Akshata Murthy: ನಾರಾಯಣ ಮೂರ್ತಿ ಪುತ್ರಿ ಅಕ್ಷತಾ ಅವರ ತೆರಿಗೆ ಪಾವತಿ ಬಗ್ಗೆ ಪ್ರಶ್ನೆಗಳು ಎದ್ದಿರುವುದು ಏಕೆ?

ಅಕ್ಷತಾ ಅವರ ವಾಕ್ತಾರೆ ಹೇಳುವ ಪ್ರಕಾರ, "ಶ್ರೀಮತಿ ಅಕ್ಷತಾ ಮೂರ್ತಿ ಅವರು ಭಾರತೀಯ ನಾಗರಿಕರಾಗಿದ್ದು ಭಾರತದ ಪಾಸ್ ಪೋರ್ಟ್ ಹೊಂದಿದ್ದಾರೆ. ಭಾರತವು ಏಕಕಾಲದಲ್ಲಿ ಒಬ್ಬ ನಾಗರಿಕ ಭಾರತದ ಜೊತೆ ಇನ್ನೊಂದು ದೇಶದ ನಾಗರಿಕತ್ವ ಹೊಂದಲು ಅನುಮತಿ ನೀಡುವುದಿಲ್ಲ" ಎಂದು ಹೇಳಿದ್ದಾರೆ.

ರಿಶಿ ಸುನಕ್​​, ಅಕ್ಷತಾ ಮೂರ್ತಿ

ರಿಶಿ ಸುನಕ್​​, ಅಕ್ಷತಾ ಮೂರ್ತಿ

 • Share this:
  ಭಾರತದ ದಿಗ್ಗಜ ಐಟಿ ಕಂಪನಿಯಾದ ಇನ್ಫೋಸಿಸ್ (Infosys) ಸಂಸ್ಥೆಯ ಸಂಸ್ಥಾಪಕರಾಗಿರುವ ನಾರಾಯಣ ಮೂರ್ತಿ (Narayana Murthy) ಅವರ ಮಗಳು ಹಾಗೂ ಸದ್ಯ ಯುಕೆಯ ಚಾನ್ಸಲರ್ ಆಗಿರುವ ರಿಶಿ ಸುನಕ್ (Rishi Sunak) ಅವರ ಪತ್ನಿಯಾದ ಅಕ್ಷತಾ ಮೂರ್ತಿ (Akshata Murthy) ಅವರು ಯುಕೆ ರಾಷ್ಟ್ರದ ತೆರಿಗೆ ನೀತಿಗೆ ಸಂಬಂಧಿಸಿದಂತೆ ವಾಸವಾಗಿರದ ಸ್ಥಾನಮಾನವನ್ನು ಹೊಂದಿರುವುದಾಗಿ ಇತ್ತೀಚೆಗೆ ಬಹಿರಂಗ ಪಡಿಸಿದ್ದಾರೆ. ಈ ನೀತಿಯ ಪ್ರಕಾರ, ಅಕ್ಷತಾ ಅವರು ಬ್ರಿಟೈನ್ ಆಚೆಯಿಂದ ಗಳಿಸುವ ಆದಾಯಕ್ಕೆ ಸಂಬಂಧಿಸಿದಂತೆ ಯುಕೆಗೆ ಯಾವುದೇ ಆದಾಯ ತೆರಿಗೆ ಕಟ್ಟಬೇಕಿಲ್ಲ. ಏತನ್ಮಧ್ಯೆ, ಅಕ್ಷತಾ ಅವರ ವಕ್ತಾರೆಯು ಇದಕ್ಕೆ ಸಂಬಂಧಿಸಿದಂತೆ ಅವರು ಯುಕೆನಲ್ಲಿ ಅವಶ್ಯಕವಾಗಿ ಕಟ್ಟಬೇಕಾಗಿರುವ ಎಲ್ಲ ತೆರಿಗೆಗಳನ್ನು ಕಾನೂನಾತ್ಮಕವಾಗಿ ಕಟ್ಟುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಲೇಬರ್ ಅವರು "ಇದು ದಿಗ್ಭ್ರಮೆಗೊಳಿಸುವಂತಿದೆ" ಬಹುಶಃ ಸುನಕ್ ಅವರ ಕುಟುಂಬವು ಯುಕೆ ರಾಷ್ಟ್ರದ ತೆರಿಗೆ ಕಡಿತದ ಯೋಜನೆಗಳ ಪ್ರಯೋಜನೆ ಪಡೆಯುತ್ತಿರಬಹುದು ಎಂದು ಅವರು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

  ತೆರಿಗೆಯಿಂದ ಎಷ್ಟು ಹಣ ಉಳಿಸಿದ್ದಾರೆ? 

  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಕೆಯ ಶಾಡೋ ಕ್ಯಾಬಿನೆಟ್ಟಿನ ಖಜಾನೆ ಸಚಿವರಾದ (ಪ್ರತಿಪಕ್ಷದಲ್ಲಿರುವ ಮಂತ್ರಿ ಸ್ಥಾನ ಹೊಂದಿರುವ ಸದಸ್ಯ) ತುಲಿಪ್ ಸಿದ್ದಿಕ್ ಅವರು ಈ ವಿಚಾರವನ್ನು ಎತ್ತಿದ್ದು ಯುಕೆಯಲ್ಲಿ ಕೆಲಸ ನಿರತ ಜನರಿಗೆ ಮಿಲಿಯನ್ ಗಟ್ಟಲೆ ತೆರಿಗೆ ಹಣ ಪಾವತಿಸುವಂತೆ ಮಾಡುವ ಮೂಲಕ ಸುನಕ್ ಹಾಗೂ ಅವರ ಕುಟುಂಬದವರು ಖುದ್ದಾಗಿ ಈ ಮೂಲಕ ಎಷ್ಟು ಹಣ ತೆರಿಗೆಯಿಂದ ಉಳಿಸಿದ್ದಾರೆಂದು ವಿವರಣೆ ನೀಡುವಂತೆ ಆಗ್ರಹಿಸಿದ್ದಾರೆ.

  ಇದನ್ನೂ ಓದಿ: ರಷ್ಯಾದಲ್ಲಿ Infosys ಮುಚ್ಚಲು ಒತ್ತಡ: ನಾರಾಯಣ ಮೂರ್ತಿ ಅಳಿಯನ ವಿರುದ್ಧ ಆರೋಪಗಳ ಸುರಿಮಳೆ..!

  ಈ ತೆರಿಗೆ ವಿಚಾರವು ಮೊದಲ ಬಾರಿಗೆ ಇಂಡಿಪೆಂಡೆಂಟ್ ಪತ್ರಿಕೆಯು ವರದಿ ಮಾಡಿದ್ದು ಇದು ನ್ಯಾಷನಲ್ ಇನ್ಶುರನ್ಸ್ ರೈಸ್ ಅನುಷ್ಠಾನಗೊಂಡ ದಿನವೇ ಹೊರಬಿದ್ದಿದೆ ಎಂದು ತಿಳಿದುಬಂದಿದೆ. ಈ ಮಧ್ಯೆ ಸರ್ಕಾರವು ಈ ಮೊತ್ತವು ಏನಿಲ್ಲವೆಂದರೂ 39 ಬಿಲಿಯನ್ ಪೌಂಡ್ ಗಳಾಗಿದ್ದು ಇದನ್ನು ಆರೋಗ್ಯ ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಬಹುದಾಗಿದೆ ಎಂದು ಹೇಳಿದೆ.

  ಏನಿದು ತೆರಿಗೆ ವಿವಾದ..? 

  ಈ ಮಧ್ಯೆ ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಶ್ರೀಮತಿ ಮೂರ್ತಿ ಅವರ ವಕ್ತಾರೆಯು "ಅಕ್ಷತಾ ಅವರನ್ನು ಯುಕೆ ಕಾನೂನಿನಡಿಯಲ್ಲಿ ಯುಕೆ ತೆರಿಗೆ ನೀತಿಗೆ ಸಂಬಂಧಿಸಿದಂತೆ ವಾಸವಿರದ ವ್ಯಕ್ತಿ ಎಂದು ಪರಿಗಣಿಸಲಾಗಿದೆ. ಅವರು ಈ ಹಿಂದೆ ಮತ್ತು ಮುಂದೆಯೂ ಕೂಡ ಯುಕೆನಲ್ಲಿ ಗಳಿಸುವ ಆದಾಯಕ್ಕೆ ತೆರಿಗೆ ಪಾವತಿಸುತ್ತಿರುತ್ತಾರೆ" ಎಂದು ಸ್ಪಷ್ಟೀಕರಣ ನೀಡಿದ್ದಾರೆಂದು ತಿಳಿದುಬಂದಿದೆ.

  ಬಿಬಿಸಿ ಮಾಧ್ಯಮಕ್ಕೆ ಸಿಕ್ಕಿರುವ ಮಾಹಿತಿಯಂತೆ ಅಕ್ಷತಾ ಮೂರ್ತಿ ಅವರು ವಿದೇಶದಲ್ಲಿ ಗಳಿಸುವ ಆದಾಯಕ್ಕೆ ವಿದೇಶಕ್ಕೆ ಸಂಬಂಧಿಸಿದ ತೆರಿಗೆ ಪಾವತಿಸುತ್ತಾರೆಂದು ತಿಳಿದುಬಂದಿದೆ. 1980 ರಲ್ಲಿ ಭಾರತದಲ್ಲಿ ಜನಿಸಿರುವ ಶ್ರೀಮತಿ ಮೂರ್ತಿ ಅವರು ಭಾರತದ ಪಾಸ್ ಪೋರ್ಟ್ ಅನ್ನು ಹೊಂದಿದ್ದು ಸದ್ಯ ಅವರು ಒಬ್ಬ ಫ್ಯಾಶನ್ ವಿನ್ಯಾಸಕಾರರಾಗಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

  ಇನ್ಫೋಸಿಸ್ ಸಂಸ್ಥೆಯಲ್ಲಿ ಷೇರುಗಳ ಒಡೆತನ

  ಅಕ್ಷತಾ ಅವರು ಸುನಕ್ ಅವರನ್ನು 2008 ರಲ್ಲಿ ಮದುವೆಯಾಗಿದ್ದಾರೆ ಹಾಗೂ ಅವರ ತಂದೆ ನಾರಾಯಣ ಮೂರ್ತಿ ಅವರು ಭಾರತದ ದಿಗ್ಗಜ ಐಟಿ ಕಂಪನಿಯಾದ ಇನ್ಫೋಸಿನ್ ಸಂಸ್ಥೆಯ ಸಂಸ್ಥಾಪಕರಾಗಿದ್ದು ಈಗ ಬಿಲಿಯನೇರ್‍ ಆಗಿ ಗುರುತಿಸಿಕೊಂಡಿದ್ದಾರೆ. ಬಲ್ಲ ಮೂಲಗಳ ಪ್ರಕಾರ, ಅಕ್ಷತಾ ಅವರು ಇನ್ಫೋಸಿಸ್ ಸಂಸ್ಥೆಯಲ್ಲಿ 1% ಗಿಂತಲೂ ಕಡಿಮೆಯ ಷೇರುಗಳ ಒಡೆತನ ಹೊಂದಿದ್ದು ಕಳೆದ ವರ್ಷ ಅದರ ಮೌಲ್ಯ 500 ಮಿಲಿಯನ್ ಪೌಂಡ್ ಎಂದು ಅಂದಾಜಿಸಲಾಗಿತ್ತು. ಇದಲ್ಲದೆ ಅಕ್ಷತಾ ಮೂರ್ತಿ ಅವರು ಹಲವು ಯುಕೆ ಕಂಪನಿಗಳಲ್ಲಿ ತಮ್ಮ ಆಸಕ್ತಿಯನ್ನು ಹೊಂದಿದ್ದಾರೆಂದು ತಿಳಿದುಬಂದಿದೆ.

  ಭಾರತದ ಪಾಸ್ ಪೋರ್ಟ್

  ಅಕ್ಷತಾ ಅವರ ವಾಕ್ತಾರೆ ಹೇಳುವ ಪ್ರಕಾರ, "ಶ್ರೀಮತಿ ಅಕ್ಷತಾ ಮೂರ್ತಿ ಅವರು ಭಾರತೀಯ ನಾಗರಿಕರಾಗಿದ್ದು ಭಾರತದ ಪಾಸ್ ಪೋರ್ಟ್ ಹೊಂದಿದ್ದಾರೆ. ಭಾರತವು ಏಕಕಾಲದಲ್ಲಿ ಒಬ್ಬ ನಾಗರಿಕ ಭಾರತದ ಜೊತೆ ಇನ್ನೊಂದು ದೇಶದ ನಾಗರಿಕತ್ವ ಹೊಂದಲು ಅನುಮತಿ ನೀಡುವುದಿಲ್ಲ" ಎಂದು ಹೇಳಿದ್ದಾರೆ. HMRC ಪ್ರಕಾರ, ಯುಕೆನಲ್ಲಿ ನಾಗರಿಕರು ತಾವು ಯುಕೆಯಲ್ಲಿ ವಾಸವಿರದ ವ್ಯಕ್ತಿಯ ಸ್ಥಾನಮಾನವಿರುವುದನ್ನು ನಂಬಿದರೆ ಅವರು ಸಕ್ರಿಯವಾಗಿ ಆ ಬಗ್ಗೆ ಉಲ್ಲೇಖಿಸುವುದನ್ನು ಪ್ರೋತ್ಸಾಹಿಸಲಾಗಿದೆ.

  ಇದನ್ನೂ ಓದಿ: Chinaದಲ್ಲಿ ಹೆಚ್ಚಾದ Covid​: ಸಂಗಾತಿಯನ್ನು ಅಪ್ಪಿಕೊಳ್ಳದಂತೆ, ಮುತ್ತಿಡದಂತೆ ಮನವಿ

  ಈ ಬಗ್ಗೆ ಸರ್ಕಾರಕ್ಕೆ ಇದನ್ನು ಪ್ರಶ್ನಿಸಿದಾಗ ಸರ್ಕಾರವು "ಅವರ ವಾಸವತ್ವವು ಒಂದು ಕಾನೂನಾತ್ಮಕ ವಿಶ್ಲೇಷಣೆಯಾಗಿದ್ದು ಅದನ್ನು ಅವರ ನಿರ್ದಿಷ್ಟ ಸಂದರ್ಭಗಳನುಸಾರ (ಹುಟ್ಟಿದ ಸ್ಥಳ) ಗುರುತಿಸಬೇಕಾಗಿರುತ್ತದೆ" ಎಂದು ಹೇಳಿದ್ದು ಈ ವಿಚಾರದಲ್ಲಿ ಅದು ವ್ಯಕ್ತಿಗಳ ವೈಯಕ್ತಿಕ ತೆರಿಗೆ ಸ್ಥಿತಿಗತಿಗಳ ಬಗ್ಗೆ ಪ್ರತಿಕ್ರಯಿಸಲು ಬಯಸುವುದಿಲ್ಲ ಎಂದು ಹೇಳಿದೆ.

  ಈ ಮುಂಚೆ ಸುನಕ್ ಅವರು 2018 ರಲ್ಲಿ ತಮ್ಮ ಕ್ಯಾಬಿನೆಟ್ ಮಾಡಿ ಮಂತ್ರಿಯಾದಾಗ ಅವರ ಸಂಪುಟ ಕಚೇರಿಯ ಗಮನಕ್ಕೆ ಅವರ ಪತ್ನಿಯ ತೆರಿಗೆ ಮಾಹಿತಿಯನ್ನು ತಮ್ಮ ಘೋಷಣಾ ಪತ್ರದ ಮೂಲಕ ತಂದಿದ್ದರೆಂದು ಹೇಳಲಾಗಿದೆ. ಈ ಬಗ್ಗೆ ಮುಂದೆ ತಲೆದೊರಬಹುದಾದ ಸಮಸ್ಯೆಗಳ ಬಗ್ಗೆ ಖಜಾನೆ ಪ್ರಾಧಿಕಾರಕ್ಕೂ ಮುಂಚಿತವಾಗಿಯೇ ಮಾಹಿತಿ ನೀಡಲಾಗಿತ್ತು ಎಂದು ವರದಿಯಾಗಿದೆ.
  Published by:Kavya V
  First published: