Akshata Murthy: ಪತ್ರಕರ್ತರಿಗೆ ಸುಧಾ ಮೂರ್ತಿ ಮಗಳು ಅಕ್ಷತಾ ಮೂರ್ತಿ ಸ್ವತಃ ಟೀ ನೀಡಿದ್ದೇಕೆ?

ಪತ್ರಕರ್ತರಿಗೆ ಚಹಾ ನೀಡಿದ ಅಕ್ಷತಾ ಮೂರ್ತಿ

ಪತ್ರಕರ್ತರಿಗೆ ಚಹಾ ನೀಡಿದ ಅಕ್ಷತಾ ಮೂರ್ತಿ

ಸಂಸತ್ತಿಗೆ ರಾಜೀನಾಮೆ ನೀಡಿದ ನಂತರ ಕೆನ್ಸಿಂಗ್ಟನ್‌ನಲ್ಲಿರುವ ಸುನಕ್ ಅವರ ಐಷಾರಾಮಿ ಅಪಾರ್ಟ್‌ಮೆಂಟ್‌ನ ಹೊರಗೆ ಹಲವಾರು ಪತ್ರಕರ್ತರು ಮತ್ತು ಛಾಯಾಗ್ರಾಹಕರು ಜಮಾಯಿಸಿದ ಹಿನ್ನೆಲೆಯಲ್ಲಿ ಬಿಲಿಯನೇರ್ ಇನ್ಫೋಸಿಸ್ ಸಹಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಹಾಗೂ ಸುನಕ್‌ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಟ್ರೇನಲ್ಲಿ ಚಹಾ ಮತ್ತು ಬಿಸ್ಕತ್ತುಗಳನ್ನು ತಂದರು.

ಮುಂದೆ ಓದಿ ...
  • Share this:

ಇತ್ತೀಚಿನ ಟ್ರೆಂಡ್‌ ಪ್ರಕಾರ ಹೇಳುವುದಾರೆ, ಶ್ರೀಮಂತರು ಮತ್ತು ಸೆಲೆಬ್ರಿಟಿಗಳು (Celebrities) ಏನೇ ಮಾಡಿದರೂ ಸುದ್ದಿ ಆಗುತ್ತಲೆ ಇರುತ್ತದೆ. ಈಗೀಗ ಅವರು ಕೂತರೂ, ನಿಂತರೂ, ತಮ್ಮ ಮನೆಗೆ ಬೇಕಾದ ಅವಶ್ಯ ವಸ್ತುಗಳನ್ನು ತರಲು ಶಾಪಿಂಗ್‌ ಹೋದರೂ ಕೂಡ ಸುದ್ದಿಯಾಗುತ್ತಲೇ ಇರುತ್ತಾರೆ. ಅದೇ ಲಿಸ್ಟ್‌ಗೆ ಈ ಸುದ್ದಿ ಕೂಡ ಸೇರಬಹುದು. ನೀವು ಓದಿ ಹೇಳಬೇಕು ಅಷ್ಟೆ. ಯುಕೆ ಸರ್ಕಾರದಲ್ಲಿ ರಿಷಿ ಸುನಕ್ (Rishi Sunak) ಅವರು ಕುಲಪತಿ ಹುದ್ದೆಗೆ ರಾಜೀನಾಮೆ ನೀಡಿರುವ ವಿಷಯ ಈಗ ಲಂಡನ್ನಿನಲ್ಲಿ ಚರ್ಚೆಯಾಗುತ್ತಿದ್ದು ಅವರ ಮುಂದಿನ ನಡೆಯ ಬಗ್ಗೆ ತಿಳಿದುಕೊಳ್ಳಲು ವರದಿಗಾರರು ಕಾತುರರಾಗಿದ್ದಾರೆ.


ಪತ್ರಕರ್ತರಿಗೆ ಚಹಾ ನೀಡಿದ ಅಕ್ಷತಾ ಮೂರ್ತಿ
ಐಟಿವಿ ನ್ಯೂಸ್ ಪ್ರಕಾರ, ರಿಷಿ ಸುನಕ್ ಅವರು ಮಂಗಳವಾರ ಬ್ರಿಟನ್‌ನ ಚಾನ್ಸೆಲರ್‌ನ ಅಧಿಕೃತ ನಿವಾಸದಿಂದ ಹೊರಟ ನಂತರ ಅವರು ಎಲ್ಲೂ ಹೊರಗಡೆ ಕಾಣಿಸಿಕೊಂಡಿಲ್ಲ. ಆದರೆ, ಲಂಡನ್‌ನಲ್ಲಿರುವ ಅವರ ಕುಟುಂಬ ನಿವಾಸದಲ್ಲಿ ಅವರು ಪತ್ತೆ ಆಗಿರುವುದು ಕಂಡುಬಂದಿದೆ. ಈ ನಿವಾಸದ ಹೊರಗೆ ಕಾಯುತ್ತಿದ್ದ ಪತ್ರಕರ್ತರು ರಿಷಿ ಸುನಕ್‌ ಅವರನ್ನು ನೋಡಿದ್ದಾರೆ. ಅಲ್ಲಿಗೆ ಹೋಗಿರುವ ಪತ್ರಕರ್ತರಿಗೆ ಸ್ವತಃ ಸುನಕ್‌ ಅವರ ಪತ್ನಿ ಮತ್ತು ಬಿಲಿಯೇನರ್‌ ಇನ್ಪೋಸಿಸ್‌ ಒಡೆಯ ನಾರಾಯಣ ಮೂರ್ತಿ ಅವರ ಮಗಳಾದ ಅಕ್ಷತಾ ಮೂರ್ತಿ ಚಹಾ ನೀಡಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.


ಈ ಕುರಿತ ಪೋಸ್ಟ್ ಗಳು ಟ್ವಿಟ್ಟರ್ನಲ್ಲಿ ವೈರಲ್ 
ಸಂಸತ್ತಿಗೆ ರಾಜೀನಾಮೆ ನೀಡಿದ ನಂತರ ಕೆನ್ಸಿಂಗ್ಟನ್‌ನಲ್ಲಿರುವ ಸುನಕ್ ಅವರ ಐಷಾರಾಮಿ ಅಪಾರ್ಟ್‌ಮೆಂಟ್‌ನ ಹೊರಗೆ ಹಲವಾರು ಪತ್ರಕರ್ತರು ಮತ್ತು ಛಾಯಾಗ್ರಾಹಕರು ಜಮಾಯಿಸಿದ ಹಿನ್ನೆಲೆಯಲ್ಲಿ ಬಿಲಿಯನೇರ್ ಇನ್ಫೋಸಿಸ್ ಸಹಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಹಾಗೂ ಸುನಕ್‌ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಟ್ರೇನಲ್ಲಿ ಚಹಾ ಮತ್ತು ಬಿಸ್ಕತ್ತುಗಳನ್ನು ತಂದರು.


ಇದನ್ನೂ ಓದಿ:  Chandigarh: ಶಾಲೆಯಲ್ಲಿ ಮರ ಬಿದ್ದು ದುರಂತ; ಹೆತ್ತವರ ವಿವಾಹ ವಾರ್ಷಿಕೋತ್ಸವದಂದೇ ಮಗಳ ಸಾವು!


ITV ನ್ಯೂಸ್ ಟ್ವಿಟ್ಟರ್‌ನಲ್ಲಿ ಈ ಕುರಿತ ವಿಡಿಯೋಗಳನ್ನು ಹಂಚಿಕೊಂಡಿದೆ. ಅಕ್ಷತಾ ಮೂರ್ತಿ ಚಹಾದ ಟ್ರೇ ಅನ್ನು ಒಂದು ಸಣ್ಣ ಮೇಜಿನ ಮೇಲೆ ಇರಿಸಿ ಅಲ್ಲಿಂದ ವೇಗವಾಗಿ ಮತ್ತೆ ಒಳಹೋದ ದೃಶ್ವವನ್ನು ನೋಡಬೇಕೆನಿಸಿದರೆ ಟ್ವಿಟ್ಟರ್‌ನಲ್ಲಿ ನೋಡಬಹುದು.


ಎಮ್ಮಾ ಲೇಸಿ ಮಗ್‌ಗಳಲ್ಲಿ ಚಹಾ ವಿತರಣೆ
ಅಕ್ಷತಾ ಮೂರ್ತಿ ಅವರು ಚಹಾವನ್ನು ಪತ್ರಕರ್ತರಿಗೆ ನೀಡಿದ್ದು ಒಂದು ಕಡೆ ಸುದ್ದಿಯಾದರೆ, ಸಾಮಾಜಿಕ ಜಾಲತಾಣದಲ್ಲಿ ಯಾವುದೇ ವಿಷಯವನ್ನೆ ಆಗಲಿ ಹದ್ದುಗಣ್ಣಿನಿಂದ ನೋಡುತ್ತಿರುವ ಟ್ವಿಟ್ಟರ್ ಬಳಕೆದಾರರು ಬಿಲಿಯನೇರ್ ನಾರಾಯಣ ಮೂರ್ತಿಯವರ ಮಗಳು ಎಮ್ಮಾ ಲೇಸಿ ಮಗ್‌ಗಳಲ್ಲಿ ಚಹಾವನ್ನು ನೀಡಿರುವುದು ಈ ಸುದ್ದಿಗೆ ಮತ್ತಷ್ಟು ರಂಗನ್ನು ನೀಡಿದೆ ಎಂದರೆ ತಪ್ಪಾಗಲಾರದು.


ಆ ಮಗ್‌ಗಳು ತಲಾ 38 ಪೌಂಡ್‌ಗಳಿಗೆ (ಸುಮಾರು ರೂ 3,600) ಸಮವಾಗಿರಬಹುದು. ಈ ರೀತಿಯ ಫ್ಯಾನ್ಸಿ ವಸ್ತುಗಳನ್ನು ಬಿಲಿಯೇನರ್‌ ಪುತ್ರಿ ಬಳಕೆ ಮಾಡುತ್ತಿರುವುದು ಟ್ವಿಟರ್‌ನಲ್ಲಿ ಕೆಲವರ ಹುಬ್ಬುಗಂಟಿಕ್ಕುವಂತೆ ಮಾಡಿದೆ. ಇಡೀ ಜಗತ್ತೆ ಜೀವನ ನಡೆಸಲು ಅನೇಕ ಬಿಕ್ಕಟ್ಟುಗಳನ್ನು ಎದುರಿಸಿ ಹೋರಾಡುತ್ತಿರುವ ಸಮಯದಲ್ಲಿ ಇವರಿಗೆ ತಮ್ಮ ಶೋಕಿಯೇ ಹೆಚ್ಚು ಎನಿಸಿದೆ. ಕೆಲವರು ಇದನ್ನು ಸಂವೇದನಾಶೀಲತೆಯಿಲ್ಲದ ನಡೆ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.


ಈ ಬಗ್ಗೆ ನೆಟ್ಟಿಗರು ಹೇಳಿದ್ದೇನು ನೋಡಿ
“ಸಂವೇದನಾಶೀಲತೆಯಿಲ್ಲದ ನಡೆ (Tonedeaf)!!! ಆ ಮಗ್‌ನ ಬೆಲೆಯಿಂದ 2 ದಿನಗಳವರೆಗೆ ಒಂದು ಕುಟುಂಬವನ್ನು ನಡೆಸಬಹುದು” ಎಂದು ಟ್ವಿಟರ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಮತ್ತೊಬ್ಬ ಟ್ವಿಟ್ಟರ್‌ ಬಳಕೆದಾರರು, “ಈ ಮಹಿಳೆ ಹಿಂದೆಂದೂ ಯಾರಿಗೂ ಟ್ರೇನಲ್ಲಿ ಚಹಾ ನೀಡಿರುವುದೇ ಇಲ್ಲ. ಈಗ ಇವರು ಚಹಾ ನೀಡುತ್ತಿದ್ದಾರೆ ಎಂದರೆ ಏನೋ ದೊಡ್ಡ ಉದ್ದೇಶ ಇರಲೇಬೇಕು. ಬಿಲಿಯೇನರ್‌ಗಳು ಯಾವುದೇ ಉದ್ದೇಶವಿಲ್ಲದೇ ಯಾವ ಕೆಲಸವನ್ನು ಕೂಡ ಮಾಡುವುದಿಲ್ಲ. ಇವತ್ತು ಅವರು ಚಹಾ ನೀಡಿದ್ದಾರೆ ಎಂದರೆ ನಿನ್ನೆ ಮಳೆ ಬಂದಿರಬಹುದು” ಎಂದು ಬರೆದಿದ್ದಾರೆ.


ಇದನ್ನೂ ಓದಿ:  Sad Marriage: ತಾಯಿಯ ಶವ ಮನೆಯಲ್ಲಿಟ್ಟುಕೊಂಡು ಅದ್ಧೂರಿಯಾಗಿ ಮದುವೆಯಾದ ಮಗ!


ಶ್ರೀಮಂತರು ಯಾವುದೇ ಕಾರಣವಿಲ್ಲದೇ ಯಾವ ಕೆಲಸವನ್ನು ಸಹ ಮಾಡುವುದಿಲ್ಲ. ಇಲ್ಲಿ ಯಾವುದೋ ದೊಡ್ಡ ಉದ್ದೇಶವಿದೆ ಎಂದು ಅಕ್ಷತಾ ಮೂರ್ತಿ ಅವರ “ಮಂದಮತಿ” ನಡೆ ಎಂದು ಲಂಡನ್ ಜನರು ಮಾತಾಡಿಕೊಳ್ಳುತ್ತಿದ್ದಾರೇನೋ ಎನ್ನಬಹುದು.

Published by:Ashwini Prabhu
First published: