HOME » NEWS » National-international » RILAGM JIO MART WILL BE OPEN AND DEPARTMENTAL STORES WILL BE THERE IN THAT AND ITS AVAILABLE FOR ACCROSS COUNTRY MAK

RIL AGM 2020: ಜಿಯೋ ಮಾರ್ಟ್‌‌ಗೆ ಕಿರಾಣಿ ಅಂಗಡಿಗಳು ಬಹುಪರಾಕ್; ದೇಶದ ಮೂಲೆ ಮೂಲೆಗೂ ಅಗತ್ಯ ವಸ್ತುಗಳ ಸಾಗಾಟ

ಕಿರಾಣಿ ಅಂಗಡಿಗಳ ಅಗತ್ಯ ಮತ್ತು ಕಿರಾಣಿ ಅಂಗಡಿಗಳಿಂದ ಅಗತ್ಯ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವ ಸಲುವಾಗಿ ಫೇಸ್‌ಬುಕ್‌ ಜೊತೆಗೂಡಿ ವಾಟ್ಸಾಪ್‌ನಲ್ಲಿ ಹೊಸ ಡಿಜಿಟಲ್‌ ಸೇವೆಯನ್ನು ಆರಂಭಿಸಲು ರಿಲಾಯನ್ಸ್-ಜಿಯೋ ಮುಂದಾಗಿದೆ. ಈ ಡಿಜಿಟಲ್‌ ವ್ಯವಹಾರದ ಮೂಲಕ ಕಿರಾಣಿ ಅಂಗಡಿಯವರು ಒಂದು ಬಟನ್‌ ಒತ್ತಿದರೆ ಸಾಕು ಅವರಿಗೆ ಅಗತ್ಯ ವಸ್ತುಗಳನ್ನು ರಿಲಾಯನ್ಸ್‌ ಒದಗಿಸಲಿದೆ.

MAshok Kumar | news18-kannada
Updated:July 16, 2020, 9:19 AM IST
RIL AGM 2020: ಜಿಯೋ ಮಾರ್ಟ್‌‌ಗೆ ಕಿರಾಣಿ ಅಂಗಡಿಗಳು ಬಹುಪರಾಕ್; ದೇಶದ ಮೂಲೆ ಮೂಲೆಗೂ ಅಗತ್ಯ ವಸ್ತುಗಳ ಸಾಗಾಟ
ಜಿಯೋ ಮಾರ್ಟ್‌.
  • Share this:
ಮುಂಬೈ (ಜುಲೈ 15); ಭಾರತ ಚಿಲ್ಲರೆ ಮಾರಾಟಗಾರರ ಸ್ವರ್ಗವಾಗಿದ್ದು, ಚಿಲ್ಲರೆ ಕ್ಷೇತ್ರದ ಬೆನ್ನೆಲುಬಾಗಿರುವ ಕಿರಾಣಿ ಅಂಗಡಿಗಳ ಜೊತೆಗೂಡಿ ಡಿಜಿಟಲ್ ಮಾದರಿಯಲ್ಲಿ ಕೆಲಸ ಮಾಡಲು ಜಿಯೋ-ರಿಲಾಯನ್ಸ್‌ ಮುಂದಾಗಿದೆ. ರಿಲಾಯನ್ಸ್‌ ಇಂಡಸ್ಟ್ರೀಸ್‌ನ ಈ ಪ್ರಯತ್ನಕ್ಕೆ ಕಿರಾಣಿ ಅಂಗಡಿ ಮಾಲೀಕರೂ ಸಹ ಬಹುಪರಾಕ್ ಎಂದಿರುವುದು ವಿಶೇಷ.

ಕಿರಾಣಿ ಅಂಗಡಿಗಳ ಅಗತ್ಯ ಮತ್ತು ಕಿರಾಣಿ ಅಂಗಡಿಗಳಿಂದ ಅಗತ್ಯ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವ ಸಲುವಾಗಿ ಫೇಸ್‌ಬುಕ್‌ ಜೊತೆಗೂಡಿ ವಾಟ್ಸಾಪ್‌ನಲ್ಲಿ ಹೊಸ ಡಿಜಿಟಲ್‌ ಸೇವೆಯನ್ನು ಆರಂಭಿಸಲು ರಿಲಾಯನ್ಸ್-ಜಿಯೋ ಮುಂದಾಗಿದೆ. ಈ ಡಿಜಿಟಲ್‌ ವ್ಯವಹಾರದ ಮೂಲಕ ಕಿರಾಣಿ ಅಂಗಡಿಯವರು ಒಂದು ಬಟನ್‌ ಒತ್ತಿದರೆ ಸಾಕು ಅವರಿಗೆ ಅಗತ್ಯ ವಸ್ತುಗಳನ್ನು ರಿಲಾಯನ್ಸ್‌ ಒದಗಿಸಲಿದೆ.

ಅಲ್ಲದೆ, ಕಿರಾಣಿ ಅಂಗಡಿಗಳಿಂದ ಗ್ರಾಹಕರಿಗೂ ಅಗತ್ಯ ವಸ್ತುಗಳನ್ನು ತಲುಪಿಸುವ ಸೇವೆಯನ್ನು ರಿಲಾಯನ್ಸ್‌ ಮಾಡಲಿದೆ. ಈ ಸೇವೆಗೆ ಕಿರಾಣಿ ಅಂಗಡಿಯವರೂ ಸಹ ಸಾಕಷ್ಟು ಸಂಖ್ಯೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ಇಂದು ನಡೆದ 43ನೇ ರಿಲಾಯನ್ಸ್‌ ಇಂಡಸ್ಟ್ರೀಸ್‌ ವಾರ್ಷಿಕ ಸಭೆಯಲ್ಲಿ ರಿಲಾಯನ್ಸ್‌ ಮಾರ್ಟ್‌ ಗುರಿಯ ಕುರಿತು ಮಾಹಿತಿ ನೀಡಿದ ಆರ್‌ಐಎಲ್‌ ಮುಖ್ಯಸ್ಥ ಮುಕೇಶ್ ಅಂಬಾನಿ, "ಭಾರತದಲ್ಲಿ ಚಿಲ್ಲರೆ ಮಾರುಕಟ್ಟೆಗೆ ಸಾಕಷ್ಟು ಅವಕಾಶ ಇದೆ. ಈಗಾಗಲೇ ರಿಲಾಯನ್ಸ್‌ ಫ್ರೆಶ್‌ನಲ್ಲಿ ಸಾಕಷ್ಟು ಹಣ್ಣು ತರಕಾರಿಗಳು ಮಾರಾಟ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ. ಆದರೆ, ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ ಕಿರಾಣಿ ಅಂಗಡಿಗಳೇ ಎಂದಿಗೂ ವ್ಯವಹಾರದ ಬೆನ್ನೆಲುಬು.

ಆದರೆ, ಕಿರಾಣಿ ಅಂಗಡಿಗಳ ವರೆಗೆ ಯಾವುದೇ ತಂತ್ರಜ್ಞಾನ ತಲುಪಿಲ್ಲ. ಹೀಗಾಗಿ ನಾವು ಜಿಯೋ ಮಾರ್ಟ್‌‌ನ ಅಡಿಯಲ್ಲಿ ದೇಶದ ಎಲ್ಲಾ ಕಿರಾಣಿ ಅಂಗಡಿಗಳನ್ನು ತರುವ ಕೆಲಸಕ್ಕೆ ಮುಂದಾಗಿದ್ದೇವೆ. ಈ ಮೂಲಕ ಕಿರಾಣಿ ಅಂಗಡಿಗಳಿಗೆ ಮತ್ತು ಕಿರಾಣಿ ಅಂಗಡಿಗಳ ಮೂಲಕ ಅಗತ್ಯ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡಲಿದ್ದೇವೆ. ಕಿರಾಣಿ ಅಂಗಡಿಗಳು ಮತ್ತು ಗ್ರಾಹಕರ ನಡುವೆ ಸೇತುವೆಯಾಗಿ ರಿಲಾಯನ್ಸ್‌ ಕೆಲಸ ನಿರ್ವಹಿಸಲಿದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: RIL AGM 2020: ಇದು ನಮಗೆ ಕೇವಲ ವ್ಯವಹಾರವಲ್ಲ, ನಮ್ಮ ಕರ್ತವ್ಯ, ನಮ್ಮ ಧರ್ಮ, ದೇಶಕ್ಕೆ ಸಲ್ಲಿಸುವ ಸೇವೆ; ನೀತಾ ಅಂಬಾನಿ


Youtube Video
ಇದೇ ಸಂದರ್ಭದಲ್ಲಿ ಜಿಯೋ ಮಾರ್ಟ್‌‌ನಲ್ಲಿ ಹೂಡಿಕೆ ಮಾಡಿರುವ ಷೇರುದಾರರಿಗೂ ಮಾಹಿತಿ ನೀಡಿದ ಮುಕೇಶ್‌ ಅಂಬಾನಿ, "ಜಿಯೋ ಮಾರ್ಟ್‌ ಈಗಾಗಲೇ ಕಳೆದ ಒಂದು ವರ್ಷದಲ್ಲಿ ಲಕ್ಷಾಂತರ ಕೋಟಿ ವಹಿವಾಟು ನಡೆಸಿದೆ, ಷೇರಿನ ಮೌಲ್ಯಗಳು 8 ರಿಂದ 11 ಪಟ್ಟು ಏರಿಕೆಯಾಗಿದೆ. ಭವಿಷ್ಯದಲ್ಲಿ ಜಿಯೋ ಮಾರ್ಟ್‌ ದೊಡ್ಡ ಉದ್ಯಮವಾಗಿ ಬೆಳೆಯಲಿದೆ. ಅಲ್ಲದೆ, ತರಕಾರಿ, ಹಣ್ಣು, ಅಗತ್ಯ ಆಹಾರ ಸಾಮಗ್ರಿಗಳ ಜೊತೆಗೆ, ಕಾಸ್ಮೆಟಿಕ್‌, ಎಲೆಕ್ಟ್ರಾನಿಕ್‌ ಗೂಡ್ಸ್‌ ಕ್ಷೇತ್ರದಲ್ಲೂ ರಿಲಾಯನ್ಸ್‌ ಮಾರ್ಟ್‌ ಹೆಜ್ಜೆ ಊರಲಿದೆ" ಎಂದು ಆಶ್ವಾಸನೆ ನೀಡಿದ್ದಾರೆ.
Published by: MAshok Kumar
First published: July 16, 2020, 9:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories