ಮೊದಲ ತ್ರೈಮಾಸಿಕದಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್​ಗೆ 9,485 ಕೋಟಿ ಲಾಭ; ಜಿಯೋ ಲಾಭದಲ್ಲೂ ಶೇ. 20 ಹೆಚ್ಚಳ


Updated:July 27, 2018, 7:03 PM IST
ಮೊದಲ ತ್ರೈಮಾಸಿಕದಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್​ಗೆ 9,485 ಕೋಟಿ ಲಾಭ; ಜಿಯೋ ಲಾಭದಲ್ಲೂ ಶೇ. 20 ಹೆಚ್ಚಳ
Reliance Jio founder Mukesh Ambani

Updated: July 27, 2018, 7:03 PM IST
- ಮನಿಕಂಟ್ರೋಲ್ ನ್ಯೂಸ್

ನವದೆಹಲಿ(ಜು. 27): ರಿಲಾಯನ್ಸ್ ಇಂಡಸ್ಟ್ರೀಸ್ (ಆರ್​ಐಎಲ್) ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಲಾಭದ ಪ್ರಮಾಣ ಶೇ. 03ರಷ್ಟು ಏರಿದೆ. ಮುಕೇಶ್ ಅಂಬಾನಿ ಮಾಲಿಕತ್ವದ ಆರ್​ಐಎಲ್ ಸಂಸ್ಥೆ ಮೊದಲ ತ್ರೈಮಾಸಿಕ ಅವಧಿಯಲ್ಲಿ 9,485 ಕೋಟಿ ರೂ ನಿವ್ವಳ ಲಾಭ ತೋರಿಸಿದೆ. ಹಿಂದಿನ ತ್ರೈಸಿಕ ಅವಧಿಯಲ್ಲಿ ಕಂಪನಿಯು 9,435 ಕೋಟಿ ನಿವ್ವಳ ಲಾಭ ತೋರಿಸಿತ್ತು.

ಇನ್ನು, ಟೆಲಿಕಾಂ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದ ರಿಲಾಯನ್ಸ್​ನ ಜಿಯೋ ಕೂಡ ಲಾಭದಲ್ಲಿ ಹೆಚ್ಚಾಗಿರುವುದನ್ನು ತೋರಿಸಿದೆ. ಏಪ್ರಿಲ್-ಮೇ-ಜೂನ್ ತ್ರೈಮಾಸಿಕದಲ್ಲಿ ಜಿಯೋ 612 ಕೋಟಿ ರೂ ಲಾಭ ಗಳಿಸಿದೆ. ಹಿಂದಿನ ಅವಧಿಯಲ್ಲಿ 510 ಕೋಟಿ ಲಾಭ ಹೊಂದಿದ್ದ ಜಿಯೋದ ಲಾಭ ಗಳಿಕೆ ಈ ಬಾರಿ ಶೇ. 20ರಷ್ಟು ಹೆಚ್ಚಳವಾಗಿದೆ.

ಷೇರುಮಾರುಕಟ್ಟೆ ಶೈನಿಂಗ್:

ಇದೇ ವೇಳೆ, ಭಾರತದ ಷೇರುಮಾರುಕಟ್ಟೆಯ ಭರ್ಜರಿ ಓಟ ಮುಂದುವರಿದು ಹೊಸ ದಾಖಲೆಗಳು ಸೃಷ್ಟಿಯಾಗಿವೆ. ಸೆನ್ಸೆಕ್ಸ್ ಸೂಚ್ಯಂಕವು ಶುಕ್ರವಾರ ಗರಿಷ್ಠ 37,327 ಅಂಕಗಳ ಮಟ್ಟ ಮುಟ್ಟಿದ್ದು ವಿಶೇಷ. ನಿಫ್ಟಿ50 ಸೂಚ್ಯಂಕ ಕೂಡ ಗರಿಷ್ಠ 11,185 ಅಂಕದ ಮಟ್ಟ ತಲುಪಿತು. ಸೆನ್ಸೆಕ್ಸ್ ಮತ್ತು ನಿಫ್ಟಿಯ ಹೊಸ ದಾಖಲೆಯ ಮಟ್ಟವಾಗಿದೆ. ಸೆನ್ಸೆಕ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ 37 ಸಾವಿರದ ಮಟ್ಟ ಮುಟ್ಟಿದೆ.
First published:July 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...