ರೈಸಿಂಗ್ ಇಂಡಿಯಾ ಶೃಂಗಸಭೆ 2023 (Rising India Summit 2023) ರಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ (External Affairs Minister S. Jaishankar ) ಅವರು ತಮ್ಮ ನೆಚ್ಚಿನ ಕ್ರಿಕೆಟಿಗರು (Favourite Cricketers) ಮತ್ತು ತಮಗೆ ಬಹಳ ಇಷ್ಟವಾದ ಪುಸ್ತಕಗಳ (Books) ಕುರಿತಂತೆ ಬಹಿರಂಗಪಡಿಸಿದ್ದಾರೆ. ಪ್ರತಿಯೊಬ್ಬ ಭಾರತೀಯರಂತೆ ಇಎಎಂ ಜೈಶಂಕರ್ ಕೂಡ ಕಟ್ಟಾ ಕ್ರಿಕೆಟ್ ಅಭಿಮಾನಿ ಆಗಿದ್ದು, ವೀರೇಂದ್ರ ಸೆಹ್ವಾಗ್(Virender Sehwag), ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಮತ್ತು ಜೇಮ್ಸ್ ಆಂಡರ್ಸನ್ (James Anderson) ತಮ್ಮ ನೆಚ್ಚಿನ ಕ್ರಿಕೆಟಿಗರು ಎಂದಿದ್ದಾರೆ. ಆಕ್ರಮಣಕಾರಿ ಆಟ, ಶಾಂತತೆ ಮತ್ತು ಸಹಿಷ್ಣುತೆಯ ಕಾರಣದಿಂದಾಗಿ ಈ ಆಟಗಾರರು ಅಂದ್ರೆ ತಮಗೆ ಬಹಳ ಇಷ್ಟ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"You will see an intensification in Russia's relationship with Asia as a whole; India-Russia relationship has been one of the most steady relationships": Union Minister S Jaishankar (@DrSJaishankar)
Watch #News18RisingIndia LIVE | @Zakka_Jacob pic.twitter.com/TYUrabLRU2
— News18 (@CNNnews18) March 29, 2023
ಪ್ರಯಾಣದಲ್ಲಿ 'ಮಹಾಭಾರತ', 'ಲಾರ್ಡ್ ಆಫ್ ದಿ ರಿಂಗ್ಸ್' ಪುಸ್ತಕ ಕೊಂಡೊಯ್ಯುವ ಸಚಿವರು
ಇದೇ ವೇಳೆ ತಾವು ಪ್ರಯಾಣ ಮಾಡುವಾಗಲೆಲ್ಲಾ 'ಮಹಾಭಾರತ' ಮತ್ತು 'ಲಾರ್ಡ್ ಆಫ್ ದಿ ರಿಂಗ್ಸ್' ಪುಸ್ತಕವನ್ನು ಕೊಂಡೊಯ್ಯುತ್ತಿದ್ದೆ ಎಂದು ಜೈಶಂಕರ್ ಅವರು ತಿಳಿಸಿದ್ದಾರೆ. ತಮ್ಮ ನೆಚ್ಚಿನ LOTR ('ಲಾರ್ಡ್ ಆಫ್ ದಿ ರಿಂಗ್ಸ್) ಪಾತ್ರದ ಬಗ್ಗೆ ಮಾತನಾಡಿದ ಅವರು, ಒತ್ತಡದ ಸಂದರ್ಭಗಳಲ್ಲಿ ಈ ಪಾತ್ರವು ಶಾಂತವಾಗಿ ಕಾರ್ಯನಿರ್ವಹಿಸುವುದು ಹೇಗೆ ಅಂತ ತಿಳಿಸುತ್ತದೆ ಎಂದಿದ್ದಾರೆ.
ಉಕ್ರೇನ್- ರಷ್ಯಾ ಯುದ್ಧ ನಡುವಿನ ತೈಲ ಪೂರೈಕೆ ಚರ್ಚೆ
ಉಕ್ರೇನ್ ಯುದ್ಧದ ನಡುವೆ ರಷ್ಯಾದಿಂದ ತೈಲ ಪೂರೈಕೆಯ ಬಗ್ಗೆ ಪ್ರಶ್ನಿಸಿದಕ್ಕೆ, ಮಾರುಕಟ್ಟೆ ಎಂದಿಗೂ ಮಾರುಕಟ್ಟೆಯೇ ಆಗಿರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಜನವರಿಯಲ್ಲಿ ಭಾರತಕ್ಕೆ ರಷ್ಯಾದ ಕಚ್ಚಾ ತೈಲದ ಪೂರೈಕೆಯು ತಿಂಗಳಿಗೆ ಶೇಕಡಾ 6.2 ರಷ್ಟು ಏರಿಕೆಯಾಗಿದೆ, ಈ ವೇಳೆ ಭಾರತಕ್ಕೆ ಒಂದೇ ತಿಂಗಳಲ್ಲಿ ರಷ್ಯಾದಿಂದ ಅತೀ ಹೆಚ್ಚು ಪೂರೈಕೆಯಾದ ತೈಲ ಆಗಿದೆ.
ನ್ಯೂಸ್ 18 ನೆಟ್‌ವರ್ಕ್‌ನ ಶೃಂಗಸಭೆಯ ಮೂರನೇ ಆವೃತ್ತಿಯಲ್ಲಿ ಸಂಭಾಷಣೆ
ನ್ಯೂಸ್ 18 ನೆಟ್‌ವರ್ಕ್‌ನ ಶೃಂಗಸಭೆಯ ಮೂರನೇ ಆವೃತ್ತಿಯಲ್ಲಿ ಸಂಭಾಷಣೆ ನಡೆಯಿತು.ಕೇಂದ್ರ ಸರ್ಕಾರದ ಗೌರವಾನ್ವಿತ ನಾಯಕರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮನ್ಸುಖ್ ಮಾಂಡವಿಯಾ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ 'ರೈಸಿಂಗ್ ಇಂಡಿಯಾ ಶೃಂಗಸಭೆ 2023' ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಇದನ್ನೂ ಓದಿ: Rising India: ಭಾರತದಲ್ಲಿ ಕಾನೂನಿನ ಎದುರು ಎಲ್ಲರೂ ಸಮಾನರು: ಸಚಿವ ಜೈಶಂಕರ್
ಈ ಮೆಗಾ-ಈವೆಂಟ್ ತಳಮಟ್ಟದಲ್ಲಿ ಬದಲಾವಣೆಯನ್ನು ಉಂಟುಮಾಡುವ ನೆಲ-ಮುರಿಯುವ ಪರಿಹಾರಗಳನ್ನು ರಚಿಸಿದ, ಜೀವನವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿರುವ ಸಾಮಾಜಿಕ ಉದ್ಯಮಶೀಲತಾ ಯೋಜನೆಗಳನ್ನು ಪ್ರಾರಂಭಿಸಿದ, ಸಕಾರಾತ್ಮಕ ಬದಲಾವಣೆಯನ್ನು ತರುವ, ಸಮುದಾಯ-ನೇತೃತ್ವದ ಉಪಕ್ರಮಗಳನ್ನು ಪ್ರಾರಂಭಿಸಿದ 20 ವೀರರನ್ನು ಗೌರವಿಸುವ ಗುರಿಯನ್ನು ಹೊಂದಿದೆ. ವಿವಿಧ ರೀತಿಯಲ್ಲಿ ಭಾರತವನ್ನು ಸುಧಾರಿಸಲು ಸಹಾಯ ಮಾಡುವ ಶೌರ್ಯ ಮತ್ತು ಸಹಾನುಭೂತಿಯ ಕಾರ್ಯಗಳನ್ನು ಪ್ರದರ್ಶಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ