Viral Video: ವರದಕ್ಷಿಣೆಗೆ ಉತ್ತೇಜನ ನೀಡಿದ್ರಾ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್?

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಟ್ವಿಟ್ಟರ್ ನಲ್ಲಿ ರಸ್ತೆ ಸುರಕ್ಷತೆಯನ್ನು ಉತ್ತೇಜಿಸುವ ಸಲುವಾಗಿ ಹಂಚಿಕೊಂಡಿದ್ದಾರೆ. ಈ ಜಾಹೀರಾತು ರಸ್ತೆಯಲ್ಲಿ ಆಗುವ ಅಪಘಾತದ ಸಂದರ್ಭದಲ್ಲಿ ಹೆಚ್ಚಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ವಿಡಿಯೋವಾಗಿದೆ.

ರಸ್ತೆ ಸುರಕ್ಷತಾ ಜಾಹೀರಾತು

ರಸ್ತೆ ಸುರಕ್ಷತಾ ಜಾಹೀರಾತು

  • Share this:
ಕೆಲವೊಮ್ಮೆ ನಾವು ಜನರ ಗಮನಕ್ಕೆ ತರುವ ವಿಷಯಗಳನ್ನು ಬಾಯಲ್ಲಿ ಹೇಳುವುದಕ್ಕಿಂತಲೂ ಒಂದು ಕಿರುಚಿತ್ರದಂತೆ (short film) ಮಾಡಿ ತೋರಿಸಿದರೆ, ಅವರಿಗೆ ಆ ವಿಷಯ ಹೆಚ್ಚು ಮನದಟ್ಟಾಗುತ್ತದೆ. ಎಂದರೆ ಉದಾಹರಣೆಗೆ ನಮ್ಮ ಟಿವಿಗಳಲ್ಲಿ ಬರುವಂತಹ ಜಾಹೀರಾತುಗಳನ್ನು (Advertisement) ತೆಗೆದುಕೊಳ್ಳಿರಿ. ಆ ಜಾಹಿರಾತುಗಳು ಕೆಲವು ನಿಮಿಷಗಳ ಅವಧಿಯದ್ದಾಗಿದ್ದರೂ ನಮ್ಮ ಮನಸ್ಸಿನ ಮೇಲೆ ಎಂತಹ ಒಂದು ಗಾಢವಾದ ಪರಿಣಾಮ ಬೀರುತ್ತದೆ. ಮೊದಲೆಲ್ಲಾ ಬರೀ ನಮಗೆ ದೂರದರ್ಶನ (Television) ಒಂದೇ ಇದ್ದು, ಅದರಲ್ಲಿ ಈ ಸಾರ್ವಜನಿಕರಿಗೆ ಅರಿವು ಮೂಡಿಸುವಂತಹ ಜಾಹೀರಾತುಗಳನ್ನು ಮಾತ್ರ ನೋಡುತ್ತಿದ್ದೆವು. ಆದರೆ ಈಗ ಬೇರೆ ಬೇರೆ ಟಿವಿ ಚಾನಲ್ ಗಳಲ್ಲಿ ನಾವು ಉಪಯೋಗಿಸುವ ಒಂದು ಚಿಕ್ಕ ಟೂತ್ ಬ್ರಶ್ (Tooth Brush) ನಿಂದ ಹಿಡಿದು ದೊಡ್ಡ ದೊಡ್ಡ ವಸ್ತುಗಳ ಜಾಹೀರಾತುಗಳನ್ನು ಸಹ ನಾವು ನೋಡುತ್ತಿದ್ದೇವೆ.

ಇದೆಲ್ಲದರ ಜೊತೆಗೆ ಸರ್ಕಾರದಿಂದ ಜನರ ಹಿತಕ್ಕಾಗಿ ಪ್ರಸಾರ ಮಾಡುತ್ತಿರುವ ಅನೇಕ ಜಾಹೀರಾತುಗಳನ್ನು ಸಹ ನಾವು ಈಗ ನೋಡುತ್ತಿದ್ದೇವೆ.

ರಸ್ತೆ ಸುರಕ್ಷತಾ ಜಾಹೀರಾತನ್ನು ಹಂಚಿಕೊಂಡ ನಿತಿನ್ ಗಡ್ಕರಿ
ಈಗಂತೂ ಸರ್ಕಾರದವರು ಆರೋಗ್ಯಕ್ಕೆ ಸಂಬಂಧಿಸಿದ ಲಸಿಕೆಗಳ ಮತ್ತು ರಸ್ತೆ ಸುರಕ್ಷತಾ ಅಂತಹ ವಿಷಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಅನೇಕ ಜಾಹೀರಾತುಗಳನ್ನು ಅನೇಕ ಸಿನೆಮಾ ನಟರನ್ನು ಹಾಕಿಕೊಂಡು ಮಾಡುವುದುಂಟು. ಈಗ ಇಂತಹದೇ ಒಂದು ಜಾಹೀರಾತನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಶುಕ್ರವಾರ, ಎಂದರೆ ಸೆಪ್ಟೆಂಬರ್ 9 ರಂದು ತಮ್ಮ ಸಾಮಾಜಿಕ ಮಾಧ್ಯಮವಾದ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ರಸ್ತೆ ಸುರಕ್ಷತೆಯನ್ನು ಉತ್ತೇಜಿಸುವ ಸಲುವಾಗಿ ಹಂಚಿಕೊಂಡಿದ್ದಾರೆ.

ಅಕ್ಷಯ್ ಕುಮಾರ್ ನಟಿಸಿದ ಜಾಹಿರಾತು 
ಈ ಜಾಹೀರಾತು ರಸ್ತೆಯಲ್ಲಿ ಆಗುವ ಅಪಘಾತದ ಸಂದರ್ಭದಲ್ಲಿ ಹೆಚ್ಚಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎರಡು ಏರ್ ಬ್ಯಾಗ್ ಗಳಿರುವ ಕಾರನ್ನು ಬಿಟ್ಟು ಆರು ಏರ್ ಬ್ಯಾಗ್ ಗಳಿರುವಂತಹ ಕಾರನ್ನು ಬಳಸಲು ಜನರನ್ನು ಉತ್ತೇಜಿಸುವ ಗುರಿಯನ್ನು ಈ ಜಾಹೀರಾತು ಹೊಂದಿದೆ. ಆದಾಗ್ಯೂ, ಇದರಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸಿದ ಜಾಹೀರಾತನ್ನು ಈಗ "ವರದಕ್ಷಿಣೆಯನ್ನು ಉತ್ತೇಜಿಸಲಾಗುತ್ತಿದೆ" ಎಂದು ಆರೋಪಿಸಲಾಗಿದೆ ನೋಡಿ.

ಇದನ್ನೂ ಓದಿ: E-Highways: ಭಾರತದಲ್ಲೂ ಇನ್ನು ಎಲೆಕ್ಟ್ರಿಕ್ ಹೆದ್ದಾರಿ; ಯೋಜನೆ ಬಗ್ಗೆ ತಿಳಿಸಿದ ಕೇಂದ್ರ ಸಚಿವ ಗಡ್ಕರಿ

ವಿಡಿಯೋದಲ್ಲಿ ಏನಿದೆ?
ಈ ಜಾಹೀರಾತಿನಲ್ಲಿ, ಅಕ್ಷಯ್ ಕುಮಾರ್ ಒಂದು ಮದುವೆ ಸಮಾರಂಭದಲ್ಲಿ ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಡುವ ಸಮಯದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಲ್ಲಿಯೇ ನಿಂತಿರುತ್ತಾರೆ. ಹಾಗೆ ಅವರು ಆ ವಧುವಿನ ತಂದೆಯೊಂದಿಗೆ ಮಾತನಾಡುತ್ತಾ, ಕಾರಿನಲ್ಲಿ ಏರ್ ಬ್ಯಾಗ್ ಗಳ ಸಂಖ್ಯೆಯ ಬಗ್ಗೆ ಕೇಳುತ್ತಾರೆ. ತನ್ನ ಮಗಳನ್ನು ಕೇವಲ ಎರಡು ಏರ್ ಬ್ಯಾಗ್ ಗಳಿರುವ ಕಾರಿನಲ್ಲಿ ಕಳುಹಿಸದಂತೆ ಮತ್ತು ಬದಲಿಗೆ ಆರು ಏರ್ ಬ್ಯಾಗ್ ಗಳಿರುವ ಕಾರನ್ನು ಪಡೆಯುವಂತೆ ಆ ವಧುವಿನ ತಂದೆಯ ಮನವೊಲಿಸುವುದನ್ನು ಕಾಣಬಹುದು.ವಿಡಿಯೋ ನೋಡಿ ಟ್ವಿಟ್ಟರ್ ಬಳಕೆದಾರರು ಹೇಳಿದ್ದೇನು 
ಈ ಜಾಹೀರಾತನ್ನು ಹಂಚಿಕೊಂಡ ಸ್ವಲ್ಪ ಸಮಯದ ನಂತರ, ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಇದನ್ನು ಖಂಡಿಸಿದರು, ಇದು ರಸ್ತೆ ಸುರಕ್ಷತೆಯನ್ನು ಉತ್ತೇಜಿಸುವ ಹೆಸರಿನಲ್ಲಿ ‘ವರದಕ್ಷಿಣೆಯನ್ನು ಉತ್ತೇಜಿಸುತ್ತದೆ’ ಎಂದು ಹೇಳಿದರು. "ಇದು ಅಂತಹ ಸಮಸ್ಯಾತ್ಮಕ ಜಾಹೀರಾತಾಗಿದೆ. ಕಾರಿನ ಸುರಕ್ಷತಾ ಅಂಶವನ್ನು ಉತ್ತೇಜಿಸಲು ಸರ್ಕಾರವು ಹಣವನ್ನು ಖರ್ಚು ಮಾಡುತ್ತಿದೆಯೇ ಅಥವಾ ಈ ಜಾಹೀರಾತಿನ ಮೂಲಕ ವರದಕ್ಷಿಣೆಯ ದುಷ್ಟ ಮತ್ತು ಕ್ರಿಮಿನಲ್ ಕೃತ್ಯವನ್ನು ಉತ್ತೇಜಿಸುತ್ತಿದೆಯೇ?" ಎಂದು ತಮ್ಮ ಪ್ರಶ್ನೆಯನ್ನು ಟ್ವೀಟ್ ಮಾಡಿದ್ದಾರೆ.

ರಸ್ತೆಗಳನ್ನು ಸುಧಾರಿಸುವ ಬದಲು ಆರು ಏರ್ ಬ್ಯಾಗ್ ಗಳನ್ನು ಹೊಂದಿರುವ ಕಾರುಗಳಲ್ಲಿ ಹಣ ಹೂಡಿಕೆ ಮಾಡುವಂತೆ ಇದು ಜನರನ್ನು ಕೇಳುತ್ತದೆ ಎಂದು ಹಲವಾರು ಇತರ ಬಳಕೆದಾರರು ಈ ಜಾಹೀರಾತನ್ನು ಖಂಡಿಸಿದ್ದಾರೆ. "300 ಮೀಟರ್ ರಸ್ತೆಯಲ್ಲಿ 3000 ಗುಂಡಿಗಳನ್ನು ನೀವು ಸರಿಪಡಿಸಲು ಸಾಧ್ಯವಿಲ್ಲ, ಆದರೆ ದುಬಾರಿ ವಾಹನಗಳನ್ನು ಮಾರಾಟ ಮಾಡುವವರನ್ನು ಉತ್ತೇಜಿಸುತ್ತಿದ್ದೀರಿ. ಮೊದಲು ರಸ್ತೆಗಳನ್ನು ಸುಧಾರಿಸಿ" ಎಂದು ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಬರೆದಿದ್ದಾರೆ.

ಇದನ್ನೂ ಓದಿ:  Vande Bharat Express: ಕರ್ನಾಟಕಕ್ಕೂ ಬರಲಿದೆ ವಂದೇ ಭಾರತ್ ರೈಲು! ಬೆಂಗಳೂರಿನಿಂದ ಈ ನಗರಕ್ಕೆ ಸೇವೆ

ಇನ್ನೊಬ್ಬ ಬಳಕೆದಾರರು ಮುಂಬೈ-ಗೋವಾ ಹೆದ್ದಾರಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. "ಇದು ಮುಂಬೈ-ಗೋವಾ ಹೆದ್ದಾರಿ, ಈ ಅಪಾಯಕಾರಿ ಸ್ಥಳದಲ್ಲಿ ದುರದೃಷ್ಟವಶಾತ್ ಅಪಘಾತ ಸಂಭವಿಸಿದರೆ ನಿಮ್ಮ ಆರು ಏರ್ ಬ್ಯಾಗ್ ಗಳು ಜೀವವನ್ನು ಉಳಿಸಬಹುದೇ" ಎಂದು ಅವರು ಬರೆದಿದ್ದಾರೆ.
Published by:Ashwini Prabhu
First published: