೋಬೊಟ್‌ಗಳ ಪ್ರದರ್ಶನವನ್ನು ನೀಡಿತು. ಹೈದರಾಬಾದ್, ಬೆಂಗಳೂರು ಮತ್ತು ಪುಣೆಯ ಮೂರು ಇಂಡಸ್ ಶಾಲೆಗಳಲ್ಲಿ 21 ಹೆಚ್ಚು ಸಂವಾದಾತ್ಮಕ ಈಗಲ್ ರೋಬೋಟ್‌ಗಳನ್ನು ಈಗಾಗಲೇ ನಿಯೋಜಿಸಲಾಗಿದೆ.

ರೋಬೋಟ್ ಶಿಕ್ಷಕರ ಬಗ್ಗೆ ಇಂಡಸ್‌ ಟ್ರಸ್ಟ್‌ನ ಸಿಇಓ ಅರ್ಜುನ್‌ ರೇ ಅವರು ಏನು ಹೇಳಿದ್ದಾರೆ?
“ಸಮಾಜದಲ್ಲಿ ಶಿಕ್ಷಣ ನೀಡುವ ಶಕ್ತಿ ಮತ್ತೊಂದು ನೀಡಲು ಸಾಧ್ಯವೇ ಇಲ್ಲ. ಶಿಕ್ಷಣ ಎಂಬುದು ಎಲ್ಲ ಸಮಸ್ಯೆಗಳಿಗೂ ಇರುವ ಒಂದು ಬ್ರಹ್ಮಾಸ್ತ್ರ ಪರಿಹಾರ ಎಂದು ನಾವೆಲ್ಲರೂ ನಂಬುತ್ತೇವೆ. ಈ ಶಿಕ್ಷಣ ವ್ಯವಸ್ಥೆಯು ನಮ್ಮ ಸಾಮಾಜಿಕ ಮತ್ತು ಆರ್ಥಿಕತೆಗೆ ಒಂದು ಸೇತುವೆಯಾಗಿ ಬಹು ಕಾಲದಿಂದಲೂ ನಿಂತಿದೆ. ಈ ರೋಬೋಟ್‌ಗಳು ಮನುಷ್ಯ ಮತ್ತು ಯಂತ್ರಗಳ ನಡುವೆ ಇರುವ ಸಾಮ್ಯತೆಯನ್ನು ಸಾರುತ್ತಾ ಉತ್ತಮ ಶಿಕ್ಷಣ ವ್ಯವಸ್ಥೆಗೆ ತಮ್ಮದೇ ಆದ ಕೊಡುಗೆ ನೀಡಲು ಈಗಾಗಲೇ ಸಜ್ಜಾಗಿವೆ" ಎಂದು ಇಂಡಸ್‌ ಟ್ರಸ್ಟ್‌ನ ಸಿಇಓ ಅರ್ಜುನ್‌ ರೇ ಅವರು ಹೇಳಿದರು.

ಇದನ್ನೂ ಓದಿ: Saudi Prince In Paris: ಜಗತ್ತಿನ ಅತ್ಯಂತ ದುಬಾರಿ ಮನೆಯಲ್ಲಿ ಸೌದಿ ದೊರೆ! ಇಲ್ಲಿದೆ ಚಿನ್ನದ ಎಲೆಯ ಕಾರಂಜಿ

“ಮನುಷ್ಯರಂತೆ ವರ್ತಿಸುವ ಈ ರೋಬೋಟ್‌ಗಳು ಶಿಕ್ಷಣದಲ್ಲಿ ಹೇಗೆ ಮಕ್ಕಳಿಗೆ ಕಲಿಸಬೇಕು? ಅವರ ಪ್ರಶ್ನೆಗಳಿಗೆ ಯಾವ ರೀತಿ ಉತ್ತರಿಸಬೇಕು? ಎಂಬ ವಿಚಾರಗಳನ್ನು ರೋಬೊಟ್‌ ಶಿಕ್ಷಕರಿಗೆ ತಿಳಿಸಿಕೊಡುತ್ತದೆ. ಇದು ಶಿಕ್ಷಕರು ಹೊಸ-ಹೊಸ ಅನ್ವೇಷಣೆಗಳನ್ನು ಕಂಡುಹಿಡಿಯಲು ಸಹಾಯಕವಾಗುತ್ತದೆ. ಇದರಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ-ಹೊಸ ಯುವ ಪ್ರತಿಭೆಗಳು ಹೊರ ಜಗತ್ತಿಗೆ ಬಂದು ದೇಶದ ಆರ್ಥಿಕತೆಗೆ ಸಹಾಯ ಮಾಡಲು ಬೇಕಾದ ಪೂರಕತೆಯನ್ನು ಒದಗಿಸಬಹುದು” ಎಂದು ಅವರು ಹೇಳಿದರು.

ಈ ರೋಬೋಟ್‌ಗಳು 6ನೇ ತರಗತಿಯಿಂದ 11 ನೇ ತರಗತಿವರೆಗೂ ವಿದ್ಯಾರ್ಥಿಗಳಿಗೆ ಶಿಕ್ಷಕರೊಂದಿಗೆ ಸ್ವತಂತ್ರವಾಗಿ ಚಲಿಸುವ ಮತ್ತು ಕಲಿಸುವ ಮೋಡ್‌ನಲ್ಲಿ ಹೇಳಿಕೊಡಲು ಸಮರ್ಥವಾಗಿವೆ ಎಂದು ಹೇಳಿದರು.

ಈ ರೋಬೋಟ್‍ನ ಸಾಮರ್ಥ್ಯಗಳೇನು
ಈ ರೋಬೋಟ್‌ಗಳು 30 ಕ್ಕೂ ಹೆಚ್ಚು ವಿವಿಧ ಭಾಷೆಗಳಲ್ಲಿ ಶಿಕ್ಷಣವನ್ನು ನೀಡುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸ್ವಯಂ ಚಾಲಿತವಾಗಿ ಉತ್ತರಿಸುವ ಮೂಲಕ ಮತ್ತು ಪ್ರಶ್ನೆಗಳನ್ನು ಕೇಳುವ ಮೂಲಕ ಮತ್ತು ತರಗತಿಯ ಕೊನೆಯಲ್ಲಿ ಸ್ವಯಂಚಾಲಿತ ಮೌಲ್ಯಮಾಪನವನ್ನು ಕೂಡ ಈ ರೋಬೋಟ್‌ಗಳು ನಡೆಸಬಹುದು. ಅಂತಹ ವಿಶೇಷತೆಯನ್ನು ಈ ರೋಬೋಟ್‌ಗಳು ಹೊಂದಿವೆ. ಮನೆಯಲ್ಲಿದ್ದರೂ ಮಕ್ಕಳು ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ಗಳಂತಹ ಸಾಧನಗಳ ಮೂಲಕ ರೋಬೋಟ್‌ಗಳ ಸಹಾಯದಿಂದ ಮೌಲ್ಯಮಾಪನ ಮತ್ತು ತಮಗೆ ಸಂದೇಹ ಇರುವ ವಿಷಯವನ್ನು ಪರಿಹರಿಸಿಕೊಳ್ಳಲು ಸಂಪರ್ಕವನ್ನು ಸಾಧಿಸಬಹುದು.

ಇಂಡಸ್ ಇಂಟರ್‌ನ್ಯಾಶನಲ್ ಶಾಲೆಯ ಪ್ರಾಂಶುಪಾಲರಾದ ಅಪರ್ಣಾ ಅಚಂತಾ ಅವರು “ಈ ಶಾಲೆಯು ಈಗಲ್ ರೋಬೋಟ್‌ಗಳನ್ನು ದೇಶದ ಎಲ್ಲ ಖಾಸಗಿ ಮತ್ತು ಸರ್ಕಾರಿ ವಲಯದ ಇತರ ಶಿಕ್ಷಣ ಸಂಸ್ಥೆಗಳಿಗೂ ಲಭ್ಯವಾಗುವಂತೆ ಮಾಡುವ ಉದ್ದೇಶವನ್ನು ಒಳಗೊಂಡಿದೆ” ಎಂದು ಅವರು ಹೇಳಿದರು.

ಇದನ್ನೂ ಓದಿ:  Defence: ಇಸ್ರೇಲ್​ನ ಪವರ್​ಫುಲ್ ಸೈನ್ಯದ ಬಗ್ಗೆ ನಿಮಗೆ ಗೊತ್ತೇ? ವಿಶ್ವದಲ್ಲೇ ಡಿಫರೆಂಟ್ ಡಿಫೆನ್ಸ್ ಸಿಸ್ಟಮ್ ಇದು

ಅಂತಿಮವಾಗಿ ಏನೇ ಆಗಲಿ, ಈ ರೋಬೊಟ್‌ಗಳು ಶಿಕ್ಷಣ ವ್ಯವಸ್ಥೆಯಲ್ಲಿ ಒಂದು ಕ್ರಾಂತಿಕಾರಿ ಬೆಳವಣಿಗೆ ಆಗಿದ್ದರೂ ಸಹ, ಮನುಷ್ಯರಂತೆ ಇನ್ನು ಸ್ಪಷ್ಟವಾಗಿ ಪಾಠ ಮಾಡಿದರೂ ಸಹ, ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಆ ಗುರು-ಶಿಷ್ಯರ ಸಂಬಂಧಕ್ಕೆ ಹೋಲಿಕೆ ಆಗದು. ಈ ತಂತ್ರಜ್ಞಾನವನ್ನು ಎಷ್ಟು ಬೇಕೋ ಅಷ್ಟು ಬಳಸಿ, ಶಿಕ್ಷಕರಿಗೇ ಪಾಠ ಮಾಡಲು ಅಥವಾ ಕಲಿಸಲು ಹೆಚ್ಚಿನ ಅವಕಾಶ ನೀಡುವುದೇ ಭವ್ಯ ಭಾರತಕ್ಕೆ ಒಳ್ಳೆಯದು ಎಂಬ ಎಲ್ಲೆಡೆಯಿಂದ ಅಭಿಪ್ರಾಯ ವ್ಯಕ್ತವಾದರೂ ತಪ್ಪಿಲ್ಲ.
Published by:Ashwini Prabhu
First published: