Rishi Sunak: ಜಿಹಾದಿಗಳ ಬಗ್ಗೆ ರಿಷಿ ಸುನಕ್ ಆಕ್ರೋಶ, ಇಸ್ಲಾಮಿಕ್ ಮೂಲಭೂತವಾದ ನಿರ್ನಾಮ ಮಾಡುವ ಬಗ್ಗೆ ಪ್ರತಿಜ್ಞೆ

ಇಸ್ಲಾಮಿಕ್ ಮೂಲಭೂತವಾದದ ಬಗ್ಗೆ ತೀವ್ರ ವಾಗ್ದಾಳಿ ನಡೆಸಿರುವ ರಿಷಿ ಸುನಕ್, ಬ್ರಿಟನ್‌ನಲ್ಲಿರುವ ಭಯೋತ್ಪಾದನೆ ನಿಗ್ರಹ ಕಾನೂನನ್ನು ಇನ್ನಷ್ಟು ಬಿಗಿಗೊಳಿಸುವ ಮಾತನ್ನಾಡಿದ್ದಾರೆ. ತಾವು ಪ್ರಧಾನಿಯಾದರೆ ಇಸ್ಲಾಮಿಕ್ ತೀವ್ರವಾದವನ್ನು (Islamic extremism) ಮಟ್ಟ ಹಾಕಿ, ಉಗ್ರರ (Terrorist) ಹೆಡೆಮುರಿ ಕಟ್ಟುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಬ್ರಿಟನ್ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್

ಬ್ರಿಟನ್ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್

  • Share this:
ಬ್ರಿಟನ್: ವಿಶ್ವವನ್ನೇ ತಲ್ಲಣ ಗೊಳಿಸುತ್ತಿರುವ ಉಗ್ರವಾದದ (Terrorism) ಬಗ್ಗೆ ಬ್ರಿಟನ್ ಪ್ರಧಾನಿ ಅಭ್ಯರ್ಥಿ (Britain Prime Minister Candidate) ರಿಷಿ ಸುನಕ್ (Rishi Sunak) ಮಾತನಾಡಿದ್ದಾರೆ. ಇಸ್ಲಾಮಿಕ್ ಮೂಲಭೂತವಾದದ (Islamic fundamentalism) ಬಗ್ಗೆ ತೀವ್ರ ವಾಗ್ದಾಳಿ ನಡೆಸಿರುವ ಅವರು, ಬ್ರಿಟನ್‌ನಲ್ಲಿರುವ ಭಯೋತ್ಪಾದನೆ ನಿಗ್ರಹ ಕಾನೂನನ್ನು (Suppression of Terrorism Act) ಇನ್ನಷ್ಟು ಬಿಗಿಗೊಳಿಸುವ ಮಾತನ್ನಾಡಿದ್ದಾರೆ. ತಾವು ಪ್ರಧಾನಿಯಾದರೆ ಇಸ್ಲಾಮಿಕ್ ತೀವ್ರವಾದವನ್ನು (Islamic extremism) ಮಟ್ಟ ಹಾಕಿ, ಉಗ್ರರ (Terrorist) ಹೆಡೆಮುರಿ ಕಟ್ಟುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ರಿಷಿ ಸುನಕ್‌ ಪರ ಪ್ರಚಾರಾಂದೋಲನ ನಡೆಸುತ್ತಿರುವ ‘ರೆಡಿ4ರಿಷಿ’ (Reday 4 Rishi) ಎಂಬ ತಂಡ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದು, ಸುನಕ್‌ ಅವರ ಆದ್ಯತೆಗಳನ್ನು ಅದರಲ್ಲಿ ವಿವರಿಸಲಾಗಿದೆ.

ಇಸ್ಲಾಮಿಕ್ ಮೂಲಭೂತವಾದದ ಬಗ್ಗೆ ರಿಷಿ ಕಿಡಿಕಿಡಿ

ಇಸ್ಲಾಮಿಕ್ ಮೂಲಭೂತವಾದದ ಬಗ್ಗೆ ಬ್ರಿಟನ್ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್ ಕಿಡಿಕಾರಿದ್ದಾರೆ. ‘ಬ್ರಿಟನ್‌ ಎದುರಿಸುತ್ತಿರುವ ಪ್ರಮುಖ ಬೆದರಿಕೆಗಳಲ್ಲಿ ಇಸ್ಲಾಮಿಕ್ ಉಗ್ರವಾದವೂ ಒಂದು. ಈಗಿರುವ ಕಾಯ್ದೆಗಳಿಗೆ ಮತ್ತಷ್ಟು ಬಲ ತುಂಬುವ ಮೂಲಕ ಈ ಉಗ್ರವಾದವನ್ನು ನಿರ್ಮೂಲನೆ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂಬುದಾಗಿ ರಿಷಿ ಸುನಕ್‌ ಹೇಳಿದ್ದಾರೆ. "ಒಬ್ಬ ಪ್ರಧಾನಿಗೆ ದೇಶ ಹಾಗೂ ದೇಶದ ಜನತೆಯನ್ನು ಸುರಕ್ಷಿತವಾಗಿರಿಸುವುದಕ್ಕಿಂತಲೂ ಮುಖ್ಯವಾದ ಕೆಲಸ ಮತ್ತೊಂದಿಲ್ಲ" ಎಂದು ಸುನಕ್ ಚುನಾವನಾ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದಾರೆ.

ಭಯೋತ್ಪಾದನೆ ನಿಗ್ರಹಕ್ಕಾಗಿ ಏನಾದರೂ ಮಾಡುತ್ತೇನೆ

“ಇಸ್ಲಾಮಿಸ್ಟ್ ಉಗ್ರವಾದವನ್ನು ನಿಭಾಯಿಸಲು ನಮ್ಮ ಪ್ರಯತ್ನಗಳನ್ನು ದ್ವಿಗುಣಗೊಳಿಸಲು ನಾನು ಸನ್ನದ್ಧನಾಗಿದ್ದೇನೆ. ನಮ್ಮ ದೇಶದ ವಿರುದ್ಧ ದ್ವೇಷದ ಧ್ವನಿಯೆತ್ತುವವರನ್ನು ಬೇರುಸಹಿತ ಕಿತ್ತೊಗೆಯಲು ಬದ್ಧನಾಗಿದ್ದೇನೆ. ಆ ಕರ್ತವ್ಯವನ್ನು ಪೂರೈಸಲು ನಾನು ಏನು ಬೇಕಾದರೂ ಮಾಡುತ್ತೇನೆ. ಬ್ರಿಟನ್ ಸ್ವಾತಂತ್ರ್ಯ, ಸಹಿಷ್ಣುತೆ ಮತ್ತು ವೈವಿಧ್ಯತೆಯ ದಾರಿದೀಪವಾಗಿದೆ. ನಮ್ಮ ಜೀವನ ವಿಧಾನವನ್ನು ದುರ್ಬಲಗೊಳಿಸಲು ಮತ್ತು ನಾಶಮಾಡಲು ಬಯಸುವವರನ್ನು ನಾವು ಎಂದಿಗೂ ಯಶಸ್ವಿಯಾಗಲು ಬಿಡಬಾರದು, ”ಎಂದು ಅವರು ಹೇಳಿದರು.

ಇದನ್ನೂ ಓದಿ: Rahul Gandhi ಪ್ರಧಾನಿಯಾಗುತ್ತಾರೆ ಎಂದ ಸ್ವಾಮೀಜಿ! ಮುರುಘಾ ಶರಣರಿಂದ ಆಕ್ಷೇಪ ವ್ಯಕ್ತವಾಗಿದ್ದೇಕೆ?

ಆರೋಗ್ಯ ಸೇವೆಗೆ ಉತ್ತೇಜನ

ಇನ್ನು ಆರೋಗ್ಯ ಸೇವೆಗೆ ಉತ್ತೇಜನ ಕೊಡುವುದಾಗಿ ರಿಷಿ ಸುನಕ್ ಭರವಸೆ ನೀಡಿದ್ದಾರೆ.  ‘ಮಾನಸಿಕ ಆರೋಗ್ಯ ಸೇವೆಗಳನ್ನು ಉತ್ತಮಪಡಿಸಲು ಸಹ ಸುನಕ್ ಅವರು ಯೋಜನೆಗಳನ್ನು ಹೊಂದಿದ್ದಾರೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿರುವವರು ಹಾಗೂ ತೀವ್ರಗಾಮಿ ಮನಸ್ಥಿತಿ ಹೊಂದಿರುವವರ ನಡುವಿನ ವ್ಯತ್ಯಾಸ ಗುರುತಿಸಲು ಇದರಿಂದ ಸಾಧ್ಯವಾಗಲಿದೆ’ ಎಂದು ರಿಷಿ ಸುನಕ್‌ ಪರ ಪ್ರಚಾರಾಂದೋಲನ ನಡೆಸುತ್ತಿರುವ ‘ರೆಡಿ4ರಿಷಿ’ (Reday 4 Rishi) ಎಂಬ ತಂಡ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಬಲ ಪೈಪೋಟಿ ನೀಡುತ್ತಿರುವ ರಿಷಿ ಸುನಕ್

ಇನ್ನು ಬ್ರಿಟನ್ ಅಭ್ಯರ್ಥಿ ಚುನಾವಣೆಯಲ್ಲಿ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದು, ಬ್ರಿಟನ್ ನಲ್ಲಿ ತೀವ್ರವಾದವನ್ನು ಉತ್ತೇಜಿಸುವ ಸಂಘಟನೆಗಳನ್ನು ನಿಗ್ರಹಿಸುವುದಾಗಿ ರಿಷಿ ಸುನಕ್ ಹೇಳಿದ್ದಾರೆ.

ಇದನ್ನೂ ಓದಿ: China vs Taiwan: ಚೀನಾ-ತೈವಾನ್ ನಡುವಿನ ಸಂಘರ್ಷಕ್ಕೆ ಕಾರಣವೇನು? ಇದರಲ್ಲೇಕೆ ಅಮೆರಿಕಕ್ಕೆ ಆಸಕ್ತಿ?

ವಿಳಂಬವಾಗುತ್ತಿದೆಯಾ ಚುನಾವಣೆ?

ರಕ್ಷಣೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವುದರಿಂದ ಬ್ರಿಟನ್‌ ಪ್ರಧಾನ ಮಂತ್ರಿ ಹುದ್ದಗೆ  ನಡೆಯಬೇಕಿದ್ದ ಚುನಾವಣೆ ವಿಳಂಬವಾಗುತ್ತಿದೆ. ಬ್ರಿಟನ್‌ ಗೂಢಚಾರಿಕೆ (ಎನ್‌ಸಿಎಸ್‌ಸಿ) ಸಂಸ್ಥೆ ಪ್ರಕಾರ, ಸೈಬರ್‌ ಹ್ಯಾಕರ್‌ಗಳು ನಾಗರಿಕರ ಮತಪತ್ರ ಬದಲಾಯಿಸುವ ಸಾಧ್ಯತೆಯನ್ನು ಮನಗಂಡು ಜಾಗರೂಕತೆ ವಹಿಸಲಾಗಿದೆ. ಹೀಗಾಗಿ ಪ್ರಧಾನಮಂತ್ರಿ ಆಯ್ಕೆಗೆ ನಡೆಯುತ್ತಿರುವ ಬ್ರಿಟನ್‌ನ ಕನ್ಸರ್ವೇಟಿವ್ ಪಕ್ಷದ ಸದಸ್ಯರ ಮತದಾನ ವಿಳಂಬವಾಗುತ್ತಿದೆ. ಪ್ರಧಾನ ಮಂತ್ರಿ ಚುನಾವಣೆಗೆ ಯಾವುದೇ ಬೆದರಿಕೆ ಇಲ್ಲದಿದ್ದರೂ, ದೇಶದ ನಾಯಕನನ್ನು ಆಯ್ಕೆ ಮಾಡುವ ಸಮಯಲ್ಲಿ ಜಾಗರೂಕತೆ ವಹಿಸಬೇಕಿರುವುದು ನಮ್ಮ ಕರ್ತವ್ಯ. ಹಾಗಾಗಿ ಯಾವುದೇ ಅಕ್ರಮ ನಡೆಯದಂತೆ ಗಮನಿಸುತ್ತಿದ್ದೇವೆ ಎಂದು ಗೂಢಚಾರಿ ಸಂಸ್ಥೆ ಹೇಳಿದೆ.
Published by:Annappa Achari
First published: