ಶಬರಿಮಲೆ ದೇವಾಲಯ ಪ್ರವೇಶಿಸಿದ ಮಹಿಳೆಯರನ್ನು ಎರಡು ತುಂಡಾಗಿ ಸೀಳಬೇಕು; ಮಲಯಾಳಂ ನಟ ಕೊಲ್ಲಂ ತುಳಸಿ

Seema.R | news18
Updated:October 12, 2018, 6:19 PM IST
ಶಬರಿಮಲೆ ದೇವಾಲಯ ಪ್ರವೇಶಿಸಿದ ಮಹಿಳೆಯರನ್ನು ಎರಡು ತುಂಡಾಗಿ ಸೀಳಬೇಕು; ಮಲಯಾಳಂ ನಟ ಕೊಲ್ಲಂ ತುಳಸಿ
Seema.R | news18
Updated: October 12, 2018, 6:19 PM IST
ನ್ಯೂಸ್​ 18 ಕನ್ನಡ

ನವದೆಹಲಿ (ಅ.12): ಶಬರಿಮಲೆ ದೇವಾಲಯಕ್ಕೆ ಪ್ರವೇಶಿಸುವ ಮಹಿಳೆಯರನ್ನು ಎರಡು ಭಾಗವಾಗಿ ಸೀಳಬೇಕು ಎಂದು ಮಲಯಾಳಂ ನಟ ಕೊಲ್ಲಂ ತುಳಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕೊಲ್ಲಂನ ಚವರ ಎಂಬಲ್ಲಿ ನಡೆದ ಶಬರಿಮಲೆ ವಿಶ್ವಾಸ ಸಂರಕ್ಷಣಾ ಜಾಥಾದಲ್ಲಿ ಮಾತನಾಡಿದ ಅವರು, ಮಹಿಳೆಯ ದೇಹದ ಒಂದು ಭಾಗವನ್ನು ದೆಹಲಿಗೆ ಮತ್ತೊಂದು ಭಾಗವನ್ನು ತಿರುವನಂತಪುರದ ಮುಖ್ಯಮಂತ್ರಿ ಪಿಣರಾಯಿ ಕಚೇರಿಗೆ ಕಳುಹಿಸಬೇಕು ಎಂದು ಆಕ್ರೋಶಭರಿತ ಮಾತು ಆಡಿದ್ದಾರೆ.

ಮಲಯಾಳಂನಲ್ಲಿ ವಿಲನ್​ ಪಾತ್ರಗಳ ಮೂಲಕ ಕೊಲ್ಲಂಲಜನ  ಪರಿಚಿತರಾಗಿದ್ದಾರೆ.

ವಿಶ್ವಪ್ರಸಿದ್ಧ ಶಬರಿಮಲೆ ದೇವಸ್ಥಾನದ ಪ್ರವೇಶಕ್ಕೆ ಮಹಿಳೆಯರಿಗೆ ನಿರ್ಬಂಧ ಹೇರುವಂತಿಲ್ಲ. 10ರಿಂದ 50 ವರ್ಷದೊಳಗಿನ ಮಹಿಳೆಯರು ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶ ಮಾಡಬಹುದು ಎಂದು ಸುಪ್ರೀಂ ಕೋರ್ಟ್​  ಐತಿಹಾಸಿಕ ತೀರ್ಪು ನೀಡಿತ್ತು. ಈ ತೀರ್ಪಿಗೆ ದೇವಾಲಯದ ಆಡಳಿತ ಸೇರಿದಂತೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಕೇರಳದಾದ್ಯಂತ ಪ್ರತಿಭಟನೆ ಕೂಡ ವ್ಯಕ್ತವಾಗಿತ್ತು.  ಅಲ್ಲದೇ ಈ ರೀತಪಿಗೆ ಮರುಪರಿಶೀಲನಾ ಅರ್ಜಿಯನ್ನು ಕೂಡ ಸಲ್ಲಿಸಲಾಗಿತ್ತು. ಆದರೆ ಇದನ್ನು ನ್ಯಾಯಾಲಯ ನಿರಾಕರಿಸಿತ್ತು.

First published:October 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ