Lalu Yadav: ಲಾಲೂ ಪ್ರಸಾದ್​ ಯಾದವ್​ ಆರೋಗ್ಯ ಸ್ಥಿತಿ ಗಂಭೀರ; ದೆಹಲಿಯ ಏಮ್ಸ್​ಗೆ ದಾಖಲು ಸಾಧ್ಯತೆ

ಲಾಲೂ ಪ್ರಸಾದ್ ಯಾದವ್​

ಲಾಲೂ ಪ್ರಸಾದ್ ಯಾದವ್​

70 ವರ್ಷ ಪೂರೈಸಿರುವ ಲಾಲೂ ಮಧುಮೇಹ, ಹೃದಯ ಕಾಯಿಲೆ, ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದಾರೆ

  • Share this:

ರಾಂಚಿ (ಜ. 23): ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲೂ ಪ್ರಸಾದ್​ ಯಾದವ್​ ಆರೋಗ್ಯ ಹದಗೆಟ್ಟಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶ್ವಾಸಕೋಶದ ಸೋಂಕಿಗೆ ತುತ್ತಾಗಿರುವ ಅವರು ಪ್ರಸ್ತುತ ರಾಂಚಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಹಾರದ ಮೇವು ಹಗರಣ ಸಂಬಂಧ ಶಿಕ್ಷೆಗೆ ಗುರಿಯಾಗಿದ್ದಾರೆ. ಆರ್​ಜೆಡಿ ನಾಯಕನ ಆರೋಗ್ಯ ಹದಗೆಡುತ್ತಿರುವ ಬಗ್ಗೆ ಅವರು ಚಿಕಿತ್ಸೆ ಪಡೆಯುತ್ತಿರುವ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರ ಮಂಡಳಿ ಅವರನ್ನು ದೆಹಲಿ ಆಸ್ಪತ್ರೆಗೆ ಸ್ಥಳಾಂತರಿಸುವ ಬಗ್ಗೆ ಚಿಂತನೆ ನಡೆಸಿದೆ. ಈ ಹಿನ್ನಲೆ ಜೈಲಾಧಿಕಾರಿಗಳಿಗೆ ಅವರು ಮಾಹಿತಿ ನೀಡಿದರು. ಈ ಹಿನ್ನಲೆ ಜೈಲಾಧಿಕಾರಿಗಳು ಅವರನ್ನು ದೆಹಲಿಗೆ ಶಿಫ್ಟ್​ ಮಾಡಲು ಸಿದ್ಧತೆ ನಡೆಸಿದ್ದಾರೆ.


ಗುರುವಾರ ಸಂಜೆ ಅವರಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ. ಶುಕ್ರವಾರ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನಲೆ ಅವರ ಮಗ ತೇಜಸ್ವಿ ಯಾದವ್​ ಈ ಕುರಿತು ಜಾರ್ಖಂಡ್​ ಮುಖ್ಯಮಂತ್ರಿ ಹೇಮಂತ್​ ಸೊರೆನ್​ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಬಳಿಕ ಮಾತನಾಡಿದ ತೇಜಸ್ವಿ ಯಾದವ್​, ಅವರಿಗೆ ನಾವು ಉತ್ತಮ ಚಿಕಿತ್ಸೆ ನೀಡಲು ಬಯಸುತ್ತಿದ್ದೇವೆ, ಆದರೆ, ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದನ್ನು ವೈದ್ಯರು ತಿಳಿಸಿಬೇಕಿದೆ. ಅವರ ಸ್ಥಿತಿ ಗಂಭೀರವಾಗಿದ್ದು, ಈ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿ ಉಆಗಿ ಚರ್ಚೆ ನಡೆಸುತ್ತೇನೆ ಎಂದಿದ್ದರು.


ಲಾಲೂ ಆರೋಗ್ಯ ಬಿಗಾಡಾಯಿಸಿದ ಹಿನ್ನಲೆ ರಾಬ್ರಿ ದೇವಿ, ಮಗ ತೇಜ್​ ಪ್ರತಾಪ್​ ಶುಕ್ರವಾರ ರಾಂಚಿ ತಲುಪಿದ್ದಾರೆ. 70 ವರ್ಷ ಪೂರೈಸಿರುವ ಲಾಲೂ ಮಧುಮೇಹ, ಹೃದಯ ಕಾಯಿಲೆ, ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದಾರೆ

top videos
    First published: