Reliance: ಗುಜರಾತ್‌ನಲ್ಲಿ ಹೊಸ ಇಂಧನ ಯೋಜನೆಗಳಲ್ಲಿ 6 ಟ್ರಿಲಿಯನ್ ರೂ. ಹೂಡಿಕೆ ಮಾಡಲಿದೆ ರಿಲಯನ್ಸ್‌

ಮುಂದಿನ 3 ರಿಂದ 5 ವರ್ಷಗಳಲ್ಲಿ ಅಸ್ತಿತ್ವದಲ್ಲಿರುವ ಯೋಜನೆಗಳು ಮತ್ತು ಹೊಸ ಉದ್ಯಮಗಳಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ 25,000 ಕೋಟಿ ರೂಪಾಯಿ ಮೊತ್ತದ ಹೂಡಿಕೆ ಮಾಡಲಾಗುವುದು ಎಂದೂ ಮಾಹಿತಿ ನೀಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಉದ್ಯಮಿ ಮುಖೇಶ್‌ ಅಂಬಾನಿ ಒಡೆತನದ (Businessman Mukesh Ambani) ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ ಗುಜರಾತ್‌ ರಾಜ್ಯವನ್ನು ಕಾರ್ಬನ್‌ (Carbon-Free) ಮುಕ್ತವಾಗಿಸುವತ್ತ ಹೆಜ್ಜೆ ಇಡಲು ಸಹಾಯ ಮಾಡಲಿದೆ. ಭಾರತದ ನಂಬರ್ ಒನ್ ಖಾಸಗಿ ವಲಯದ ಕಂಪನಿಯಾದ ರಿಲಯನ್ಸ್ ಇಂಡಸ್ಟ್ರೀಸ್,(Reliance Industries) ವೈಬ್ರೆಂಟ್ ಗುಜರಾತ್ ಶೃಂಗಸಭೆ(Vibrant Gujarat Summit) 2022ಗಾಗಿ ಹೂಡಿಕೆ (Investment) ಪ್ರಚಾರ ಚಟುವಟಿಕೆಯ ಭಾಗವಾಗಿ ಮುಂದಿನ 10-15 ವರ್ಷಗಳಲ್ಲಿ 5.955 ಟ್ರಿಲಿಯನ್ ರೂಪಾಯಿಗಳ ಒಟ್ಟು ಹೂಡಿಕೆಗಾಗಿ ಗುಜರಾತ್ ರಾಜ್ಯ ಸರ್ಕಾರದೊಂದಿಗೆ (Government) MOUಗೆ ಸಹಿ ಹಾಕಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್‌ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಉದ್ಯಮಿಗಳಿಗೆ ಪ್ರೋತ್ಸಾಹ
ಪ್ರಧಾನಿ ಮೋದಿಯ ತವರು ರಾಜ್ಯ ಗುಜರಾತ್ ಅನ್ನು ನಿವ್ವಳ ಶೂನ್ಯ ಮತ್ತು ಕಾರ್ಬನ್ ಮುಕ್ತವಾಗಲು ಸಹಾಯ ಮಾಡಲು, ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ (RIL) 100 GW ನವೀಕರಿಸಬಹುದಾದ ಇಂಧನ ವಿದ್ಯುತ್ ಸ್ಥಾವರ ಮತ್ತು ಹಸಿರು ಹೈಡ್ರೋಜನ್ ಪರಿಸರ ವ್ಯವಸ್ಥೆ ಸ್ಥಾಪಿಸಲು 5 ಟ್ರಿಲಿಯನ್ ರೂಪಾಯಿ ಹೂಡಿಕೆ ಮಾಡಲು ಯೋಜಿಸಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ಇನ್ನು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (SME) ಸಹಾಯ ಮಾಡಲು ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ನವೀಕರಿಸಬಹುದಾದ ಶಕ್ತಿ ಹಾಗೂ ಹಸಿರು ಹೈಡ್ರೋಜನ್‌ನ ಬಳಕೆಗೆ ಕಾರಣವಾಗುವ ಹೊಸ ತಂತ್ರಜ್ಞಾನಗಳು ಮತ್ತು ನಾವೀನ್ಯತೆಗಳನ್ನು ಅಳವಡಿಸಿಕೊಳ್ಳಲು ಉದ್ಯಮಿಗಳನ್ನು ಪ್ರೋತ್ಸಾಹಿಸುತ್ತದೆ.

ಉದ್ಯೋಗ ಸೃಷ್ಟಿ
ಇನ್ನು, ಈ ಯೋಜನೆಗಳಿಂದ ಗುಜರಾತ್‌ನಲ್ಲಿ ಉದ್ಯೋಗ ಸೃಷ್ಟಿಯೂ ಆಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಯೋಜನೆಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸುಮಾರು ಒಂದು ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಲಿವೆ ಎಂದು RIL ಪ್ರಕಟಣೆಯಲ್ಲಿ ತಿಳಿಸಿದೆ. ಈ ಉಪಕ್ರಮಗಳು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಿಂದ ಹೊರಹೊಮ್ಮಿವೆ ಎಂದೂ ಕಂಪನಿ ಹೇಳಿದೆ.

ಇದನ್ನೂ ಓದಿ: BSNL: ರಿಲಯನ್ಸ್ ಜಿಯೋಗೆ ಠಕ್ಕರ್‌ ಕೊಡಲು ಬಿಎಸ್‌ಎನ್‌ಎಲ್ ಹೊಸ ತಂತ್ರ.! ಸಕತ್ತಾಗಿದೆ ಹೊಸ ಪ್ಯಾಕೇಜ್

ಇನ್ನು, ಈ ಯೋಜನೆಯನ್ನು ಕಾರ್ಯಸಾಧ್ಯವಾಗಿಸುವ ನಿಟ್ಟಿನಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಈಗಾಗಲೇ ಕಛ್‌, ಬನಸ್ಕಾಂತ ಮತ್ತು ಧೋಲೆರಾದಲ್ಲಿ 100 GW ನವೀಕರಿಸಬಹುದಾದ ಇಂಧನ ವಿದ್ಯುತ್ ಯೋಜನೆಗಾಗಿ ಗುಜರಾತ್ ಸರ್ಕಾರದೊಂದಿಗೆ ಸಮಾಲೋಚಿಸಿ ಭೂಮಿಯನ್ನು ಶೋಧಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಪ್ರಮುಖವಾಗಿ ಕಛ್‌ನಲ್ಲಿ

4.5 ಲಕ್ಷ ಎಕರೆ ಭೂಮಿಗೆ ಗುಜರಾತ್‌ನ ಭೂಪೇಂದ್ರಭಾಯಿ ಪಟೇಲ್‌ ಸರ್ಕಾರವನ್ನು ವಿನಂತಿಸಿದೆ. ಇದರ ಜತೆಗೆ, ಹೆಚ್ಚುವರಿಯಾಗಿ, ಹೊಸ ಇಂಧನ ಉತ್ಪಾದನೆ-ಸಂಯೋಜಿತ ನವೀಕರಿಸಬಹುದಾದ ಉತ್ಪಾದನೆಯನ್ನು ಸ್ಥಾಪಿಸಲು ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ ಕಂಪನಿ 60,000 ಕೋಟಿ ರೂ, ಅನ್ನು ಈ ಕೆಳಗಿನ ಯೋಜನೆಗಳಿಗೆ ಹೂಡಿಕೆ ಮಾಡುತ್ತದೆ.

1) ಸೋಲಾರ್ PV ಮಾಡ್ಯೂಲ್ (ಪಾಲಿಸಿಲಿಕಾನ್, ವೇಫರ್, ಸೆಲ್ ಮತ್ತು ಮಾಡ್ಯೂಲ್ ತಯಾರಿಕೆ)
2) ವಿದ್ಯುದ್ವಿಭಜಕ
3) ಶಕ್ತಿ-ಶೇಖರಣಾ ಬ್ಯಾಟರಿ
4) ಇಂಧನ ಸೆಲ್‌ಗಳು

ಕೋಟ್ಯಾಂತರ ಮೊತ್ತದ ಹೂಡಿಕೆ
ಅಲ್ಲದೆ, ಮುಂದಿನ 3 ರಿಂದ 5 ವರ್ಷಗಳಲ್ಲಿ ಅಸ್ತಿತ್ವದಲ್ಲಿರುವ ಯೋಜನೆಗಳು ಮತ್ತು ಹೊಸ ಉದ್ಯಮಗಳಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ 25,000 ಕೋಟಿ ರೂಪಾಯಿ ಮೊತ್ತದ ಹೂಡಿಕೆ ಮಾಡಲಾಗುವುದು ಎಂದೂ ಮಾಹಿತಿ ನೀಡಿದೆ. ಈ ಯೋಜನೆಗಳ ಮೂಲಕ ಗುಜರಾತ್‌ ಅನ್ನು ಕಾರ್ಬನ್‌ ಮುಕ್ತವಾಗಿಸಲು ರಿಲಯನ್ಸ್‌ ಇಂಡಸ್ಟ್ರೀಸ್‌ ಸಹಾಯ ಮಾಡಲಿದೆ.

ಇದನ್ನೂ ಓದಿ: Reliance Jio ಮೂಲಕ ಇನ್ಮುಂದೆ UPI ಆಟೋ-ಪೇಯಿಂದಲೂ ಬಿಲ್‌ ಪಾವತಿಸಬಹುದು!

ಈ ಮಧ್ಯೆ, ಜಿಯೋ ನೆಟ್‌ವರ್ಕ್ ಅನ್ನು 5Gಗೆ ನವೀಕರಿಸಲು ಮುಂದಿನ 3 ರಿಂದ 5 ವರ್ಷಗಳಲ್ಲಿ 7,500 ಕೋಟಿ ರೂಪಾಯಿಗಳನ್ನು ಮತ್ತು ರಿಲಯನ್ಸ್ ರೀಟೇಲ್‌ನಲ್ಲಿ 5 ವರ್ಷಗಳಲ್ಲಿ 3,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಸಹ ಮುಖೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಕಂಪನಿ ಪ್ರಸ್ತಾಪಿಸಿದೆ.
Published by:vanithasanjevani vanithasanjevani
First published: