ಬ್ರಾಡ್​​ಬ್ಯಾಂಡ್ ಸೆಕ್ಟರ್​ಗೆ ರಿಲಾಯನ್ಸ್ ಎಂಟ್ರಿ; ಜಿಯೋ ಗೀಗಾ ಫೈಬರ್ ಯೋಜನೆ ಲೋಕಾರ್ಪಣೆ


Updated:July 5, 2018, 1:57 PM IST
ಬ್ರಾಡ್​​ಬ್ಯಾಂಡ್ ಸೆಕ್ಟರ್​ಗೆ ರಿಲಾಯನ್ಸ್ ಎಂಟ್ರಿ; ಜಿಯೋ ಗೀಗಾ ಫೈಬರ್ ಯೋಜನೆ ಲೋಕಾರ್ಪಣೆ

Updated: July 5, 2018, 1:57 PM IST
- ನ್ಯೂಸ್18 ಕನ್ನಡ

ನವದೆಹಲಿ(ಜು. 05): ಜಿಯೋ ಮೂಲಕ ವಯರ್​ಲೆಸ್ ಟೆಲಿಕಾಂ ಕ್ಷೇತ್ರಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಇದೀಗ ಬ್ರಾಡ್​ಬ್ಯಾಂಡ್ ಕ್ಷೇತ್ರದಲ್ಲೂ ಹೊಸ ಟ್ರಂಪ್ ಕಾರ್ಡ್ ಪ್ರಯೋಗಿಸಿದೆ. ಇಂದು ನಡೆದ 41ನೇ ವಾರ್ಷಿಕ ಸಾಮಾನ್ಯ ಸಭೆ(ಎಜಿಎಂ)ಯಲ್ಲಿ ಮುಕೇಶ್ ಅಂಬಾನಿ ಅವರು ಜಿಯೋ ಗೀಗಾ ಫೈಬರ್ ಯೋಜನೆಗೆ ಚಾಲನೆ ಕೊಟ್ಟರು. 100 ಎಂಬಿಪಿಎಸ್ ಡೇಟಾ ಸ್ಪೀಡ್ ಇರುವ ಈ ಬ್ರಾಡ್​ಬ್ಯಾಂಡ್ ಯೋಜನೆಯು ಈ ಕ್ಷೇತ್ರದಲ್ಲಿ ಗೇಮ್ ಚೇಂಜರ್ ಆಗಲಿದೆ ಎನ್ನಲಾಗುತ್ತಿದೆ.

“ಈ ಉದ್ಯಮದಲ್ಲಿ ಕಂಪನಿಯಿಂದ 25 ಕೋಟಿ ಡಾಲರ್ ಹಣದ ಹೂಡಿಕೆಯಾಗಿದೆ. ಅತ್ಯಾಧುನಿಕ ಫೈಬರ್ ಆಧಾರಿತ ಬ್ರಾಡ್​ಬ್ಯಾಂಡ್ ಸೇವೆಗಳನ್ನು ದೇಶಾದ್ಯಂತ 1100 ನಗರಗಳಿಗೆ ವಿಸ್ತರಿಸುತ್ತೇವೆ. ನಿಮ್ಮ ಮನೆಯಲ್ಲಿರುವ ಸ್ವಿಚ್​ಗಳನ್ನು ನೀವು ಹೊರಗಿನಿಂದಲೂ ನಿಯಂತ್ರಿಸಲು ಇನ್ಮುಂದೆ ಸಾಧ್ಯವಾಗಲಿದೆ. ನಿಮ್ಮ ಮನೆಗಳ ಸುರಕ್ಷತೆಗೆ ಹೊಸ ವಿಧಾನ ಸಿಕ್ಕಿದೆ,” ಎಂದು ಅಂಬಾನಿ ಈ ಸಭೆಯಲ್ಲಿ ತಿಳಿಸಿದ್ದಾರೆ.

ಜಿಯೋಫೈಬರ್​ಗೂ ಮಾಮೂಲಿಯ ಬ್ರಾಡ್​ಬ್ಯಾಂಡ್​ಗೂ ಏನು ವ್ಯತ್ಯಾಸ?

ಮಾಮೂಲಿಯ ಬ್ರಾಡ್​ಬ್ಯಾಂಡ್ ಕನೆಕ್ಷನ್​ನಲ್ಲಿ ಕಟ್ಟಡದ ಹೊರಗಿನವರೆಗಷ್ಟೇ ಫೈಬರ್ ಕೇಬಲ್ ಇರುತ್ತದೆ. ಕಟ್ಟಡದ ಒಳಗೆ ಕಾಪರ್ ಕೇಬಲ್ ಬಳಕೆಯಾಗುತ್ತದೆ. ಇದರಿಂದ ಇಂಟರ್ನೆಟ್ ಸ್ಪೀಡ್​ಗೆ ಧಕ್ಕೆಯಾಗುತ್ತದೆ. ಆದರೆ, ಜಿಯೋಫೈಬರ್​ನಲ್ಲಿ ಪ್ರತಿಯೊಂದೂ ಕೇಬಲ್ ಕೂಡ ಫೈಬರ್​ನಿಂದಲೇ ಮಾಡಿರುತ್ತದೆ. ಇದರಿಂದ ಇಂಟರ್ನೆಟ್ ಸ್ಪೀಡ್​ನಲ್ಲಿ ಕುಸಿತವಾಗುವಂತಹ ಸಾಧ್ಯತೆ ಇರುವುದಿಲ್ಲ.

ಕನೆಕ್ಷನ್ ಹೇಗೆ?
ಗೀಗಾಹಬ್ ಸೇವೆಯಲ್ಲಿ 100 ಎಂಬಿಪಿಎಸ್ ವೇಗದ 1.1 ಟೆರಾ ಬೈಟ್ ಉಚಿತ ಡೇಟಾ ನೀಡಲಾಗುತ್ತದೆ. ಇದನ್ನು ಪಡೆಯಲು ಸೆಕ್ಯೂರಿಟಿ ಡೆಪಾಸಿಟ್ ಆಗಿ 4,500 ರೂ ಮುಂಗಡ ಪಾವತಿ ಮಾಡಬೇಕು.
First published:July 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ