ಇಂಧನ ಮತ್ತು ಸಂಪನ್ಮೂಲ ಸಂಸ್ಥೆ ಮಾಜಿ ಮುಖ್ಯಸ್ಥ, ಪರಿಸರವಾದಿ ಆರ್​ಕೆ ಪಚೌರಿ ನಿಧನ

ಹೃದಯಾಘಾತಕ್ಕೆ ಒಳಗಾದ ಪಚೌರಿ ಅವರನ್ನು ದೆಹಲಿಯ ಎಸ್ಕಾರ್ಟ್​ ಹೃದಯಾಲಯಕ್ಕೆ ದಾಖಲಿಸಲಾಗಿತ್ತು. ಕಳೆದ ಮಂಗಳವಾರ ತೆರೆದ ಹೃದಯ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿತ್ತು. ಬಳಿಕ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು.

ಆರ್​.ಕೆ.ಪಚೌರಿ.

ಆರ್​.ಕೆ.ಪಚೌರಿ.

 • Share this:
  ನವದೆಹಲಿ: ಹೃದಯಾಘಾತಕ್ಕೆ ಒಳಗಾಗಿ ದೆಹಲಿ ಆಸ್ಪತ್ರೆಗೆ ದಾಖಲಾಗಿದ್ದ ಇಂಧನ ಮತ್ತು ಸಂಪನ್ಮೂಲ ಸಂಸ್ಥೆಯ (ಟಿಇಆರ್​ಐ) ಮಾಜಿ ಮುಖ್ಯಸ್ಥ ಹಾಗೂ ಪರಿಸರವಾದಿ ಆರ್​.ಕೆ.ಪಚೌರಿ (79) ಗುರುವಾರ ಸಂಜೆ ಇಹಲೋಕ ತ್ಯಜಿಸಿದ್ದಾರೆ.

  ಟಿಇಆರ್​ಐನ ಹಾಲಿ ಪ್ರಧಾನ ನಿರ್ದೇಶಕ ಅಜಯ್ ಮಾಥೂರ್ ಅವರು ಪಚೌರಿ ನಿಧನವನ್ನು ಖಚಿತಪಡಿಸಿದ್ದಾರೆ. ಟಿಇಆರ್​ಐ ಸಂಸ್ಥೆ ಇಂದು ಈ ಮಟ್ಟಕ್ಕೆ ಬೆಳಯಲು ಅದಕ್ಕೆ ಕಾರಣಕರ್ತರು ಪಚೌರಿ. ಅವರ ನಿರಂತರ ಪರಿಶ್ರಮದಿಂದಾಗಿ ಸಂಸ್ಥೆ ಇಂದು ದೈತ್ಯಾಕಾರವಾಗಿ ಬೆಳದಿದೆ. ಸುಸ್ಥಿರ ವಲಯದಲ್ಲಿ ಪ್ರಮುಖ ಸಂಘಟನೆಯಾಗಿ ಬೆಳೆಯುವಲ್ಲಿ ಪಚೌರಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಮಾಥೂರ್ ಹೇಳಿದ್ದಾರೆ.

  ಹೃದಯಾಘಾತಕ್ಕೆ ಒಳಗಾದ ಪಚೌರಿ ಅವರನ್ನು ದೆಹಲಿಯ ಎಸ್ಕಾರ್ಟ್​ ಹೃದಯಾಲಯಕ್ಕೆ ದಾಖಲಿಸಲಾಗಿತ್ತು. ಕಳೆದ ಮಂಗಳವಾರ ತೆರೆದ ಹೃದಯ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿತ್ತು. ಬಳಿಕ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು.

  ಇದನ್ನು ಓದಿ: ಭಗವದ್ಗೀತೆ ಪ್ರಮಾಣದಿಂದ ಬ್ರಿಟನ್ ಹಣಕಾಸು ಸಚಿವನಾಗುವವರೆಗೆ: ನಾರಾಯಣಮೂರ್ತಿ ಅಳಿಯ ರಿಷಿ ಸುನಾಕ್ ಸಾಧನೆಯ ಕ್ಷಿಪ್ರ ಹಾದಿ

  First published: