ಜಾತಿಭೇದಕ್ಕೆ ಬೇಸತ್ತು ನಟ ಕಲಾಭವನ್ ಮಣಿ ಸಹೋದರ ರಾಮಕೃಷ್ಣನ್ ಆತ್ಮಹತ್ಯೆಗೆ ಯತ್ನ

ಕಲಾಭವನ್ ಮಣಿ ಸಹೋದರ ಆರ್.ಎಲ್.ವಿ. ರಾಮಕೃಷ್ಣನ್

ಕಲಾಭವನ್ ಮಣಿ ಸಹೋದರ ಆರ್.ಎಲ್.ವಿ. ರಾಮಕೃಷ್ಣನ್

ಕೇರಳ ಸಂಗೀತ ನಾಟಕ ಅಕಾಡೆಮಿಯ ಅಧಿಕಾರಿಗಳಿಂದ ಜಾತಿ ತಾರತಮ್ಯವಾಗಿದೆ ಎಂದು ಬೇಸತ್ತು ಮೋಹಿನಿ ಆಟ್ಟಂ ನೃತ್ಯಗಾರ ಆರ್.ಎಲ್.ವಿ. ರಾಮಕೃಷ್ಣನ್ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ನಡೆದಿದೆ.

  • News18
  • 2-MIN READ
  • Last Updated :
  • Share this:

ಚೆನ್ನೈ(ಅ. 04): ಖ್ಯಾತ ದಕ್ಷಿಣ ಭಾರತೀಯ ನಟರಾಗಿದ್ದ ದಿವಂಗತ ಕಲಾಭನ್ ಮಣಿ ಅವರ ಕಿರಿಯ ಸಹೋದರ ಹಾಗೂ ಶಾಸ್ತ್ರೀಯ ನೃತ್ಯಗಾರ ಆರ್.ಎಲ್.ವಿ. ರಾಮಕೃಷ್ಣನ್ ಅವರು ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ತಮಿಳುನಾಡಿನ ತ್ರಿಶೂರ್​ನ ಕಲಾಗ್ರಾಮದಲ್ಲಿ ನಿನ್ನೆ ಶನಿವಾರ ಸಂಭವಿಸಿರುವುದು ಬೆಳಕಿಗೆ ಬಂದಿದೆ. ಹೆಚ್ಚು ಸಂಖ್ಯೆಯಲ್ಲಿ ನಿದ್ರೆ ಮಾತ್ರೆಗಳ ಸೇವಿಸಿದ್ದ ರಾಮಕೃಷ್ಣನ್ ಅವರು ತಮ್ಮ ಅಣ್ಣನ ಸ್ಮಾರಕದಲ್ಲಿ ಪ್ರಜ್ಞಾಶೂನ್ಯರಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರ. ತತ್​ಕ್ಷಣವೇ ಅವರನ್ನ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಈಗ ಅವರು ಚೇತರಿಸಿಕೊಂಡಿದ್ದು ಆರೋಗ್ಯ ಸ್ಥಿತಿ ಸಮಾಧಾನಕರವಾಗಿರುವುದು ತಿಳಿದುಬಂದಿದೆ. ಜಾತಿ ತಾರತಮ್ಯವೇ ಅವರು ಆತ್ಮಹತ್ಯೆಗೆ ಯತ್ನಿಸಲು ಪ್ರಚೋದಿಸಿರುವುದು ಅವರ ಸೂಸೈಡ್ ನೋಟ್​ನಿಂದ ಗೊತ್ತಾಗಿದೆ.


ಕೆಪಿಎಸಿ ಲಲಿತಾ ಅಧ್ಯಕ್ಷರಾಗಿರುವ ಕೇರಳ ಸಂಗೀತ ನಾಟಕ ಅಕಾಡೆಮಿಯ ಕೆಲ ಅಧಿಕಾರಿಗಳ ಬಗ್ಗೆ ರಾಮಕೃಷ್ಣನ್ ಅವರು ಗಂಭೀರ ಆರೋಪಗಳನ್ನ ಮಾಡಿದ್ದರು. ಆನ್​ಲೈನ್​ನಲ್ಲಿ ಆಯೋಜಿಸಲಾಗಿದ್ದ ನೃತ್ಯ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ರಾಮಕೃಷ್ಣನ್​ಗೆ ಅವಕಾಶ ನಿರಾಕರಿಸಲಾಗಿತ್ತೆನ್ನಲಾಗಿದೆ. ರಾಮಕೃಷ್ಣನ್ ಅವರ ಕೈಬರಹ ಇರುವ ಚೀಟಿ ಪತ್ತೆಯಾಗಿದ್ದು ಅದರಲ್ಲಿ ಈ ಘಟನೆಯ ವಿವರ ಇದೆ. ಅದರಲ್ಲಿ ಅವರು ಕೇರಳ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಅವರನ್ನ ತಮ್ಮ ಆತ್ಮಹತ್ಯೆಗೆ ಕಾರಣ ಎಂದು ಬೊಟ್ಟು ಮಾಡಿದ್ದಾರೆ. ಹಾಗೆಯೇ, ಜಾತಿ ತಾರತಮ್ಯ ಇಲ್ಲದ ಕಲಾ ವೇದಿಕೆ ನಿರ್ಮಾಣವಾಗಬೇಕೆಂದು ಈ ಪತ್ರದಲ್ಲಿ ರಾಮಕೃಷ್ಣನ್ ಆಶಿಸಿದ್ದಾರೆ. ಜಾತಿ ಕಾರಣವೇ ಅವರನ್ನ ಅತಿರೇಕ ನಿರ್ಧಾರಕ್ಕೆ ದೂಡಿರಬಹುದು ಎಂದು ಶಂಕಿಸಲಾಗಿದೆ.


ಇದನ್ನೂ ಓದಿ: ಬಿಹಾರದಲ್ಲಿ ನಿತೀಶ್ ಸಹವಾಸ ಬೇಡ; ಬಿಜೆಪಿ ಜೊತೆ ಮಾತ್ರ ಮೈತ್ರಿ: ಎಲ್​ಜೆಪಿ ಹಠ


ರಾಮಕೃಷ್ಣನ್ ಅವರು ಮೋಹಿಣಿಯಾಟ್ಟಂ ಎಂಬ ಶಾಸ್ತ್ರೀಯ ಪ್ರಾಕಾರದ ನೃತ್ಯ ಪ್ರವೀಣರಾಗಿದ್ದಾರೆ. ಇದು ಮಹಿಳೆಯರಿಗೆ ಬಹುತೇಕ ಸೀಮಿತವಾದ ನೃತ್ಯ ಪ್ರಕಾರವಾಗಿದೆ. ಇವರು 15 ವರ್ಷ ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿ ಪಿಎಚ್​ಡಿ ಕೂಡ ಪಡೆದಿದ್ದಾರೆ.


ಆದರೆ ಮೂಲಗಳ ಪ್ರಕಾರ, ಅಕಾಡೆಮಿಯ ಅಧ್ಯಕ್ಷೆ ಲಲಿತಾ ಅವರು ರಾಮಕೃಷ್ಣನ್ ಅವರಿಗೆ ನೃತ್ಯ ಪ್ರದರ್ಶನಕ್ಕೆ ಅವಕಾಶ ಕೊಡಬೇಕೆಂದು ಕಾರ್ಯದರ್ಶಿ ಎನ್. ರಾಧಾಕೃಷ್ಣನ್ ನಾಯರ್ ಅವರಿಗೆ ಮನವಿ ಮಾಡಿದ್ದರೆನ್ನಲಾಗಿದೆ. ನಾಯರ್ ಇದಕ್ಕೆ ಒಪ್ಪಿರಲಿಲ್ಲವೆನ್ನಲಾಗಿದೆ. ಈ ಸಂಬಂಧ ರಾಮಕೃಷ್ಣನ್ ಅವರ ಕುಟುಂಬದವರು ಆಡಿಯೋ ಕ್ಲಿಪ್​ವೊಂದರನ್ನ ಪೂರಕ ಸಾಕ್ಷಿಯಾಗಿ ಬಿಡುಗಡೆ ಮಾಡಿದ್ದಾರೆ.


ಇದನ್ನೂ ಓದಿ: ಹೈದರಾಬಾದ್ ಏರ್​ಪೋರ್ಟ್​ನಲ್ಲಿ 25 ಕೋಟಿ ರೂ ಮೌಲ್ಯದ ಅಕ್ರಮ ಚಿನ್ನ ವಶಕ್ಕೆ


ರಾಮಕೃಷ್ಣನ್ ಅವರ ಅಣ್ಣ ಕಲಾಭವನ್ ಮಣಿ ಕೂಡ ಜಾತಿ ತಾರತಮ್ಯ ಅನುಭವಿಸಿದ್ದರೆನ್ನಲಾಗಿದೆ. ಮಿಮಿಕ್ರಿ ಕಲಾವಿದರಾಗಿ ಬೆಳೆದು ಬಂದ ಮಣಿ ತಮ್ಮ ಸ್ವಂತ ಪ್ರತಿಭೆ ಮತ್ತು ಶ್ರಮದಿಂದ ದಕ್ಷಿಣ ಭಾರತೀಯ ಚಿತ್ರರಂಗಗಳಲ್ಲಿ ತಮ್ಮದೇ ಹೆಸರು ಛಾಪಿಸಿದ್ದರು. ಆದರೆ, ಅವರಿಗಿರುವ ಪ್ರತಿಭೆಗೆ ತಕ್ಕಂತೆ ಅವಕಾಶ ಸಿಗಲಿಲ್ಲ. ಅದಕ್ಕೆ ಜಾತಿಯೇ ಅಡ್ಡಿ ಎಂಬುದು ಅವರ ಕುಟುಂಬದವರ ಆರೋಪ. ಈಗ ಕಲಾ ಜಗತ್ತಿನಲ್ಲಿ ಜಾತಿ ಭೇದವೆಂಬ ಅಸಹ್ಯವನ್ನ ದೂರ ಮಾಡಲು ಕಾನೂನಾತ್ಮಕವಾಗಿ ಹೋರಾಟ ಮಾಡಲು ನಮ್ಮ ಕುಟುಂಬ ಸದಸ್ಯರು ನಿರ್ಧರಿಸಿದ್ದೇವೆ ಎಂದು ಕಲಾಭವನ್ ರೆಂಜಿತ್ ತಿಳಿಸಿದ್ದಾರೆ.

First published: