• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Rising India: ಕಾಂಗ್ರೆಸ್​ ದಾರಿ ತಪ್ಪಿಸುತ್ತಿದೆ! ರಾಹುಲ್​ ಗಾಂಧಿ ಅನರ್ಹತೆ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿದ ಅಮಿತ್​ ಶಾ

Rising India: ಕಾಂಗ್ರೆಸ್​ ದಾರಿ ತಪ್ಪಿಸುತ್ತಿದೆ! ರಾಹುಲ್​ ಗಾಂಧಿ ಅನರ್ಹತೆ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿದ ಅಮಿತ್​ ಶಾ

ಅಮಿತ್ ಶಾ

ಅಮಿತ್ ಶಾ

ಕಾನೂನಿನನ್ವಯ ರಾಹುಲ್​ ಗಾಂಧಿ ಅವರನ್ನ ಅನರ್ಹತೆ ಗೊಳಿಸಲಾಗಿದೆ. ಆದರೆ ಪರಿಸ್ಥಿತಿಯ ಮೇಲೆ ನಿಯಂತ್ರಣವಿಲ್ಲದಿರುವ ಕಾಂಗ್ರೆಸಿಗರು ರಾಹುಲ್ ಗಾಂಧಿಯ ಅನರ್ಹತೆಗೆ ಪ್ರಧಾನಿ ನರೇಂದ್ರ ಮೋದಿಯನ್ನು ದೂಷಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಅಮಿತ್ ಶಾ ಕಿಡಿ ಕಾರಿದ್ದಾರೆ.

 • Share this:

ಮುಂಬೈ: ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಲೋಕಸಭೆ (Lok Sabha) ಸದಸ್ಯತ್ವದ ಅನರ್ಹತೆ ಕಾನೂನಿನಾತ್ಮಕ ಕ್ರಮವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ (Home Minister Amit Shah) ಹೇಳಿದ್ದಾರೆ. ನ್ಯೂಸ್​18 ರೈಸಿಂಗ್ ಇಂಡಿಯಾ ಸಮಾವೇಶದಲ್ಲಿ ಮಾತನಾಡಿದ ಅವರು, 2013ರಲ್ಲಿ ಮನಮೋಹನ್​ ಸಿಂಗ್ (Manmohan Singh) ನೇತೃತ್ವದ ಕಾಂಗ್ರೆಸ್​ ಸರ್ಕಾರ (Congress Government ) ಇದ್ದಾಗಲೇ ಸುಪ್ರಿಂ ಕೋರ್ಟ್​ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 8 (4) ಅನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು. ಈ ತೀರ್ಪನ್ನು ಅಮಾನ್ಯಗೊಳಿಸಲು ಯುಪಿಎ ಸರ್ಕಾರ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿತ್ತು. ಆ ಸಂದರ್ಭದಲ್ಲಿ ಇದೇ ರಾಹುಲ್​ ಗಾಂಧಿ ಈ ಸುಗ್ರೀವಾಜ್ಞೆ ಅಸಂಬದ್ಧ ಎಂದು ಅದರ ಪ್ರತಿಯನ್ನು ಮಾಧ್ಯಮ ಗೋಷ್ಠಿಯಲ್ಲಿ ಸಾರ್ವಜನಿಕವಾಗಿ ಹರಿದು ಹಾಕಿದ್ದರು. ಈಗ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಹೇಳಿಕೊಂಡು ಜನರ ದಾರಿ ತಪ್ಪಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಿಡಿಕಾರಿದ್ದಾರೆ.


ಲೋಕಸಭೆಯಿಂದ ಕಾಂಗ್ರೆಸ್​ ಮಾಜಿ ಅಧ್ಯಕ್ಷರನ್ನು ಅನರ್ಹಗೊಳಿಸಿದ ಬಗ್ಗೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಕೋರ್ಟ್​ ತೀರ್ಪಿನ ವಿರುದ್ಧ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಇದ್ದರೂ ಏಕೆ ಸಲ್ಲಿಸಲಿಲ್ಲ, ಇದು ಅಹಂಕಾರ ಅಲ್ಲವೇ ಎಂದು ಪ್ರಶ್ನಿಸಿದರು.


ಇದನ್ನೂ ಓದಿ:  Rising India: ದೇಶದಲ್ಲಿ ಅಪಘಾತಗಳು ಕಡಿಯಾಗಬೇಕಾದ್ರೆ ಈ ನಿಯಮಗಳನ್ನು ಪಾಲಿಸಲೇಬೇಕು, ರೈಸಿಂಗ್ ಇಂಡಿಯಾ ಸಮಾವೇಶದಲ್ಲಿ ನಿತಿನ್​ ಗಡ್ಕರಿ ಕರೆ


ರಾಹುಲ್​ ಗಾಂಧಿ ಅರ್ನಹತೆ ತಪ್ಪಿಸಿಕೊಳ್ಳಬಹುದಿತ್ತು


2013ರಲ್ಲಿ ಜನಪ್ರತಿನಿಧಿ ಕಾಯ್ದೆಯ ವಿರುದ್ಧ ಯುಪಿಎ ಸರ್ಕಾರ ಜಾರಿಗೊಳಿಸಲು ಹೊರಟಿದ್ದ ಸುಘ್ರೀವಾಜ್ಞೆಯನ್ನು ಹರಿದು ಹಾಕದಿದ್ದರೆ, ಇಂದು ಅದು ಅವರನ್ನು ಅನರ್ಹತೆಯಿಂದ ಉಳಿಸುತ್ತಿತ್ತು ಎಂದು ಶಾ ಹೇಳಿದ್ದಾರೆ.


" ಅಂದು ಕಾಂಗ್ರೆಸ್ ಆರ್​ಜೆಡಿಯ ಲಾಲು ಪ್ರಸಾದ್ ಅವರನ್ನು ಉಳಿಸಲು ಬಯಸಿತ್ತು. ಅದಕ್ಕಾಗಿ ಸುಪ್ರಿಂ ಕೊರ್ಟ್​ ತೀರ್ಪಿನ ವಿರುದ್ಧ ಸುಗ್ರೀವಾಜ್ಞೆಯನ್ನು ಜಾರಿಗೆ ತಂದಿತ್ತು. ಆದರೆ ರಾಹುಲ್ ಗಾಂಧಿ ಅದನ್ನು ನಾನ್ಸೆನ್ಸ್ ಎಂದು ಹರಿದು ಹಾಕಿದರು. ಇಂದು ಆ ಕಾನೂನು ಜಾರಿಯಲ್ಲಿದ್ದರೆ ರಾಹುಲ್ ಗಾಂಧಿ ಅನರ್ಹತೆಯಿಂದ ತಪ್ಪಿಸಿಕೊಳ್ಳುತ್ತಿದ್ದರು '' ಎಂದರು.
ಮೇಲ್ಮನವಿ ಏಕೆ ಸಲ್ಲಿಸಲಿಲ್ಲ


ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ನ್ಯಾಯಾಲಯ ಶಿಕ್ಷೆ ಘೋಷಣೆ ನೀಡಿದಾಗ, ರಾಹುಲ್ ಗಾಂಧಿಗೆ ಮೇಲ್ಮನವಿ ಸಲ್ಲಿಸುವ ಅವಕಾಶವಿದ್ದರೂ ಏಕೆ ಸಲ್ಲಿಸಲಿಲ್ಲ ಎಂದು ಶಾ ಪ್ರಶ್ನಿಸಿದರು." ಅವರಿಗೆ ಈ ದುರಹಂಕಾರ ಎಲ್ಲಿಂದ ಹುಟ್ಟುತ್ತದೆ? ಲಾಲು ಪ್ರಸಾದ್, ಜೆ ಜಯಲಲಿತಾ, ರಶೀದ್ ಅಲ್ವಿ ಸೇರಿದಂತೆ 17 ಮಂದಿ ಈ ಹಿಂದೆ ಸದಸ್ಯತ್ವ ಕಳೆದುಕೊಂಡಿದ್ದರು, ಆದರೆ ಯಾರೂ ಈ ರೀತಿ ಗದ್ದಲ ಸೃಷ್ಟಿಸಲಿಲ್ಲ. ಗಾಂಧಿ ಕುಟುಂಬ ತನಗಾಗಿ ಪ್ರತ್ಯೇಕ ಕಾನೂನು ಏಕೆ ಬಯಸುತ್ತಿದೆ? ಒಂದು ಕುಟುಂಬಕ್ಕೆ ಪ್ರತ್ಯೇಕ ಕಾನೂನು ಬೇಕೆ" ಎಂಬುದನ್ನು ಭಾರತದ ಜನರು ನಿರ್ಧರಿಸಬೇಕು ಎಂದರು.


ದ್ವೇಷದ ರಾಜಕೀಯ ಮಾಡಿಲ್ಲ


ಕಾನೂನಿನನ್ವಯ ರಾಹುಲ್​ ಗಾಂಧಿ ಅವರನ್ನ ಅನರ್ಹತೆ ಗೊಳಿಸಲಾಗಿದೆ. ಆದರೆ ಪರಿಸ್ಥಿತಿಯ ಮೇಲೆ ನಿಯಂತ್ರಣವಿಲ್ಲದಿರುವ ಕಾಂಗ್ರೆಸಿಗರು ರಾಹುಲ್ ಗಾಂಧಿಯ ಅನರ್ಹತೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭಾ ಸ್ಪೀಕರ್​ರನ್ನು ದೂಷಿಸುತ್ತಿದ್ದಾರೆ ಎಂದು ಗೃಹ ಸಚಿವರು ಹೇಳಿದರು.


ರಾಹುಲ್ ಗಾಂಧಿ ಅವರ ಅಧಿಕೃತ ನಿವಾಸದಲ್ಲಿ ಸ್ವಲ್ಪ ದಿನ ಇರಲು ಅವಕಾಶ ನೀಡಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಾ ಅದರಿಂದ ಏನು ಪ್ರಯೋಜನ? ಎಂದರು. ಇನ್ನು ದ್ವೇಷದ ರಾಜಕೀಯದ ಆರೋಪದ ಬಗ್ಗೆ ಕೇಳಿದ್ದಕ್ಕೆ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜನಪ್ರತಿನಿಧಿ ಕಾಯ್ದೆಯ ಪರ ಸುಪ್ರೀಂ ಕೋರ್ಟ್‌ನ ತೀರ್ಪು ನೀಡಿತ್ತು ಎಂದು ಹೇಳುವ ಮೂಲಕ ಅವರು ದ್ವೇಷದ ರಾಜಕೀಯದ ವರದಿಗಳನ್ನು ತಳ್ಳಿಹಾಕಿದರು.


ಇಂದಿರಾಗಾಂಧಿ ಹೇಳಿದ್ದನ್ನು ರಾಹುಲ್​ ಕೇಳಲಿ

top videos


  ವೀರ್ ಸಾವರ್ಕರ್ ವಿರುದ್ಧ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಟೀಕಿಸಿದ ಗೃಹ ಸಚಿವರು ಟೀಕಿಸಿದರು. ದೇಶಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ ಸಾವರ್ಕರ್‌ಗೆ ರಾಹುಲ್ ಗಾಂಧಿ ಇಂತಹ ಪದಗಳನ್ನು ಬಳಸಬಾರದು. ಇಂದಿರಾ ಗಾಂಧಿ ಸಾವರ್ಕರ್ ಅವರನ್ನು ತುಂಬಾ ಹೊಗಳಿದ್ದರು, ಬೇಕಾದರೆ ಆ ಭಾಷಣಗಳನ್ನು ಕೇಳಲಿ. ರಾಹುಲ್​ ಗಾಂಧಿಯವರ ಪಕ್ಷದವರೇ ಸಾವರ್ಕರ್ ವಿರುದ್ಧ ಮಾತನಾಡದಂತೆ ಸಲಹೆ ನೀಡುತ್ತಿದ್ದಾರೆ ಎಂದು ತಿಳಿಸಿದರು.

  First published: