RIL Rights Issue – ಆರ್ಐಎಲ್ನ ವಿಶೇಷ ಷೇರುಗಳ ಖರೀದಿಯಿಂದ ಏನು ಲಾಭ?
ಒಂದೂವರೆ ವರ್ಷದಲ್ಲಿ ಹೂಡಿಕೆದಾರರು 1,257 ರೂಪಾಯಿ ನೀಡಿ ಒಂದು ಹೆಚ್ಚುವರಿ ಆರ್ಐಎಲ್ ಷೇರು ಖರೀದಿಸಬಹುದು. ಈಗಿನ ಮೌಲ್ಯದ ಆಧಾರದಲ್ಲಿ ಅದರಿಂದ ಸಿಗುವ ಲಾಭ 151 ರೂಪಾಯಿ ಇರುತ್ತದೆ.
news18 Updated:May 20, 2020, 4:17 PM IST

ರಿಲಾಯನ್ಸ್ ಇಂಡಸ್ಟ್ರೀಸ್
- News18
- Last Updated: May 20, 2020, 4:17 PM IST
ನವದೆಹಲಿ(ಮೇ 20): ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ತನ್ನ ಷೇರುಗಳ ವಿಶೇಷ ಮಾರಾಟ (Rights Issue) ಮಾಡುತ್ತಿದೆ. 1,408 ಬೆಲೆ ಇರುವ ತನ್ನ ಷೇರನ್ನು 1,257 ರೂಪಾಯಿಗೆ ಖರೀದಿಸಲು ತನ್ನ ಹೂಡಿಕೆದಾರರಿಗೆ ಆಫರ್ ಕೊಟ್ಟಿದೆ. ಹೂಡಿಕೆದಾರರು 1,257 ರೂ ಕೊಟ್ಟು ಹೊಸ ಷೇರನ್ನು ಖರೀದಿಸಬಹುದು. 15 ಷೇರುಗಳನ್ನ ಹೊಂದಿರುವ ಗ್ರಾಹಕರಿಗೆ ಒಂದೊಂದು ಷೇರು ಕೊಳ್ಳುವ ಅವಕಾಶ ನೀಡಲಾಗಿದೆ. ಅಂದರೆ, 30 ಷೇರುಗಳನ್ನ ಹೊಂದಿರುವವರು 1,257 ರೂ ದರದಲ್ಲಿ ಎರಡು ಹೊಸ ಷೇರುಗಳನ್ನು ಖರೀದಿಸಬಹುದು. ಹಾಗೆಯೇ, ಮೂರು ಕಂತುಗಳಲ್ಲಿ ಈ ಹಣ ಪಾವತಿಸುವ ಆಯ್ಕೆಯನ್ನೂ ನೀಡಲಾಗಿದೆ.
ಮೂರು ಕಂತುಗಳಲ್ಲಿ 1,257 ರೂಪಾಯಿ ಕಟ್ಟಬಹುದು. ಈಗ ಶೇ. 25 ಕಟ್ಟಿದೆ, 12 ತಿಂಗಳ ಬಳಿಕ ಇನ್ನೂ 25% ಹಾಗೂ ಅದಾಗಿ 6 ತಿಂಗಳ ಬಳಿಕ ಉಳಿದ 50% ಹಣವನ್ನು ಕಟ್ಟಬಹುದು. ಅಂದರೆ, 314.25 ರೂ, 314.25 ರೂ ಮತ್ತು 628.5 ರೂಪಾಯಿ ಹಣವನ್ನು 18 ತಿಂಗಳಲ್ಲಿ ಕಟ್ಟಬೇಕಾಗುತ್ತದೆ. ತನ್ನ 1.61 ಲಕ್ಷ ಕೋಟಿ ರೂ ಸಾಲದ ಹೊರೆಯನ್ನು ತಗ್ಗಿಸಲು ರಿಲಾಯನ್ಸ್ ಸಂಸ್ಥೆ ಮಾಡಿರುವ ಹಲವು ಯೋಜನೆಗಳಲ್ಲಿ ಈ ಷೇರುಗಳ ರೈಟ್ಸ್ ಇಷ್ಯೂ ಕೂಡ ಒಂದು. ಈ ಷೇರು ಹಕ್ಕು ಮಾರಾಟದಿಂದ ರಿಲಾಯನ್ಸ್ ಸಂಸ್ಥೆಗೆ 53,036.13 ಕೋಟಿ ರೂ ಹಣ ಸೇರುವ ನಿರೀಕ್ಷೆ ಇದೆ. ಈಗಾಗಲೇ, ಭಾರತ್ ಪೆಟ್ರೋಲಿಯಂ ಕಂಪನಿಯೊಂದಿಗಿನ ಒಪ್ಪಂದ, ಫೇಸ್ಬುಕ್, ಸಿಲ್ವರ್ ಲೇಕ್, ವೆಸ್ಟಾ ಈಕ್ವಿಟಿ, ಜನರಲ್ ಅಟ್ಲಾಂಟಿಕ್ ಸಂಸ್ಥೆಗಳ ಹೂಡಿಕೆ ಇವೆಲ್ಲಾ ಕ್ರಮದಿಂದ ರಿಲಾಯನ್ಸ್ ಸಂಸ್ಥೆಗೆ 74 ಸಾವಿರ ಕೋಟಿ ರೂ ಹರಿದುಬರಬಹುದು. ಈಗ ರೈಟ್ಸ್ ಇಷ್ಟೂನಿಂದ ಬರುವ ಹಣದಲ್ಲಿ ಸುಮಾರು 40 ಸಾವಿರ ಕೋಟಿ ರೂಪಾಯಿಯನ್ನು ಸಾಲದ ಹೊರೆ ತಗ್ಗಿಸಲು ವಿನಿಯೋಗಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: WHO ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಕೇಂದ್ರ ಸಚಿವ ಡಾ. ಹರ್ಷ್ ವರ್ಧನ್
ಇದು ರಿಲಾಯನ್ಸ್ ಸಂಸ್ಥೆಗೆ ಸಂಬಂಧಿಸಿದ ವಿಚಾರ. ಈ ಆರ್ಟಿಕಲ್ನಲ್ಲಿ ಹೇಳಹೊರಟಿರುವ ವಿಚಾರ ಎಂದರೆ ರಿಲಾಯನ್ಸ್ ಇಂಡಸ್ಟ್ರೀಸ್ ಷೇರುದಾರರು ರೈಟ್ಸ್ ಇಷ್ಯೂ ಸ್ಕೀಮ್ನಲ್ಲಿ ಹೂಡಿಕೆ ಮಾಡಿದರೆ ಏನು ಲಾಭ ಎಂಬುದು.
ಒಂದೂವರೆ ವರ್ಷದಲ್ಲಿ ಹೂಡಿಕೆದಾರರು 1,257 ರೂಪಾಯಿ ನೀಡಿ ಒಂದು ಹೆಚ್ಚುವರಿ ಆರ್ಐಎಲ್ ಷೇರು ಖರೀದಿಸಬಹುದು. ಈಗಿನ ಮೌಲ್ಯದ ಆಧಾರದಲ್ಲಿ ಅದರಿಂದ ಸಿಗುವ ಲಾಭ 151 ರೂಪಾಯಿ ಇರುತ್ತದೆ. ಇದು ಒಮ್ಮೆಲೆ 1,257 ರೂಪಾಯಿ ಕೊಟ್ಟರೆ ಸಿಗುವ ಲಾಭ. ನೀವು ಮೂರು ಕಂತುಗಳಲ್ಲಿ ಹಣ ಪಾವತಿಸಿದರೆ ಇದರ ಲಾಭ ಇನ್ನಷ್ಟು ಹೆಚ್ಚುತ್ತದೆ. 1,257ರ ಮೊತ್ತದಲ್ಲಿ ಶೇ. 75ರಷ್ಟು ಹಣದಿಂದ ಬರುವ ಬಡ್ಡಿಯನ್ನು ಲೆಕ್ಕ ಹಾಕಿದರೆ ನಿವ್ವಳ ಲಾಭ 200-400 ರೂಪಾಯಿಯಾದರೂ ಆದೀತು. ಇದು ಪರೋಕ್ಷವಾಗಿ ಸಿಗುವ ಲಾಭ.
ಆದರೆ, ವಾಸ್ತವ ಲಾಭ ಏನು ಎಂಬುದು ಒಂದೂವರೆ ವರ್ಷದ ಬಳಿಕ ಆರ್ಐಎಲ್ನ ಷೇರು ಮೌಲ್ಯ ಎಷ್ಟು ಇರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಷೇರು ಮಾರುಕಟ್ಟೆ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಪರಿಗಣಿಸಿದಾಗ ಇದು ದೂರಗಾಮಿ ಹೂಡಿಕೆ ಎಂಬುದರಲ್ಲಿ ಹೆಚ್ಚು ಅನುಮಾನ ಇಲ್ಲ ಎನ್ನುತ್ತಾ ತಜ್ಞರು.
ಮೂರು ಕಂತುಗಳಲ್ಲಿ 1,257 ರೂಪಾಯಿ ಕಟ್ಟಬಹುದು. ಈಗ ಶೇ. 25 ಕಟ್ಟಿದೆ, 12 ತಿಂಗಳ ಬಳಿಕ ಇನ್ನೂ 25% ಹಾಗೂ ಅದಾಗಿ 6 ತಿಂಗಳ ಬಳಿಕ ಉಳಿದ 50% ಹಣವನ್ನು ಕಟ್ಟಬಹುದು. ಅಂದರೆ, 314.25 ರೂ, 314.25 ರೂ ಮತ್ತು 628.5 ರೂಪಾಯಿ ಹಣವನ್ನು 18 ತಿಂಗಳಲ್ಲಿ ಕಟ್ಟಬೇಕಾಗುತ್ತದೆ.