Britain: ಇನ್ಫಿ ಮೂರ್ತಿ ಅಳಿಯ ರಿಷಿ ಸುನಕ್ ಮತ್ತೆ ವಿವಾದ? ಈಜುಕೊಳ ಬೇಕಿತ್ತಾ? ಭಾರೀ ಟೀಕೆ

ಯುಕೆಯ ಭವಿಷ್ಯದ ಪ್ರಧಾನಿ ಎಂದೇ ಗುರುತಿಸಿಕೊಂಡಿರುವ ಭಾರತ ಮೂಲದ ರಿಷಿ ಸುನಕ್ ಇತ್ತೀಚಿನ ದಿನಗಳಲ್ಲಿ ರಾಜಕೀಯ ಅಥವಾ ವೈಯಕ್ತಿಕ ಜೀವನ ಹೀಗೆ ಒಂದಲ್ಲ ಒಂದು ಕಾರಣದಿಂದಾಗಿ ವಿವಾದವನ್ನು ಮೈಮೇಲೆ ಎಳೆದುಕೊಂಡು ಸುದ್ದಿಯಲ್ಲಿರುತ್ತಿರುತ್ತಾರೆ ಎನ್ನಬಹುದು. ಪ್ರಧಾನಿಯಾದರೆ ಏನೆಲ್ಲಾ ಉತ್ತಮ ಕೆಲಸ ಮಾಡುತ್ತೇನೆ ಎಂದು ಈ ಹಿಂದೆ ಹಲವಾರು ಬಾರಿ ಹೇಳಿಕೊಂಡಿರುವ ರಿಷಿ ಸುನಕ್ ಈಗ ಇಂಗ್ಲೆಂಡ್ ನಲ್ಲಿ ತಮ್ಮ ಮನೆಯಲ್ಲಿ ಈಜುಕೊಳವನ್ನು ನಿರ್ಮಿಸುವ ವಿಚಾರದಲ್ಲಿ ಸಾರ್ವಜನಿಕರ ಕೋಪಕ್ಕೆ ತುತ್ತಾಗಿದ್ದಾರೆ. 

ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ

ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ

  • Share this:
ಯುಕೆಯ (UK) ಭವಿಷ್ಯದ ಪ್ರಧಾನಿ ಎಂದೇ ಗುರುತಿಸಿಕೊಂಡಿರುವ ಭಾರತ (India) ಮೂಲದ ರಿಷಿ ಸುನಕ್ (Rishi Sunak) ಇತ್ತೀಚಿನ ದಿನಗಳಲ್ಲಿ ರಾಜಕೀಯ (Politics) ಅಥವಾ ವೈಯಕ್ತಿಕ ಜೀವನ ಹೀಗೆ ಒಂದಲ್ಲ ಒಂದು ಕಾರಣದಿಂದಾಗಿ ವಿವಾದವನ್ನು ಮೈಮೇಲೆ ಎಳೆದುಕೊಂಡು ಸುದ್ದಿಯಲ್ಲಿರುತ್ತಿರುತ್ತಾರೆ ಎನ್ನಬಹುದು. ಪ್ರಧಾನಿಯಾದರೆ ಏನೆಲ್ಲಾ ಉತ್ತಮ ಕೆಲಸ ಮಾಡುತ್ತೇನೆ ಎಂದು ಈ ಹಿಂದೆ ಹಲವಾರು ಬಾರಿ ಹೇಳಿಕೊಂಡಿರುವ ರಿಷಿ ಸುನಕ್ ಈಗ ಇಂಗ್ಲೆಂಡ್ ನಲ್ಲಿ (England) ತಮ್ಮ ಮನೆಯಲ್ಲಿ ಈಜುಕೊಳವನ್ನು (Swimming Pool) ನಿರ್ಮಿಸುವ ವಿಚಾರದಲ್ಲಿ ಸಾರ್ವಜನಿಕರ ಕೋಪಕ್ಕೆ ತುತ್ತಾಗಿದ್ದಾರೆ. ರಿಷಿ ಸುನಕ್ ಅವರ ಈಜುಕೊಳ ನಿರ್ಮಾಣ ವಿರುದ್ಧ ಕೆಂಡಾಮಂಡಲವಾದ ಜನರು ಇದೊಂದು ಅಪ್ರಯೋಜಕ ಕೆಲಸ ಎಂದಿದ್ದಾರೆ.

ಇಂಗ್ಲೆಂಡ್ ಸುತ್ತಮುತ್ತ ಬರ ತಾಂಡವಾಡುತ್ತಿದ್ದು, ನೀರಿಗೆ ಹಾಹಾಕಾರದ ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗ ಈ ಮಧ್ಯೆ ಇಷ್ಟು ಕೋಟಿ ವೆಚ್ಚದ ಈಜುಕೊಳದ ಯೋಜನೆ ಬೇಕಿತ್ತಾ ಎಂದು ಭವಿಷ್ಯದ ಪ್ರಧಾನಿ ಎಂದೇ ಗುರುತಿಸಿಕೊಂಡಿರುವ ಸುನಕ್ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ.

ರಿಷಿ ಸುನಕ್ ವಿರುದ್ಧ ಸಾರ್ವಜನಿಕರು ಕೆಂಡಾಮಂಡಲ
ರಿಷಿ ಸುನಕ್ ಅವರ ಈಜುಕೊಳ ನಿರ್ಮಾಣ ವಿರುದ್ಧ ಕೆಂಡಾಮಂಡಲವಾದ ಜನರು ಇದೊಂದು ಅಪ್ರಯೋಜಕ ಕೆಲಸ ಎಂದಿದ್ದಾರೆ. ಇಂಗ್ಲೆಂಡ್ ಸುತ್ತಮುತ್ತ ಬರ ತಾಂಡವಾಡುತ್ತಿದ್ದು, ನೀರಿಗೆ ಹಾಹಾಕಾರದ ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗ ಈ ಮಧ್ಯೆ ಇಷ್ಟು ಕೋಟಿ ವೆಚ್ಚದ ಈಜುಕೊಳದ ಯೋಜನೆ ಬೇಕಿತ್ತಾ ಎಂದು ಭವಿಷ್ಯದ ಪ್ರಧಾನಿ ಎಂದೇ ಗುರುತಿಸಿಕೊಂಡಿರುವ ಸುನಕ್ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ.

ನಾರ್ತಲರ್ಟನ್ ಬಳಿ ತಮ್ಮ ಬಂಗಲೆಯಲ್ಲಿ ಸುನಕ್ 3.8 ಕೋಟಿ ರೂ. ವೆಚ್ಚದಲ್ಲಿ ಈಜುಕೊಳ ನಿರ್ಮಿಸಿದ್ದು ಅವರು ಪತ್ನಿ, ಇಬ್ಬರು ಮಕ್ಕಳೊಂದಿಗೆ ಇಲ್ಲಿ ವಾರಾಂತ್ಯ ಹಾಗೂ ರಜೆಯನ್ನು ಮೋಜಿನಿಂದ ಕಳೆಯುತ್ತಿದ್ದಾರೆ ಎಂದು ‘ಡೈಲಿ ಮೈಲ್’ ವರದಿ ಮಾಡಿದೆ. ಅಲ್ಲದೆ ಈ ಬಂಗಲೆಯಲ್ಲಿ ಟೆನಿಸ್ ಕೋರ್ಟ್ ಹಾಗೂ ಜಿಮ್ ಅನ್ನೂ ಸಹ ನಿರ್ಮಿಸಲಾಗುತ್ತಿದೆ. ಇತ್ತೀಚೆಗೆ ಚಿತ್ರೀಕರಿಸಲಾದ ವೈಮಾನಿಕ ದೃಶ್ಯಾವಳಿಗಳು ಸೆರೆಹಿಡಿದಿರುವ ದೃಶ್ಯದ ಪ್ರಕಾರ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ ಎಂದು ವರದಿಯಾಗಿದೆ.

ಬರಗಾಲದ ಸಂದರ್ಭದಲ್ಲಿ ಈಜುಕೊಳ ನಿರ್ಮಾಣ, ವ್ಯಾಪಕ ಟೀಕೆ
ದಂಪತಿಗಳು ಕಳೆದ ವರ್ಷ ತಮ್ಮ ಭವನದಲ್ಲಿ 12 ಮತ್ತು 5 ಮೀಟರ್ ಈಜುಕೊಳ ನಿರ್ಮಿಸಲು ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದರು. ಸದ್ಯ ರಿಷಿ ಸುನಕ್ ಅವರ ಈ ಕ್ರಮ, ಯುಕೆಯಲ್ಲಿನ ಜೀವನ ವೆಚ್ಚದ ಬಿಕ್ಕಟ್ಟನ್ನು ಎದುರಿಸುತ್ತಿರುವ ಜನರ ಕೋಪಕ್ಕೆ ತುತ್ತಾಗಿದೆ. ಹೆಚ್ಚುತ್ತಿರುವ ವಿದ್ಯುತ್, ನೀರು ವೆಚ್ಚದಿಂದಾಗಿ ರಿಚ್ಮಂಡ್‌ನಲ್ಲಿ ಸಾರ್ವಜನಿಕ ಈಜುಕೊಳಗಳನ್ನು ಮುಚ್ಚಲಾಗಿದೆ. ಕ್ಷಾಮದ ಹಿನ್ನೆಲೆಯಲ್ಲಿ ನೀರಿನ ಖರ್ಚು ಮಿತಗೊಳಿಸಲು ನಗರದಲ್ಲಿನ ಸಾರ್ವಜನಿಕ ಈಜುಕೊಳವನ್ನು ಮುಚ್ಚಿರುವ ಸಂದರ್ಭದಲ್ಲಿ ಜನ ಪ್ರತಿನಿಧಿಯೊಬ್ಬರು ಈ ರೀತಿ ಮಾಡುತ್ತಿರುವುದು ಸರಿಯೇ ಎಂದು ವ್ಯಾಪಕ ಖಂಡನೆ, ಟೀಕೆ ವ್ಯಕ್ತವಾಗಿದೆ.

ನಾಲ್ಕೈದು ತಿಂಗಳಿಂದ ಭಾರಿ ಚರ್ಚೆಯಲ್ಲಿ ಸುನಕ್ ಕುಟುಂಬ
ಸುನಕ್ ಅವರು ರಾಜಕೀಯಕ್ಕೆ ತಿರುಗುವ ಮೊದಲು ಹೂಡಿಕೆ ಬ್ಯಾಂಕರ್ ಆಗಿದ್ದರು ಮತ್ತು ಯುಕೆ ಹಣಕಾಸು ಮಂತ್ರಿಯಾಗಿದ್ದರು. ಅವರ ಪತ್ನಿ ಅಕ್ಷತಾ ಮೂರ್ತಿ ಬಿಲಿಯನೇರ್ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ. ದಂಪತಿಗಳ ಖಾಸಗಿ ಸಂಪತ್ತು ಆಗಾಗ್ಗೆ ಪರಿಶೀಲನೆಯ ವಿಷಯವಾಗಿದ್ದು, ಕಳೆದ ನಾಲ್ಕೈದು ತಿಂಗಳಿಂದ ಭಾರಿ ಚರ್ಚೆಯಲ್ಲಿದೆ.

ಇದನ್ನೂ ಓದಿ: Twitter v/s Elon Musk: ಕಾನೂನು ಹೋರಾಟದಲ್ಲಿ ಭಾರತ ಸರ್ಕಾರವನ್ನು ಉಲ್ಲೇಖಿಸಿದ ಮಸ್ಕ್‌

ಈ ವರ್ಷದ ಆರಂಭದಲ್ಲಿ, ಅಕ್ಷತಾ ಮೂರ್ತಿ ಯುಕೆಯಲ್ಲಿನ "ನಿವಾಸೇತರ" ತೆರಿಗೆ ಸ್ಥಿತಿಯಿಂದ ಲಾಭ ಪಡೆದಿದ್ದಾರೆ ಎಂಬ ವಿಚಾರ ರಾಜಕೀಯದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿತ್ತು. ಜೀವನ ವೆಚ್ಚದ ಬಿಕ್ಕಟ್ಟಿನ ಮಧ್ಯದಲ್ಲಿ ಬ್ರಿಟನ್ನಿಗರಿಗೆ ತೆರಿಗೆಗಳನ್ನು ಹೆಚ್ಚಿಸಿದ್ದಕ್ಕಾಗಿ ಸುನಕ್ ಬೂಟಾಟಿಕೆ ಆರೋಪವನ್ನು ಎದುರಿಸಿದರು.

ಈ ಬಗ್ಗೆ ರಿಷಿ ಸುನಕ್ ಏನು ಹೇಳಿದ್ದಾರೆ 
ಇಂಗ್ಲೆಂಡಿನಲ್ಲಿ ಪ್ರಧಾನಿ ಗದ್ದುಗೆಯನ್ನು ಯಾರು ಏರುತ್ತಾರೆ ಎಂದು ದಿನದಿಂದ ದಿನಕ್ಕೆ ಕುತೂಹಲ ಹೆಚ್ಚುತ್ತಿದೆ. ಮಾಜಿ ಚಾನ್ಸೆಲರ್ ರಿಷಿ ಸುನಕ್ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ಸ್ ಅವರೊಂದಿಗೆ ನಡೆಸಿದ ಟೆಲಿವಿಷನ್ ಮುಖಾಮುಖಿ ಸಂವಾದದಲ್ಲಿ ಕನ್ಸರ್ವೇಟಿವ್ ಪಾರ್ಟಿ ಸದಸ್ಯ ರಿಷಿ ಸುನಕ್ ಸುಲಭವಾಗಿ ಮುನ್ನಡೆ ಸಾಧಿಸಿದ್ದಾರೆ. ಸುನಕ್ ಅವರು ಪ್ರಧಾನಿಯಾಗಿ ಆಯ್ಕೆಯಾದರೆ ಅವರು ಈಗಾಗಲೇ ಘೋಷಿಸಿದ್ದಕ್ಕಿಂತ "ಮುಂದೆ ಉತ್ತಮ ಕೆಲಸ ಮಾಡುವುದಾಗಿ" ಭರವಸೆ ನೀಡಿದರು.

"ವಿದ್ಯುತ್ ಬಿಲ್‌ಗಳ ವೆಚ್ಚ ಸೇರಿ ಮಿಲಿಯನ್ ಗಟ್ಟಲೆ ಜನರು ಹಣದುಬ್ಬರದ ಬಗ್ಗೆ ಚಿಂತಿತರಾಗಿದ್ದಾರೆಂದು ನನಗೆ ತಿಳಿದಿದೆ, ನಾನು ಪ್ರಧಾನ ಮಂತ್ರಿಯಾದರೆ ಆ ಕುಟುಂಬಗಳಿಗೆ ನೆರವಾಗುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ:  Narendra Modi: ಜಗತ್ತಿನ ಶಾಂತಿ ಕಾಪಾಡಲು ಮೋದಿಯಿಂದಷ್ಟೇ ಸಾಧ್ಯ! ಭಾರತದ ಸಾರಥ್ಯಕ್ಕೆ ಮೆಕ್ಸಿಕೋ ಪ್ರಧಾನಿ ಮನವಿ

ಇಂಗ್ಲೆಂಡ್ ಒಂದೆರಡು ತಿಂಗಳುಗಳಿಂದ ತೀವ್ರ ಶಾಖದಿಂದ ತತ್ತರಿಸುತ್ತಿದ್ದು, ಯುಕೆ ಅಧಿಕಾರಿಗಳು ಅಧಿಕೃತವಾಗಿ ಬರಗಾಲವನ್ನು ಘೋಷಿಸಿದ್ದಾರೆ. ಯುಕೆ ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿರುವಾಗ ಸುನಕ್ ಈಜುಕೊಳವನ್ನು ನಿರ್ಮಿಸಲು ಅಪಾರ ಪ್ರಮಾಣದ ಹಣವನ್ನು ಖರ್ಚು ಮಾಡಿರುವುದು ಅನೇಕ ಬ್ರಿಟಿಷ್ ನಾಗರಿಕರನ್ನು ಕೆರಳಿಸಿದೆ. ಭವಿಷ್ಯದ ಪ್ರಧಾನಿ ಎಂದೇ ಬಿಂಬಿತವಾಗಿರುವ ಸುನಕ್ ಹೀಗೆ ಮಾಡಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
Published by:Ashwini Prabhu
First published: