• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Viral Video: ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಲಂಡನ್ ನಲ್ಲಿ 'ಗೋ ಪೂಜೆ' ಮಾಡಿದ ರಿಷಿ ಸುನಕ್ ಮತ್ತು ಪತ್ನಿ ಅಕ್ಷತಾ ಮೂರ್ತಿ

Viral Video: ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಲಂಡನ್ ನಲ್ಲಿ 'ಗೋ ಪೂಜೆ' ಮಾಡಿದ ರಿಷಿ ಸುನಕ್ ಮತ್ತು ಪತ್ನಿ ಅಕ್ಷತಾ ಮೂರ್ತಿ

ಲಂಡನ್ ನಲ್ಲಿ 'ಗೋ ಪೂಜೆ' ಮಾಡಿದ ರಿಷಿ ಸುನಕ್ ಮತ್ತು ಪತ್ನಿ ಅಕ್ಷತಾ ಮೂರ್ತಿ

ಲಂಡನ್ ನಲ್ಲಿ 'ಗೋ ಪೂಜೆ' ಮಾಡಿದ ರಿಷಿ ಸುನಕ್ ಮತ್ತು ಪತ್ನಿ ಅಕ್ಷತಾ ಮೂರ್ತಿ

ಕೆಲವು ತಿಂಗಳುಗಳಿಂದ ಬ್ರಿಟನ್ ಪ್ರಧಾನಿ ಆಗುವ ರೇಸ್ ನಲ್ಲಿರುವ ರಿಷಿ ಸುನಕ್ ಅವರು ತುಂಬಾನೇ ಸುದ್ದಿಯಲ್ಲಿದ್ದಾರೆ. ಇವರ ಜೊತೆಗೆ ಇವರ ಹೆಂಡತಿ ಅಕ್ಷತಾ ಮೂರ್ತಿ ಅವರು ಸಹ ಅಷ್ಟೇ ಸುದ್ದಿ ಮಾಡಿದ್ದಾರೆ. ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯಾಗಿ ಬ್ರಿಟಿಷ್ ಪ್ರಧಾನಿ ರೇಸ್ ನಲ್ಲಿ ಫೈನಲಿಸ್ಟ್ ಆಗಿರುವ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಅವರ ಒಂದು ವಿಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಹರಿದಾಡುತ್ತಿದ್ದು, ನೆಟ್ಟಿಗರ ಗಮನವನ್ನು ಸೆಳೆಯುತ್ತಿದೆ.

ಮುಂದೆ ಓದಿ ...
  • Share this:

ಕಳೆದ ಕೆಲವು ತಿಂಗಳುಗಳಿಂದ ನಮಗೆಲ್ಲಾ ರಿಷಿ ಸುನಕ್ (Rishi Sunak) ಎಂಬ ಹೆಸರು ತುಂಬಾನೇ ಕೇಳಿ ಬರುತ್ತಿದೆ. ಹೌದು, ಕೆಲವು ತಿಂಗಳುಗಳಿಂದ ಬ್ರಿಟನ್ ಪ್ರಧಾನಿ (British Prime Minister) ಆಗುವ ರೇಸ್ ನಲ್ಲಿರುವ ರಿಷಿ ಸುನಕ್ ಅವರು ತುಂಬಾನೇ ಸುದ್ದಿಯಲ್ಲಿದ್ದಾರೆ. ಇವರ ಜೊತೆಗೆ ಇವರ ಹೆಂಡತಿ ಅಕ್ಷತಾ ಮೂರ್ತಿ (Akshata Murthy) ಅವರು ಸಹ ಅಷ್ಟೇ ಸುದ್ದಿ ಮಾಡಿದ್ದಾರೆ. ಬೋರಿಸ್ ಜಾನ್ಸನ್ (Boris Johnson) ಅವರ ಉತ್ತರಾಧಿಕಾರಿಯಾಗಿ ಬ್ರಿಟಿಷ್ ಪ್ರಧಾನಿ ರೇಸ್ ನಲ್ಲಿ ಫೈನಲಿಸ್ಟ್ ಆಗಿರುವ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಅವರ ಒಂದು ವಿಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಹರಿದಾಡುತ್ತಿದ್ದು, ನೆಟ್ಟಿಗರ ಗಮನವನ್ನು ಸೆಳೆಯುತ್ತಿದೆ.


ಲಂಡನ್ ನಲ್ಲಿ ‘ಗೋ ಪೂಜೆ’ ಮಾಡಿದ ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ
ಅಂತಹದ್ದೇನಿದೆ ಆ ವಿಡಿಯೋದಲ್ಲಿ ಅಂತ ನಿಮಗೆ ತಿಳಿದುಕೊಳ್ಳಲು ಕುತೂಹಲ ಜಾಸ್ತಿ ಆಗಿರಬೇಕಲ್ಲವೇ? ವಿಡಿಯೋದಲ್ಲಿ ಕನ್ಸರ್ವೇಟಿವ್ ಪಕ್ಷದ ಸದಸ್ಯರು ಲಂಡನ್ ನಲ್ಲಿ ‘ಗೋ ಪೂಜೆ’ ಮಾಡುತ್ತಿರುವುದನ್ನು ನಾವು ನೋಡಬಹುದು. ಎನ್.ಆರ್.ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರೊಂದಿಗೆ 42 ವರ್ಷದ ರಿಷಿ ಸುನಕ್ ಅವರು ಹಸುವಿನ ಆವರಣಕ್ಕೆ ಭೇಟಿ ನೀಡಿದಾಗ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ವಿಡಿಯೋದಲ್ಲಿ, ಈ ದಂಪತಿಗಳು ಈ ಸಂದರ್ಭದಲ್ಲಿ ಒಂದು ಹಸುವಿನ ಪಕ್ಕದಲ್ಲಿ ನಿಂತಿರುವುದನ್ನು ಕಾಣಬಹುದು.


ವೈರಲ್ ವಿಡಿಯೋದಲ್ಲಿ ಏನಿದೆ?
ವಿಡಿಯೋದ ಆರಂಭದಲ್ಲಿ, ರಿಷಿ ಸುನಕ್ ಅವರು ಪವಿತ್ರ ನೀರನ್ನು ಅರ್ಪಿಸಿದ ನಂತರ ಕೈಯಲ್ಲಿ ಹಿತ್ತಾಳೆ ಪಾತ್ರೆಯೊಂದಿಗೆ ಎದ್ದೇಳುವುದನ್ನು ಕಾಣಬಹುದು. ದಂಪತಿಗಳ ಸುತ್ತಲಿನ ಪುರೋಹಿತರು ನಂತರ ಮುಂದಿನ ಆಚರಣೆಯ ಬಗ್ಗೆ ಅವರಿಗೆ ಹೇಳುತ್ತಾರೆ. ವಿಡಿಯೋ ಮುಂದುವರೆದಂತೆ, ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಇಬ್ಬರೂ ಹಸುವಿಗೆ ಆರತಿಯನ್ನು ಮಾಡುತ್ತಿರುವುದು ನಾವು ಈ 1 ನಿಮಿಷ 38 ಸೆಕೆಂಡಿನ ಅವಧಿಯ ವಿಡಿಯೋದಲ್ಲಿ ನೋಡಬಹುದು.


ಶ್ರೀ ಕೃಷ್ಣನ ಆಶೀರ್ವಾದ ಪಡೆಯಲು ಭಕ್ತಿವೇದಾಂತ ದೇವಸ್ಥಾನಕ್ಕೆ ಭೇಟಿ
ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲು ಮತ್ತು ಶ್ರೀ ಕೃಷ್ಣನ ಆಶೀರ್ವಾದ ಪಡೆಯಲು ಸುನಕ್ ಅವರು ಲಂಡನ್ ನ ಹೊರವಲಯದಲ್ಲಿರುವ ಭಕ್ತಿವೇದಾಂತ ದೇವಸ್ಥಾನಕ್ಕೆ ಭೇಟಿ ನೀಡಿದ ಕೆಲವು ದಿನಗಳ ನಂತರ ಈ ಗೋ ಪೂಜೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಲು ಶುರು ಮಾಡಿದೆ.


ಇದನ್ನೂ ಓದಿ:  United Nations: ವಿಶ್ವಸಂಸ್ಥೆಯಲ್ಲಿ ಇದೇ ಮೊದಲ ಬಾರಿ ರಷ್ಯಾ ವಿರುದ್ಧ ಮತ ಚಲಾಯಿಸಿದ ಭಾರತ, ಕಾರಣವೇನು?


ಸುನಕ್ ಅವರು ಭಗವದ್ಗೀತೆಯ ಬಗ್ಗೆ ಮತ್ತು ಅದು ಅವರಿಗೆ ಹೇಗೆ ಶಕ್ತಿಯನ್ನು ನೀಡುತ್ತದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ ಎಂದು ಭಕ್ತಿವೇದಾಂತ ದೇವಸ್ಥಾನದವರು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ತಿಳಿಸಿದೆ. ರಿಷಿ ಅವರು ತಮ್ಮ ಭೇಟಿಯ ಕೆಲವು ಫೋಟೋಗಳನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗೆ ಸುಮಾರು 27,000ಕ್ಕೂ ಹೆಚ್ಚು ಲೈಕ್ ಗಳು ಸಹ ಲಭಿಸಿವೆ.


ಈ ಹಿಂದೆ ದೀಪಾವಳಿ ಹಬ್ಬವನ್ನೂ ಇದೆ ರೀತಿ ಆಚರಣೆ ಮಾಡಿದ್ರಂತೆ ರಿಷಿ
ಸುನಕ್ ಅವರು 2020 ರ ನವೆಂಬರ್ ತಿಂಗಳಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದ ನಂತರ ಯುಕೆಯಲ್ಲಿ ವಾಸಿಸುವ ಭಾರತೀಯರಿಂದ ತುಂಬಾನೇ ಪ್ರಶಂಸೆಗೆ ಪಾತ್ರರಾಗಿದ್ದರು. 11 ಡೌನಿಂಗ್ ಸ್ಟ್ರೀಟ್ ನಲ್ಲಿರುವ ಚಾನ್ಸಲರ್ ಅವರ ಅಧಿಕೃತ ನಿವಾಸದ ಮುಂಭಾಗದ ಮೆಟ್ಟಿಲಿನಲ್ಲಿ ತೈಲ ದೀಪಗಳನ್ನು ಬೆಳಗಿಸುವ ಮೂಲಕ ಅವರು ದೀಪಾವಳಿ ಹಬ್ಬದ ಆಚರಣೆ ಶುರು ಮಾಡಿದ್ದರು. ಅದೇ ಸಮಯದಲ್ಲಿ ಇವರು ಇಂಗ್ಲೆಂಡ್ ನ ಜನತೆಗೆ ಕೋವಿಡ್ ಲಾಕ್ಡೌನ್ ನಿಬಂಧನೆಗಳನ್ನು ಪಾಲಿಸುವಂತೆ ಮನವಿ ಸಹ ಮಾಡಿಕೊಂಡಿದ್ದರು.


ಇದನ್ನೂ ಓದಿ:  Texas Racist Attack: ನೀವು ಭಾರತೀಯರು ಎಲ್ಲೆಡೆ ಇದ್ದೀರಿ: ಟೆಕ್ಸಾಸ್‌ನಲ್ಲಿ ಭೀಕರ ಜನಾಂಗೀಯ ದಾಳಿ!


ಯಾರ್ಕ್ಷೈರ್ ನ ರಿಚ್ಮಂಡ್ ನಿಂದ ಮೂರನೇ ಬಾರಿಗೆ ಪುನರಾಯ್ಕೆಯಾದಾಗ ಸುನಕ್ ಅವರು ಭಗವದ್ಗೀತೆಯನ್ನು ಹಿಡಿದುಕೊಂಡು ಯುಕೆ ಸಂಸತ್ತಿನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

top videos
    First published: