ಆನ್ಲೈನ್ ಔಷಧ ಮಾರಾಟ ಕ್ಷೇತ್ರಕ್ಕೆ ಕಾಲಿಟ್ಟ ರಿಲಯನ್ಸ್; ನೆಟ್ಮೆಡ್ಸ್ನ ಶೇ.60 ಷೇರು ಖರೀದಿ
ಕೊರೋನಾ ವೈರಸ್ ಹೆಚ್ಚಾದಂತೆ ದೇಶದಲ್ಲಿ ಇ ಮಾಕರ್ಸ್ಗೆ ಹೆಚ್ಚಿನ ಬೇಡಿಕೆ ಬರಲು ಆರಂಭವಾಗಿತ್ತು. ಇದನ್ನು ಅರಿತ ರಿಲಯನ್ಸ್ ಮೊಟ್ಟ ಮೊದಲ ಬಾರಿಗೆ ಜಿಯೋ ಮಾರ್ಟ್ ಆರಂಭಿಸುವ ಮೂಲಕ ತನ್ನ ಆನ್ಲೈನ್ ಕ್ಷೇತ್ರದ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿತ್ತು.
ಮುಂಬೈ (ಆ.19): ದೇಶದ ಅತಿ ದೊಡ್ಡ ಆನ್ಲೈನ್ ಫಾರ್ಮಸಿ ನೆಟ್ಮೆಡ್ಸ್ನ ಶೇ. 60 ಷೇರನ್ನು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ 620 ಕೋಟಿ ರೂಪಾಯಿಗೆ ಪಡೆದುಕೊಂಡಿದೆ. ಈ ಮೂಲಕ ಇ-ಕಾಮರ್ಸ್ ದಿಗ್ಗಜ ಅಮೆಜಾನ್ಗೆ ನೇರ ಸ್ಪರ್ಧೆ ನೀಡಲು ರಿಲಯನ್ಸ್ ಮುಂದಾಗಿದೆ.
ಕೊರೋನಾ ವೈರಸ್ ಹೆಚ್ಚಾದಂತೆ ದೇಶದಲ್ಲಿ ಇ ಮಾಕರ್ಸ್ಗೆ ಹೆಚ್ಚಿನ ಬೇಡಿಕೆ ಬರಲು ಆರಂಭವಾಗಿತ್ತು. ಇದನ್ನು ಅರಿತ ರಿಲಯನ್ಸ್ ಮೊಟ್ಟ ಮೊದಲ ಬಾರಿಗೆ ಜಿಯೋ ಮಾರ್ಟ್ ಆರಂಭಿಸುವ ಮೂಲಕ ತನ್ನ ಆನ್ಲೈನ್ ಕ್ಷೇತ್ರದ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿತ್ತು. ಈಗ ಆನ್ಲೈನ್ ಮೂಲಕ ಔಷಧ ಮಾರಾಟ ಕ್ಷೇತ್ರದಲ್ಲೂ ಸಂಸ್ಥೆ ತನ್ನ ಹಿಡಿತ ಸಾಧಿಸಿದೆ.
ಪ್ರದೀಪ್ ದಾಧಾ ಎಂಬುವವರು ನೆಟ್ಮೆಡ್ಸ್ ಅನ್ನು ಸ್ಥಾಪಿಸಿದ್ದರು. ಇದು ಜನರಿಗೆ ಔಷಧ ಹಾಗೂ ಮಕ್ಕಳ ಆರೈಕೆಗೆ ಬೇಕಿರುವ ವಸ್ತುಗಳನ್ನು ಡೆಲಿವರಿ ಮಾಡುತ್ತಿದೆ. ಇದರ ಜೊತೆಗೆ ನೆಟ್ಮೆಡ್ ಆಪ್ ಹಾಗೂ ವೆಬ್ಸೈಟ್ ಮೂಲಕ ವೈದ್ಯರ ಅಪಾಯಿಟ್ಮೆಂಟ್ ಕೂಡ ಕಾಯ್ದಿರಿಸಬಹುದಾಗಿದೆ. ದೊಡ್ಡ ಮಟ್ಟದಲ್ಲಿ ಹಣವನ್ನು ಕೂಡಿಸಲು ಸಾಧ್ಯವಾಗದ ಕಾರಣ ಕಳೆದ ಕೆಲ ತಿಂಗಳಿಂದ ಈ ಸಂಸ್ಥೆ ಷೇರುಗಳನ್ನು ಮಾರಾಟ ಮಾಡಲು ಮುಂದೆ ಬಂದಿತ್ತು.
ಡೌನ್ ಪೆನ್ ಕಾಂಬೋಡಿಯಾ ಗ್ರುಪ್, ಸಿಸ್ಟೆಮಾ ಏಷಿಯಾ ಫಂಡ್, ಟ್ಯಾನ್ಕ್ಯಾಮ್ ಇನ್ವೆಸ್ಟ್ಮೆಂಟ್ ಮತ್ತು ಹೆಲ್ತ್ಕೇರ್ ನೆಟ್ಮೆಡ್ಸ್ ಮೇಲೆ ಹೂಡಿಕೆ ಮಾಡಿದ್ದವು.
ರಿಲಯನ್ಸ್ ರಿಟೇಲ್ ಉದ್ಯಮದ ನಿರ್ದೇಶಕಿ ಇಶಾ ಅಂಬಾನಿ ಈ ಒಪ್ಪಂದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಒಪ್ಪಂದದಿಂದ ನಾವು ಜನರಿಗೆ ಕಡಿಮೆ ಮೊತ್ತದಲ್ಲಿ ಹಾಗೂ ಉತ್ತಮ ಗುಣಮಟ್ಟದಲ್ಲಿ ಔಷಧಗಳನ್ನು ಜನರಿಗೆ ತಲುಪಿಸಲು ಸಾಧ್ಯವಾಗಲಿದೆ ಎಂದರು.
Published by:Rajesh Duggumane
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ