ವಿದೇಶ ಪ್ರಯಾಣಕ್ಕೆ ರಾಬರ್ಟ್​ ವಾದ್ರಾಗೆ ಅನುಮತಿ ನೀಡಿದ ನ್ಯಾಯಾಲಯ

ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷ ಸೋನಿಯಾ ಗಾಂಧಿ ಅಳಿಯನಾಗಿರುವ ರಾಬರ್ಟ್​ ವಾದ್ರಾ, ಸೆ.21ರಿಂದ ಅಕ್ಟೋಬರ್​ 8ರವರೆಗೆ ಉದ್ಯಮದ ವಿಚಾರಕ್ಕಾಗಿ ಸ್ಪೇನ್​ನ ಬರ್ಸೋಲೊನಿಯಾಗೆ ತೆರಳಲು ಅನುಮತಿಯನ್ನು ಕೋರಿದ್ದರು.

Seema.R | news18-kannada
Updated:September 13, 2019, 5:17 PM IST
ವಿದೇಶ ಪ್ರಯಾಣಕ್ಕೆ ರಾಬರ್ಟ್​ ವಾದ್ರಾಗೆ ಅನುಮತಿ ನೀಡಿದ ನ್ಯಾಯಾಲಯ
ರಾಬರ್ಟ್​ ವಾದ್ರಾ
  • Share this:
ನವದೆಹಲಿ(ಸೆ.13): ಅಕ್ರಮ ಹಣ ಲೇವಾದೇವಿ ಪ್ರಕರಣದ ಆರೋಪಿಯಾಗಿರುವ ಉದ್ಯಮಿ ರಾಬರ್ಟ್​ ವಾದ್ರಾಗೆ ವಿದೇಶ ಪ್ರಯಾಣ ನಡೆಸಬಹುದು ಎಂದು ದೆಹಲಿ ಹೈ ಕೋರ್ಟ್​ ಅನುಮತಿ ನೀಡಿದೆ,

ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷ ಸೋನಿಯಾ ಗಾಂಧಿ ಅಳಿಯನಾಗಿರುವ ರಾಬರ್ಟ್​ ವಾದ್ರಾ, ಸೆ.21ರಿಂದ ಅಕ್ಟೋಬರ್​ 8ರವರೆಗೆ ಉದ್ಯಮದ ವಿಚಾರಕ್ಕಾಗಿ ಸ್ಪೇನ್​ನ ಬರ್ಸೋಲೊನಿಯಾಗೆ ತೆರಳಲು ಅನುಮತಿಯನ್ನು ಕೋರಿದ್ದರು.

ಆದರೆ, ಜಾರಿ ನಿರ್ದೇಶನಾಲಯ ಅವರು ಸ್ಪೇನ್​ ಅಥವಾ ಯರೋಪ್​ ದೇಶಗಳಿಗೆ ಪ್ರಯಾಣ ಬೆಳೆಸುವುದರಿಂದ ತನಿಖೆಗೆ ಅಡ್ಡಿಯಾಗುತ್ತದೆ. ಅಲ್ಲದೇ ಆರೋಪಿ ಸಾಕ್ಷ್ಯಾಧಾರಗಳ ಮೇಲೆ ಪ್ರಭಾವ ಬೀರಿ,ಸಾಕ್ಷ್ಯ ನಾಶಕ್ಕೆ ಮುಂದಾಗಬಹುದು ಇದಕ್ಕೆ ಅನುಮತಿ ನೀಡಬಾರದು ಎಂದು ಗುರುವಾರ ನ್ಯಾಯಾಲಯದ ಮುಂದೆ ತಿಳಿಸಿದ್ದರು. ಆದರೆ, ದೆಹಲಿ ನ್ಯಾಯಾಲ ಅವರ ವಿದೇಶ ಪಯಣಕ್ಕೆ ಅನುಮತಿ ನೀಡಿದೆ.

ಇದನ್ನು ಓದಿ: ಮಾಲಿನ್ಯ ನಿಯಂತ್ರಣಕ್ಕಾಗಿ ದೆಹಲಿಯಲ್ಲಿ ಮತ್ತೆ ಸಮ-ಬೆಸ ವಾಹನ ಸಂಚಾರಕ್ಕೆ ಚಾಲನೆ; ಅರವಿಂದ್​ ಕೇಜ್ರಿವಾಲ್​​

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ 50 ವರ್ಷದ ವಾದ್ರಾ ತನಿಖೆ ಎದುರಿಸುತ್ತಿದ್ದಾರೆ. ವಾದ್ರಾ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 9 ಆಸ್ತಿಗಳನ್ನು ಹೊಂದಿದ್ದು ಇದರ ಮೊತ್ತ 12 ಮಿಲಿಯನ್​ ಪೌಂಡ್​ ಇದೆ. ಮೂರು ವಿಲ್ಲಾ, ಐಷಾರಾಮಿ ಪ್ಲಾಟ್​ಗಳನ್ನು ಯುಪಿಎ ಸರ್ಕಾರದ ಅವಧಿಯಲ್ಲಿ ಅಂದರೆ 2005ರಿಂದ 2010ರಲ್ಲಿ ಖರೀದಿ ಮಾಡಿದ್ದರು.

ಈ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ವಾದ್ರಾರನ್ನು ತನಿಖೆ ಪೂರ್ಣಗೊಳ್ಳುವರೆಗೂ ವಿದೇಶ ಪ್ರಯಾಣ ಮಾಡಬಾರದು ಎಂದು ಸೂಚನೆ ನೀಡಿತ್ತು.

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading