• Home
 • »
 • News
 • »
 • national-international
 • »
 • Rishi Sunak: ವಿದ್ಯಾರ್ಥಿ ಭವನದ ಮಸಾಲೆ ದೋಸೆ ಸವಿದಿದ್ದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌, ಹಳೆ ಪೋಟೋ ವೈರಲ್‌

Rishi Sunak: ವಿದ್ಯಾರ್ಥಿ ಭವನದ ಮಸಾಲೆ ದೋಸೆ ಸವಿದಿದ್ದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌, ಹಳೆ ಪೋಟೋ ವೈರಲ್‌

ಫೋಟೋ ಟ್ವೀಟ್​ ಮಾಡಿದ ವಿದ್ಯಾರ್ಥಿ ಭವನ

ಫೋಟೋ ಟ್ವೀಟ್​ ಮಾಡಿದ ವಿದ್ಯಾರ್ಥಿ ಭವನ

2019 ರಲ್ಲಿ, ಆಗ ಯುಕೆ ಸರ್ಕಾರದ ಖಜಾನೆಯ ಮುಖ್ಯ ಕಾರ್ಯದರ್ಶಿಯಾಗಿದ್ದ ರಿಷಿ ಸುನಕ್‌ ಅವರು ಬೆಂಗಳೂರಿನ ಅತ್ಯಂತ ಪ್ರೀತಿಯ ರೆಸ್ಟೋರೆಂಟ್ ವಿದ್ಯಾರ್ಥಿ ಭವನಕ್ಕೆ ಬಂದು ಅಲ್ಲಿ ಪ್ರಸಿದ್ಧ ಗರಿಗರಿಯಾದ 'ಮಸಾಲಾ ದೋಸೆ'ಯನ್ನು ಸವಿದಿದ್ದರು. ಬಸವನಗುಡಿಯಲ್ಲಿರುವ ಐಕಾನಿಕ್ ಖಾನಾವಳಿಯಲ್ಲಿ ಸುನಕ್ ಆಹಾರ ಸೇವಿಸುತ್ತಿರುವ ಫೋಟೋ ಈಗ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ.

ಮುಂದೆ ಓದಿ ...
 • Trending Desk
 • Last Updated :
 • Bangalore [Bangalore], India
 • Share this:

  ಬೆಂಗಳೂರು(ನ,01): ಹೂವಿನ ಮಾರ್ಕೆಟ್, ಹಣ್ಣಿನ ಸಂತೆ, ತರಕಾರಿ ಮಾರುಕಟ್ಟೆ, ಪುಸ್ತಕದ ಅಂಗಡಿ, ಮಸ್ತಿ ಕ್ಲಬ್ಬು, ವೀಳ್ಯೆದೆಲೆ ಬುಟ್ಟಿ- ಹೀಗೆ ಏನೆಲ್ಲವನ್ನು ಮಾರುವ ಗಾಂಧಿಬಜಾರಿನ)Gandhi Bazar) ನಟ್ಟನಡುವೆ ಘಮ್ಮನೆ ಮೂಗಿಗೆ ಅಡರುವ ವಿದ್ಯಾರ್ಥಿ ಭವನದ ಮಸಾಲೆ ದೋಸೆಯ ಪರಿಮಳಕ್ಕೆ ಮನಸೋಲದವರು ಯಾರಿದ್ದಾರೆ? ಬೆಳಗ್ಗೆ, ಸಂಜೆ ಎನ್ನದೆ ಅಲ್ಲಿ ಜನ ಸಾಲುಗಟ್ಟಿ ನಿಂತು ಮಸಾಲೆ ದೋಸೆಗಾಗಿ ಕಾಯುತ್ತಾರೆ. ಆಧಾರ್ ಕಾರ್ಡು (Aadhaar Card) ಮಾಡಿಸಿಕೊಳ್ಳಲು ಕ್ಯೂ ನಿಲ್ಲುವಂತೆ ಸರತಿ ಸಾಲಲ್ಲಿ ನಿಂತು ದೋಸೆ ತಿನ್ನುತ್ತಾರೆ. ದೋಸೆಗೂ ಅದನ್ನು ತಿನ್ನುವವರಿಗೂ ಭಾವನಾತ್ಮಕ ಸಂಬಂಧ ಉಂಟೆಂಬುದು ಗೊತ್ತಾಗುವುದು ವಿದ್ಯಾರ್ಥಿ ಭವನಕ್ಕೆ (Vidyarthi Bhavan) ಕಾಲಿಟ್ಟಾಗಲೇ ತಿಳಿಯುತ್ತೆ.


  ವಿಧ್ಯಾರ್ಥಿ ಭವನಕ್ಕೆ ಭೇಟಿ ನೀಡಿದ್ದ ಇಂದಿನ ಬ್ರಿಟನ್‌ ಪ್ರಧಾನಿ, ರಿಷಿ ಸುನಕ್‌


  1940 ರ ದಶಕದಲ್ಲಿ ಸಣ್ಣ ಕ್ಯಾಂಟೀನ್ ಆಗಿ ಪ್ರಾರಂಭವಾದ ವಿದ್ಯಾರ್ಥಿ ಭವನ ತನ್ನ ಪ್ರಸಿದ್ಧ 'ಮಸಾಲಾ ದೋಸೆ' ಯಿಂದ ಅತ್ಯಂತ ಪ್ರಸಿದ್ಧಿ ಹೋಟೆಲ್‌ ಆಗಿ ಇಂದು ಬೆಳೆದು ನಿಂತಿದೆ. ಇಲ್ಲಿಗೆ ಬರದ ರಾಜಕೀಯ ವ್ಯಕ್ತಿಗಳು ಇಲ್ಲ. ಇಲ್ಲಿ ಕುಳಿತು ಸಾಂಸ್ಕೃತಿಕ ಚರ್ಚೆಗಳನ್ನು ಮಾಡುತ್ತಾ ತಮ್ಮ ಸಾಹಿತ್ಯಿಕ ಭಂಢಾರವನ್ನು ಮತ್ತಷ್ಟು ಹೆಚ್ಚಿಸಿಕೊಂಡ ಸಾಹಿತಿಗಳಿಗೂ ಕಡಿಮೆ ಇಲ್ಲ. ಅಂತಹ ವಿಶೇಷ ವ್ಯಕ್ತಿಗಳಲ್ಲಿ ಮೂರು ವರ್ಷಗಳ ಹಿಂದೆ ಬೆಂಗಳೂರಿನ ಐಕಾನಿಕ್ ತಿನಿಸುಗಳಲ್ಲಿ ಒಂದಾದ ಈ ವಿದ್ಯಾರ್ಥಿ ಭವನದ ಮಸಾಲೆ ದೋಸೆ ಯನ್ನು ರಿಷಿ ಸುನಕ್ ಅವರು ತಿನ್ನುತ್ತಿರುವ ಫೋಟೋ ಟ್ವಿಟರ್‌ನಲ್ಲಿ ಇದೀಗ ವೈರಲ್ ಆಗಿದೆ.


  ಇದನ್ನೂ ಓದಿ: ತಿರುಪತಿ ದರ್ಶನದ ಸಮಯದಲ್ಲಿ ಮಹತ್ವದ ಬದಲಾವಣೆ


  2019 ರಲ್ಲಿ, ಆಗ ಯುಕೆ ಸರ್ಕಾರದ ಖಜಾನೆಯ ಮುಖ್ಯ ಕಾರ್ಯದರ್ಶಿಯಾಗಿದ್ದ ರಿಷಿ ಸುನಕ್‌ ಅವರು ಬೆಂಗಳೂರಿನ ಅತ್ಯಂತ ಪ್ರೀತಿಯ ರೆಸ್ಟೋರೆಂಟ್ ವಿದ್ಯಾರ್ಥಿ ಭವನಕ್ಕೆ ಬಂದು ಅಲ್ಲಿ ಪ್ರಸಿದ್ಧ ಗರಿಗರಿಯಾದ 'ಮಸಾಲಾ ದೋಸೆ'ಯನ್ನು ಸವಿದಿದ್ದರು. ಬಸವನಗುಡಿಯಲ್ಲಿರುವ ಐಕಾನಿಕ್ ಖಾನಾವಳಿಯಲ್ಲಿ ಸುನಕ್ ಆಹಾರ ಸೇವಿಸುತ್ತಿರುವ ಫೋಟೋ ಈಗ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದ್ದು, ಬೆಂಗಳೂರಿಗರನ್ನು ಮತ್ತಷ್ಟು ಮೇಲೇರಿಸಿದೆ. ವಿಬಿ ತನ್ನ ಪ್ರಸಿದ್ಧ 'ಮಸಾಲಾ ದೋಸೆ'ಯನ್ನು ರಾಜಕೀಯ, ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ವ್ಯಾಪಾರ ವಲಯಗಳಿಗೆ ಸೇರಿದ ಅನೇಕ ಪ್ರಸಿದ್ಧ ವ್ಯಕ್ತಿಗಳಿಗೆ ಸವಿಯಲು ನೀಡಿದೆ.


  ಆದರೆ ಭವಿಷ್ಯದ ಬ್ರಿಟಿಷ್ ಪ್ರಧಾನಿಗೆ 'ದೋಸೆ' ಬಡಿಸುತ್ತೇವೆ ಎಂದು ವಿದ್ಯಾರ್ಥಿ ಭವನದ ಮಾಲೀಕರು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ ಎಂದು ಆಶ್ಚರ್ಯವನ್ನು ವ್ಯಕ್ತಪಡಿಸುತ್ತಾರೆ.


  ವಿಬಿಯ ವ್ಯವಸ್ಥಾಪಕ ಪಾಲುದಾರರಾದ ಅರುಣ್‌ ಅಡಿಗ ಹೇಳಿದ್ದೇನು?


  “ವಿಬಿಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರು ಒಂದು ಸಂಜೆ ‘ಮಸಾಲಾ ದೋಸೆ’ ಯನ್ನು ಸವಿಯಲು ಅಳಿಯ ರಿಷಿ ಸುನಕ್, ಅವರ ಪತ್ನಿ ಅಕ್ಷತಾ ಮೂರ್ತಿ ಮತ್ತು ಅವರ ಮಕ್ಕಳನ್ನು ಕರೆತಂದಿದ್ದರು. ಆ ಸಮಯದಲ್ಲಿ, ರಿಷಿ ಸುನಕ್‌ ಅವರ ರಾಜಕೀಯ ಚಿತ್ರಣದ ಬಗ್ಗೆ ನನಗೇನು ತಿಳಿದಿರಲಿಲ್ಲ. ಆದರೆ ಅವರು ಯುಕೆ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವ ಉತ್ತಮ ಅರ್ಥಶಾಸ್ತ್ರಜ್ಞ ಎಂದು ಮಾತ್ರ ನನಗೆ ತಿಳಿದಿತ್ತು” ಎಂದು VB ಯ ವ್ಯವಸ್ಥಾಪಕ ಪಾಲುದಾರರಾದ ಅರುಣ್ ಅಡಿಗ ಅವರು ಸುದ್ದಿ ಮಾಧ್ಯಮವಾದ ಇಂಡಿಯನ್​ ಎಕ್ಸ್​ಪ್ರೆಸ್​ಗೆ ತಿಳಿಸಿದರು.


  ಇದನ್ನೂ ಓದಿ: ಲಿಜ್ ಟ್ರಸ್ ಫೋನ್ ಹ್ಯಾಕ್ ಮಾಡಿದ್ದ ಪುಟಿನ್; ವರದಿ ಬಹಿರಂಗ


  ಸುನಕ್ ಫೋಟೋ ಕ್ಲಿಕ್


  “ರಿಸಿ ಸುನಕ್‌ ಅವರು 'ದೋಸೆ' ತಿಂದು ಮುಗಿಸುತ್ತಿದ್ದಂತೆ ಸುನಕ್ ಅವರ ಫೋಟೋವನ್ನು ಕ್ಲಿಕ್ ಮಾಡುವಲ್ಲಿ ನಾನು ಯಶಸ್ವಿಯಾಗಿದ್ದೆ. ಅವರ ಪ್ರೈವೈಸಿಗೆ ಹೆಚ್ಚು ತೊಂದರೆಪಡಿಸಲು ನನಗೆ ಇಷ್ಟವಿರಲಿಲ್ಲ. ಅವರು ಆಹಾರವನ್ನು ಆನಂದಿಸಿದ ನಂತರ ಥಂಬ್ಸ್ ಅಪ್ ನೀಡಿದರು" ಎಂದು ಅಡಿಗ ಅವರು ನೆನಪಿಸಿಕೊಂಡರು.


  ಅಂದಿನ ಫೋಟೋ ಲಗತ್ತಿಸಿ ಅವರಿಗೆ ಶುಭ ಕೋರಿರುವ ಹೋಟೆಲ್‌ ವಿಬಿಯು ‘ರಿಷಿ ಸುನಕ್‌ ಬ್ರಿಟನ್‌ ಮುಂದಿನ ಪ್ರಧಾನಿಯಾಗಲಿದ್ದಾರೆ. ಅವರು ಭಾರತೀಯ ಮೂಲದವರು ಮತ್ತು ಅತ್ಯಂತ ಕಿರಿಯ ಪ್ರಧಾನಿ ಎಂಬುದು ಹೆಮ್ಮೆಯ ಸಂಗತಿ. ನಾವು ಅವರಿಗೆ ಶುಭ ಕೋರುತ್ತೇವೆ. ಅವರು ಎಲ್ಲಾ ಸಂಕಷ್ಟಗಳಿಂದ ದೇಶವನ್ನು ಪಾರು ಮಾಡಿ ಅತ್ಯಂತ ಯಶಸ್ವಿ ಪ್ರಧಾನಿಯಾಗಲಿ ಎಂದು ಹಾರೈಸುತ್ತೇವೆ’ ಎಂದು ಹೇಳಿದೆ.


  ರಿಷಿ ಸುನಕ್‌ ಬಗ್ಗೆ ಒಂದಿಷ್ಟು ಮಾಹಿತಿ:


  ಸುನಾಕ್ ಪೋಷಕರು ಮೂಲತಃ ಪಂಜಾಬ್ ಮೂಲದ ಔಷಧ ವ್ಯಾಪಾರಿಗಳು. 1960ರಲ್ಲಿ ಪೂರ್ವ ಆಫ್ರಿಕಾಗೆ ವಲಸೆ ಹೋದ ಇವರ ಕುಟುಂಬ, ಅಲ್ಲಿಂದ ಬ್ರಿಟನ್‌ಗೆ ವಲಸೆ ಹೋಗಿತ್ತು. 1980ರಲ್ಲಿ ಇಂಗ್ಲೆಂಡ್‌ನ ಸೌತ್ ಹ್ಯಾಂಪ್ಟನ್‌ನಲ್ಲಿ ಜನಿಸಿದ ರುಷಿ, 2009 ರಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಮ ಮೂರ್ತಿ ಮಗಳು ಅಕ್ಷತಾ ಅವರನ್ನು ವರಿಸಿದ್ದಾರೆ.


  ಅಕ್ಷತಾ-ರಿಷಿ ದಂಪತಿಗೆ ಅನುಷ್ಕಾ ಮತ್ತು ಕೃಷ್ಣಾ ಎಂಬಿಬ್ಬರು ಹೆಣ್ಣು ಮಕ್ಕಳಿದ್ದಾರೆ. ಪತ್ನಿ ಅಕ್ಷತಾ ಜೊತೆ ಆಗಾಗ್ಗೆ ಬೆಂಗಳೂರಿಗೆ ಭೇಟಿ ನೀಡುವ ರಿಷಿ, ಗಾಂಧಿ ಬಜಾರ್‌ನ ವಿದ್ಯಾರ್ಥಿ ಭವನಕ್ಕೂ ಭೇಟಿ ನೀಡಿದ್ದರು. ಇದೀಗ ಅದೇ ಫೋಟೋ ಹಂಚಿಕೊಂಡ, ಖ್ಯಾತ ಹೊಟೇಲ್ ರಿಷಿಗೆ ಶುಭ ಹಾರೈಸಿದೆ.

  Published by:Precilla Olivia Dias
  First published: