• Home
 • »
 • News
 • »
 • national-international
 • »
 • Britain Politics: ಬ್ರಿಟನ್‌ನಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಕೂಗು: ಲಿಜ್ ಟ್ರಸ್​ನ್ನು ಕೆಳಗಿಳಿಸಲು ರಿಷಿ ಸುನಕ್‌ ಅಸ್ತ್ರ ಏನು?

Britain Politics: ಬ್ರಿಟನ್‌ನಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಕೂಗು: ಲಿಜ್ ಟ್ರಸ್​ನ್ನು ಕೆಳಗಿಳಿಸಲು ರಿಷಿ ಸುನಕ್‌ ಅಸ್ತ್ರ ಏನು?

ರಿಶಿ ಸುನಕ್ ಮತ್ತು ಲಿಜ್ ಟ್ರಸ್

ರಿಶಿ ಸುನಕ್ ಮತ್ತು ಲಿಜ್ ಟ್ರಸ್

'ಲಿಜ್ ಟ್ರಸ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ರಿಷಿ ಸುನಕ್ ಅವರಿಗೆ ಅಧಿಕಾರ ಕೊಡಿಸುವ ಯೋಜನೆಯ ಮೊದಲ ಹಂತವು ಸೋಮವಾರ ಮಾರುಕಟ್ಟೆ ಪ್ರಕ್ಷುಬ್ಧತೆಯನ್ನು ಒಳಗೊಂಡಿರುತ್ತದೆʼ ಎಂದು ಸ್ಪೆಕ್ಟೇಟರ್ ವರದಿ ಮಾಡಿದೆ.

 • Share this:

  ಬ್ರಿಟನ್(ಅ.19): ಬ್ರಿಟನ್‌ ಪ್ರಧಾನಿ ಪಟ್ಟದ ರೇಸ್‌ (Britain Prime Minister) ವಿಶ್ವದಾದ್ಯಂತ ಕೂತೂಹಲ ಕೆರಳಿಸಿದಂತಹ ಚುನಾವಣೆ. ಪ್ರತಿಸ್ಪರ್ಧಿ ರಿಷಿ ಸುನಕ್ (Rishi Sunak) ಅವರನ್ನು ಸೋಲಿಸಿ ಬ್ರಿಟನ್​ನ​ ಪ್ರಧಾನಿಯಾಗಿ ಲಿಜ್ ಟ್ರಸ್​​​ (Liz Truss) ಸೆ. 5ರಂದು ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಆದರೀಗ ಲಿಜ್ ಟ್ರಸ್ ಪ್ರಧಾನಿ ಪಟ್ಟ ಅಲಂಕರಿಸಿ ಸರಿಯಾಗಿ ಒಂದೂವರೆ ತಿಂಗಳೂ ಸಹ ಆಗಿಲ್ಲ, ಆಗಲೇ ಅಧಿಕಾರಕ್ಕೆ ಕುತ್ತು ಬಂದಿರುವ ಬಗ್ಗೆ ವರದಿಗಳು ಕೇಳಿ ಬರುತ್ತಿವೆ. ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿರುವ ಸಮಯದಲ್ಲಿ ಕನ್ಸರ್ವೇಟಿವ್ ಪಕ್ಷದ ಲಿಜ್ ಟ್ರಸ್ ಅಧಿಕಾರಕ್ಕೆ ಬಂದಿದ್ದರು.


  ಹೀಗಾಗಿ ಪ್ರಧಾನಿ ಪಟ್ಟದ ಜವಾಬ್ದಾರಿ ಇವರಿಗೆ ಸುಲಭದ ಹಾದಿಯಾಗಿರದೇ, ಹಲವು ಸವಾಲುಗಳಿಂದ ಕೂಡಿತ್ತು. ಇಂಧನ ದರಗಳ ನಿಯಂತ್ರಣ ಮತ್ತು ಆರ್ಥಿಕ ಸ್ಥಿರತೆಗೆ ಸುಧಾರಣೆಗಳನ್ನು ತಕ್ಷಣವೇ ಜಾರಿಗೆ ತರುವುದಾಗಿ ಘೋಷಣೆ ಮಾಡಿದ್ದ ಲಿಜ್ ಟ್ರಸ್ ಅವರು ತಮ್ಮ ಪಕ್ಷದ ಸಂಸದರಲ್ಲಿ ಭರವಸೆ ಮೂಡಿಸಿದ್ದರು.


  ಲಿಜ್‌ ಟ್ರಸ್‌ಗೆ ದೊಡ್ಡ ಪೆಟ್ಟು ನೀಡಿದ ʼಮಿನಿ ಬಜೆಟ್‌ʼ


  ಅಧಿಕಾರವಹಿಸಿಕೊಂಡ ನಂತರ ಲಿಜ್‌ ಟ್ರಸ್‌ ಮೊದಲ ಹಂತದಲ್ಲೇ ಮುಗ್ಗರಿಸಿದರು. ಹೌದು ಇವರ ಹೊರಡಿಸಿದ ತೆರಿಗೆ ಕಡಿತ ನೀತಿ ದೇಶದಲ್ಲಿ ಆರ್ಥಿಕ ಕೋಲಾಹಲವನ್ನೇ ಸೃಷ್ಟಿಸಿತು. ತೆರಿಗೆ ಮತ್ತು ಇಂಧನ ಬಿಲ್‌ಗಳಲ್ಲಿ ಕಡಿತ ಮಾಡುವುದು ಇದರ ಉದ್ದೇಶವಾಗಿತ್ತು.


  ಇದನ್ನೂ ಓದಿ: ಗುಜರಾತ್‌ನಲ್ಲಿ ಹೊಸ ಇಂಧನ ಯೋಜನೆಗಳಲ್ಲಿ 6 ಟ್ರಿಲಿಯನ್ ರೂ. ಹೂಡಿಕೆ ಮಾಡಲಿದೆ ರಿಲಯನ್ಸ್‌


  ವಿರೋಧ ಪಕ್ಷಗಳು ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದವು. ಭಾರೀ ಒತ್ತಡದ ನಂತರ ಅ ನೀತಿಯನ್ನೇ ಟೋರಿ ಪಕ್ಷ ಆದೇಶ ಹೊರಡಿಸಿದ ಹತ್ತೇ ದಿನದಲ್ಲಿ ವಾಪಸ್‌ ಪಡೆದುಕೊಂಡಿತು. ಇದು ಲಿಜ್‌ ಟ್ರಸ್‌ಗೆ ದೊಡ್ಡ ಹೊಡೆತವಾಗಿ ಪರಿಣಮಿಸಿತು.


  ದೇಶದ ರಾಜಕೀಯದಲ್ಲಿ ಬಂಡಾಯದ ಅಲೆ


  ಈ ಎಲ್ಲಾ ಘಟನೆ ಬಳಿಕ ತಮ್ಮ ಒಕ್ಕೂಟದಲ್ಲಿ ಹಣಕಾಸು ಸಚಿವರಾಗಿದ್ದ ಕ್ವಾಸಿ ಕ್ವಾರ್ಟೆಂಗ್ ಅವರನ್ನು ಕೇವಲ ಐದು ವಾರಗಳಲ್ಲಿ ಹುದ್ದೆಯಿಂದ ತೆಗೆದುಹಾಕಲಾಯಿತು. ನಂತರ ಜೆರಿಮಿ ಹಂಟ್ ಅವರನ್ನು ಅ ಸ್ಥಾನಕ್ಕೆ ಟ್ರಸ್ ತಂದಿದ್ದಾರೆ.


  ಆದರೆ ಈ ಬಾರಿ ಇಂತದ್ದೇ ಕಷ್ಟ ಲಿಜ್‌ ಟ್ರಸ್‌ ಅವರಿಗೆ ಎದುರಾಗಿದ್ದು, ದೇಶದ ರಾಜಕೀಯದಲ್ಲಿ ಬಂಡಾಯದ ಅಲೆ ಜೋರಾಗಿ ಎದ್ದಿದೆ. ಲಿಜ್‌ ಟ್ರಸ್‌ರನ್ನು ಪ್ರಧಾನಿ ಪಟ್ಟದಿಂದ ಕೆಳಗಿಳಿಸುವ ಅಸ್ತ್ರ ಕೂಡ ರೆಡಿಯಾಗಿದೆ ಎನ್ನಲಾಗಿದೆ.


  ರಿಷಿ ಸುನಕ್‌ ದಾಳ ಯಾವುದು?


  ಲಿಜ್ ಟ್ರಸ್ ಅವರೊಂದಿಗಿನ ಸ್ಪರ್ಧೆಯ ಸಮಯದಲ್ಲಿ ತೆರಿಗೆ ಕಡಿತದ ಯೋಜನೆಯು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗುತ್ತದೆ ಎಂದು ರಿಷಿ ಸುನಕ್‌ ಹೇಳಿದ್ದರಂತೆ. ಇದೇ ಮಾತನ್ನು ಈಗ ರಿಷಿ ದಾಳವಾಗಿ ಬಳಸಿಕೊಳ್ಳಬಹುದು ಎನ್ನಲಾಗಿದೆ.
  'ಲಿಜ್ ಟ್ರಸ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ರಿಷಿ ಸುನಕ್ ಅವರಿಗೆ ಅಧಿಕಾರ ಕೊಡಿಸುವ ಯೋಜನೆಯ ಮೊದಲ ಹಂತವು ಸೋಮವಾರ ಮಾರುಕಟ್ಟೆ ಪ್ರಕ್ಷುಬ್ಧತೆಯನ್ನು ಒಳಗೊಂಡಿರುತ್ತದೆʼ ಎಂದು ಸ್ಪೆಕ್ಟೇಟರ್ ವರದಿ ಮಾಡಿದೆ.


  ಪ್ರಧಾನಿ ಪಟ್ಟಕ್ಕೆ ರಿಷಿ ಸುನಕ್ ತರಲು ಪ್ರಯತ್ನ


  ಹೌದು, ಮಾರ್ಕೆಟ್ ಗಳು ಈ ವಾರ ಟ್ರಸ್ ಅವರಿಗೆ ಅಗ್ನಿ ಪರೀಕ್ಷೆಯಾಗಲಿದ್ದು, ಈ ಎಲ್ಲಾ ಘಟನೆ ಬಳಿಕ ರಿಷಿ ಸುನಕ್ ಲಿಜ್ ಟ್ರಸ್‌ಗೆ ಉತ್ತಮ ಪರ್ಯಾಯ ಎಂದು ಪಕ್ಷದ ಸದಸ್ಯರಿಗೆ ಮನವರಿಕೆ ಮಾಡಲಾಗುವುದು ಮತ್ತು ಸಾರ್ವತ್ರಿಕ ಚುನಾವಣೆಯನ್ನು ಎಲ್ಲಾ ವೆಚ್ಚದಲ್ಲಿಯೂ ತಪ್ಪಿಸಲಾಗುವುದು ಎಂದು ವರದಿ ಹೇಳಿದೆ.


  ಇದನ್ನೂ ಓದಿ: ಹಬ್ಬದ ದಿನವೇ ದೆಹಲಿಯ ಹೂವಿನ ಮಾರ್ಕೆಟ್​ನಲ್ಲಿ ಬಾಂಬ್ ಪತ್ತೆ.. ಬೆಚ್ಚಿಬಿತ್ತು ರಾಷ್ಟ್ರ ರಾಜಧಾನಿ!


  ಒಟ್ಟಾರೆ ದೇಶದಲ್ಲಿ ಉಂಟಾಗುತ್ತಿರುವ ಆರ್ಥಿಕತೆ ಸಮಸ್ಯೆ ಸೇರಿ ಎಲ್ಲವನ್ನೂ ಪರಿಗಣಿಸಿ ಮತ್ತೆ ನಾಯಕತ್ವ ಬದಲಾವಣೆಯ ಕೂಗು ಕೇಳಿ ಬರುತ್ತಿದೆ. ರಿಷಿ ಸುನಕ್ ಅವರ ಬೆಂಬಲಿಗರು, ಅವರನ್ನು ಪ್ರಧಾನ ಮಂತ್ರಿ ಸ್ಥಾನಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ವರದಿಗಳಲ್ಲಿ ಸ್ಪಷ್ಟವಾಗಿದೆ.


  ಅಕಸ್ಮಾತ್‌ ಟ್ರಸ್‌, ಮಾರುಕಟ್ಟೆ ಅಥವಾ ಆರ್ಥಿಕ ವಲಯದಲ್ಲಿ ಸೃಷ್ಟಿಯಾಗಿರುವ ಸಂಕಷ್ಟವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಸಮರ್ಥರಾದರೆ ಈ ಎಲ್ಲಾ ಪ್ಲ್ಯಾನ್‌ಗಳು ಉಲ್ಟಾ ಆಗುವುದಂತೂ ನಿಜ.

  Published by:Precilla Olivia Dias
  First published: