Rising India: ಜಲಾಶಯವನ್ನು ತ್ಯಾಜ್ಯ ಮುಕ್ತವಾಗಿಡಲು ಯುವಕನ ಹೋರಾಟ, ನ್ಯೂಸ್​18 ಗೌರವ!

ವೀರೇಂದ್ರ ಯಾದವ್ ಹಾಗೂ ಬಿಲಾಲ್ ಅಹ್ಮದ್ ದಾರ್

ವೀರೇಂದ್ರ ಯಾದವ್ ಹಾಗೂ ಬಿಲಾಲ್ ಅಹ್ಮದ್ ದಾರ್

ಕಾರ್ಯಕ್ರಮಕ್ಕೆ 'ದಿ ಹೀರೋಸ್ ಆಫ್ ರೈಸಿಂಗ್ ಇಂಡಿಯಾ' ಎಂದು ಹೆಸರಿಡಲಾಗಿದೆ. ಈ ಮೆಗಾ-ಈವೆಂಟ್ ಸಾಮಾನ್ಯ ಜನರ ಅಸಾಧಾರಣ ಕೊಡುಗ ನೀಡಿದವರಿಗೆ ಸಲ್ಲಿಸುವ ನೀಡುವ ಗೌರವವಾಗಿದೆ. ಅಂತಹ 20 ವೀರರನ್ನು ಈ ಕಾರ್ಯಕ್ರಮದಲ್ಲಿ ಗೌರವಿಸಲಾಗುತ್ತಿದೆ.

  • News18 Kannada
  • 4-MIN READ
  • Last Updated :
  • New Delhi, India
  • Share this:

ನವದೆಹಲಿ(ಮಾ,29): ಶಿಕ್ಷಣ, ಕಲೆ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ವಿವಿಧ ಕೊಡುಗೆಗಳನ್ನು ನೀಡಿದ ವ್ಯಕ್ತಿಗಳನ್ನು ಗುರುತಿಸಿ ನ್ಯೂಸ್ 18 ನೆಟ್‌ವರ್ಕ್‌ನ (Network 18) ವಿಶೇಷ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತಿದೆ. ಅಂತಹ ಸಮಾಜಕ್ಕೆ ಕೊಡುಗೆ ನೀಡುವ ಇಂತಹ ಯುವಜನರನ್ನು ಗುರುತಿಸಿ ಗೌರವಿಸುವ ಈ ಕಾರ್ಯಕ್ರಮಕ್ಕೆ ಪೂನಾವಾಲಾ ಫಿನ್‌ಕಾರ್ಪ್ ಲಿಮಿಟೆಡ್ (Poonawalla Fincorp Limited) ಕೂಡಾ ಸಾಥ್ ನೀಡಿದೆ. ವಿವಿಧ ಕ್ಷೇತ್ರಗಳ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಪಂಚದ ವಿವಿಧ ಭಾಗಗಳ ಪ್ರತಿನಿಧಿಗಳು ಸಹ ಉಪಸ್ಥಿತರಿರುತ್ತಾರೆ. ಕಾರ್ಯಕ್ರಮಕ್ಕೆ 'ದಿ ಹೀರೋಸ್ ಆಫ್ ರೈಸಿಂಗ್ ಇಂಡಿಯಾ' (The Heroes of Rising India) ಎಂದು ಹೆಸರಿಡಲಾಗಿದೆ. ಈ ಮೆಗಾ-ಈವೆಂಟ್ ಸಾಮಾನ್ಯ ಜನರ ಅಸಾಧಾರಣ ಕೊಡುಗ ನೀಡಿದವರಿಗೆ ಸಲ್ಲಿಸುವ ನೀಡುವ ಗೌರವವಾಗಿದೆ. ಅಂತಹ 20 ವೀರರನ್ನು ಈ ಕಾರ್ಯಕ್ರಮದಲ್ಲಿ ಗೌರವಿಸಲಾಗುತ್ತಿದೆ.


ಬಿರೇಂದ್ರ ಯಾದವ್, ಹರಿಯಾಣದ ಕೈತಾಲ್ ಗ್ರಾಮದ ರೈತ. ಪ್ರಧಾನಿ ನರೇಂದ್ರ ಮೋದಿ ಅವರು 2020 ರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ವೀರೇಂದ್ರ ಯಾದವ್ ಅವರ ಸಮಾಜಮುಖಿ ಕಾರ್ಯಕ್ರಮದ ಬಗ್ಗೆ ಉಲ್ಲೇಖಿಸಿ ಭೇಷ್ ಎಂದಿದ್ದರು. ಕೃಷಿ ಇಂಧನ ಸ್ಥಾವರಗಳಿಗೆ ಮತ್ತು ಪೇಪರ್ ಮಿಲ್‌ಗಳಿಗೆ ಕಳೆ ಮಾರಾಟ ಮಾಡುವ ಮೂಲಕ ಇವರು ಲಾಭ ಗಳಿಸಿದ್ದಲ್ಲದೇ, ಹೊಲಗಳಲ್ಲಿ ಕಳೆಗಳನ್ನು ಸುಡುವುದರಿಂದ ಉಂಟಾಗುವ ಮಾಲಿನ್ಯವನ್ನು ತಪ್ಪಿಸಲು ಅವರು ನೀಡಿರುವ ಕೊಡುಗೆ ಅಪಾರ.


ಇದನ್ನೂ ಓದಿ: Rising India Summit: ರೈಸಿಂಗ್ ಇಂಡಿಯಾ ಶೃಂಗಸಭೆ 2023, ಪೂನಾವಾಲಾ ಫಿನ್‍ಕಾರ್ಪ್ ಲಿಮಿಟೆಡ್‍ನೊಂದಿಗೆ ಕೈ ಜೋಡಿಸಿದ ನ್ಯೂಸ್ 18 ನೆಟ್‍ವರ್ಕ್


ಇದಕ್ಕಾಗಿ ರೈತರು ಕೃಷಿ ಇಲಾಖೆಯ ನೆರವಿನಿಂದ ಸ್ಟ್ರಾ ಬೇಲರ್ ಯಂತ್ರ ಖರೀದಿಸಿದ್ದಾರೆ. ಅವರು ಹುಲ್ಲು ಮತ್ತು ಕಳೆಗಳನ್ನು ಒಟ್ಟಿಗೆ ಕಟ್ಟಿ ವಿವಿಧ ಸ್ಥಳಗಳಲ್ಲಿ ಮಾರಾಟ ಮಾಡಿದ್ದಾರೆ. ಕೇವಲ 2 ವರ್ಷಗಳಲ್ಲಿ ಎರಡೂವರೆ ಕೋಟಿಗೂ ಹೆಚ್ಚು ಮೌಲ್ಯದ ಕಳೆ ಮಾರಾಟ ಮಾಡಿರುವುದಾಗಿ ವೀರೇಂದ್ರ ಹೇಳಿಕೊಂಡಿದ್ದಾರೆ. ಸದ್ಯ ಈ ನಡೆ ಇತರರಿಗೂ= ಸ್ಫೂರ್ತಿಯಾಗಿ ಮಾರ್ಪಟ್ಟಿದೆ. ವಾಸ್ತವವಾಗಿ, ಉತ್ತರ ಭಾರತದ ರೈತರು ಪ್ರತಿ ವರ್ಷ ಚಳಿಗಾಲದಲ್ಲಿ ಕಳೆಗಳನ್ನು ಸುಡುತ್ತಾರೆ. ಇದು ವಾಯು ಮಾಲಿನ್ಯಕ್ಕೆ ಕಾರಣವಾಗುತ್ತದೆ. ಆ ಕಳೆಯನ್ನು ಹೀಗೆ ಬಳಸಿಕೊಳ್ಳುವ ಮೂಲಕ ವೀರೇಂದ್ರ ಅವರು ನಿಜಕ್ಕೂ ಸಮಾಜಕ್ಕೆ ಜ್ವಲಂತ ಉದಾಹರಣೆ ನೀಡಿದ್ದಾರೆ.


top videos



    ಇನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತಿರುವರಲ್ಲಿ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ನಿವಾಸಿ ಬಿಲಾಲ್ ಅಹ್ಮದ್ ದಾರ್ ಕೂಡಾ ಸೇರಿದ್ದಾರೆ. ಈ ಯುವಕನ ಸಾಧನೆಗೆ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಶಂಸೆ ವ್ಯಕ್ತವಾಗಿದೆ. ಉಲಾ ಸರೋವರದಿಂದ ಒಂದು ವರ್ಷದಲ್ಲಿ 12,000 ಕೆಜಿಗೂ ಹೆಚ್ಚು ಕಸವನ್ನು ತೆರವುಗೊಳಿಸಿದ್ದಕ್ಕಾಗಿ ಮನ್ ಕಿ ಬಾತ್‌ನಲ್ಲಿ 18 ವರ್ಷದ ಯುವಕನನ್ನು ಮೋದಿ ಶ್ಲಾಘಿಸಿದ್ದರು.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು