Rishi Sunak: ಲೈವ್ ಶೋನಲ್ಲೇ ಮಾನವೀಯತೆ ಮೆರೆದ ಯುಕೆ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್

ಯುಕೆ ಪ್ರಧಾನಿ ಅಭ್ಯರ್ಥಿಗಳಾದ ರಿಷಿ ಸುನಕ್ ಮತ್ತು ಲಿಜ್ ಟ್ರಸ್ ಟಿವಿ ಲೈವ್ ನಲ್ಲಿ ಚರ್ಚೆಯಲ್ಲಿರುವಾಗ ಆ ಕಾರ್ಯಕ್ರಮದ ಆ್ಯಂಕರ್​​ ಆರೋಗ್ಯದಲ್ಲಿ ಏರುಪೇರಾಗಿದ್ದು ಅವರ ರಕ್ಷಣೆಗೆ ರಿಷಿ ಸುನಾಕ್ ತಕ್ಷಣವೇ ಧಾವಿಸಿದರು.

ರಿಷಿ ಸುನಾಕ್

ರಿಷಿ ಸುನಾಕ್

  • Share this:
ಯುಕೆ ಪ್ರಧಾನ ಮಂತ್ರಿ ಸ್ಪರ್ಧಿಗಳಾದ ಲಿಜ್ ಟ್ರಸ್ (Liz Truss) ಮತ್ತು ಭಾರತೀಯ ಮೂಲದ ರಿಷಿ ಸುನಕ್ ನಡುವೆ ಟಿವಿಯಲ್ಲಿ(TV) ನಡೆಯುತ್ತಿದ ಚರ್ಚೆಯ (Debate)  ನೇರ ಪ್ರಸಾರದಲ್ಲಿ ನಿರೂಪಣೆ ಮಾಡುತ್ತಿದ್ದ ಆ್ಯಂಕರ್ (Anchor) ಕೇಟ್ ಮೇಕಾನ್ನ (Kate McCann) ಆರೋಗ್ಯದಲ್ಲಿ ಏರುಪೇರಾಗಿದ್ದನ್ನು ಕಂಡು ರಿಷಿ ಸುನಕ್ (Rishi Sunak) ನಿರೂಪಕಿಯ ರಕ್ಷಣೆಗೆ ತಕ್ಷಣವೇ ಧಾವಿಸಿದರು ಮತ್ತು ಕೂಡಲೇ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು (Cancel). ಇದು ರಿಷಿ ಸುನಾಕ್ ಅವರ ಮಾನವೀಯ ಗುಣವನ್ನು ಪ್ರತಿನಿಧಿಸುತ್ತದೆ. ಜೊತೆಗಿದ್ದ ಲಿಜ್ ಟ್ರಸ್ ಕೂಡ ಈ ಸಂದರ್ಭದಲ್ಲಿ ಸುನಾಕ್ ಜೊತೆ ಆ್ಯಂಕರ್ನ ಆರೋಗ್ಯದ (Health) ಯೋಗ ಕ್ಷೇಮ ಪರಿಶೀಲಿಸಲು ತಕ್ಷಣವೇ ಪ್ರತಿಕ್ರಿಯಿಸಿದ್ದಾರೆ. 

ಮಂಗಳವಾರ ಸಂಜೆ 'ಟಾಕ್‌ಟಿವಿ'ಯೊಂದಿಗೆ ಚರ್ಚೆಯ ಸಹ-ನಿರೂಪಕರಾಗಿದ್ದ 'ದಿ ಸನ್' ಪತ್ರಿಕೆ, ಆ್ಯಂಕರ್ ಕೇಟ್ ಮೆಕ್‌ಕಾನ್ ಲೈವ್ ನಡುವೆಯೇ ಅಸ್ವಸ್ಥರಾದರು ಇದನ್ನು ಕಂಡು ರಿಷಿ ಸುನಾಕ್ ತಕ್ಷಣವೇ ಅವರತ್ತ ಧಾವಿಸಿದರು. ಸುನಕ್ ಅವರ ಪ್ರತಿಸ್ಪರ್ಧಿ ಮತ್ತು ಯುಕೆ ವಿದೇಶಾಂಗ ಕಾರ್ಯದರ್ಶಿ ಟ್ರಸ್ ಅವರು ಆರ್ಥಿಕತೆಯ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದ ಸಮಯದಲ್ಲಿ ಈ ಘಟನೆ ಸಂಭವಿಸಿದೆ

ಕಾರ್ಯಕ್ರಮದಲ್ಲಿ ಕುಸಿದು ಬಿದ್ದ ಆ್ಯಂಕರ್
ವರದಿಯೊಂದರ ಪ್ರಕಾರ, ಸುನಕ್ ಮತ್ತು ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರು ಯುಕೆ ಪ್ರಧಾನ ಮಂತ್ರಿ ಚುನಾವಣೆಯ ಚರ್ಚೆಯ ಮಧ್ಯದಲ್ಲಿದ್ದಾಗ, ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡುತ್ತಿದ್ದ ಆ್ಯಂಕರ್ ಕೇಟ್ ಮೆಕ್‌ಕಾನ್ ಕುಸಿದುಬಿದ್ದರು. ನಂತರ ಕಾರ್ಯಕ್ರಮವನ್ನು ಮಧ್ಯದಲ್ಲಿಯೇ ರದ್ದುಗೊಳಿಸಲಾಯಿತು.

ಇದನ್ನೂ ಓದಿ: Rishi Sunak: ಬ್ರಿಟನ್ ಪ್ರಧಾನಿಯಾಗ್ತಾರಾ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್?

ಮಂಡಿಯೂರಿ ಕೂತ ಅಭ್ಯರ್ಥಿಗಳು
ರಿಷಿ ಸುನಕ್ ಮತ್ತು ಲಿಜ್ ಟ್ರಸ್ ಕುಸಿದು ಬಿದ್ದ ಆ್ಯಂಕರ್ ಕಡೆಗೆ ಧಾವಿಸಿ ಇಬ್ಬರೂ ಮಂಡಿಯೂರಿ ಕೂತು ಅವರ ಆರೋಗ್ಯದ ಬಗ್ಗೆ ವಿಚಾರಣೆ ಮಾಡಿದರು. ಇದು ಸ್ಪರ್ಧಿಗಳ ನಡುವಿನ ಉತ್ತಮ ಸ್ಪಂದನಾ ಗುಣವನ್ನು ಪ್ರತಿನಿಧಿಸುತ್ತದೆ.

ಮತ್ತೊಮ್ಮೆ ಕಾರ್ಯಕ್ರಮದಲ್ಲಿ ಜೊತೆಯಾಗೋಣ ಎಂದ ಸುನಕ್
ಘಟನೆಯ ಕುರಿತು ನಂತರ ಟ್ವೀಟ್ ಮಾಡಿದ ರಿಷಿ ಸುನಕ್ ಕೇಟ್ ಮೆಕಾನ್ನ ಕುರಿತು "ನೀವು ಚೇತರಿಸಿಕೊಳ್ಳುತ್ತಿದ್ದೀರಿ ಎಂಬುದು ಒಳ್ಳೆಯ ಸುದ್ದಿಯಾಗಿದೆ. ಇದೊಂದು ಒಳ್ಳೆಯ ಚರ್ಚೆಯಾಗಿತ್ತು ಮತ್ತೊಮ್ಮೆ ಇಂತಹ ಚರ್ಚೆಯಲ್ಲಿ ಜೊತೆಯಾಗೋಣ" ಎಂದು ಬರೆದುಕೊಂಡಿದ್ದಾರೆ.

ವೀಕ್ಷಕರಲ್ಲಿ ಕ್ಷಮೆಯಾಚಿಸಿದ ಚಾನಲ್ ವಕ್ತಾರ
"ಕಳೆದ ರಾತ್ರಿ ಪ್ರಸಾರದಲ್ಲಿ ಕೇಟ್ ಮೆಕ್ಯಾನ್ ಮೂರ್ಛೆ ಹೋದರು ಮತ್ತು ಅವರ ಆರೋಗ್ಯದಲ್ಲಿ ಸುಧಾರಣೆಯಾಗಿದ್ದರೂ, ನಾವು ಚರ್ಚೆಯನ್ನು ಮುಂದುವರಿಸಬಾರದು ಎಂಬುದು ವೈದ್ಯಕೀಯ ಸಲಹೆಯಾಗಿದೆ. ನಾವು ನಮ್ಮ ವೀಕ್ಷಕರು ಮತ್ತು ಕೇಳುಗರಲ್ಲಿ ಕ್ಷಮೆಯಾಚಿಸುತ್ತೇವೆ" ಎಂದು 'ಟಾಕ್ಟಿವಿ' ಕಂಪನಿ ನ್ಯೂಸ್ ಯುಕೆ ವಕ್ತಾರರು ತಿಳಿಸಿದ್ದಾರೆ.

ಮತಕ್ಕಾಗಿ ದೇಶದಾದ್ಯಂತ ಪ್ರಯಾಣ
ಸೆಪ್ಟೆಂಬರ್ 2 ರಂದು ಮತದಾನ ಮುಕ್ತಾಯಗೊಳ್ಳುವ ಮೊದಲು ಮತ್ತು ಸೆಪ್ಟೆಂಬರ್ 5 ರಂದು ಫಲಿತಾಂಶಗಳನ್ನು ಘೋಷಿಸುವ ಮೊದಲು ಅವರು ಕನ್ಸರ್ವೇಟಿವ್ ಪಕ್ಷದ ಸದಸ್ಯರನ್ನು ಓಲೈಸಲು ಅಭ್ಯರ್ಥಿಗಳು ದೇಶಾದ್ಯಂತ ಪ್ರಯಾಣಿಸುತ್ತಿದ್ದಾರೆ.

ಇದನ್ನೂ ಓದಿ: Rishi Sunak: ಅತ್ತೆ-ಮಾವನ ಜೀವನದ ಪ್ರಯಾಣದ ಬಗ್ಗೆ ತುಂಬಾನೇ ಹೆಮ್ಮೆ ಪಡುತ್ತಾರಂತೆ ರಿಷಿ ಸುನಕ್

ಭಾರತೀಯ ಬಿಲಿಯನೇರ್ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ದಂಪತಿಗಳ  ಅಳಿಯ ರಿಷಿ ಸುನಕ್ ಅವರು ಯುಕೆ ಯ ಪ್ರಧಾನಿಯಾಗುವುದು ಭಾರತಕ್ಕೂ ಹೆಮ್ಮೆಯ ವಿಷಯವಾಗಿದೆ. ಒಬ್ಬ ಅಬ್ಯರ್ಥಿ ಈ ರೀತಿಯಾಗಿ ಮಾನವೀಯ ವ್ಯಕ್ತಿತ್ವವನ್ನು ಹೊಂದಿರುವುದು ಅವರ ಮುಂದಿನ ರಾಜಕಿಯ ಜೀವನಕ್ಕೆ ಉತ್ತಮವಾದ ತಳಹದಿಯನ್ನು ನೀಡುತ್ತದೆ.
Published by:Nalini Suvarna
First published: