HOME » NEWS » National-international » RLD CHIEF AJIT SINGH DIES OF COVID 19 AT A GURGAON HOSPITAL SNVS

Ajit Singh - ಮಾಜಿ ಕೇಂದ್ರ ಸಚಿವ ಅಜಿತ್ ಸಿಂಗ್ ಕೋವಿಡ್​ಗೆ ಬಲಿ

ಗುರುಗ್ರಾಮದ ಖಾಸಗಿ ಆಸ್ಪತ್ರೆಯೊಂದರಲ್ಲಿ ಎರಡು ವಾರಗಳಿಂದ ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಕೇಂದ್ರ ಸಚಿವ ಅಜಿತ್ ಸಿಂಗ್ ಗುರುವಾರ ಬೆಳಗ್ಗೆ ನಿಧನರಾಗಿರುವುದು ತಿಳಿದುಬಂದಿದೆ.

news18
Updated:May 6, 2021, 12:48 PM IST
Ajit Singh - ಮಾಜಿ ಕೇಂದ್ರ ಸಚಿವ ಅಜಿತ್ ಸಿಂಗ್ ಕೋವಿಡ್​ಗೆ ಬಲಿ
ಅಜಿತ್ ಸಿಂಗ್
  • News18
  • Last Updated: May 6, 2021, 12:48 PM IST
  • Share this:
ನವದೆಹಲಿ(ಮೇ 06): ರಾಷ್ಟ್ರೀಯ ಲೋಕದಳ (ಆರ್​ಎಲ್​ಡಿ) ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಅಜಿತ್ ಸಿಂಗ್ ಇಂದು ಗುರುವಾರ ಬೆಳಗ್ಗೆ 8:20ಕ್ಕೆ ವಿಧಿವಶರಾಗಿದ್ದಾರೆ. ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಮಗನಾಗಿದ್ದ 82 ವರ್ಷದ ಅಜಿತ್ ಸಿಂಗ್ ಅವರಿಗೆ ಏಪ್ರಿಲ್ 20ರಂದು ಕೋವಿಡ್ ಸೋಂಕು ಇರುವುದು ದೃಢಪಟ್ಟಿತ್ತು. ದೆಹಲಿ ಬಳಿಯ ಗುರುಗ್ರಾಮದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಅಜಿತ್ ಸಿಂಗ್ ಇಂದು ಇಹಲೋಕ ತ್ಯಜಿಸಿದರು ಎಂದು ಅವರ ಕುಟುಂಬದವರು ಹೇಳಿಕೆ ನೀಡಿದ್ಧಾರೆ. ಅಜಿತ್ ಸಿಂಗ್ ಅವರು ಪತ್ನಿ ರಾಧಿಕಾ ಸಿಂಗ್ ಮತ್ತು ಒಬ್ಬ ಮಗ ಸೇರಿ ಮೂವರು ಮಕ್ಕಳನ್ನ ಅಗಲಿದ್ದಾರೆ.

“ಚೌಧರಿ ಅಜಿತ್ ಸಿಂಗ್ ಅವರು ಕೋವಿಡ್ ವಿರುದ್ಧ ಹೋರಾಡುತ್ತಾ ಇಂದು ಮೇ 6ರಂದು ಬೆಳಗ್ಗೆ 8:20ಕ್ಕೆ ನಿಧನರಾದರೆಂದು ದುಃಖತಪ್ತನಾಗಿ ತಿಳಿಸುತ್ತಿದ್ದೇನೆ. ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರಿಗೆ ಕಳೆದ ಕೆಲ ದಿನಗಳಿಂದ ಐಸಿಯುನಲ್ಲಿ ವೆಂಟಿಲೇಟರ್ ಸಪೋರ್ಟ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು” ಎಂದು ಅಜಿತ್ ಸಿಂಗ್ ಅವರ ಪರ್ಸನಲ್ ಸೆಕ್ರೆಟರಿ ಸಮರ್ಪಾಲ್ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: Third Wave of Coronavirus: ಕೊರೋನಾ ಮೂರನೇ ಅಲೆ ಕಟ್ಟಿಟ್ಟ ಬುತ್ತಿ; ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದ್ದೇನು?

ಅಜಿತ್ ಸಿಂಗ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಅಜಿತ್ ಸಿಂಗ್ ಅವರು ರೈತರ ಒಳಿತಿಗಾಗಿ ಸದಾ ಬದ್ಧರಾಗಿದ್ದರು ಎಂದು ಪ್ರಧಾನಿ ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಕೂಡ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ, ಕೋವಿಡ್-19 ನಿಯಮಾವಳಿ ಇರುವ ಹಿನ್ನೆಲೆಯಲ್ಲಿ ಅಜಿತ್ ಸಿಂಗ್ ಅವರ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ಈ ಸಂದರ್ಭದಲ್ಲಿ ಕುಟುಂಬಕ್ಕೆ ಸಾಂತ್ವನ ಹೇಳಲು ದೆಹಲಿಗೆ ಬರಬಾರದು ಎಂದು ಅವರ ಕಾರ್ಯದರ್ಶಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Corona Tragic Incident: ಕೊರೋನಾದಿಂದ ತಂದೆ ಸಾವು; ಶವ ಸಂಸ್ಕಾರದ ವೇಳೆ ದುಃಖದಿಂದ ಚಿತೆಗೆ ಹಾರಿದ ಮಗಳು!

1939, ಫೆಬ್ರವರಿ 12ರಂದು ಉತ್ತರ ಪ್ರದೇಶದ ಮೀರತ್​ನಲ್ಲಿ ಜನಿಸಿದ್ದ ಅಜಿತ್ ಸಿಂಗ್ ಅವರು ಎಂಟು ಬಾರಿ ಲೋಕಸಭಾ ಸದಸ್ಯರಾಗಿದ್ದರು. ಒಮ್ಮೆ ರಾಜ್ಯಸಭಾ ಸಂಸದರಾಗಿಯೂ ಆಯ್ಕೆಯಾಗಿದ್ದರು. ನಾಲ್ಕು ಬಾರಿ ಕೇಂದ್ರ ಸಚಿವರಾಗಿದ್ದವರು. ವಿಪಿ ಸಿಂಗ್, ಪಿವಿ ನರಸಿಂಹ ರಾವ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟಗಳಲ್ಲಿ ಸಚಿವರಾಗಿ ಕೆಲಸ ಮಾಡಿದವರು. ಜನತಾ ದಳ, ಕಾಂಗ್ರೆಸ್ ಪಕ್ಷದಲ್ಲೂ ಇದ್ದ ಅವರು 1997ರಲ್ಲಿ ಆರ್​ಎಲ್​ಡಿ ಪಕ್ಷ ಸ್ಥಾಪನೆ ಮಾಡಿದ್ದರು.ಐಐಟಿಯಲ್ಲಿ ಬಿಟೆಕ್ ಪದವಿ ಪಡೆದ ಅವರು ಅಮೆರಿಕದ ಇಲಿನಾಯ್ಸ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಿಂದ ಎಂಎಸ್ ಕೂಡ ಮಾಡಿದದಾರೆ. ಅಜಿತ್ ಸಿಂಗ್ ಅವರ ಮಗ ಜಯಂತ್ ಚೌಧರಿ ಉತ್ತರ ಪ್ರದೇಶದ ಮಥುರಾ ಕ್ಷೇತ್ರದ ಸಂಸದರಾಗಿದ್ದಾರೆ.
Published by: Vijayasarthy SN
First published: May 6, 2021, 12:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories