HOME » NEWS » National-international » RIL DENIES REPORTS OF NITA AMBANI JOINING BHU AS VISITING PROFESSOR SNVS

Nita Ambani - ಬನಾರಸ್ ಹಿಂದೂ ವಿವಿ ಬೋಧಕವರ್ಗಕ್ಕೆ ನೀತಾ ಅಂಬಾನಿ: ಸುದ್ದಿ ತಳ್ಳಿಹಾಕಿದ ಆರ್​ಐಎಲ್

ಬನಾರಸ್ ಹಿಂದೂ ವಿವಿಯಲ್ಲಿ ನೀತಾ ಅಂಬಾನಿ ವಿಸಿಟಿಂಗ್ ಪ್ರೊಫೆಸರ್ ಆಗಲಿದ್ದಾರೆ ಎಂಬ ಸುದ್ದಿಯನ್ನು ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ನಿರಾಕರಿಸಿದೆ. ಅಂಥ ಯಾವುದೇ ಪ್ರಸ್ತಾಪವಾಗಲೀ ಆಹ್ವಾನವಾಗಲೀ ಬಂದಿಲ್ಲ ಎಂದು ಸಂಸ್ಥೆಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

news18
Updated:March 17, 2021, 1:17 PM IST
Nita Ambani - ಬನಾರಸ್ ಹಿಂದೂ ವಿವಿ ಬೋಧಕವರ್ಗಕ್ಕೆ ನೀತಾ ಅಂಬಾನಿ: ಸುದ್ದಿ ತಳ್ಳಿಹಾಕಿದ ಆರ್​ಐಎಲ್
ನೀತಾ ಅಂಬಾನಿ
  • News18
  • Last Updated: March 17, 2021, 1:17 PM IST
  • Share this:
ಮುಂಬೈ(ಮಾ. 17): ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ನೀತಾ ಅಂಬಾನಿ ವಿಸಿಟಿಂಗ್ ಪ್ರೊಫೆಸರ್ ಆಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಕೆಲ ಮಾಧ್ಯಮಗಳಲ್ಲಿ ಬಂದಿದೆ. ಆದರ, ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಈ ವರದಿಯನ್ನು ತಳ್ಳಿಹಾಕಿದೆ. ರಿಲಾಯನ್ಸ್ ಇಂಡಸ್ಟ್ರೀಸ್​ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿರುವ ನೀತಾ ಅಂಬಾನಿ ಅವರು ಬಿಎಚ್​ಯುನ ಬೋಧಕ ವರ್ಗ ಸೇರುವ ಯಾವುದೇ ಪ್ರಸ್ತಾಪ ಅಥವಾ ಆಹ್ವಾನವಾಗಲೀ ಬಂದಿಲ್ಲ ಎಂದು ಆರ್​ಐಎಲ್​ನ ವಕ್ತಾರರು ಸ್ಪಷ್ಟಪಡಿಸಿದ್ದಾರೆ ಎಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬನಾರಸ್ ಹಿಂದೂ ಯೂನಿವರ್ಸಿಟಿಗೆ ನೀತಾ ಅಂಬಾನಿ ಅವರು ವಿಸಿಟಿಂಗ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಾರೆ ಎಂಬ ಸುದ್ದಿ ಕೇಳಿಬಂದ ಹಿನ್ನೆಲೆಯಲ್ಲಿ ನಿನ್ನೆ ವಿದ್ಯಾರ್ಥಿಗಳು ವಿವಿ ಬಳಿ ಪ್ರತಿಭಟನೆ ನಡೆಸಿದ್ದಾರೆ ಎಂದು ಹಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಸ್ಪಷ್ಟೀಕರಣ ನೀಡಿದ್ದು, ರಿಲಾಯನ್ಸ್ ಫೌಂಡೇಶನ್​ನ ಮುಖ್ಯಸ್ಥೆಯಾಗಿರುವ ನೀತಾ ಅಂಬಾನಿ ಅವರು ಬಿಎಚ್​ಯುಗೆ ಜೋಡಿತಗೊಂಡಿಲ್ಲ ಎಂದು ತಿಳಿಸಿದ್ದಾರೆ.ಕೆಲ ಮಾಧ್ಯಮಗಳಲ್ಲಿ ಬಂದ ವರದಿ ಪ್ರಕಾರ ನೀತಾ ಅಂಬಾನಿ ಜೊತೆಗೆ ಇತರ ಉದ್ಯಮಿಗಳಾದ ಗೌತಮ್ ಅದಾನಿ ಮತ್ತು ಲಕ್ಷ್ಮೀ ಮಿತ್ತಲ್ ಅವರ ಪತ್ನಿಯರ ಹೆಸರನ್ನೂ ಬನಾರಸ್ ಹಿಂದೂ ಯೂನಿವರ್ಸಿಟಿಯ ಬೋಧಕ ವರ್ಗಕ್ಕೆ ಪರಿಗಣಿಸಲಾಗಿದೆ ಎನ್ನಲಾಗಿತ್ತು. ಈಗ ನೀತಾ ಅಂಬಾನಿಗೂ ಬಿಎಚ್​ಯುನ ಬೋಧನಾ ಜವಾಬ್ದಾರಿಗೂ ಸಂಬಂಧ ಇಲ್ಲವೆಂದು ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಸ್ಪಷ್ಪಪಡಿಸಿದೆ.
Published by: Vijayasarthy SN
First published: March 17, 2021, 1:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories