Rishi Shiv Prasanna: ಪಿಎಂ ಮೋದಿಯಿಂದ ಪ್ರಶಸ್ತಿ ಪಡೆದ ಮೈಸೂರು ಮೂಲದ 8 ವರ್ಷದ ಬಾಲಕ!

ಪ್ರಶಸ್ತಿ ಪಡೆಯುತ್ತಿರುವ ದೃಶ್ಯ

ಪ್ರಶಸ್ತಿ ಪಡೆಯುತ್ತಿರುವ ದೃಶ್ಯ

ಮೂಲತಃ ಮೈಸೂರು ಜಿಲ್ಲೆಯ ನಂಜನಗೂಡಿನವರಾದ ರಿಷಿ ಪ್ರಸ್ತುತ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಪೋಷಕರಾದ ಪ್ರಸನ್ನ ಕುಮಾರ್ ಎಂ ಮತ್ತು ರೇಚೇಶ್ವರಿ ಅವರೊಂದಿಗೆ ವಾಸಿಸುತ್ತಿದ್ದಾರೆ.

  • News18 Kannada
  • 3-MIN READ
  • Last Updated :
  • Delhi, India
  • Share this:

ದೆಹಲಿ: ಈಗಿನ ಮಕ್ಕಳಿಗೆ ಎಷ್ಟೋ ವಿಚಾರಗಳನ್ನು ಪೋಷಕರು ಹೇಳಿಕೊಡುವ ಮುಂಚೆಯೇ ಕಲಿತುಕೊಂಡು ಬಿಟ್ಟಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇಲ್ಲಿಯೂ ಸಹ ಒಬ್ಬ ಪುಟ್ಟ ಬಾಲಕನಿದ್ದಾನೆ, ಅವನು ಚಿಕ್ಕ ವಯಸ್ಸಿನಲ್ಲಿಯೇ (Success Story)  ಏನೆಲ್ಲಾ ಮಾಡಿದ್ದಾನೆ ಅಂತ ಕೇಳಿದರೆ ಆಶ್ಚರ್ಯ ಪಡುವುದು ಗ್ಯಾರೆಂಟಿ. ಕಳೆದ ವಾರದವರೆಗೂ ಬೆಂಗಳೂರಿನ 8 ವರ್ಷದ ರಿಷಿ ಶಿವ ಪ್ರಸನ್ನ (Rishi Shiv Prasanna) ಯಾರಿಗೂ ಗೊತ್ತಿರಲಿಲ್ಲ, ಆದರೆ ಈಗ ಆಂಡ್ರಾಯ್ಡ್ ಅಪ್ಲಿಕೇಶನ್ ಡೆವಲಪರ್ ಆವಿಷ್ಕಾರಕ್ಕಾಗಿ ಪ್ರತಿಷ್ಠಿತ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (PM National Bal Puraskar) ಪ್ರಶಸ್ತಿಯನ್ನು ಪಡೆದ ನಂತರ ಇಡೀ ರಾಷ್ಟ್ರಕ್ಕೆ ಪರಿಚಿತರಾಗಿದ್ದಾರೆ ಅಂತ ಹೇಳಬಹುದು.


ಮೊಬೈಲ್ ಅಪ್ಲಿಕೇಶನ್ ಡೆವಲಪರ್ ಮತ್ತು ಲೇಖಕ ಈ 8 ವರ್ಷದ ಬಾಲಕ. ಹೆಚ್ಚಿನ ಐಕ್ಯೂ ಹೊಂದಿರುವ ಮೆನ್ಸಾ ಇಂಟರ್ನ್ಯಾಷನಲ್ ಕಿರಿಯ ಸದಸ್ಯರಾಗಿರುವ ರಿಷಿ, ಉತ್ಸಾಹಿ ಯೂಟ್ಯೂಬರ್ ಕೂಡ ಆಗಿದ್ದಾರೆ. ಅವರು ವಿಜ್ಞಾನಕ್ಕೆ ಸಂಬಂಧಿಸಿದ ಶೈಕ್ಷಣಿಕ ವೀಡಿಯೋಗಳನ್ನು ಸಹ ಪೋಸ್ಟ್ ಮಾಡುತ್ತಾರೆ.


ಈ ಬಾಲಕನ ಸಾಧನೆ ನೋಡಿ
ಮಕ್ಕಳಿಗಾಗಿ 'ಐಕ್ಯೂ ಟೆಸ್ಟ್ ಆ್ಯಪ್', 'ವಿಶ್ವದ ದೇಶಗಳು' ಮತ್ತು 'ಕೋವಿಡ್ ಸಹಾಯವಾಣಿ ಬೆಂಗಳೂರು' ಎಂಬ ಮೂರು ಮೊಬೈಲ್ ಅಪ್ಲಿಕೇಶನ್​ಗಳನ್ನು ರಿಷಿ ಅಭಿವೃದ್ಧಿಪಡಿಸಿದ್ದಾರೆ. ಈಗಾಗಲೇ ಎರಡು ಪುಸ್ತಕಗಳನ್ನು ಬರೆದಿರುವ ರಿಷಿ ಈಗ ಮತ್ತೊಂದು ಪುಸ್ತಕವನ್ನು ಪೂರ್ಣಗೊಳಿಸಲು ಯೋಜಿಸುತ್ತಿದ್ದಾರೆ.


ಇದನ್ನೂ ಓದಿ: Narendra Modi-C Voter: ಈಗ ಚುನಾವಣೆ ನಡೆದ್ರೆ ಮೋದಿಯೇ ಪ್ರಧಾನಿ! ಸಿ ವೋಟರ್ ಸಮೀಕ್ಷೆ ಹೇಳಿದ್ದೇನು?


ಮೂಲತಃ ಮೈಸೂರು ಜಿಲ್ಲೆಯ ನಂಜನಗೂಡಿನವರಾದ ರಿಷಿ ಪ್ರಸ್ತುತ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಪೋಷಕರಾದ ಪ್ರಸನ್ನ ಕುಮಾರ್ ಎಂ ಮತ್ತು ರೇಚೇಶ್ವರಿ ಅವರೊಂದಿಗೆ ವಾಸಿಸುತ್ತಿದ್ದಾರೆ. ಪ್ರಸನ್ನ ಬೆಂಗಳೂರಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದು, ರೇಚೇಶ್ವರಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.


ನರ್ಸರಿಯಲ್ಲಿಯೇ ರಿಷಿ ಅವರ ಬುದ್ದಿವಂತಿಕೆಯನ್ನ ಗುರುತಿಸಿದ ಶಿಕ್ಷಕರು
ನರ್ಸರಿಯಲ್ಲಿ ಓದಬೇಕಾದರೆ, ರಿಷಿ ಅವರ ಶಿಕ್ಷಕರು ಅವರ ತಿಳುವಳಿಕೆ ಮತ್ತು ಗ್ರಹಿಸುವ ಕೌಶಲ್ಯಗಳ ವಿಷಯದಲ್ಲಿ ಅವರು ತುಂಬಾನೇ ಮುಂದಿದ್ದಾರೆ ಎಂದು ಗುರುತಿಸಿದರು. ತಮ್ಮ ಮೂರನೆಯ ವಯಸ್ಸಿನಲ್ಲಿ, ಅವರ ವಯಸ್ಸಿನ ಮಕ್ಕಳು ವರ್ಣಮಾಲೆ ಮತ್ತು ಸಂಖ್ಯೆಗಳನ್ನು ಕಲಿಯಲು ಪ್ರಾರಂಭಿಸಿದಾಗ ಅವರು ಸೌರವ್ಯೂಹ, ಗ್ರಹಗಳು ಮತ್ತು ಬ್ರಹ್ಮಾಂಡದ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ವಿಜ್ಞಾನದಿಂದ, ಅವರು ತಂತ್ರಜ್ಞಾನದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು ಮತ್ತು ಐದು ವರ್ಷದ ಹೊತ್ತಿಗೆ, ಅವರು ಕೋಡಿಂಗ್ ಸಹ ಕಲಿತರು.


ಪ್ರಧಾನಿ ಮೋದಿಯವರನ್ನ ಭೇಟಿ ಮಾಡಿದ ರಿಷಿ
ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲು ನನಗೆ ಗೌರವ ಸಿಕ್ಕಿದೆ ಎಂದು ರಿಷಿ ಸುದ್ದಿ ಮಾಧ್ಯಮಕ್ಕೆ ತಿಳಿಸಿದರು. "ನಾನು ವಿನ್ಯಾಸಗೊಳಿಸಿದ ಅಪ್ಲಿಕೇಶನ್ ಗಳು ಮತ್ತು ಅವುಗಳ ಉಪಯೋಗಗಳ ಬಗ್ಗೆ ಪ್ರಧಾನಿ ನನ್ನನ್ನು ಕೇಳಿದರು. ನಾನು ಅವರಿಗೆ ಅಪ್ಲಿಕೇಶನ್ ಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದೆ.  ಆಲೋಚನೆಗಳು ಮತ್ತು ಆವಿಷ್ಕಾರಗಳನ್ನು ಕಾರ್ಯಗತಗೊಳಿಸಲು ಅವರ ಸಹಾಯವನ್ನು ಕೇಳಿದೆ. ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು" ಎಂದು ರಿಷಿ ಹೇಳಿದರು.


ತನ್ನಂತೆ ಐಕ್ಯೂ ಮಟ್ಟವನ್ನು ಹೊಂದಿರದವರ ಬಗ್ಗೆ ಏನಂತಾರೆ ರಿಷಿ?
ಅವರಂತೆ ಐಕ್ಯೂ ಮಟ್ಟವನ್ನು ಹೊಂದಿರದ ಇತರರ ಬಗ್ಗೆ ಕೇಳಿದಾಗ, ರಿಷಿ "ಪ್ರತಿಯೊಬ್ಬರೂ ಒಂದಲ್ಲ ಒಂದು ಸಾಮರ್ಥ್ಯವನ್ನು ಹೊಂದಿರುತ್ತಾರೆ. ಒಬ್ಬರು ಅದನ್ನು ಕಂಡುಕೊಳ್ಳಬೇಕು ಮತ್ತು ಅವರ ಸಾಮರ್ಥ್ಯವನ್ನು ಪ್ರೋತ್ಸಾಹಿಸಬೇಕಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: Pakistan: ಆರ್ಥಿಕ ಹಿಂಜರಿತದಲ್ಲಿರುವ ಪಾಕಿಸ್ತಾನಕ್ಕೆ ಹೊಸ ಕಂಟಕ, ನಿಗೂಢ ಕಾಯಿಲೆಯಿಂದ ಹಲವರು ಸಾವು!


ಸ್ನೇಹಿತರು ಮತ್ತು ಹಿತೈಷಿಗಳು ರಿಷಿಯನ್ನು ಉನ್ನತ ತರಗತಿಗಳಿಗೆ ಸೇರಿಸುವಂತೆ ಪೋಷಕರಿಗೆ ಸಲಹೆ ನೀಡಿದ್ದರೂ, ಪ್ರಸನ್ನ ಕುಮಾರ್ ಮತ್ತು ಅವರ ಪತ್ನಿ ತಮ್ಮ ಮಗನ ಬಾಲ್ಯವು ತುಂಬಾ ಸ್ವಾಭಾವಿಕವಾಗಿರಬೇಕು ಎಂದು ನಿರ್ದಿಷ್ಟವಾಗಿ ಹೇಳುತ್ತಾರೆ. "ತನ್ನ ವಯಸ್ಸಿನ ಮಕ್ಕಳನ್ನು ಸಹಪಾಠಿಗಳಾಗಿ ತೊಡಗಿಸಿಕೊಳ್ಳುವುದು ಅವನಿಗೆ ಬಹಳ ನಿರ್ಣಾಯಕವಾಗಿದೆ. ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದರು.

Published by:ಗುರುಗಣೇಶ ಡಬ್ಗುಳಿ
First published: