HOME » NEWS » National-international » RIOTING FARMERS INJURE 153 COPS 22 FIRS LODGED SNVS

Farmers Protest - ದೆಹಲಿಯಲ್ಲಿ ರೈತರ ದಂಗೆ: 153 ಪೊಲೀಸರಿಗೆ ಗಾಯ; 22 ಎಫ್ಐಆರ್

ಗಣರಾಜ್ಯೋತ್ಸವ ದಿನದಂದು ದೆಹಲಿ ನಗರದೊಳಗೆ ನುಗ್ಗಿದ ರೈತರ ದೊಡ್ಡ ಗುಂಪೊಂದು ನಡೆಸಿದ ಹಿಂಸಾಚಾರಗಳಲ್ಲಿ 150ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ಧಾರೆ. ವಿವಿಧ ಠಾಣೆಗಳಲ್ಲಿ 22 ಎಫ್ಐಆರ್ ದಾಖಲಾಗಿವೆ.

news18
Updated:January 27, 2021, 11:08 AM IST
Farmers Protest - ದೆಹಲಿಯಲ್ಲಿ ರೈತರ ದಂಗೆ: 153 ಪೊಲೀಸರಿಗೆ ಗಾಯ; 22 ಎಫ್ಐಆರ್
ದೆಹಲಿಯಲ್ಲಿ ರೈತರ ಹಿಂಸಾಚಾರದಲ್ಲಿ ಗಾಯಗೊಂಡ ಭದ್ರತಾ ಪಡೆ ಸಿಬ್ಬಂದಿ
  • News18
  • Last Updated: January 27, 2021, 11:08 AM IST
  • Share this:
ನವದೆಹಲಿ(ಜ. 27): ನಿನ್ನೆ ಗಣರಾಜ್ಯೋತ್ಸವ ದಿನದಂದು ರೈತರ ಒಂದು ದೊಡ್ಡ ಗುಂಪು ದೇಶದ ರಾಜಧಾನಿಯಲ್ಲಿ ನಡೆಸಿದ ಹಿಂಸಾಚಾರ ವ್ಯಾಪಕ ಚರ್ಚೆಯ ವಸ್ತುವಾಗಿದೆ. ಅನುಮತಿ ಇಲ್ಲದಿದ್ದರೂ ಸಾವಿರಾರು ಟ್ರಾಕ್ಟರ್​ಗಳೊಂದಿಗೆ ದೆಹಲಿ ನಗರದೊಳಗೆ ನುಗ್ಗಿದ ರೈತರು ಕೆಂಪುಕೋಟೆಗೆ ಲಗ್ಗೆ ಹಾಕಿ ಸಿಖ್ ಧರ್ಮದ ಧ್ವಜ ಸ್ಥಾಪನೆ ಮಾಡಿದ್ದರು. ಈ ಮಧ್ಯೆ ಅವರು ನಡೆಸಿದ ದಾಂದಲೆ ಅಲ್ಲಿಯವರೆಗಿನ ಅವರ ಸುದೀರ್ಘ ಶಾಂತಿಯುತ ಪ್ರತಿಭಟನೆಯ ಕಾರ್ಯಕ್ಕೆ ಕಪ್ಪು ಚುಕ್ಕೆ ತರುವಂತಿತ್ತು. ದಾರಿಗೆ ಅಡ್ಡಲಾಗಿ ಬಂದದ್ದನ್ನ ಈ ರೈತರ ಗುಂಪು ಮುಲಾಜಿಲ್ಲದೇ ಧ್ವಂಸ ಮಾಡಿ ಮುನ್ನಡೆದಿತ್ತು. ಬ್ಯಾರಿಕೇಡ್​ಗಳನ್ನ ಕಿತ್ತು ಬಿಸಾಡಿತ್ತು. ಅಡ್ಡಗಾಲಾಗಿ ಇಟ್ಟಿದ್ದ ಬಸ್ಸುಗಳನ್ನೂ ಟ್ರಾಕ್ಟರ್​ಗಳಿಂದಲೇ ನೂಕಿ ತಳ್ಳಲಾಯಿತು. ಹಲವು ಬಸ್ಸುಗಳು ಜಖಂಡಗೊಂಡವು.

ಅಷ್ಟೇ ಅಲ್ಲ, ಟ್ರಾಕ್ಟರ್, ಬೈಕ್, ಕುದುರೆಗಳಲ್ಲಿ ಬಂದ ಪ್ರತಿಭಟನಾಕಾರರು ನಿನ್ನೆ ಪೊಲೀಸರನ್ನೇ ಗುರಿಯಾಗಿಸಿ ಆಕ್ರೋಶ ತೋರ್ಪಡಿಸಿದಂತಿತ್ತು. ಗರಿಷ್ಠ ಸಂಯಮ ತೋರುವಂತೆ ನಿರ್ದೇಶನ ಇದ್ದರಿಂದ ಪೊಲೀಸರು ಅಲ್ಲಲ್ಲಿ ಲಾಠಿಚಾರ್ಜ್, ಟಿಯರ್ ಗ್ಯಾಸ್ ಪ್ರಯೋಗಿಸಿದ್ದು ಬಿಟ್ಟರೆ ಬಹುತೇಕ ಹತಾಶೆಯಲ್ಲಿದ್ದರು. ಕೈಯಲ್ಲಿ ಖಡ್ಗ, ದೊಣ್ಣೆ, ಕಲ್ಲುಗಳನ್ನ ಹಿಡಿದು ಅಧಿಕ ಸಂಖ್ಯೆಯಲ್ಲಿ ಅಟ್ಟಹಾಸಗೈಯ್ಯುತ್ತಿದ್ದ ಪ್ರತಿಭಟನಾಕಾರರ ಎದುರು ಪೊಲೀಸರು ಕಕ್ಕಾಬಿಕ್ಕಿಯಾಗಿ ಪ್ರಾಣಭಯದಿಂದ ನಲುಗುತ್ತಿದ್ದಂತಿತ್ತು. ಪೊಲೀಸರ ಮೇಲೆ ಟ್ರಾಕ್ಟರ್ ಹತ್ತಿಸುವ, ಖಡ್ಗ ಝಳುಪಿಸುವ, ಕಲ್ಲೆಸೆಯುವ ಹಲವು ಘಟನೆಗಳು ನಡೆದವು. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, 153 ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ. ಅವರಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾರೆ. ಈ ಗಲಭೆ ಘಟನೆಗಳ ಸಂಬಂಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 22 ಎಫ್​ಐಆರ್ ದಾಖಲಾಗಿವೆ. ಟ್ರಾಕ್ಟರ್​ವೊಂದು ಪಲ್ಟಿ ಹೊಡೆದು ಒಬ್ಬ ಪ್ರತಿಭಟನಾಕಾರ ಬಲಿಯಾಗಿದ್ದಾರೆ. ಪೊಲೀಸ್ ಲಾಠಿ ಪ್ರಹಾರಕ್ಕೆ ಹತ್ತಾರು ಮಂದಿಗೆ ಗಾಯಗಳಾಗಿವೆ.

ಇದನ್ನೂ ಓದಿ: ರೈತರ ಟ್ರ್ಯಾಕ್ಟರ್ ಮೆರವಣಿಗೆ ವೇಳೆ ಘರ್ಷಣೆ; ಪಾರ್ಲಿಮೆಂಟ್ ಚಲೋ ಮೇಲೆ ಪರಿಣಾಮ ಸಾಧ್ಯತೆ

ಕಳೆದ ಎರಡು ತಿಂಗಳಿಂದ ನಿರಂತರವಾಗಿ ರೈತರ ಪ್ರತಿಭಟನೆಯನ್ನು ಮುನ್ನಡೆಸುತ್ತಿರುವ ಕಿಸಾನ್ ಸಂಯುಕ್ತ ಮೋರ್ಚಾ ಸಂಘಟನೆ ನಿನ್ನೆ ಘಾಜಿಯಾಬಾದ್​ನಲ್ಲಿ ನುಗ್ಗಿದ ಪ್ರತಿಭಟನಾಕಾರರ ಗುಂಪು ತಮ್ಮ ಕಡೆಯವರಲ್ಲ ಎಂದು ಮೊದಲೇ ಸ್ಪಷ್ಟಪಡಿಸಿತ್ತು. ಗಣರಾಜ್ಯೋತ್ಸವ ಪರೇಡ್ ಬಳಿಕ ದೆಹಲಿಯ ನಿಗದಿತ ಮಾರ್ಗಗಳಲ್ಲಿ ಶಾಂತಿಯುತ ಟ್ರಾಕ್ಟರ್ ಮೆರವಣಿಗೆ ನಡೆಸುವ ಉದ್ದೇಶ ಹೊಂದಿದ್ದ ಸಂಯುಕ್ತ ಕಿಸಾನ್ ಮೋರ್ಚಾ, ಯಾವಾಗ ಗಾಜಿಯಾಬಾದ್​ನಲ್ಲಿ ನುಗ್ಗಿದ ಗುಂಪಿನಿಂದ ಹಿಂಸಾಚಾರಗಳು ನಡೆದವೂ ತಮ್ಮ ಟ್ರಾಕ್ಟರ್ ರ್ಯಾಲಿಯನ್ನು ಕೈಬಿಟ್ಟಿತು.
Published by: Vijayasarthy SN
First published: January 27, 2021, 11:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories