HOME » NEWS » National-international » RIHANNA HOLDING PAKISTAN FLAG IMAGE IS FAKE PHOTO SESR STG

ಪಾಕ್​​ ಧ್ವಜ ಹಿಡಿದ ರಿಹಾನ್ನಾ; ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಈ ಫೋಟೋದ ಅಸಲಿಯತ್ತೇನು..?

ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಮಸೂದೆ ವಿರೋಧಿಸಿ ನಡೆಯುತ್ತಿರುವ ಹೋರಾಟ ಕುರಿತು ಪೋಸ್ಟ್ ಹಂಚಿಕೊಳ್ಳುವ ಮೂಲಕ ರಿಹಾನ್ನಾ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ

news18-kannada
Updated:February 6, 2021, 5:29 PM IST
ಪಾಕ್​​ ಧ್ವಜ ಹಿಡಿದ ರಿಹಾನ್ನಾ; ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಈ ಫೋಟೋದ ಅಸಲಿಯತ್ತೇನು..?
ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಮಸೂದೆ ವಿರೋಧಿಸಿ ನಡೆಯುತ್ತಿರುವ ಹೋರಾಟ ಕುರಿತು ಪೋಸ್ಟ್ ಹಂಚಿಕೊಳ್ಳುವ ಮೂಲಕ ರಿಹಾನ್ನಾ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ
  • Share this:
ಖ್ಯಾತ ಪಾಪ್ ತಾರೆ ಭಾರತದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ನೀಡುವುದಾಗಿ ಟ್ವೀಟ್ ಮಾಡಿದ ನಂತರ ರಿಹಾನ್ನಾ ಪರ - ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಂತೂ ಹಲವರು ರಿಹಾನ್ನಾಗೆ ಬೆಂಬಲ ಸೂಚಿಸಿದ್ದರೆ, ಇನ್ನೂ ಹಲವರು ಗಾಯಕಿಯ ಕಾಲೆಳೆಯುತ್ತಿದ್ದು, ವಿರೋಧ ಮಾಡುತ್ತಿದ್ದಾರೆ. ಇದೇ ರೀತಿ, ರಿಹಾನ್ನಾ ಬಗ್ಗೆ ಫೇಕ್ ಚಿತ್ರವೊಂದನ್ನು ಎಡಿಟ್ ಮಾಡಿ, ಈ ನಕಲಿ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಪಾಪ್ ಗಾಯಕಿ - ನಟಿ ರಿಹಾನ್ನಾ ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಹಿಡಿದಿರುವುದನ್ನು ತೋರಿಸುವ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಆದರೆ, ಸಾವಿರಾರು ಬಾರಿ ಶೇರ್ ಆಗಿರುವ ಈ ಚಿತ್ರವನ್ನು ಎಡಿಟ್ ಮಾಡಲಾಗಿದ್ದು, ನಕಲಿಯಾಗಿದೆ. ಮೂಲ ಫೋಟೋದಲ್ಲಿ ರಿಹಾನ್ನಾ ವಾಸ್ತವವಾಗಿ 2019 ರ ಕ್ರಿಕೆಟ್ ಪಂದ್ಯವೊಂದರಲ್ಲಿ ಭಾಗಿಯಾಗಿದ್ದು, ಅಲ್ಲಿ ವೆಸ್ಟ್ ಇಂಡೀಸ್ ಧ್ವಜವನ್ನು ಹಿಡಿದಿರುವುದನ್ನು ತೋರಿಸುತ್ತದೆ. ಈ ನಕಲಿ ಚಿತ್ರವನ್ನು ಫೆಬ್ರವರಿ 3, 2021 ರಂದು ಈ ಫೇಸ್ಬುಕ್ ಪೋಸ್ಟ್​ನಲ್ಲಿ ಪ್ರಕಟಿಸಲಾಗಿದೆ. ಇದನ್ನು ನೂರಾರು ಜನರು ಹಂಚಿಕೊಂಡಿದ್ದಾರೆ.

ಅಷ್ಟೇ ಅಲ್ಲದೇ ಈ  ಪೋಸ್ಟ್ ಅನ್ನು ವೀಕ್ಷಿಸಲು ಕ್ಲಿಕ್ ಮಾಡಿದಾಗ, ಫೋಟೋವನ್ನು ಮಾರ್ಫಿಂಗ್​ ಮಾಡಲಾಗಿದೆ. ಇದು ನಕಲಿ ಎಂದು ತಿಳಿದು ಬಂದಿದೆ.


चमचो की नई राजमाता रिहन्ना ।। अब आप सब कुछ समझ जाइये

Posted by Jitendra Pratap Singh on Wednesday, 3 February 2021


ಪಾಕಿಸ್ತಾನದ ಧ್ವಜ ಹಿಡಿದು ಶೇರ್​ ಮಾಡಿರುವ ಈ ಚಿತ್ರದ ಕೆಳಗೆ  '' ರಿಹಾನ್ನಾ ಸರ್ಕಾರಿ ವಿರೋಧಿ ಗುಂಪಿನ ಹೊಸ ಗಾಡ್ ಮದರ್. ಅವಳು ನಿಜವಾಗಿಯೂ ಯಾರೆಂದು ಈಗ ನೀವು ಅರ್ಥಮಾಡಿಕೊಳ್ಳಬಹುದು. ” ಎಂದು ಬರೆದುಕೊಂಡಿದ್ದಾರೆ.ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಮಸೂದೆ ವಿರೋಧಿಸಿ ನಡೆಯುತ್ತಿರುವ ಹೋರಾಟ ಕುರಿತು ಪೋಸ್ಟ್ ಹಂಚಿಕೊಳ್ಳುವ ಮೂಲಕ ರಿಹಾನ್ನಾ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. 100 ಮಿಲಿಯನ್​ಗೂ ಹೆಚ್ಚು ಟ್ವಿಟರ್​ ಅನುಯಾಯಿಗಳನ್ನು ಇವರು ಹೊಂದಿದ್ದು, ಇವರ ಟ್ವೀಟ್​ ವಿರುದ್ಧ ಸಾಕಷ್ಟು ಟೀಕೆಗಳು , ಮನ್ನಣೆಗಳು ವ್ಯಕ್ತವಾಗುತ್ತಿದೆ.

ಇದನ್ನು ಓದಿ: ರೈತರು ನಡೆಸಿದ ಹೆದ್ದಾರಿ ತಡೆ ಹೋರಾಟ ಯಶಸ್ವಿ; ಮುಂದೆಯೂ ಶಾಂತಿಯುತ ಪ್ರತಿಭಟನೆ ನಡೆಸಲು ನಿರ್ಧಾರ

ಜುಲೈ 1, 2019 ರಂದು ಐಸಿಸಿಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮೂಲ ಫೋಟೋವನ್ನು ಇಲ್ಲಿ ಪ್ರಕಟಿಸಲಾಗಿದೆ ಎಂದು ಎಎಫ್ಪಿ ಫ್ಯಾಕ್ಟ್ಚೆಕ್ ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಹುಡುಕಾಟದಲ್ಲಿ ಕಂಡುಹಿಡಿದಿದೆ. ರಿಹಾನ್ನಾ ವೆಸ್ಟ್ ಇಂಡೀಸ್ ಕ್ರಿಕೆಟ್​ನ ಅಧಿಕೃತ ಲಾಂಛನ ಹೊಂದಿರುವ ಧ್ವಜವನ್ನು ಹಿಡಿದಿದ್ದಾರೆ. ''ವೆಸ್ಟ್ ಇಂಡೀಸ್​ಗೆ ಬೆಂಬಲ ನೀಡಲು ಯಾರಿದ್ದಾರೆ ನೋಡಿ..! ರಿಹಾನ್ನಾ ಅವರ ಹೊಸ ಸಿಂಗಲ್ ಶಟ್ ಅಪ್ ಮತ್ತು ಕವರ್ ಡ್ರೈವ್ ಅನ್ನು ನೋಡಿ'' ಎಂದು ಐಸಿಸಿ ಟ್ವೀಟ್ ಮಾಡಿತ್ತು.

ಅಲ್ಲದೆ, ವೆಸ್ಟ್ ಇಂಡೀಸ್ ಕ್ರಿಕೆಟ್ ಕ್ರೆಸ್ಟ್ನೊಂದಿಗೆ ಹೆಣೆದ ಕ್ಯಾಪ್ ಧರಿಸಿ ರಿಹಾನ್ನಾ ತನ್ನ ಫೋಟೋವನ್ನು ಜುಲೈ 2, 2019 ರಂದು ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದರು. ವೆಸ್ಟ್ ಇಂಡೀಸ್ 2019 ರ ಕ್ರಿಕೆಟ್ ವಿಶ್ವಕಪ್ ಸಮಯದಲ್ಲಿ ಇಂಗ್ಲೆಂಡ್ನ ಚೆಸ್ಟರ್-ಲೆ-ಸ್ಟ್ರೀಟ್ನಲ್ಲಿ ಜುಲೈ 1, 2019 ರಂದು ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ರಿಹಾನ್ನಾ ವೆಸ್ಟ್ ಇಂಡೀಸ್ಗೆ ಬೆಂಬಲ ನೀಡಲು ಸ್ಟೇಡಿಯಂಗೆ ಬಂದಿದ್ದರು.
Published by: Seema R
First published: February 6, 2021, 5:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories