RIL​ನ ಗ್ರೀನ್​ ಹೈಡ್ರೋಜನ್ ಗುರಿಗೆ ಕೈ ಜೋಡಿಸಿದ ಡೆನ್ಮಾರ್ಕ್‌ನ ಸ್ಟೈಸ್‌ಡಾಲ್‌

ಆರ್​ಐಎಲ್​ 1-1-1 ಗ್ರೀನ್​​ ಹೈಡ್ರೋಜನ್​ ಗುರಿಯನ್ನು ಹೊಂದಿದೆ. ಈ ಗುರಿಯನ್ನು ಪೂರ್ಣಗೊಳಿಸಲು ಈ ಸ್ಟೈಸ್ಡಾಲ್ ಕಂಪನಿ ನೆರವಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ರಿಲಯನ್ಸ್ ಇಂಡಸ್ಟ್ರೀಸ್ (RIL) ನ ಒಡೆತನದ ಅಂಗಸಂಸ್ಥೆಯಾಗಿರುವ ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್ (RNESL) ಹೈಡ್ರೋಜನ್ ಎಲೆಕ್ಟ್ರೋಲೈಸರ್ ಅನ್ನು ಅಭಿವೃದ್ಧಿಪಡಿಸಲು ಡೆನ್ಮಾರ್ಕ್​ನ ಸ್ಟೈಸ್ಡಾಲ್ (Stiesdal A/S) ಕಂಪನಿಯೊಂದಿಗೆ ಪಾಲುದಾರಿಕೆ ಹೊಂದಲಿದೆ. ಇದಕ್ಕಾಗಿ ಆರ್‌ಎನ್‌ಇಎಸ್‌ಎಲ್‌ ಪರವಾನಗಿ ಪಡೆದಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಪ್ರಕಟಣೆಯಲ್ಲಿ ತಿಳಿಸಿದೆ. ಸ್ಟೈಸ್‌ಡಾಲ್ ಒಡೆನ್ಸ್ ಡ್ಯಾನಿಶ್ ಕಂಪನಿಯಾಗಿದೆ. ಇದು ಹವಾಮಾನ ಬದಲಾವಣೆ ತಗ್ಗಿಸುವಿಕೆಯ ಮೇಲೆ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತದೆ. ಹೈಡ್ರೋಜೆನ್ ಎಲೆಕ್ಟ್ರೋಲೈಸರ್‌ಗಳ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುತ್ತದೆ. ಇದರಿಂದ ಗ್ರೀನ್​ ಹೈಡ್ರೋಜನ್ (ಹಸಿರು ಜಲಜನಕ) ಬೆಲೆಯನ್ನು ತಗ್ಗಿಸಬಹುದು

    1-1-1 ಗ್ರೀನ್​​ ಹೈಡ್ರೋಜನ್​ ಗುರಿ

    ಆರ್​ಐಎಲ್​ 1-1-1 ಗ್ರೀನ್​​ ಹೈಡ್ರೋಜನ್​ ಗುರಿಯನ್ನು ಹೊಂದಿದೆ ಎಂದು ಸೆಪ್ಟೆಂಬರ್ ನಲ್ಲಿ ನಡೆದ ಅಂತರಾಷ್ಟ್ರೀಯ ಹವಾಮಾನ ಶೃಂಗಸಭೆಯಲ್ಲಿ ಅದರ ಆರ್​ಐಎಲ್​​ ಅಧ್ಯಕ್ಷ ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಈ ಗುರಿಯನ್ನು ಪೂರ್ಣಗೊಳಿಸಲು ಈ ಸ್ಟೈಸ್ಡಾಲ್ ಕಂಪನಿ ನೆರವಾಗಲಿದೆ. ಮುಂದಿನ 10 ವರ್ಷದೊಳಗೆ ಈ ಗ್ರೀನ್​ ಹೈಡ್ರೋಜನ್​ ಅನ್ನು ಒಂದು ಕಿಲೋಗೆ 1 ಡಾಲರ್​ಗೆ ಲಭ್ಯವಾಗುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದು ಅವರು ತಿಳಿಸಿದ್ದರು. ಇನ್ನು ಜಾಗತಿಕ ಗುರಿಯು 2030ಕ್ಕೆ ಒಂದು ಕಿಲೋಗೆ 2ರೂ ಅಂತೆ ನೀಡುವುದಾಗಿದೆ

    ಹಲವು ತಂತ್ರಜ್ಞಾನ ಬೆಳವಣಿಗೆಗೆ ನಾಂದಿ

    ಆರ್‌ಎನ್‌ಇಎಸ್‌ಎಲ್ ಮತ್ತು ಸ್ಟೈಸ್‌ಡಾಲ್ ಇದೇ ವೇಳೆ ಇತರೆ ಹವಾಮಾನ ಬದಲಾವಣೆಯ ತಂತ್ರಜ್ಞಾನಗಳಾದ ಕಡಲತೀರದ ಗಾಳಿ ಶಕ್ತಿಯ ಸ್ಥಾಪನೆ, ಮುಂದಿನ ಪೀಳಿಗೆಯ ಇಂಧನ ಕೋಶಗಳು ಹೈಡ್ರೋಜನ್ ಅನ್ನು ವಿದ್ಯುತ್‌ಗಾಗಿ ಪರಿವರ್ತಿಸಲು ಮೊಬೈಲ್ ಮತ್ತು ಸ್ಥಿರ ವಿದ್ಯುತ್ ಉತ್ಪಾದನೆ, ದೀರ್ಘಾವಧಿಯ ಶಕ್ತಿ ಸಂಗ್ರಹಣೆ ಅಭಿವೃದ್ಧಿ ಪಡಿಸಲು ಕೂಡ ಸಮ್ಮತಿ ಸೂಚಿಸಿದೆ.

    ನಮ್ಮ ಗುರಿ ತಲುಪಲು ಇದು ಪ್ರಮುಖ ಹೆಜ್ಜೆ

    ಇನ್ನು ಈ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಮಾತನಾಡಿದ ಆರ್​ಐಎಲ್​ ಅಧ್ಯಕ್ಷ ಮುಖೇಶ್​ ಅಂಬಾನಿ, ನಮ್ಮ ಸೌರಶಕ್ತಿ ಮೂಲಗಳನ್ನು ಬಳಸಿಕೊಂಡು ಗ್ರೀನ್​ ಎನರ್ಜಿಯಾಗಿ ಪರಿವರ್ತಿಸುವುದು. ಇದನ್ನು ಪೂರೈಸಲು ಹೊಸ ತಂತ್ರಜ್ಞಾನ ಹೆಚ್ಚಿಸುವ ನಮ್ಮ ಬದ್ಧತೆ ತಲುಪಲು ಇದು ಪ್ರಮುಖ ಹೆಜ್ಜೆಯಾಗಿದೆ ಎಂದಿದ್ದಾರೆ.

    ಇನ್ನು ಸ್ಟೈಸ್‌ಡಾಲ್ ಸಿಇಒ ಹೆನ್ರಿಕ್​ ಸ್ಟೈಸ್‌ಡಾಲ್ ಮಾತನಾಡಿ, ಭಾರತದ ಅತಿದೊಡ್ಡ ಕೈಗಾರಿಕಾ ಕಂಪನಿಯ ಹೊಸ ಶಕ್ತಿಯ ವೇದಿಕೆಯಾದ ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್ ನೊಂದಿಗೆ ಈ ಒಪ್ಪಂದಕ್ಕೆ ನಾವು ಉತ್ಸುಕರಾಗಿದ್ದೇವೆ ಎಂದರು

    ಸ್ಟೈಸ್‌ಡಾಲ್ ಕುರಿತು
    ಸ್ಟೈಸ್‌ಡಾಲ್ ನಾಲ್ಕು ಅಂಗಸಂಸ್ಥೆಗಳನ್ನು ಹೊಂದಿದೆ. ಪ್ರತಿಯೊಂದೂ ಪ್ರತ್ಯೇಕ ನವೀಕರಿಸಬಹುದಾದ-ಶಕ್ತಿ ಉತ್ಪಾದನಾ ವಿಧಾನಗಳ ಮೇಲೆ ಕೇಂದ್ರೀಕರಿಸಿದೆ. ಸ್ಟೈಸ್‌ಡಾಲ್ ಆಫ್‌ಶೋರ್ ಟೆಕ್ನಾಲಜೀಸ್ ಆಫ್‌ಶೋರ್, ಫ್ಲೋಟಿಂಗ್, ವಿಂಡ್-ಟರ್ಬೈನ್ ಮಾಡ್ಯೂಲ್ ಅನ್ನು ಟೆಟ್ರಾ ಎಂದು ಅಭಿವೃದ್ಧಿಪಡಿಸಿದೆ. ಸ್ಟೈಸ್ಡಾಲ್ ಸ್ಟೋರೇಜ್ ಟೆಕ್ನಾಲಜೀಸ್ ಗ್ರಿಡ್ ಸ್ಕೇಲ್ ಎಂಬ ಶಕ್ತಿ-ಶೇಖರಣಾ ಪರಿಹಾರವನ್ನು ಅಭಿವೃದ್ಧಿಪಡಿಸಿದೆ.

    ಇದನ್ನು ಓದಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಸ್ವಸ್ಥ; ದೆಹಲಿಯ ಏಮ್ಸ್​ಗೆ ದಾಖಲು​

    ಕಳೆದ ಜೂನ್ ನಲ್ಲಿ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಕಂಪನಿಯ ಅಧ್ಯಕ್ಷ ಮುಖೇಶ್ ಅಂಬಾನಿ ತಮ್ಮ ಹೊಸ ಇಂಧನ ವ್ಯವಹಾರ ಕುರಿತು ತಿಳಿಸಿದ್ದರು. ಈ ವೇಳೆ ತಮ್ಮ ಹೊಸ ಇಂಧನ ವ್ಯವಹಾರ ಯೋಜನೆ ಕುರಿತು ವಿವರಿಸಿದ್ದರು.

    ಇದನ್ನು ಓದಿ: ಗರ್ಭಪಾತದ ಅವಧಿಯನ್ನು 24 ವಾರಕ್ಕೆ ವಿಸ್ತರಿಸಿದ ಕೇಂದ್ರ; ಈ ವರ್ಗದ ಮಹಿಳೆಯರಿಗೆ ಮಾತ್ರ ಅವಕಾಶ

    ಗ್ರೀನ್ ಹೈಡ್ರೋಜನ್ ಎಂದರೇನು?
    ಗ್ರೀನ್ ಹೈಡ್ರೋಜ್ ನವೀಕರಿಸಬಹುದಾದ ಶಕ್ತಿ ಅಥವಾ ಪ್ರಕ್ರಿಯೆಗಳನ್ನು ಬಳಸಿ ಉತ್ಪಾದಿಸಿದಾಗ ಹೈಡ್ರೋಜನ್ ಅನ್ನು ನವೀಕರಿಸಬಹುದಾದ ಶಕ್ತಿಯಂತೆ ಅಗತ್ಯ ಸಮಯದಲ್ಲಿ ಬಳಸಲು ಸಂಗ್ರಹಿಸಲು ಒಂದು ವಿಧಾನವಾಗಿದೆ. ಹೈಡ್ರೋಜನ್ ಶಕ್ತಿಯನ್ನು ಗ್ಯಾಸ್ ರೂಪದಲ್ಲಿ ಇಲ್ಲವೇ ನೈಸರ್ಗಿಕ ಅನಿಲ ಪೈಪ್‌ಗಳ ಮೂಲಕವೂ ತಲುಪಿಸಬಹುದಾಗಿದೆ.

    ಕೈಗಾರಿಕಾ ವಲಯದಲ್ಲಿ ಶಕ್ತಿಯ ವಿನಿಯೋಗವು ಬಹುಪಾಲು ಗಾತ್ರ ಹೊಂದಿದ್ದು 56% ಶಕ್ತಿಯನ್ನು ಕೈಗಾರಿಕಾ ವಲಯವೊಂದೇ ವಿನಿಯೋಗಿಸುತ್ತಿದೆ. ನಂತರದ ಸ್ಥಾನಗಳಲ್ಲಿ ವಸತಿ, ಕೃಷಿ, ವಾಣಿಜ್ಯ ಮತ್ತು ಸಾರ್ವಜನಿಕ ವಲಯಗಳು 31% ಮತ್ತು ಸಾರಿಗೆ ವಲಯವು 10% ವಾಗಿದೆ. ಕೈಗಾರಿಕಾ ವಲಯದಲ್ಲಿ ಕಬ್ಬಿಣ ಹಾಗೂ ಉಕ್ಕು 17% ಶಕ್ತಿ ಬಳಕೆ ಮಾಡಿದರೆ ರಾಸಾಯನಿಕಗಳು 4%, ನಿರ್ಮಾಣದಲ್ಲಿ 2% ಶಕ್ತಿಯನ್ನು ವಿನಿಯೋಗಿಸುತ್ತಿವೆ
    Published by:Seema R
    First published: