• Home
 • »
 • News
 • »
 • national-international
 • »
 • Rishi Sunak: ಆರ್ಥಿಕವಾಗಿ ಕಂಗಾಲಾದ ಬ್ರಿಟನ್; ರಿಷಿ ಸುನಕ್ ಮುಂದಿರುವ ಸವಾಲು ಒಂದೆರಡಲ್ಲ

Rishi Sunak: ಆರ್ಥಿಕವಾಗಿ ಕಂಗಾಲಾದ ಬ್ರಿಟನ್; ರಿಷಿ ಸುನಕ್ ಮುಂದಿರುವ ಸವಾಲು ಒಂದೆರಡಲ್ಲ

ರಿಷಿ ಸುನಕ್​

ರಿಷಿ ಸುನಕ್​

ಆದರೆ ಇತ್ತ ರಿಷಿ ಸುನಕ್ ಅವರು ತಮ್ಮ ಮುಂದಿರುವ ಸವಾಲುಗಳನ್ನು ನೋಡಿ ಹೆದರದಂತೆ ತೋರುತ್ತಿದ್ದಾರೆ. ಅವರು ಈಗಾಗಲೇ ದೇಶವನ್ನು ಈ ಬರ್ಬರವಾದಂತಹ ಆರ್ಥಿಕ ಸ್ಥಿತಿಯಿಂದ ಮೇಲೆತ್ತಿ ಮುನ್ನಡೆಸುವುದಾಗಿ ಹೇಳಿದ್ದಾರೆ. 

 • Share this:

  ಕಳೆದ ಮಂಗಳವಾರದಂದು ಯುಕೆ ದೇಶವು ಒಂದು ಐತಿಹಾಸಿಕ ದಾಖಲೆಗೆ ಸಾಕ್ಷಿಯಾಯಿತು. ಮೊದಲ ಬಾರಿಗೆ ಭಾರತೀಯ ಮೂಲದ (Indian Origin) ಹಾಗೂ ಅತಿ ಕಿರಿಯ ವಯಸ್ಸಿನ ಪ್ರಧಾನಿ ಎಂಬ ಮನ್ನಣೆಗೆ ರಿಷಿ ಸುನಕ್ ಅವರು (Rishi Sunak) ಪಾತ್ರರಾದರು. ಕಳೆದ ಎರಡು ತಿಂಗಳುಗಳಲ್ಲಿ ಮೂರನೇ ಪ್ರಧಾನಿಯಾಗಿ ಸುನಕ್ ಅವರು ಯುಕೆ ಆಡಳಿತದ ಚುಕ್ಕಾಣಿ ಹಿಡಿದಿರುವುದು ಈಗ ಇತಿಹಾಸ. ತಿಂಗಳ ಹಿಂದಷ್ಟೇ ಪ್ರಧಾನಿ ಹುದ್ದೆಗೆ (Britain PM) ಪೈಪೋಟಿ ನಡೆಸಿ ಅಂತಿಮವಾಗಿ ಲಿಜ್ ಟ್ರಸ್ ಅವರ ವಿರುದ್ಧ ಸೋಲುಂಡಿದ್ದ ರಿಷಿ ಸುನಕ್ ಅವರಿಗೆ ಟ್ರಸ್ ಅವರ ವೈಫಲ್ಯಾತ್ಮಕ ನಿರ್ಧಾರಗಳು ಮತ್ತೆ ಸುನಕ್ ಅವರನ್ನು ಮುನ್ನೆಲೆಗೆ ಬರುವಂತೆ ಮಾಡಿತು ಎಂದರೂ ತಪ್ಪಾಗಲಾರದು.


  ಹಾಗಾಗಿ, ರಿಷಿ ಸುನಕ್ ಟ್ರಸ್ ಅವರ ರಾಜಿನಾಮೆ ನಂತರ ಪ್ರಧಾನಿ ಪಟ್ಟ ಅಲಂಕರಿಸುವ ನೆಚ್ಚಿನ ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಆದರೆ, ಈಗ ಸುನಕ್ ಅವರು ಪ್ರಧಾನಿ ಆಗಿ ಯಾಗಿದೆ. ಇನ್ನು ಮುಂದೆ ಅವರ ನಿಜವಾದ ಕಠಿಣ ಪರೀಕ್ಷೆ ಪ್ರಾರಂಭವಾಗಲಿದೆ.


  ಆರ್ಥಿಕವಾಗಿ ಕಂಗಾಲಾದ ಬ್ರಿಟನ್
  ಏಕೆಂದರೆ ಈಗಾಗಲೇ ಯುಕೆ ಆರ್ಥಿಕವಾಗಿ ಕಂಗಾಲಾಗಿದೆ. ದೇಶದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಂತಿದೆ, ಪೌಂಡ್ ಮೌಲ್ಯ ಹೀನಾಯವಾಗಿ ಕುಸಿದಿದೆ. ಮೊದಲಿಗೆ ಈ ಎಲ್ಲ ಅಂಶಗಳನ್ನು ನಿಧಾನವಾಗಿ ಪರಿಹರಿಸಬೇಕಾಗಿರುವ ದೊಡ್ಡ ಜವಾಬ್ದಾರಿ ರಿಷಿ ಅವರ ಮೇಲಿದೆ. ಇದರ ಹೊರತಾಗಿ ಯುಕೆ ಜನರು ಹೊಸ ವ್ಯಕ್ತಿಯನ್ನು ತಮ್ಮ ಪ್ರಧಾನಿಯಾಗಿ ಒಪ್ಪಿಕೊಳ್ಳುವರೆ, ರಾಜಕೀಯ ವಲಯದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬಲ್ಲರೆ ಎಂಬಂತಹ ಅಂಶಗಳು ರಿಷಿ ಸುನಕ್ ಅವರಿಗೆ ಕಠಿಣ ಸವಾಲೊಡ್ಡಲಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.


  ಸುನಕ್ ಅವರ ಮಾತು
  ಆದರೆ ಇತ್ತ ರಿಷಿ ಸುನಕ್ ಅವರು ತಮ್ಮ ಮುಂದಿರುವ ಸವಾಲುಗಳನ್ನು ನೋಡಿ ಹೆದರದಂತೆ ತೋರುತ್ತಿದ್ದಾರೆ. ಅವರು ಈಗಾಗಲೇ ದೇಶವನ್ನು ಈ ಬರ್ಬರವಾದಂತಹ ಆರ್ಥಿಕ ಸ್ಥಿತಿಯಿಂದ ಮೇಲೆತ್ತಿ ಮುನ್ನಡೆಸುವುದಾಗಿ ಹೇಳಿದ್ದಾರೆ.  ಅಲ್ಲದೆ, ದೇಶವನ್ನು ಸದೃಢತೆಯತ್ತ ಒಯ್ಯುವ ಮೂಲಕ ರಾಜಕೀಯವಾಗಿಯೂ ವಿಶ್ವಾಸವನ್ನು ಗಳಿಸುವುದಾಗಿ ಹೇಳಿದ್ದಾರೆ.


  ಇಷ್ಟೆಲ್ಲ ಜವಾಬ್ದಾರಿಗಳಿವೆ
  ಸದ್ಯ ಯುಕೆಯ ವಿದೇಶ ನೀತಿ ಹಾಗೂ ಕೆಲವು ಕ್ರಮಗಳಿಂದಾಗಿ ಹೂಡಿಕೆದಾರರು ಹಾಗೂ ಇತರೆ ಸ್ಟೇಕ್ ಹೋಲ್ಡರ್​ಗಳು ಆತಂಕದಲ್ಲಿದ್ದಾರೆ. ಈ ನೀತಿಯಲ್ಲಿ ತೀವ್ರವಾದಂತಹ ಬದಲಾವಣೆಗಳ ಅವಶ್ಯಕತೆಯಿದ್ದು ಆ ಮೂಲಕ ಮತ್ತೆ ಹೂಡಿಕೆದಾರರು ಹಾಗೂ ಯುಕೆಯ ಮಿತ್ರ ರಾಷ್ಟ್ರಗಳಿಗೆ ಮತ್ತೆ ಸುರಕ್ಷತಾ ಭಾವನೆ ಮೂಡುವಂತೆ ಮಾಡಬೇಕಾದ ಅನಿವಾರ್ಯತೆಯಿದೆ. ಸದ್ಯ, ಈ ಎಲ್ಲದರ ಜವಾಬ್ದಾರಿ ಈಗ 42ರ ಪ್ರಾಯದ ರಿಷಿ ಸುನಕ್ ಅವರ ಮೇಲಿದೆ ಎಂದು ಹೇಳಬಹುದಾಗಿದೆ.


  ಈಗಾಗಲೇ, ರಿಷಿ ದೇಶದ ಜನತೆಯನ್ನುದ್ದೇಶಿಸಿ ಮುಂಬರುವ ಕೆಲ ಸಮಯವು ಕಠಿಣವಾದ ನಿರ್ಧಾರಗಳಿಂದ ಕೂಡಿರಲಿದ್ದು ಜನರು ಇದಕ್ಕೆ ಪೂರಕವಾಗಿ ಸ್ಪಂದಿಸಬೇಕೆಂದು ಕೇಳಿಕೊಂಡಿದ್ದು ಈಗಾಗಲೇ ಲಿಜ್ ಅವರ ಕೆಲವು ಕಳಪೆ ನಿರ್ಧಾರಗಳಿಂದಾಗಿ ಆಗಿರುವ ಹಲವು ದೋಷಗಳನ್ನು ಸರಿಪಡಿಸುವ ಅಗತ್ಯವಿರುವ ಕಾರಣ ಈ ನಿರ್ಧಾರಗಳಿರುತ್ತವೆ ಎಂದು ಹೇಳಿದ್ದಾರೆ.


  ಅಪಾಯದಲ್ಲಿರುವ ಆರ್ಥಿಕತೆ
  ಪ್ರಸ್ತುತ ಯುಕೆಯ ಆಥಿಕತೆಯು ಸಾಕಷ್ಟು ಕುಸಿದಿದೆ. ಏನಿಲ್ಲವೆಂದರೂ ಸುನಕ್ ಅವರು ಇದಕ್ಕೆ 40 ಬಿಲಿಯನ್ ಪೌಂಡುಗಳಷ್ಟಾದರೂ ಚೇತರಿಕೆ ಪ್ರಾಥಮಿಕವಾಗಿ ನೀಡಲೇಬೇಕಿದೆ. ಹಾಗಾಗಿ ಇಂಗ್ಲೆಂಡ್ ಪಾರ್ಲಿಮೆಂಟಿನ ಅತಿ ಸಿರಿವಂತ ಸದಸ್ಯರಲ್ಲೊಬ್ಬರಾಗಿರುವ ಸುನಕ್ ಅವರು ಕೆಲವು ಆಳವಾದ ತೆರಿಗೆ ಅಥವಾ ವೆಚ್ಚ ಕಡಿತಗಳ ಕುರಿತು ನಿರ್ಧಾರ ಕೈಗೊಳ್ಳಲೇಬೇಕಿದೆ. ದುಬಾರಿಯಾಗಿರುವಂತಹ ಸಾಲ ಪಡೆದುಕೊಳ್ಳುವಿಕೆ ಹಾಗೂ ಜನರ ಶಕ್ತಿ ಅವಶ್ಯಕತೆಗಳ ಬಿಲ್ ಗಳಿಗೆ ಸಂಬಂಧಿಸಿದಂತೆ ಬೆಂಬಲ ನೀಡುವ ಕನಿಷ್ಠ ಆರು ತಿಂಗಳುಗಳ ಕಾರ್ಯಕ್ರಮವನ್ನು ನಡೆಸುವಂತಹ ಯೋಜನೆಗಳು ಸದ್ಯ ಸುನಕ್ ಅವರ ನಕ್ಷೆಯಲ್ಲಿವೆ.


  ಸುನಕ್ ಅವರ ಪಕ್ಷ
  ಸುನಕ್ ಅವರ ಪಕ್ಷ ಯುಕೆನಲ್ಲಿ ಫ್ರೀ ಫಾಲ್ ಎಂಬ ಹಣೆ ಬರಹಕ್ಕೆ ಹೆಚ್ಚು ಹೆಸರುವಾಸಿಯಾಗಿದೆ. ಹಾಗಾಗಿ ಜನರಲ್ಲಿ ಒಂದು ರೀತಿಯಲ್ಲಿ ಈ ಪಕ್ಷದ ಬಗ್ಗೆ ಖಚಿತ ವಿಶ್ವಾಸ ಇರುವ ಬಗ್ಗೆ ಸಂದೇಹಗಳಿವೆ. ಸುನಕ್ ಅವರ ಕನ್ಸರ್ವೇಟಿವ್ ಪಕ್ಷ ತಾನು ಚುನಾವಣೆ ಮೂಲಕ ಆಯ್ಕೆಯಾದ ಸಂದರ್ಭದಲ್ಲಿ ಹಲವು ಮುಖ್ಯ ಕ್ರಮಗಳನ್ನು ತನ್ನ ಪ್ರಣಾಳಿಕೆಯಲ್ಲಿ ನೀಡಿತ್ತು. ಅದರ ಆಧಾರದ ಮೇಲೆಯೂ ಪಕ್ಷ ಅಧಿಕಾರ ಪಡೆದಿತ್ತು. ಹಾಗಾಗಿ ಆ ಪ್ರಣಾಳಿಕೆಯ ಅಂಶಗಳನ್ನು ಗಮನದಲ್ಲಿರಿಸಿಕೊಂಡೇ ಸುನಕ್ ಅವರು ನೀತಿ ಬದಲಾವಣೆ ಮಾಡಬೇಕಿದೆ. ಒಂದು ವೇಳೆ ಅವರು ಪ್ರಣಾಳಿಕೆಯ ವಿರುದ್ಧ ಅಥವಾ ಅದರಿಂದ ಬಲು ದೂರದಲ್ಲಿರುವ ಏನಾದರೂ ಬದಲಾವಣೆ ತಂದರೆ ಚುನಾವಣೆಯ ಕೂಗು ಏಳುವುದಂತೂ ಖಚಿತ ಎನ್ನಲಾಗಿದೆ.


  ಆರ್ಥಿಕ ತಜ್ಞರು ಹಾಗೂ ಹೂಡಿಕೆದಾರರು
  ಇನ್ನು, ಮಾರುಕಟ್ಟೆಯ ವಿಷಯಕ್ಕೆ ಬಂದರೆ, ಸುನಕ್ ಅವರ ಆಯ್ಕೆಯಿಂದಾಗಿ ಸದ್ಯ ಮಾರುಕಟ್ಟೆ ಹಾಗೂ ಹೂಡಿಕೆದಾರರು ಸಮಾಧಾನ ಹೊಂದಲಿದ್ದಾರೆಂದು ಯುಕೆ ಆರ್ಥಿಕ ವಿಶ್ಲೇಷಕರು ಹೇಳಿದ್ದಾರೆ. ಆದಾಗ್ಯೂ ಅವರ ಬಳಿ ಕೆಲವೇ ಕೆಲವು ಸರಳ ಆಯ್ಕೆಗಳಿದ್ದು ಆ ಮೂಲಕ ಲಕ್ಷಾಂತರ ಜನರ ಬವಣೆಯನ್ನು ನಿವಾರಿಸಬೇಕಾದ ಗುರುತರ ಜವಾಬ್ದಾರಿ ಸುನಕ್ ಅವರ ಮೇಲೆ ಇರುವುದಾಗಿ ತಜ್ಞರು ಎಚ್ಚರಿಸಿದ್ದಾರೆ.


  ಇದನ್ನೂ ಓದಿ: Viral News: ಸ್ನಾನ ಮಾಡಿದ್ದಕ್ಕೆ ಸತ್ತ ವ್ಯಕ್ತಿ? 60 ವರ್ಷ ಕೊಳಕಾಗಿ ನೆಮ್ಮದಿಯಾಗೇ ಇದ್ದ, ಪಾಪ!


  2023 ರಲ್ಲಿ ಬಹುತೇಕವಾಗಿ ತಲೆದೋರಲಿರುವ ಆರ್ಥಿಕ ಹಿಂಜರಿತ ಹಾಗೂ ಇನ್ನೆರಡು ವರ್ಷಗಳಲ್ಲಿ ನಡೆಯಬೇಕಾಗಿರುವ ಸಾರ್ವತ್ರಿಕ ಚುನಾವಣೆಗಳಂತಹ ಅಂಶಗಳು ಸುನಕ್ ಅವರನ್ನು ಕಠಿಣ ಪರೀಕ್ಷೆಗೆ ಒಡ್ಡಲಿವೆ. ಇದನ್ನು ಅವರು ಹೇಗೆ ನಿಭಾಯಿಸಿಕೊಂಡು ಹೋಗುತ್ತಾರೆ ಎಂದು ಕಾದು ನೋಡಬೇಕಾಗಿದೆ ಎಂದು ಹಲವು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.


  ಈ ನಡುವೆ ಸುನಕ್ ಅವರು ತಮ್ಮ ಸಹುದ್ಯೋಗಿಗಳಿಗೂ ಅವರ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಈ ಸಂದರ್ಭದಲ್ಲಿ ಸುನಕ್ ಅವರು ತಮ್ಮ ಸಹುದ್ಯೋಗಿಗಳೆಲ್ಲರನ್ನು ಉದ್ದೇಶಿಸಿ, "ನಮಗೆ ಈಗ ಅಗತ್ಯವಾಗಿ ಬೇಕಾಗಿರುವುದು ಸ್ಥಿರತೆ ಹಾಗೂ ಒಗ್ಗಟ್ಟು ಹಾಗೂ ನಾನು ಅದನ್ನು ಸಾಧಿಸಲು ನಮ್ಮ ಪಕ್ಷ ಹಾಗೂ ದೇಶವನ್ನು ಒಂದೆಡೆ ತರಲು ತೀವ್ರವಾಗಿ ಪ್ರಯತ್ನಿಸುತ್ತೇನೆ" ಎಂದು ಹೇಳಿದ್ದಾರೆ.


  ಇದನ್ನೂ ಓದಿ: Oldest Doctor: ಗಿನ್ನಿಸ್ ದಾಖಲೆ ಬರೆದ ವಿಶ್ವದ ಅತ್ಯಂತ ಹಿರಿಯ ವೈದ್ಯ!


  ಒಟ್ಟಿನಲ್ಲಿ ಸುನಕ್ ಅವರು ತಮ್ಮ ಪಕ್ಷದಲ್ಲೇ ಆಂತರಿಕವಾಗಿ ಬೆಂಬಲ ಪಡೆಯುತ್ತ ಎಲ್ಲರನ್ನು ಒಟ್ಟಾಗಿ ಸೇರಿಸಿಕೊಂಡು ಹೋಗುವುದಲ್ಲದೆ, ಪಕ್ಷದ ಘನತೆಗೂ ಧಕ್ಕೆ ಉಂಟಾಗದಂತೆ ನೀತಿ ಬದಲಾವಣೆಗಳ ಮೂಲಕ ದೇಶದ ಆರ್ಥಿಕ ಸ್ಥಿತಿಯನ್ನು ಮೇಲೆತ್ತುವ ಮೂಲಕ ಮತ್ತೆ ಯುಕೆಯನ್ನು ತನ್ನ ಮೊದಲಿನ ವೈಭವಕ್ಕೆ ಮರಳಿ ತರಬೇಕಾಗಿದ್ದು ಅದನ್ನು ಅವರು ಹೇಗೆ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

  Published by:ಗುರುಗಣೇಶ ಡಬ್ಗುಳಿ
  First published: