• Home
 • »
 • News
 • »
 • national-international
 • »
 • Rishi Sunak: ರಿಷಿ ಸುನಕ್ ಕೈಯಲ್ಲಿ ಹಿಂದೂಗಳ ಪವಿತ್ರ ಕೆಂಪು ದಾರ!

Rishi Sunak: ರಿಷಿ ಸುನಕ್ ಕೈಯಲ್ಲಿ ಹಿಂದೂಗಳ ಪವಿತ್ರ ಕೆಂಪು ದಾರ!

ರಿಷಿ ಸುನಕ್

ರಿಷಿ ಸುನಕ್

ಹಿಂದೂಗಳ ಪವಿತ್ರ ಕೆಂಪು ದಾರವನ್ನು ಧರಿಸಿ ಬ್ರಿಟನ್​ನ ಹೊಸ ಪ್ರಧಾನಿ ರಿಷಿ ಸುನಕ್ ಮೊದಲ ಭಾಷಣ ಮಾಡಿದ್ದಾರೆ. ಸದ್ಯ ಈ ಫೊಟೋ ಭಾರೀ ವೈರಲ್ ಆಗುತ್ತಿದೆ.

 • News18 Kannada
 • Last Updated :
 • New Delhi, India
 • Share this:

  ಲಂಡನ್: ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಮೊದಲ ಭಾಷಣ ಮಾಡುವ ಸಂದರ್ಭದಲ್ಲಿ ರಿಷಿ ಸುನಕ್ (Britain PM Rishi Sunak) ಹಿಂದೂಗಳು ಪವಿತ್ರ ಎಂದು ಭಾವಿಸುವ ಕೆಂಪು ದಾರವನ್ನು ಧರಿಸಿದ್ದರು. ಉತ್ತರ ಭಾರತದಲ್ಲಿ ಕಲವಾ ಎಂದು ಕರೆಯಲಾಗುವ ಈ ಕೆಂಬಣ್ಣದ ದಾರವನ್ನು (Sacred Hindu Thread) ಹಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಧರಿಸಲಾಗುತ್ತದೆ. ನಂಬರ್ 10 ಡೌನಿಂಗ್ ಸ್ಟ್ರೀಟ್‌ನ ಹೊರಗಿನಿಂದ ಸಾರ್ವಜನಿಕರಿಗೆ ಕೈ ಬೀಸಿದಾಗ ರಿಷಿ ಸುನಕ್ ಸುನಕ್ "ಕಲಾವಾ" ಧರಿಸಿ ಕಾಣಿಸಿಕೊಂಡಿದ್ದಾರೆ.  ಸದ್ಯ ಈ ಫೋಟೋ ವೈರಲ್ ಆಗುತ್ತಿದೆ.  


  10 ಡೌನಿಂಗ್ ಸ್ಟ್ರೀಟ್‌ನಲ್ಲಿ ನಿಂತು ಮಾಡಿದ ಮೊದಲ ಭಾಷಣದಲ್ಲಿ ರಿಷಿ ಸುನಕ್  ಯುಕೆ ಮಾಜಿ ಪ್ರಧಾನಿ ಲಿಜ್ ಟ್ರಸ್ ಅವರನ್ನು ಶ್ಲಾಘಿಸಿದರು. ನಾನು ನನ್ನ ಹಿಂದಿನ ಲಿಜ್ ಟ್ರಸ್ ಅವರಿಗೆ ಗೌರವ ಸಲ್ಲಿಸಲು ಬಯಸುತ್ತೇನೆ. ಅವರು ಈ ದೇಶದ ಬೆಳವಣಿಗೆಯನ್ನು ಸುಧಾರಿಸಲು ಬಯಸುವುದರಲ್ಲಿ ತಪ್ಪಿಲ್ಲ. ಇದು ಉದಾತ್ತ ಗುರಿಯಾಗಿದೆ. ನಾನು ಬದಲಾವಣೆಯನ್ನು ಸೃಷ್ಟಿಸಲು ಅವರ ಚಡಪಡಿಕೆಯನ್ನು ಮೆಚ್ಚಿಕೊಂಡಿದ್ದೆ. ಆದರೆ ತಪ್ಪು ನಿರ್ಧಾರಗಳನ್ನು ಅವರು ಕೈಗೊಂಡಿದ್ದರು. ಆದರೆ ಆ ತಪ್ಪು ನಿರ್ಧಾರಗಳ ಹಿಂದೆ ಕೆಟ್ಟ ಉದ್ದೇಶಗಳಿರಲಿಲ್ಲ ಎಂದು ಹೇಳಿದ್ದಾರೆ.


  ನಂಬಿಕೆ ಗಳಿಸುವ  ಪ್ರತಿಜ್ಞೆ
  ಅಲ್ಲದೇ ರಿಷಿ ಸುನಕ್ ಬ್ರಿಟನ್ನರ ನಂಬಿಕೆಯನ್ನು ಗಳಿಸುವ ಕುರಿತು ಪ್ರತಿಜ್ಞೆಯನ್ನು ಸಹ ಮಾಡಿದ್ದಾರೆ. ಅವರ ಸರ್ಕಾರವು ಪ್ರತಿ ಹಂತದಲ್ಲೂ ಸಮಗ್ರತೆ, ವೃತ್ತಿಪರತೆ ಮತ್ತು ಹೊಣೆಗಾರಿಕೆಯನ್ನು ಹೊಂದಿರುತ್ತದೆ ಎಂದು ಸುನಕ್ ಹೇಳಿದ್ದಾರೆ.


  ಸೋತರೂ ಗೆದ್ದ ಸುನಕ್
  ಮಾಜಿ ಹಣಕಾಸು ಸಚಿವ ರಿಷಿ ಸುನಕ್ (Rishi sunak), ಈ ವರ್ಷದ ಸೆಪ್ಟೆಂಬರ್‌ನಲ್ಲಿ ಬ್ರಿಟನ್‌ನ ಪ್ರಧಾನಿ ಹುದ್ದೆಗೆ ಲಿಜ್ ಟ್ರಸ್ (Liz Truss) ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಬದಲಿಗೆ ನಡೆದ ಚುನಾವಣೆಯಲ್ಲಿ ಸುನಕ್ ಸೋತಿದ್ದರೂ ಈಗ ಅವರು ಮುಂದಿನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.


  ಇದನ್ನೂ ಓದಿ:


  ಮಹತ್ವದ ಬೆಳವಣಿಗೆಯಲ್ಲಿ ಕೊನೆ ಗಳಿಗೆಯಲ್ಲಿ ಪೆನ್ನಿ ಮೊರ್ಡಾಂಟ್ ರೇಸ್​​ನಿಂದ ಹಿಂದೆ ಸರಿದಿದ್ದರು. ಹೀಗಾಗಿ ಯಾವುದೇ ಪ್ರತಿಸ್ಪರ್ಧಿಗಳಿಲ್ಲದೆ ರಿಷಿ ಆಯ್ಕೆ ಆಗಿದ್ದರು. ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹಿಂದೆ ಸರಿದಾಗಲೇ ರಿಷಿ ಪ್ರಧಾನಿ ಪಟ್ಟಕ್ಕೇರುವುದು ಬಹುತೇಕ ಖಚಿತವಾಗಿತ್ತು. ಇದೀಗ ರಿಷಿ ಸುನಕ್ ಅವರ ಆಯ್ಕೆ ಅಧಿಕೃತವಾಗಿತ್ತು.


  45 ದಿನಕ್ಕೆ ರಾಜೀನಾಮೆ ನೀಡಿದ್ದ ಲಿಜ್ ಟ್ರಸ್
  ಈ ಹಿಂದೆ ನಡೆದ ಬ್ರಿಟನ್ ಪ್ರಧಾನಿ ಚುನಾವಣೆಯಲ್ಲಿ ರಿಷಿ ಸುನಕ್, ಲಿಜ್ ಟ್ರಸ್ ವಿರುದ್ಧ ಪರಾಭವಗೊಂಡಿದ್ದರು. ಲಿಜ್ ಟ್ರಸ್ ಪ್ರಧಾನಿ ಹುದ್ದೆಗೇರಿದರೂ ಆರ್ಥಿಕ ಬಿಕ್ಕಟ್ಟು ಮತ್ತು ಸರ್ಕಾರದ ನೀತಿಯಿಂದಾಗಿ ಹಿನ್ನಡೆ ಅನುಭವಿಸಿದ್ದರು. ಹೀಗಾಗಿ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಕೇವಲ 45 ದಿನಗಳಲ್ಲಿ ರಾಜೀನಾಮೆ ಕೊಟ್ಟಿದ್ದರು.


  ಇದನ್ನೂ ಓದಿ: Sperm Donation Law: ಇನ್ಮುಂದೆ ಮದುವೆಯಾಗಿದ್ರೆ ಮಾತ್ರ ವೀರ್ಯ ದಾನ, ಸಲಿಂಗಿಗಳಿಂದ ಈ ಕ್ರಮಕ್ಕೆ ವಿರೋಧ

  193 ಸಂಸದರ ಬೆಂಬಲ
  ರಿಷಿ ಸುನಕ್ ಗೆ ಬರೋಬ್ಬರಿ 193 ಸಂಸದರು ಬೆಂಬಲ ನೀಡಿದ್ದು ಇನ್ನು ರಿಷಿ ಸುನಕ್ ಗೆ ಪ್ರಬಲ ಸ್ಪರ್ಧಿಯಾಗಿದ್ದ ಸಂಸದೆ ಪೆನ್ನಿ ಮೋರ್ಡಾಂಟ್ ಗೆ 26 ಸಂಸದರು ಮಾತ್ರ ಬೆಂಬಲ ನೀಡಿದ್ದು ಹೀಗಾಗಿ ಪ್ರಧಾನಿ ಹುದ್ದೆ ಸ್ಪರ್ಧೆಯಿಂದ ಮೋರ್ಡಾಂಟ್ ಹಿಂದೆ ಸರಿದಿದ್ದರು. ಹೀಗಾಗಿ ರಿಷಿ ಹಾದಿ ಸುಗಮವಾಯ್ತು.


  ಇದನ್ನೂ ಓದಿ: Indians in the World: ಜಗತ್ತನ್ನೇ ಆಳುತ್ತಿದ್ದಾರೆ ಭಾರತೀಯರು; ಪ್ರಮುಖ ದೇಶಗಳ ಮುಖ್ಯಸ್ಥರು ನಮ್ಮವರು!


  ರಿಷಿ ಮುಂದಿದೆ ದೊಡ್ಡ ಸವಾಲು
  ಬ್ರಿಟನ್‌ ಆರ್ಥಿಕ ಪರಿಸ್ಥಿತಿ ಕ್ಷೀಣಿಸುತ್ತಿದೆ. ಹೀಗಾಗಿ ನ್ಸರ್ವೇಟಿವ್ ಪಕ್ಷದ ಅಭ್ಯರ್ಥಿ ಲಿಜ್ ಟ್ರಸ್ ಅಧಿಕಾರಕ್ಕೆ ಬಂದಿದ್ದರು. ಹೀಗಾಗಿ ಪ್ರಧಾನಿ ಪಟ್ಟದ ಜವಾಬ್ದಾರಿ ಇವರಿಗೆ ಸುಲಭದ ಹಾದಿಯಾಗಿರಲಿಲ್ಲ. ಇನ್ನು ಆರ್ಥಿಕ ಸುಧಾರಣೆ ಸಾಧ್ಯವಾಗದ ಕಾರಣ ಲಿಜ್ ಟ್ರಸ್ ರಾಜೀನಾಮೆ ನೀಡಬೇಕಾಯಿತು. ಇದೀಗ ಹೊಸದಾಗಿ ಆಯ್ಕೆಯಾಗಿರುವ ರಿಷಿ ಸುನಕ್ ಮುಂದೆ ಕೂಡ ಬಹುದೊಡ್ಡ ಸವಾಲುಗಳು ಇವೆ.

  Published by:ಗುರುಗಣೇಶ ಡಬ್ಗುಳಿ
  First published: