• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Rishi Sunak: ಕೃಷ್ಣ ಜನ್ಮಾಷ್ಟಮಿ, ಪತ್ನಿ ಜೊತೆ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿದ ಸುನಕ್, ಭಾರೀ ವಿವಾದ!

Rishi Sunak: ಕೃಷ್ಣ ಜನ್ಮಾಷ್ಟಮಿ, ಪತ್ನಿ ಜೊತೆ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿದ ಸುನಕ್, ಭಾರೀ ವಿವಾದ!

ಕೃಷ್ಣ ಜನ್ಮಾಷ್ಟಮಿ, ಪತ್ನಿ ಜೊತೆ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿದ ಸುನಕ್

ಕೃಷ್ಣ ಜನ್ಮಾಷ್ಟಮಿ, ಪತ್ನಿ ಜೊತೆ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿದ ಸುನಕ್

ಬ್ರಿಟನ್‌ನ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್ ಜನ್ಮಾಷ್ಟಮಿಯ ಸಂದರ್ಭದಲ್ಲಿ ಇಸ್ಕಾನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇವಸ್ಥಾನಕ್ಕೆ ಅವರು ಭೇಟಿ ನೀಡಿದ ವಿಚಾರದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಎರಡು ಬಣಗಳಾಗಿ ಹುಟ್ಟಿಕೊಂಡಿವೆ. ಒಂದು ವಿಭಾಗ ಅವರನ್ನು ಬೆಂಬಲಿಸುತ್ತಿದ್ದರೆ ಇನ್ನೊಂದು ವಿಭಾಗ ಅವರನ್ನು ಪ್ರಶ್ನಿಸುತ್ತಿದೆ.

ಮುಂದೆ ಓದಿ ...
  • Share this:

ಬ್ರಿಟನ್(ಆ.19): ಇಂದು ದೇಶಾದ್ಯಂತ ಕೃಷ್ಣ ಜನ್ಮಾಷ್ಟಮಿ (Krishna Janmashtami) ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಜನ್ಮಾಷ್ಟಮಿಯ ಸಂದರ್ಭದಲ್ಲಿ, ಬ್ರಿಟನ್‌ನಲ್ಲಿ ಪ್ರಧಾನಿ ಅಭ್ಯರ್ಥಿ ಭಾರತೀಯ ಮೂಲದ ರಿಷಿ ಸುನಕ್ (British Prime Ministerial hopeful Rishi Sunak) ಅವರು ತಮ್ಮ ಪತ್ನಿ ಅಕ್ಷತಾ ಅವರೊಂದಿಗೆ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ISKON) ದೇವಸ್ಥಾನಕ್ಕೆ ಭೇಟಿ ನೀಡಿದರು. ಅವರು ದೇವಸ್ಥಾನದಲ್ಲಿ ಪೂಜೆ ಮಾಡಿ ದರ್ಶನ ಪಡೆದ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ, ಅಲ್ಲದೇ ಇಂದು ನಾನು ನನ್ನ ಪತ್ನಿ ಅಕ್ಷತಾ ಅವರೊಂದಿಗೆ ಜನ್ಮಾಷ್ಟಮಿ ಆಚರಿಸಲು ಹೋಗಿದ್ದೆ. ಇದೊಂದು ಜನಪ್ರಿಯ ಹಿಂದೂ ಹಬ್ಬ ಎಂದು ಬರೆದಿದ್ದಾರೆ.


ಬ್ರಿಟನ್‌ನಲ್ಲಿ ಪ್ರಧಾನಿ ಚುನಾವಣೆಯ ಪೈಪೋಟಿಯ ನಡುವೆಯೇ ಅವರು ದೇವಸ್ಥಾನಕ್ಕೆ ಭೇಟಿ ನೀಡಿರುವುದರಿಂದ ಸಾಮಾಜಿಕ ಮಾಧ್ಯಮದಲ್ಲಿ ಎರಡು ಬಣಗಳು ಹುಟ್ಟಿಕೊಂಡಿವೆ. ಜನ್ಮಾಷ್ಟಮಿಯಂದು ಅವರು ದೇವಸ್ಥಾನಕ್ಕೆ ಭೇಟಿ ನೀಡುವುದು ಸಾಮಾನ್ಯ ಎಂದು ಒಂದು ವರ್ಗ ಸಮರ್ಥಿಸಿಕೊಳ್ಳುತ್ತಿದ್ದರೆ, ಇನ್ನೊಂದು ವರ್ಗ ಇದನ್ನು ರಾಜಕೀಯದೊಂದಿಗೆ ಸಂಬಂಧ ಕಲ್ಪಿಸಿ ಅನೇಕ ಪ್ರಶ್ನೆಗಳನ್ನೆಸೆದಿದೆ.



ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಕನ್ವಾಲ್ ಸಿಬಲ್ ಅವರು ರಿಷಿ ಸುನಕ್ ಅವರ ಈ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್​ನಲ್ಲಿ ಸುನಕ್ ತಮ್ಮ ಧರ್ಮ ಮತ್ತು ಸಂಸ್ಕೃತಿಗೆ ಅಂಟಿಕೊಂಡಿದ್ದಾರೆ. ಇದು ಅಮೆರಿಕದಲ್ಲಿರುವ ಅನೇಕ ಭಾರತೀಯ ಮೂಲದ ನಾಯಕರಿಗಿಂತ ಅವರನ್ನು ಭಿನ್ನವಾಗಿಸುತ್ತದೆ. ಒಬ್ಬ ನಾಯಕನಾಗಿ ಅಲ್ಲ ಬದಲಾಗಿ ಒಬ್ಬ ಮಾನವನಾಗಿ ಇದಕ್ಕಾಗಿ ನಾನು ಅವರಿಗೆ ಮನ್ನಣೆ ನೀಡುತ್ತೇನೆ. ವಿರ್ಯಾಸವೆಂದರೆ, ಅವರು ಭಾರತದಲ್ಲಿ ಜಾತ್ಯತೀತವಲ್ಲದವರಂತೆ ಕಾಣುತ್ತಾರೆ ಎಂದು ಬರೆದಿದ್ದಾರೆ.


ರೂಪೆನ್ ಚೌಧರಿ ಎಂಬ ಸಾಮಾಜಿಕ ಮಾಧ್ಯಮ ಬಳಕೆದಾರರು ಭಾರತೀಯ ಮೂಲದ ಯುಕೆ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್ ಅವರ ಪತ್ನಿಯೊಂದಿಗೆ ಜನ್ಮಾಷ್ಟಮಿ ಪೂಜೆಗಾಗಿ ಇಸ್ಕಾನ್ ದೇವಸ್ಥಾನವನ್ನು ತಲುಪಿದ್ದಾರೆ. ಭಾರತದ ಸೆಕ್ಯುಲರ್‌ಗಳು ಇದನ್ನು ದೂರುವುದಿಲ್ಲ ಎಂದು ಭಾವಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಗುಜರಾತ್‌ನಲ್ಲಿ ಹೊಸ ಇಂಧನ ಯೋಜನೆಗಳಲ್ಲಿ 6 ಟ್ರಿಲಿಯನ್ ರೂ. ಹೂಡಿಕೆ ಮಾಡಲಿದೆ ರಿಲಯನ್ಸ್‌


ಮನೋಜ್ ಮಯಾಂಕ್ ಎಂಬ ವ್ಯಕ್ತಿ ರಿಷಿ ಸುನಕ್ ಹಿಂದೂ ಎಂದು ಟ್ವೀಟ್ ಮಾಡಿದ್ದಾರೆ. ಇಂದು ಶ್ರೀಕೃಷ್ಣನ ಜನ್ಮದಿನ. ಈ ಸಂದರ್ಭದಲ್ಲಿ ಅನೇಕ ಹಿಂದೂಗಳು ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಅವರು ಕೂಡಾ ಹಾಗೆಯೇ ಮಾಡಿದ್ದಾರೆ. ಅಲ್ಪಸಂಖ್ಯಾತ ಹಿಂದೂಗಳ ಮತವನ್ನು ಪಡೆಯಲು ಅವರು ದೇವಸ್ಥಾನಕ್ಕೆ ಹೋಗಲಿಲ್ಲ ಏಕೆಂದರೆ ಅಲ್ಲಿನ ಜನಸಂಖ್ಯೆಯಲ್ಲಿ ಹೆಚ್ಚಿನವರು ಹಿಂದೂಗಳಲ್ಲ. ಈ ಉದ್ದೇಶದಿಂದ ಮಾಡಿದ್ದರೂ ಅವರಿಗೆ ಹಿಂದೂಯೇತರರ ಮತಗಳು ಬರುವುದಿಲ್ಲ. ಹಾಗಿರುವಾಗ ಅವರೇಕೆ ಇದನ್ನು ಏಕೆ ಮಾಡುತ್ತಾರೆ? ಎಂದಿದ್ದಾರೆ.



ರವೀಂದ್ರಸಿಂಗ್ ಜಡೇಜಾ ಟ್ವೀಟ್ ಮಾಡಿ ರಿಷಿ ಸುನಕ್ ವಿರುದ್ಧ ಮತ ಚಲಾಯಿಸುತ್ತಿರುವವರಿಗೆ ಇವತ್ತು ಜನ್ಮಾಷ್ಟಮಿ ಎಂದು ನೆನಪಿಸಿ. ಅವರು ದೇವಸ್ಥಾನಕ್ಕೆ ತೆರಳಿ ಆಶೀರ್ವಾದ ಪಡೆದು ಚಿತ್ರಕ್ಕೆ ಪೋಸ್ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದಕ್ಕಾಗಿ ದ್ವೇಷ ಹರಡುವ ಅಗತ್ಯವಿಲ್ಲ. ಪ್ರೀತಿಯ ಭಾರತೀಯರೇ, ಅವರು ಪ್ರಧಾನಿಯಾಗಲಿ ಅಥವಾ ಆಗದಿರಲಿ, ನಿಮಗೆ ವೀಸಾ ಸಿಗುವುದಿಲ್ಲ, ಕೊಹಿನೂರ್ ಕೂಡಾ ಸಿಗುವುದಿಲ್ಲ ಎಂದು ಬರೆದಿದ್ದಾರೆ.


ರಾಜಕೀಯದ ಜೊತೆ ನಂಟು


ಆದಾಗ್ಯೂ, ಅನೇಕ ಮಂದಿ ಈ ನಡೆಗೆ ರಾಜಕೀಯದೊಂದಿಗೆ ಸಂಬಂಧ ಕಲ್ಪಿಸುತ್ತಿದ್ದಾರೆ. ಲಿಲಿ ಶೆರ್ವುಡ್ ಎಂಬ ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ವೀಟ್ ಮಾಡಿ, ನಾನು ಚರ್ಚ್ ಅಥವಾ ದೇವಸ್ಥಾನದಲ್ಲಿ ಪ್ರಾರ್ಥನೆಯಲ್ಲಿ ಭಾಗವಹಿಸುವ ನಾಯಕನನ್ನು ನೋಡಿಲ್ಲ. ಖಾಸಗಿ ಪ್ರಾರ್ಥನಾ ಸಭೆ ಎಂದು ಕರೆಯಲ್ಪಡುವ ಹೆಸರಿನಲ್ಲಿ ಸುನಕ್ ತನ್ನ ಛಾಯಾಚಿತ್ರಗಳನ್ನು ಸಾರ್ವಜನಿಕಗೊಳಿಸಿರುವುದು ಸಾಕಷ್ಟು ಅನುಮಾನಾಸ್ಪದವಾಗಿದೆ. ನಿಮ್ಮ PR ತಂಡವನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.



ರವಿ ಎಂಬ ವ್ಯಕ್ತಿ ಬ್ರಿಟನ್‌ನ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್ ಅವರು ಇತ್ತೀಚಿನ ಸಮೀಕ್ಷೆಯಲ್ಲಿ ಲಿಜ್ ಟ್ರಸ್‌ಗಿಂತ ಹಿಂದುಳಿದಿರುವ ಕಾರಣ ಇಸ್ಕಾನ್ ದೇವಸ್ಥಾನಕ್ಕೆ ಹೋಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಹಬ್ಬದ ದಿನವೇ ದೆಹಲಿಯ ಹೂವಿನ ಮಾರ್ಕೆಟ್​ನಲ್ಲಿ ಬಾಂಬ್ ಪತ್ತೆ.. ಬೆಚ್ಚಿಬಿತ್ತು ರಾಷ್ಟ್ರ ರಾಜಧಾನಿ!


ನೀತು ಘೋಷ್ ಎಂಬ ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ವೀಟ್ ಮಾಡಿ, 'ಧರ್ಮ ಅಥವಾ ಧಾರ್ಮಿಕ ಸಮಾರಂಭ, ದೇವಸ್ಥಾನ, ಚರ್ಚ್ ಅಥವಾ ಮಸೀದಿಗೆ ಹೋಗುವುದು ವೈಯಕ್ತಿಕ ವಿಷಯವಾಗಿದೆ. ಈ ಬಗ್ಗೆ ಸಾರ್ವಜನಿಕವಾಗಿ ಏಕೆ ಮಾತನಾಡುತ್ತಿದ್ದೀರಿ? ನೀವೂ ಧರ್ಮದ ದಾಳ ಎಸೆದು ಹಾಕಿ ರಾಜಕೀಯ ಮಾಡುತ್ತಿದ್ದೀರಾ. ಒಳ್ಳೆಯ ಕೆಲಸ ಮಾಡಿ, ನಿಮ್ಮ ಮತ ನಿಮಗೆ ಸಿಗುತ್ತದೆ ಎಂದಿದ್ದಾರೆ.


ಬ್ರಿಟನ್‌ನ ಪ್ರಧಾನ ಮಂತ್ರಿ ರೇಸ್‌ನಲ್ಲಿ ರಿಷಿ ಸುನಕ್ ಲಿಜ್ ಟ್ರಸ್ ವಿರುದ್ಧ ಹಿಂದಕ್ಕೆ ಉಳಿದಿದ್ದಾರೆ. ಟೋರಿ ಮತದಾರರ ಇತ್ತೀಚಿನ ಸಮೀಕ್ಷೆಯ ಪ್ರಕಾರ, ರಿಷಿ ಸುನಕ್ ವಿರುದ್ಧ ಲಿಜ್ ಟ್ರಸ್ ಪ್ರಬಲ ಮುನ್ನಡೆ ಸಾಧಿಸಿದ್ದಾರೆ.

First published: