ನವದೆಹಲಿ (ಮಾ. 20): ಇತ್ತೀಚೆಗೆ ಉತ್ತರಾಖಂಡದ ಮುಖ್ಯಮಂತ್ರಿ ತೀರತ್ ಸಿಂಗ್ ರಾವತ್ ಅವರು ಹರಿದ ಜೀನ್ಸ್ ಬಟ್ಟೆಯ ಫ್ಯಾಷನ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ದೊಡ್ಡ ಸುದ್ದಿಯಾಯಿತು. ಡೆಹ್ರಾಡೂನ್‌ನಲ್ಲಿ ಮಂಗಳವಾರ ಉತ್ತರಾಖಂಡ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ ಆಯೋಜಿಸಿದ್ದ ಮಾದಕವಸ್ತು ವಿರೋಧಿ ಕಾರ್ಯಾಗಾರದಲ್ಲಿ ಮಾತನಾಡಿದ ರಾವತ್, ಹರಿದ ಜೀನ್ಸ್ ಉಡುಗೆಯು ಪೋಷಕರು ರೂಪಿಸಿರುವ ‘ಕೆಟ್ಟ ಉದಾಹರಣೆಗಳು’ ಎಂದು ಹೇಳಿದ್ದರು. ಪಾಶ್ಚಾತ್ಯ ದೇಶಗಳು ನಮ್ಮ ಯೋಗ ಸಂಪ್ರದಾಯಕ್ಕೆ ಪ್ರಭಾವಗೊಂಡು ಅನುಸರಿಸುತ್ತಿರುವಾಗ ನಮ್ಮ ಜನರು ಭಾರತವನ್ನು ತುಂಡುಡುಗೆ ಧರಿಸಿಕೊಂಡು "ಕತ್ತರಿ ಸಂಸ್ಕಾರ" ದ ಮೂಲಕ "ನಗ್ನತೆ" ಯ ಕಡೆಗೆ ಕೊಂಡುಯ್ಯುತ್ತಿದ್ದಾರೆ ಎಂದು ರಾವತ್ ಬೇಸರ ವ್ಯಕ್ತಪಡಿಸಿದ್ದರು.
ಹರಿದುಹೋದ ಅಥವಾ ಪದರು ಪದರಾದ ಕಟ್ಸ್ ಹೊಂದಿರುವ ಜೀನ್ಸ್ ಉಡುಗೆಗಳು ಯುವತಿಯರ ನೆಚ್ಚಿನ ಫ್ಯಾಷನ್ ಆಗಿದೆ. ಸೆಲೆಬ್ರಿಟಿಗಳು ಕೂಡ ಸೀಳಿರುವ ಜೀನ್ಸ್ ಹೆಚ್ಚಾಗಿ ಇಷ್ಟಪಡುತ್ತಾರೆ.
ಜೀನ್ಸ್ ಅನ್ನು ಮೊದಲ ಬಾರಿಗೆ 1870ರ ಉತ್ತರಾರ್ಧದಲ್ಲಿ ಜರ್ಮನ್ ಉದ್ಯಮಿ ಲೋಯೆಬ್ ಸ್ಟ್ರಾಸ್ ವಿನ್ಯಾಸಗೊಳಿಸಿದರು. ಇದನ್ನು ಕೆಲವು ವರ್ಷಗಳಲ್ಲಿ ಇದಕ್ಕೆ ಮರುವಿನ್ಯಾಸಗೊಳಿಸಲಾಯಿತು. ಪ್ಯಾಂಟ್ ಅನ್ನು ಮೂಲಭೂತವಾಗಿ ಕಾರ್ಮಿಕ ವರ್ಗದ ಪುರುಷರಿಗಾಗಿ ವಿನ್ಯಾಸಗೊಳಿಸಲಾಗಿತ್ತು. ಅದರ ಬಾಳಿಕೆ ಮತ್ತು ಆಳವಾದ ಇಂಡಿಗೊ ಬಣ್ಣವನ್ನು ನೀಡಲಾಗಿತ್ತು. ಇದರ ಹೆಚ್ಚಿನ ಸಮಯದವರಿಗೆ ಬಾಳಿಕೆ ಬರುವ ದೃಷ್ಟಿಯಿಂದ ಕಾರ್ಮಿಕ ವರ್ಗದವರಿಗಾಗಿಯೇ ತಯಾರಿಸಲಾಗಿತ್ತು.
ಆದಾಗ್ಯೂ, 70ರ ದಶಕದಲ್ಲಿ ಸಾಮಾಜಿಕ ಚಳವಳಿಯ ಭಾಗವಾಗಿ ‘ಸೀಳಿರುವ’ ಪ್ರವೃತ್ತಿ ಪ್ರಚಲಿತಗೊಂಡಿತು. ಜೀನ್ಸ್ ಮೇಲಿನ ಪದರು ಪದರಾಗಿ ಹರಿದುಕೊಂಡು ಸಮಾಜದ ಮೇಲಿನ ಕೋಪದ ಸಂಕೇತವಾಗಿ ಮಾಡಲಾಯಿತು. ಇದನ್ನು ರಾಜಕೀಯ ಚಳುವಳಿಯಾಗಿ ನೋಡಲಾಗುತ್ತಿತ್ತು. ನಂತರ ಈ ಹರಿದ ಜೀನ್ಸ್ ಪ್ರತೃತ್ತಿಯನ್ನು ಮಡೋನಾ ಅವರು ಜನಪ್ರಿಯಗೊಳಿಸಿದರು ಮತ್ತು ಶೀಘ್ರದಲ್ಲೇ ಅಭಿಮಾನಿಗಳು ಈ ಪ್ರವೃತ್ತಿಯನ್ನು ಅನುಸರಿಸಲು ಪ್ರಾರಂಭಿಸಿದರು. ಆದ್ದರಿಂದ, ಕೋಪ ಮತ್ತು ಪ್ರತಿಭಟನೆಯ ರಾಜಕೀಯ ಅಭಿವ್ಯಕ್ತಿಯು, ಫ್ಯಾಷನ್ ಪ್ರವೃತ್ತಿಯಾಗಿ ಬದಲಾಯಿತು. ಆರಂಭದಲ್ಲಿ, ಅಭಿಮಾನಿಗಳು ಮತ್ತು ಅನುಯಾಯಿಗಳು ತಮ್ಮ ಜೀನ್ಸ್ ಅನ್ನು ಮನೆಯಲ್ಲಿಯೇ ಕಿತ್ತುಹಾಕಿದರು. ಆದರೆ ಶೀಘ್ರದಲ್ಲೇ ಡೆನಿಮ್ ಕಂಪನಿಗಳು ಈ ಪ್ರವೃತ್ತಿಯನ್ನು ವ್ಯಾಪಾರೀಕರಿಸಿದವು ಮತ್ತು ತಮ್ಮ ಗ್ರಾಹಕ ವಸ್ತುಗಳ ಭಾಗವಾಗಿ ‘ಹರಿದ ಜೀನ್ಸ್’ ಅನ್ನು ಮಾರುಕಟ್ಟೆಗೆ ಪರಿಚಯಿಸಿದವು.
ಇದನ್ನೂ ಓದಿ: Tirath Singh Rawat | ಹರಿದ ಜೀನ್ಸ್ ಧರಿಸಿ, ದೇಹ ಪ್ರದರ್ಶಿಸುವುದು ಯಾವ ಸಂಸ್ಕೃತಿ?; ಉತ್ತರಾಖಂಡ ಸಿಎಂ ತೀರತ್ ಸಿಂಗ್ ಅಸಮಾಧಾನ
ಕಾಲಾನಂತರ ಜೀನ್ಸ್ ನಲ್ಲಿ ಮತ್ತೆ ಫ್ಯಾಷನ್ ಬದಲಾಯಿತು. ಮಂಕಿ ವಾಶ್, ಬೂಟ್‌ಕಟ್, ಡಬಲ್-ಶೇಡೆಡ್ ಜೀನ್ಸ್ ಇತ್ಯಾದಿಗಳು 2010ರವರೆಗೆ ಮಾರುಕಟ್ಟೆಗೆ ಲಗ್ಗೆಯಿಟ್ಟವು. ಇದಾದ ನಂತರ ಮತ್ತೆ ಹರಿದ/ಸೀಳಿದ ಜೀನ್ಸ್ ಉಡುಗೆಗಳು ಮತ್ತೆ ಮಾರುಕಟ್ಟೆಗೆ ಬಂದವು. ಡೀಸೆಲ್ ಮತ್ತು ಬಾಲ್ಮೈನ್‌ನಂತಹ ಬ್ರಾಂಡ್‌ಗಳು ಹರಿದ ಜೀನ್ಸ್ ಉಡುಗೆಯನ್ನು ಪ್ರಚಾರಗೊಳಿಸಿದವು. ಕೆಲವು ಅಪವಾದಗಳನ್ನು ಗ್ರಾಹಕರಿಂದ ಎದುರಿಸಿದ ಪರಿಣಾಮ ನಂತರ ಡೆನಿಮ್ ಬ್ರ್ಯಾಂಡ್ ಎಂದು ಮರುನಾಮಕರಣ ಮಾಡಲಾಯಿತು.
ಮಾರುಕಟ್ಟೆಯಲ್ಲಿ ಹರಿಯದೇ ಇರುವ ಜೀನ್ಸ್ ಉಡುಗೆಗೆ ಕಡಿಮೆ ಬೆಲೆಯಿದ್ದು. ಹರಿದ ಜೀನ್ಸ್ ಗೆ ಹೆಚ್ಚಿನ ಬೆಲೆ ನಿಗದಿಪಡಿಸಿರುತ್ತಾರೆ. ಆಶ್ಚರ್ಯವೆಂಬತೆ ಯುವ ಜನಾಂಗವು ಹರಿದ ಜೀನ್ಸ್ ಗೆ ಹೆಚ್ಚಿನ ಹಣವನ್ನು ಕೊಟ್ಟು ಕೊಂಡುಕೊಳ್ಳುತ್ತಾರೆ. ಮೊದಲು ಡೆನಿಮ್ ಬಟ್ಟೆ ಹಗುರವಾಗಿತ್ತು. ಆದರೆ ಈಗ ದಪ್ಪ ಮತ್ತು ಗಟ್ಟಿಯಾದ ಬಟ್ಟೆಯಾಗಿ ಮಾರ್ಪಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ