• Home
 • »
 • News
 • »
 • national-international
 • »
 • RIL AGM 2020 - ರಿಲಾಯನ್ಸ್ ಎಜಿಎಂ; ಮೊದಲ ಬಾರಿಗೆ ಆನ್​ಲೈನ್​ನಲ್ಲಿ ಮಹಾಸಭೆ; Chatbot ಪ್ರಯೋಗ

RIL AGM 2020 - ರಿಲಾಯನ್ಸ್ ಎಜಿಎಂ; ಮೊದಲ ಬಾರಿಗೆ ಆನ್​ಲೈನ್​ನಲ್ಲಿ ಮಹಾಸಭೆ; Chatbot ಪ್ರಯೋಗ

ರಿಲಾಯನ್ಸ್ ಇಂಡಸ್ಟ್ರೀಸ್

ರಿಲಾಯನ್ಸ್ ಇಂಡಸ್ಟ್ರೀಸ್

ಆನ್​ಲೈನ್ ಮೂಲಕ ಲಕ್ಷಾಂತರ ಮಂದಿಯನ್ನು ಸೇರಿಸಿ ಆರ್​ಐಎಲ್ ತನ್ನ ವಾರ್ಷಿಕ ಮಹಾ ಸಭೆ ಮಾಡುತ್ತಿದೆ. ಭಾರತದಲ್ಲಷ್ಟೇ ಅಲ್ಲ, ಬೇರೆ ದೇಶಗಳಲ್ಲಿರುವ ಲಕ್ಷಾಂತರ ಷೇರುದಾರರು Chatbot ಮೂಲಕ ಸಭೆಗೆ ಲಾಗಿನ್ ಆಗಬಹುದು.

 • News18
 • 3-MIN READ
 • Last Updated :
 • Share this:

  ಮುಂಬೈ(ಜುಲೈ 15): ಭಾರತದ ಅಗ್ರಗಣ್ಯ ಸಂಸ್ಥೆಗಳಲ್ಲೊಂದೆನಿಸಿದ ರಿಲಾಯನ್ಸ್ ಇಂಡಸ್ಟ್ರೀಸ್​ನ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ಇವತ್ತು ನಡೆಯಲಿದೆ. ಕಳೆದ ಕೆಲ ತಿಂಗಳಿಂದ ವಿಶ್ವಾದ್ಯಂತ ಹೂಡಿಕೆದಾರರನ್ನು ಆಕರ್ಷಿಸುವ ಮೂಲಕ ಬಹಳ ಸದ್ದು ಮಾಡುತ್ತಿರುವ ರಿಲಾಯನ್ಸ್ ಇದೀಗ ತನ್ನ ಸಾಮಾನ್ಯ ಸಭೆಯಲ್ಲೂ ವಿವಿಧ ವಿಚಾರಗಳಿಗೆ ಗಮನ ಸೆಳೆದಿದೆ. ತನ್ನ ದೊಡ್ಡ ಸಂಖ್ಯೆಯ ಷೇರುದಾರರು ಈ ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗುವಂತೆ Chatbot ತಂತ್ರಜ್ಞಾನವನ್ನು ಅಳವಡಿಸಿದೆ. 500 ಸ್ಥಳಗಳಿಂದ 1 ಲಕ್ಷಕ್ಕೂ ಹೆಚ್ಚು ಷೇರುದಾರರು ಒಮ್ಮೆಗೇ ಲಾಗ್ ಇನ್ ಆಗಿ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಸುತ್ತದೆ ಈ ವಿನೂತನ ತಂತ್ರಜ್ಞಾನ.


  ಆರ್​ಐಎಲ್ ಆನ್​ಲೈನ್​ನಲ್ಲಿ ಆ್ಯನುವಲ್ ಜನರಲ್ ಬಾಡಿ ಬೀಟಿಂಗ್ ನಡೆಸುತ್ತಿರುವುದು ಇದೇ ಮೊದಲು. ಈ ಮೊದಲು ಮುಂಬೈನಲ್ಲಿ ನಡೆಯುತ್ತಿದ್ದ ಈ ಮಹಾಸಭೆಯಲ್ಲಿ ಮುಂಬೈ ಪ್ರದೇಶದ ಹೊರಗಿನ ಕಂಪನಿ ಷೇರುದಾರಿಗೆ ಪಾಲ್ಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹಿಂದೆ ಧೀರೂಭಾಯ್ ಅಂಬಾನಿ ಕಾಲದಲ್ಲಿ ಸ್ಟೇಡಿಯಂಗಳಲ್ಲಿ ಎಜಿಎಂ ಸಭೆ ನಡೆಯುತ್ತಿತ್ತು. ನಂತರ ಕಾಲಘಟ್ಟದಲ್ಲಿ ಇದು ಆಡಿಟೋರಿಯಂಗಳಿಗೆ ಶಿಫ್ಟ್ ಆಯಿತು. ಈಗ ಪ್ರಪ್ರಥಮ ಬಾರಿಗೆ ಡಿಜಿಟಲ್ ಪ್ಲಾಟ್​ಫಾರ್ಮ್​ನಲ್ಲಿ ಸಭೆ ನಡೆಯುತ್ತಿದೆ.


  ಏನಿದು Chatbot?


  ಚಾಟ್​ಬೋಟ್ ಎನ್ನುವುದು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಷಲ್ ಇಂಟೆಲಿಜೆನ್ಸ್) ಸಹಾಯ ಹೊಂದಿರುವ ತಂತ್ರಜ್ಞಾನ. ನೇರವಾಗಿ ಸಂವಾದ ನಡೆಸಲು ಇದು ಸಹಕಾರಿಯಾಗುತ್ತದೆ. ಪಠ್ಯಗಳನ್ನ ಧ್ವನಿಗೆ ಪರಿವರ್ತನೆ ಮಾಡಬಲ್ಲುದು. ಧ್ವನಿಯನ್ನು ಪಠ್ಯವಾಗಿ ಪರಿವರ್ತಿಸಬಲ್ಲುದು. ಈಚೆಗೆ 53,124 ಕೋಟಿ ಮೌಲ್ಯದ ರಿಲಾಯನ್ಸ್ ಷೇರು ಮಾರಾಟ (Rights Issue) ಪ್ರಕ್ರಿಯೆ ನಡೆದಾಗ ಚಾಟ್​ಬೋಟ್ (Chatbot) ತಂತ್ರಜ್ಞಾನವನ್ನು ಮೊದಲ ಬಾರಿಗೆ ರಿಲಾಯನ್ಸ್ ಅಳವಡಿಸಿಕೊಂಡಿತ್ತು. ಈಗ ಎಜಿಎಂ ಸಭೆಯಲ್ಲೂ ಮೊದಲ ಬಾರಿಗೆ ಇದನ್ನ ಅಳವಡಿಸಲಾಗಿದೆ.


  ಇದನ್ನೂ ಓದಿ: ರಿಲಾಯನ್ಸ್​ ಮುಖ್ಯಸ್ಥ ಮುಖೇಶ್​ ಅಂಬಾನಿ ಈಗ ವಿಶ್ವದ ಆರನೇ ಶ್ರೀಮಂತ ವ್ಯಕ್ತಿ


  ರಿಲಾಯನ್ಸ್ ಇಂಡಸ್ಟ್ರೀಸ್​ನ ಷೇರ್​ಹೋಲ್ಡರ್​ಗಳು 7977111111 ನಂಬರ್​ಗೆ Hi ಎಂದು ಮೆಸೇಜ್ ಕಳುಹಿಸಿದರೆ ಚಾಟ್​ಬೋಟ್ ಸೇವೆ ಪ್ರಾರಂಭವಾಗುತ್ತದೆ. ಆರ್​ಐಎಲ್ ಹಾಗೂ ಎಜಿಎಂ ಸಭೆಯ ವಿವಿಧ ವಿವರಗಳನ್ನ ನೀಡಬಲ್ಲುದು. ಹೂಡಿಕೆದಾರರು, ಷೇರುದಾರರು ಮತ್ತು ಸಾರ್ವಜನಿಕರೊಂದಿಗೆ ಸಂವಾದಿಯಾಗಿ ಈ ಮಾಹಿತಿಯನ್ನು ರವಾನಿಸಬಲ್ಲುದು. ಏಕಕಾಲದಲ್ಲಿ 50 ಸಾವಿರ ಪ್ರಶ್ನೆಗಳಿಗೆ ಇದು ಪ್ರತಿಕ್ರಿಯೆ ನೀಡಬಲ್ಲುದು. 1985ರಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ವಾರ್ಷಿಕ ಮಹಾಸಭೆ ಮುಂಬೈನ ಕೋಆಪರೇಜ್ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆದಿತ್ತು. ಆಗ ಪಾಲ್ಗೊಂಡಿದ್ದು 12 ಸಾವಿರ ಮಂದಿ. ಈಗ ಇನ್ನಷ್ಟು ಹಿಗ್ಗಿರುವ ಆರ್​ಐಎಲ್ ಸುಮಾರು 26 ಲಕ್ಷ ಷೇರುದಾರರನ್ನು ಹೊಂದಿದೆ. ಆನ್​ಲೈನ್ ಮೂಲಕ ಲಕ್ಷಾಂತರ ಮಂದಿಯನ್ನು ಸೇರಿಸಿ ಸಭೆ ಮಾಡುತ್ತಿದೆ. ಭಾರತದಲ್ಲಷ್ಟೇ ಅಲ್ಲ, ಬೇರೆ ದೇಶಗಳಲ್ಲಿರುವ ರಿಲಾಯನ್ಸ್ ಷೇರುದಾರರು ಚಾಟ್​ಬೋಟ್ ಮೂಲಕ ಸಭೆಗೆ ಲಾಗಿನ್ ಆಗಬಹುದು.


  ಜಿಯೋ ಮೀಟ್, ಸಿಸ್ಕೋ ವೆಬೆಕ್ಸ್ ಮೊದಲಾದ ಪ್ಲಾಟ್​ಫಾರ್ಮ್​ಗಳ ಮೂಲಕ ವಿಡಿಯೋ ಕಾನ್ಫೆರೆನ್ಸ್ ವ್ಯವಸ್ಥೆಯೂ ಇದೆ.


  ಕಳೆದ ವರ್ಷ ನಡೆದ ವಾರ್ಷಿಕ ಸಭೆಯಲ್ಲಿ 2021, ಮಾರ್ಚ್ 31ರೊಳಗೆ ರಿಲಾಯನ್ಸ್ ಸಂಸ್ಥೆಯನ್ನು ಸಾಲಮುಕ್ತವಾಗಿ ಮಾಡುವ ಗುರಿ ಇದೆ ಎಂದು ತಿಳಿಸಲಾಗಿತ್ತು. ಆಗಸ್ಟ್ ತಿಂಗಳಲ್ಲಿ ಆ ಸಭೆ ನಡೆದದ್ದು. ಅದಾಗಿ ಒಂದೇ ವರ್ಷದೊಳಗೆ ಆ ಗುರಿ ಈಡೇರಿದೆ. 1,61,035 ಕೋಟಿ ರೂಪಾಯಿ ನಿವ್ವಳ ಸಾಲ ಹೊಂದಿದ್ದ ರಿಲಾಯನ್ಸ್ ಸಂಸ್ಥೆ ಕೆಲವೇ ತಿಂಗಳ ಅವಧಿಯಲ್ಲಿ 1.75 ಲಕ್ಷ ಕೋಟಿಗೂ ಹೆಚ್ಚು ಬಂಡವಾಳವನ್ನು ಆಕರ್ಷಿಸಿದೆ.


  ಇದನ್ನೂ ಓದಿ: Jio-Qualcomm Deal - ಜಿಯೋಗೆ ಒಲಿದ 13ನೇ ಒಪ್ಪಂದ; ಕ್ವಾಲ್​ಕಾಮ್ ವೆಂಚರ್ಸ್​ನಿಂದ 730 ಕೋಟಿ ರೂ ಹೂಡಿಕೆ


  ಫೇಸ್​ಬುಕ್​ನದ್ದು ಸೇರಿದಂತೆ 13 ಹೂಡಿಕೆ ಒಪ್ಪಂದಗಳಿಂದ ರಿಲಾಯನ್ಸ್ 1.18 ಲಕ್ಷ ಕೋಟಿ ರೂ ಬಂಡವಾಳ ಸಂಗ್ರಹಿಸಿದೆ. ಇದಕ್ಕಾಗಿ ಸಂಸ್ಥೆಯ ಡಿಜಿಟಲ್ ವ್ಯವಹಾರದ ಶೇ. 25.24 ಪಾಲು ಮಾರಿದೆ. ಹಾಗೆಯೇ, ಹಾಲಿ ಷೇರುದಾರರಿಗೆ ತನ್ನ ಷೇರುಗಳನ್ನ (ರೈಟ್ಸ್ ಇಷ್ಯೂ) ಮಾರುವ ಮೂಲಕ 53,124 ಕೋಟಿ ರೂ ಹಣ ಸಂಗ್ರಹಿಸಿದೆ. ಇದರ ಜೊತೆಗೆ ಕಳೆದ ವರ್ಷ ತನ್ನ ಪೆಟ್ರೋಲಿಯಂ ವ್ಯವಹಾರದಲ್ಲಿ ಶೇ. 49ರಷ್ಟು ಪಾಲನ್ನು ಬಿಪಿ ಸಂಸ್ಥೆಗೆ ಮಾರುವ ಮೂಲಕ 7 ಸಾವಿರ ಕೋಟಿ ರೂ ಆದಾಯ ಗಳಿಸಿತ್ತು. ಇವೆಲ್ಲವೂ ಸೇರಿ 1.75 ಲಕ್ಷ ಕೋಟಿಗೂ ಅಧಿಕ ಹಣವನ್ನು ಮುಕೇಶ್ ಅಂಬಾನಿ ಮಾಲಕತ್ವದ ಸಂಸ್ಥೆ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಕಳೆದ ವರ್ಷದ ಸಭೆಯಲ್ಲಿ ತನ್ನ ಷೇರುದಾರರಿಗೆ ನೀಡಿದ್ದ ವಾಗ್ದಾನವನ್ನು ಅಂಬಾನಿ ಉಳಿಸಿಕೊಂಡಿದ್ದಾರೆ.

  Published by:Vijayasarthy SN
  First published: