ಮುಂಬೈ (ನವೆಂಬರ್ 23): ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಗೆ ಸೇರಿದ ರಿಲಾಯನ್ಸ್ ರೀಟೇಲ್ ವೆಂಚರ್ಸ್ (RRVL) ಕಂಪನಿಯು ಫ್ಯೂಚರ್ ಗ್ರೂಪ್ನ ಹಲವು ವ್ಯವಹಾರಗಳನ್ನ ಖರೀದಿ ಮಾಡುವ ನಿರ್ಧಾರಕ್ಕೆ ಬಂದಿತ್ತು. ಈಗ ಈ ಒಪ್ಪಂದಕ್ಕೆ ಭಾರತೀಯ ಸ್ಪರ್ಧಾ ಆಯೋಗ (ಆರ್ಐಎಲ್) ಒಪ್ಪಿಗೆ ನೀಡಿದೆ. ಹೀಗಾಗಿ, ರಿಲಾಯನ್ಸ್ನ ಷೇರು ಶೇ.4 ಹಾಗೂ ಫ್ಯೂಚರ್ ಗ್ರೂಪ್ ಷೇರು ಬೆಲೆ ಶೇ.10 ಏರಿಕೆ ಆಗಿದೆ.
ಕಿಶೋರ್ ಬಿಯಾನಿ ಅವರ ಫ್ಯೂಚರ್ ಗ್ರೂಪ್ನ ರೀಟೇಲ್, ಹೋಲ್ಸೇಲ್, ಲಾಜಿಸ್ಟಿಕ್ಸ್, ವೇರ್ಹೌಸಿಂಗ್ ವ್ಯವಹಾರಗಳನ್ನ ಒಟ್ಟು 24,713 ಕೋಟಿ ರೂಪಾಯಿಗೆ ಕೊಳ್ಳುತ್ತಿರುವುದಾಗಿ ರಿಲಾಯನ್ಸ್ ರೀಟೇಲ್ ವೆಂಚರ್ಸ್ ಈ ಮೊದಲು ಘೋಷಣೆ ಮಾಡಿತ್ತು. ಫ್ಯೂಚರ್ ಗ್ರೂಪ್ನ ಪ್ರತಿಯೊಂದು ವ್ಯವಹಾರಕ್ಕೂ ಪ್ರತ್ಯೇಕ ಬೆಲೆ ನಿಗದಿ ಮಾಡದೇ ಒಟ್ಟಿಗೆ ಲಂಪ್ಸಮ್ ಆಗಿ ಎಲ್ಲಾ ವ್ಯವಹಾರಗಳನ್ನ ರಿಲಾಯನ್ಸ್ ಖರೀದಿಸಿ ವಹಿಸಿಕೊಂಡಿತ್ತು.
ಆದರೆ, ಅಮೆಜಾನ್ ಸಂಸ್ಥೆ ಈ ಬಗ್ಗೆ ಅಪಸ್ವರ ಎತ್ತಿತ್ತು. ಫ್ಯೂಚರ್ ರೀಟೇಲ್ ನಮ್ಮ ಜೊತೆಗಿನ ಒಪ್ಪಂದವನ್ನು ಉಲ್ಲಂಘನೆ ಮಾಡುತ್ತಿದೆ ಎಂದು ಹೇಳಿತ್ತು. ಆದರೆ ಈಗ, ಸ್ಪರ್ಧಾ ಆಯೋಗ ಈ ಒಪ್ಪಂದಕ್ಕೆ ಅನುಮತಿ ನೀಡಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಬಿಗ್ ಬಜಾರ್ ಸೇರಿ ಎಲ್ಲ ಫ್ಯೂಚರ್ ರೀಟೇಲ್ ಅಂಗಗಳು ರಿಲಯನ್ಸ್ ಅಡಿಯಲ್ಲಿ ಬರಲಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ