ರಿಲಾಯನ್ಸ್-ಮೈಕ್ರೋಸಾಫ್ಟ್ ಒಪ್ಪಂದ ಈ ದಶಕದ ಮಹತ್ವದ ಬೆಳವಣಿಗೆ: ಮುಕೇಶ್ ಅಂಬಾನಿ

ಕಳೆದ ವರ್ಷ ಎರಡೂ ಸಂಸ್ಥೆಗಳು 10 ವರ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದವು. ಸಣ್ಣ ಗಾತ್ರದ ಸಂಸ್ಥೆಗಳಿಗೆ ಕ್ಲೌಡ್ ಆಧಾರಿತ ಸೇವೆ, ಬ್ಲಾಕ್ ಚೈನ್, ಮಲ್ಟಿಮೀಡಿಯಾ, ಗೇಮಿಂಗ್ ಇತ್ಯಾದಿ ವ್ಯವಹಾರಗಳಲ್ಲಿ ತಂತ್ರಜ್ಞಾನ ನೆರವಿಗೆ ಮೈಕ್ರೋಸಾಫ್ಟ್ ಜೊತೆ ರಿಲಾಯನ್ಸ್ ಒಪ್ಪಂದ ಮಾಡಿಕೊಂಡಿದೆ.

ಮುಖೇಶ್​​ ಅಂಬಾನಿ

ಮುಖೇಶ್​​ ಅಂಬಾನಿ

 • News18
 • Last Updated :
 • Share this:
  ಮುಂಬೈ(ಫೆ. 24): ರಿಲಾಯನ್ಸ್ ಇಂಡಸ್ಟ್ರೀಸ್ (ಆರ್​ಐಎಲ್) ಹಾಗೂ ಮೈಕ್ರೋಸಾಫ್ಟ್ ಸಂಸ್ಥೆಗಳ ಪಾಲುದಾರಿಕೆಯು ಈ ದಶಕದ ಮಹತ್ವದ ಬೆಳವಣಿಗೆ ಎಂದು ರಿಲಾಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಬಣ್ಣಿಸಿದರು. ಇಲ್ಲಿ ನಡೆದ ಫ್ಯೂಚರ್ ಡೀಕೋಡೆಡ್ ಸಿಇಒ 2020 ಶೃಂಗಸಭೆಯಲ್ಲಿ ನಡೆದ ಸಂವಾದದ ವೇಳೆ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಜೊತೆ ಮಾತನಾಡುತ್ತಾ ಅಂಬಾನಿ ಈ ವಿಚಾರ ಚರ್ಚಿಸಿದರು.

  ಕಳೆದ ವರ್ಷ ಎರಡೂ ಸಂಸ್ಥೆಗಳು 10 ವರ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದವು. ಸಣ್ಣ ಗಾತ್ರದ ಸಂಸ್ಥೆಗಳಿಗೆ ಕ್ಲೌಡ್ ಆಧಾರಿತ ಸೇವೆ, ಬ್ಲಾಕ್ ಚೈನ್, ಮಲ್ಟಿಮೀಡಿಯಾ, ಗೇಮಿಂಗ್ ಇತ್ಯಾದಿ ವ್ಯವಹಾರಗಳಲ್ಲಿ ತಂತ್ರಜ್ಞಾನ ನೆರವಿಗೆ ಮೈಕ್ರೋಸಾಫ್ಟ್ ಜೊತೆ ರಿಲಾಯನ್ಸ್ ಒಪ್ಪಂದ ಮಾಡಿಕೊಂಡಿದೆ. ಮೈಕ್ರೋಸಾಫ್ಟ್​ನ Azure ವ್ಯವಸ್ಥೆ ಹೊಂದಿರುವ ಡೇಟಾ ಸೆಂಟರ್​ಗಳನ್ನು ರಿಲಾಯನ್ಸ್ ಸ್ಥಾಪಿಸಿದೆ. ಮೈಕ್ರೋಸಾಫ್ಟ್ ಜೊತೆಗಿನ ಈ ಒಪ್ಪಂದದಿಂದಾಗಿ ಸಣ್ಣ ಸಂಸ್ಥೆಗಳಿಗೆ ಕಡಿಮೆ ವೆಚ್ಚದಲ್ಲಿ ಕನೆಕ್ಟಿವಿಟಿ ಮೊದಲಾದ ಸೇವೆಗಳನ್ನು ನೀಡಲು ಸಾಧ್ಯವಾಗಿದೆ ಎಂಬುದು ರಿಲಾಯನ್ಸ್ ಸಂಸ್ಥೆಯ ಅಭಿಪ್ರಾಯ.

  ಇದನ್ನೂ ಓದಿ: ಕೊರೊನಾ ವೈರಸ್: ಚೀನಾದಲ್ಲಿ ಸಾವಿನ ಸಂಖ್ಯೆ 2,592ಕ್ಕೆ ಏರಿಕೆ; 2ನೇ ಸ್ಥಾನಕ್ಕೇರಿದ ದಕ್ಷಿಣ ಕೊರಿಯಾ

  ಇನ್ನು, ಇವತ್ತು ನಡೆದ ಶೃಂಗಸಭೆಯಲ್ಲಿ ಮುಕೇಶ್ ಅಂಬಾನಿ ಅವರು ಡೊನಾಲ್ಡ್ ಟ್ರಂಪ್ ಅವರ ಭಾರತ ಪ್ರವಾಸದ ಬಗ್ಗೆಯೂ ಮಾತನಾಡಿದರು. ಹಿಂದಿನ ಅಮೆರಿಕಾ ಅಧ್ಯಕ್ಷರು ಭೇಟಿ ಮಾಡಿದ ಭಾರತಕ್ಕೂ ಟ್ರಂಪ್ ಕಾಣುತ್ತಿರುವ ಭಾರತಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಎಂದು ಅಂಬಾನಿ ತಿಳಿಸಿದರು.

  ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

  First published: