ಗುರುಗಾಂವ್​ ಭೂ ಹಗರಣ ಪ್ರಕರಣ: ಸೋನಿಯಾ ಅಳಿಯ ವಾದ್ರಾ ವಿರುದ್ಧ ಎಫ್​ಐಆರ್​ ದಾಖಲು


Updated:September 2, 2018, 11:53 AM IST
ಗುರುಗಾಂವ್​ ಭೂ ಹಗರಣ ಪ್ರಕರಣ: ಸೋನಿಯಾ ಅಳಿಯ ವಾದ್ರಾ ವಿರುದ್ಧ ಎಫ್​ಐಆರ್​ ದಾಖಲು

Updated: September 2, 2018, 11:53 AM IST
ನ್ಯೂಸ್​ 18 ಕನ್ನಡ

ಹರ್ಯಾಣ(ಸೆ.02): ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್​ ವಾದ್ರಾವರ ಸಂಕಷ್ಟಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಇದೀಗ ಗುರುಗಾಂವ್​ನ ಭೂಹಗರಣಕ್ಕೆ ಸಂಬಂಧಿಸಿದಂತೆ ವಾದ್ರಾ ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಸಿಂಗ್​ ಹೂಡಾ ಹಾಗೂ ವಾದ್ರಾ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಇವರಿಬ್ಬರನ್ನು ಹೊರತುಪಡಿಸಿ ಡಿಎಲ್​ಎಫ್​ ಹಾಗೂ ಓಂಕಾರೆಶ್ವರ ಪ್ರಾಪರ್ಟೀಸ್​ ವಿರುದ್ಧವೂ ದೂರು ದಾಖಲಿಸಲಾಗಿದೆ. ಇವರೆಲ್ಲರ ವಿರುದ್ಧ ಐಪಿಎಸ್​ ಸೆಕ್ಷನ್​ 420, 120 ಬಿ, 467, 468, 471 ಅಡಿಯಲ್ಲಿ ಕೇಸ್​ ದಾಖಲಿಸಲಾಗಿದೆ.

ಇಷ್ಟೇ ಅಲ್ಲದೇ  Prevention of corruption act 1988 ರ ಸೆಕ್ಷನ್​ 13ರ ಅಡಿಯಲ್ಲೂ ದೂರು ದಾಖಲಿಸಲಾಗಿದೆ. ವಾದ್ರಾ ಒಡೆತನದ ಸ್ಕೈಲೈಟ್​ ಹಾಸ್ಪಿಟಾಲಿಟಿಯು ಗುರುಗ್ರಾಮದ ಸೆಕ್ಟರ್​ 83, ಶಿಕೋಹ್​ಪುರ್, ಸಿಕಂದರ್​ಪುರ್​, ಖೇಹಡೀ ದೌಲಾ ಹಾಗೂ ಸಿಹೀಯಲ್ಲಿ 7.5 ಕೋಟಿ ರೂಪಾಯಿ ನೀಡಿ ಜಮೀನು ಖರೀದಿಸಿತ್ತು. ಆದರೆ ಭೂ ನಿಯಮಾವಳಿ ಬದಲಾದ ಬಳಿಕ ಇದನ್ನು ಬರೋಬ್ಬರಿ 55 ಕೋಟಿ ರೂಪಾಯಿ ನೀಡಿ ಮಾರಿದ್ದರು.


Loading...


ಆದರೆ 2007ರಲ್ಲಿ ಸ್ಕೈಲೈಟ್​ ಹಾಸ್ಪಿಟಾಲಿಟಿ ಹೆಸರಿನಲ್ಲಿ ಕಂಪೆನಿಯು ನೋಂದಾವಣೆಯಾಗಿದ್ದು, 2008ರಲ್ಲಿ ಈ ಕಂಪೆನಿಯು ಓಂಕಾರೇಶ್ವರ ಪ್ರಾಪರ್ಟೀಸ್​ನಿಂದ 3.5 ಎಕರೆ ಜಮೀನು ಖರೀದಿಸಿತ್ತು. ಹೀಗೆ ಖರೀದಿಸಿದ್ದ ಭೂಮಿಯ ಮೌಲ್ಯ 7.5 ಕೋಟಿ ಎಂದು ದಾಖಲೆಗಳಲ್ಲಿ ತೋರಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ

ಇನ್ನು ಈ ಪ್ರಕರಣದ ಕುರಿತಾಗಿ ಪ್ರತಿಕ್ರಿಯಿಸಿರುವ ರಾಬರ್ಟ್​ ವಾದ್ರಾ "ಚುನಾವಣೆ ಸಮೀಪಿಸುತ್ತಿದ್ದು, ಈ ಸಂದರ್ಭದಲ್ಲಿ ಹೆಚ್ಚಾಗುತ್ತಿರುವ ತೈಲ ಬೆಲೆಯ ಮೇಲಿರುವ ಜನರ ಗಮನವನ್ನು ಬೇರೆಡೆ ಕೊಂಡೊಯ್ಯಲು ಸರಿಸುಮಾರು ಒಂದು ದಶಕದ ಹಿಂದಿನ ಪ್ರಕರಣವನ್ನು ಮತ್ತೆ ಎತ್ತಿಡುತ್ತಿದ್ದಾರೆ. ಇದರಲ್ಲಿ ಹೊಸತೇನಿದೆ?." ಎಂದಿದ್ದಾರೆ.

 
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626