• Home
  • »
  • News
  • »
  • national-international
  • »
  • Rishi Sunak: ಕೊನೆಗೂ ರಿಷಿ ಸುನಕ್‌ಗೆ ಒಲಿದ ಬ್ರಿಟನ್ ಪ್ರಧಾನಿ ಪಟ್ಟ, ದೀಪಾವಳಿ ದಿನವೇ ಭಾರತೀಯರಿಗೆ ಗುಡ್ ನ್ಯೂಸ್!

Rishi Sunak: ಕೊನೆಗೂ ರಿಷಿ ಸುನಕ್‌ಗೆ ಒಲಿದ ಬ್ರಿಟನ್ ಪ್ರಧಾನಿ ಪಟ್ಟ, ದೀಪಾವಳಿ ದಿನವೇ ಭಾರತೀಯರಿಗೆ ಗುಡ್ ನ್ಯೂಸ್!

ರಿಷಿ ಸುನಕ್

ರಿಷಿ ಸುನಕ್

ಖ್ಯಾತ ಉದ್ಯಮಿ ಇನ್ಫೋಸಿಸ್ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ (Infosys Narayana Murthy and Sudhamurthy) ಅಳಿಯನಾಗಿರುವ ರಿಷಿ ಸುನಕ್, ಬ್ರಿಟನ್‌ನಲ್ಲಿ 5 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಇದೀಗ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

  • Share this:

ಇಂಗ್ಲೆಂಡ್: ಬ್ರಿಟನ್‌ಗೆ (Britain) ಹೊಸ ಪ್ರಧಾನಿ (Prime Minister) ಆಯ್ಕೆಯಾಗಿದೆ. ಭಾರತೀಯ (India) ಮೂಲದ ರಿಷಿ ಸುನಕ್ (Rishi Sunak) ಕೊನೆಗೂ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಭಾರತೀಯ ಖ್ಯಾತ ಉದ್ಯಮಿ ಇನ್ಫೋಸಿಸ್ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ (Infosys Narayana Murthy and Sudhamurthy) ಅಳಿಯನಾಗಿರುವ ರಿಷಿ ಸುನಕ್, ಬ್ರಿಟನ್‌ನಲ್ಲಿ 5 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಕೆಲ ದಿನಗಳ ಹಿಂದಷ್ಟೇ ಬ್ರಿಟನ್ ಪ್ರಧಾನಿ (British Prime Minister) ಸ್ಥಾನಕ್ಕೆ ಲಿಜ್ ಟ್ರುಸ್ ರಾಜೀನಾಮೆ (Liz Truss resign) ನೀಡಿದ್ದರು. ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ 45 ದಿನಗಳಲ್ಲೇ ಲಿಜ್ ಟ್ರುಸ್ ರಾಜೀನಾಮೆ ನೀಡಿದ್ದರು. ಇದೀಗ ಈ ಅದೃಷ್ಟ ರಿಷಿ ಸುನಕ್‌ಗೆ ಒಲಿದು ಬಂದಿದೆ.


ರಿಷಿಗೆ ಪೈಪೋಟಿ ಕೊಟ್ಟಿದ್ದ ಪೆನ್ನಿ ಮೊರ್ಡಾಂಟ್


ಲಿಜ್ ಟ್ರಸ್ ಹೊರ ನಡೆದ ನಂತರ ನೂತನ ಪ್ರಧಾನಿ ಆಯ್ಕೆಗೆ ಸಿದ್ಧತೆ ನಡೆದಿತ್ತು. ರಿಷಿ ಮತ್ತೊಮ್ಮೆ ಚುನಾವಣಾ ಕಣಕ್ಕಿಳಿಯುವುಗಾಗಿ ಘೋಷಿಸಿದ್ದರು. ಇತ್ತ ಪೆನ್ನಿ ಮೊರ್ಡಾಂಟ್ ಒಬ್ಬರೇ ಸುನಕ್ ಅವರ ಪ್ರತಿಸ್ಪರ್ಧಿಯಾಗಿದ್ದರು.ರೇಸ್‌ನಿಂದ ಹಿಂದೆ ಸರಿದಿದ್ದ ಪೆನ್ನಿ


ಮಹತ್ವದ ಬೆಳವಣಿಗೆಯಲ್ಲಿ ಕೊನೆ ಗಳಿಗೆಯಲ್ಲಿ ಪೆನ್ನಿ ಮೊರ್ಡಾಂಟ್  ರೇಸ್​​ನಿಂದ ಹಿಂದೆ  ಸರಿದಿದ್ದರು. ಹೀಗಾಗಿ ಯಾವುದೇ ಪ್ರತಿಸ್ಪರ್ಧಿಗಳಿಲ್ಲದೆ ರಿಷಿ ಆಯ್ಕೆ  ಆಗಿದ್ದಾರೆ. ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹಿಂದೆ ಸರಿದಾಗಲೇ ರಿಷಿ ಪ್ರಧಾನಿ ಪಟ್ಟಕ್ಕೇರುವುದು ಬಹುತೇಕ ಖಚಿತವಾಗಿತ್ತು. ಇದೀಗ ರಿಷಿ ಸುನಕ್ ಅವರ ಆಯ್ಕೆ ಅಧಿಕೃತವಾಗಿದೆ.


ಇದನ್ನೂ ಓದಿ: Sundar Pichai on T20 WC: ಪಾಕ್ ಕ್ರಿಕೆಟ್ ಪ್ರೇಮಿಗೆ ಸುಂದರ್ ಪಿಚ್ಚೈ ಕೌಂಟರ್, ವೈರಲ್ ಆಯ್ತು ಗೂಗಲ್ ಸಿಇಒ ರಿಪ್ಲೈ!


ಅಕ್ಟೋಬರ್ 28ಕ್ಕೆ ರಿಷಿ ಪ್ರಮಾಣ ವಚನ?


ಆಡಳಿತ ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ರಿಷಿ ಸುನಕ್ ಅವರು ಕಳೆದ ವಾರ ಅಧಿಕಾರ ತ್ಯಜಿಸಿದ ಮಾಜಿ ಪ್ರಧಾನಿ ಲಿಜ್ ಟ್ರಸ್ ಅವರಿಂದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ರಿಷಿ ಸುನಕ್ ಅವರನ್ನು 1922 ರ ಕನ್ಸರ್ವೇಟಿವ್ ಶಾಸಕರ ಸಮಿತಿಯ ಮುಖ್ಯಸ್ಥರು ಬ್ರಿಟನ್‌ನ ಕನ್ಸರ್ವೇಟಿವ್ ಪಕ್ಷದ ಮುಂದಿನ ನಾಯಕ ಎಂದು ಕಳೆದ ಸೋಮವಾರ ಘೋಷಿಸಿದ್ದರು. ಈ ಮೂಲಕ ಮುಂದಿನ ಪ್ರಧಾನಿ ಹಾದಿಯಲ್ಲಿ ಅವರ ಪ್ರಯಾಣವನ್ನು ಸುಲಭವಾಗಿ ಇರಿಸಿದ್ದರು. ಇನ್ನು ಅಕ್ಟೋಬರ್ 28 ರಂದು ರಿಷಿ ಸುನಕ್ ಅವರು ಪ್ರಮಾಣವಚನ ಸ್ವೀಕರಿಸಬಹುದು ಎಂದು ವರದಿಗಳು ಹೇಳಿವೆ.


45 ದಿನಕ್ಕೆ ರಾಜೀನಾಮೆ ನೀಡಿದ್ದ ಲಿಜ್ ಟ್ರಸ್


ಈ ಹಿಂದೆ ನಡೆದ ಬ್ರಿಟನ್ ಪ್ರಧಾನಿ ಚುನಾವಣೆಯಲ್ಲಿ ರಿಷಿ ಸುನಕ್,  ಲಿಜ್ ಟ್ರಸ್ ವಿರುದ್ಧ ಪರಾಭವಗೊಂಡಿದ್ದರು. ಲಿಜ್ ಟ್ರಸ್ ಪ್ರಧಾನಿ ಹುದ್ದೆಗೇರಿದರೂ ಆರ್ಥಿಕ ಬಿಕ್ಕಟ್ಟು ಮತ್ತು ಸರ್ಕಾರದ ನೀತಿಯಿಂದಾಗಿ ಹಿನ್ನಡೆ ಅನುಭವಿಸಿದ್ದರು. ಹೀಗಾಗಿ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಕೇವಲ 45 ದಿನಗಳಲ್ಲಿ ರಾಜೀನಾಮೆ ಕೊಟ್ಟಿದ್ದರು.


193 ಸಂಸದರ ಬೆಂಬಲ


ರಿಷಿ ಸುನಕ್ ಗೆ ಬರೋಬ್ಬರಿ 193 ಸಂಸದರು ಬೆಂಬಲ ನೀಡಿದ್ದು ಇನ್ನು ರಿಷಿ ಸುನಕ್ ಗೆ ಪ್ರಬಲ ಸ್ಪರ್ಧಿಯಾಗಿದ್ದ ಸಂಸದೆ ಪೆನ್ನಿ ಮೋರ್ಡಾಂಟ್ ಗೆ 26 ಸಂಸದರು ಮಾತ್ರ ಬೆಂಬಲ ನೀಡಿದ್ದು ಹೀಗಾಗಿ ಪ್ರಧಾನಿ ಹುದ್ದೆ ಸ್ಪರ್ಧೆಯಿಂದ ಮೋರ್ಡಾಂಟ್ ಹಿಂದೆ ಸರಿದಿದ್ದರು. ಹೀಗಾಗಿ ರಿಷಿ ಹಾದಿ ಸುಗಮವಾಯ್ತು.


ಇದನ್ನೂ ಓದಿ: India vs China: ಅಗ್ರ ವಿಜ್ಞಾನಿಗಳ ಸಂಖ್ಯೆಯಲ್ಲೂ ಭಾರತ-ಚೀನಾ ತೀವ್ರ ಪೈಪೋಟಿ


ರಿಷಿ ಮುಂದಿದೆ ದೊಡ್ಡ ಸವಾಲು


ಬ್ರಿಟನ್‌ ಆರ್ಥಿಕ ಪರಿಸ್ಥಿತಿ ಕ್ಷೀಣಿಸುತ್ತಿದೆ. ಹೀಗಾಗಿ ನ್ಸರ್ವೇಟಿವ್ ಪಕ್ಷದ ಅಭ್ಯರ್ಥಿ ಲಿಜ್ ಟ್ರಸ್ ಅಧಿಕಾರಕ್ಕೆ ಬಂದಿದ್ದರು. ಹೀಗಾಗಿ ಪ್ರಧಾನಿ ಪಟ್ಟದ ಜವಾಬ್ದಾರಿ ಇವರಿಗೆ ಸುಲಭದ ಹಾದಿಯಾಗಿರಲಿಲ್ಲ. ಇನ್ನು ಆರ್ಥಿಕ ಸುಧಾರಣೆ ಸಾಧ್ಯವಾಗದ ಕಾರಣ ಲಿಜ್ ಟ್ರಸ್ ರಾಜೀನಾಮೆ ನೀಡಬೇಕಾಯಿತು. ಇದೀಗ ಹೊಸದಾಗಿ ಆಯ್ಕೆಯಾಗಿರುವ ರಿಷಿ ಸುನಕ್ ಮುಂದೆ ಕೂಡ ಬಹುದೊಡ್ಡ ಸವಾಲುಗಳು ಇವೆ.

Published by:Annappa Achari
First published: