news18 Updated:February 23, 2021, 9:05 AM IST
ರಿಲಾಯನ್ಸ್ ಇಂಡಸ್ಟ್ರೀಸ್
- News18
- Last Updated:
February 23, 2021, 9:05 AM IST
ಮುಂಬೈ(ಫೆ. 23): ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ತನ್ನ ತೈಲದಿಂದ ರಾಸಾಯನಿಕ ತಯಾರಿಕೆಯ (O2C) ಎಲ್ಲಾ ವ್ಯವಹಾರಗಳನ್ನ ಒಂದು ಸ್ವತಂತ್ರ ಅಂಗಸಂಸ್ಥೆ (Independent Subsidiary) ಅಡಿ ತರುವುದಾಗಿ ಹೇಳಿದೆ. ಈ ಅಂಗ ಸಂಸ್ಥೆಯ ಸಂಪೂರ್ಣ ಮ್ಯಾನೇಜ್ಮೆಂಟ್ ಆರ್ಐಎಲ್ ನಿಯಂತ್ರಣದಲ್ಲೇ ಇರಲಿದೆ. ಆದಾಯ ಸೇರಿದಂತೆ ಪ್ರತಿಯೊಂದು ಅಂಶವನ್ನೂ ಹೊಸದಾಗಿ ರಚಿಸಲಾಗುವ ಅಂಗಸಂಸ್ಥೆಗೆ ರವಾನಿಸಲಾಗುವುದು ಎಂದು ಆರ್ಐಎಲ್ ಇಂದು ಹೇಳಿಕೆ ನೀಡಿದೆ.
ರಿಲಾಯನ್ಸ್ನ ಎಲ್ಲಾ ತೈಲ ಮರುಸಂಸ್ಕರಣೆ (Oil Refining), ಮಾರ್ಕೆಟಿಂಗ್ ಮತ್ತು ಪೆಟ್ರೋಕೆಮಿಕಲ್ ವ್ಯವಹಾರಗಳು ನೂತನ ಅಂಗಸಂಸ್ಥೆಗೆ ಜೋಡಿತವಾಗುತ್ತವೆ. ರಿಲಾಯನ್ಸ್ ಸಂಸ್ಥೆಯ ಮರುಸಂಘಟನೆಯ ವೇಳೆ ಷೇರುದಾರಿಕೆಯಲ್ಲಿ ಯಾವುದೇ ಬದಲಾವಣೆ ಇರದೆ ಹಿಂದಿನಂತೆಯೇ ಉಳಿಯಲಿದೆ. ಈ O2C ವ್ಯವಹಾರಗಳಲ್ಲಿ ಶೇ. 49.14ರಷ್ಟು ಪಾಲು ಪ್ರೊಮೋಟರ್ ಕೈಯಲ್ಲೇ ಉಳಿಯಲಿದೆ ಎಂದು ತಿಳಿಸಲಾಗಿದೆ.
Published by:
Vijayasarthy SN
First published:
February 23, 2021, 9:05 AM IST