ನಿಗದಿ ಪಡಿಸಿದ ಅವಧಿಗೂ ಮೊದಲೇ ಸಾಲಮುಕ್ತಗೊಂಡ ರಿಲಾಯನ್ಸ್​; ಮುಖೇಶ್ ಅಂಬಾನಿ ಘೋಷಣೆ

ನಾವು ಅಂದುಕೊಂಡಿದ್ದಕ್ಕಿಂತಲೂ ಮೊದಲೇ ರಿಲಾಯನ್ಸ್​ ಸಾಲವನ್ನು ತೀರಿಸಿದ್ದೇವೆ. ಈ ಮೂಲಕ ಷೇರುದಾರರಿಗೆ ನಾನು ನೀಡಿದ್ದ ಭರವಸೆಯನ್ನು ಪೂರೈಸಿದ್ದೇನೆ ಎಂದು ಅಂಬಾನಿ ಹೇಳಿದ್ದಾರೆ.

ಮುಖೇಶ್​ ಅಂಬಾನಿ

ಮುಖೇಶ್​ ಅಂಬಾನಿ

 • Share this:
  ಮುಂಬೈ (ಜೂ.19): ವಿಶ್ವದ ಪ್ರಖ್ಯಾತ ಹೂಡಿಕೆದಾರರು ರಿಲಾಯನ್ಸ್​ ಇಂಡಸ್ಟ್ರೀಸ್​ ಒಡೆತನದ ಜಿಯೋ ಮೇಲೆ ಸಾಕಷ್ಟು ಬಂಡವಾಳ ಹೂಡಿಕೆ ಮಾಡಿದ್ದಾರೆ. ಪರಿಣಾಮ ನಿಗದಿ ಪಡಿಸಿದ ಅವಧಿಗೂ ಮೊದಲೇ ರಿಲಾಯನ್ಸ್​ ಇಂಡಸ್ಟ್ರೀಸ್​ ಸಾಲ ಮುಕ್ತಗೊಂಡಿದೆ ಎಂದು ರಿಲಾಯನ್ಸ್​ ಮುಖ್ಯಸ್ಥ ಮುಖೇಶ್​ ಅಂಬಾನಿ ತಿಳಿಸಿದ್ದಾರೆ.

  2021 ಮಾರ್ಚ್​​ ತಿಂಗಳ ಒಳಗಾಗಿ ರಿಲಾಯನ್ಸ್​ ಸಾಲ ಮುಕ್ತಗೊಳ್ಳಲಿದೆ ಎಂದು ಆರಂಭದಲ್ಲಿ ಅಂಬಾನಿ ಷೇರುದಾರರಿಗೆ ಭರವಸೆ ನೀಡಿದ್ದರು. ಷೇರುದಾರರಿಗೆ ನೀಡಿದ ಭರವಸೆಯನ್ನು ಅಂಬಾನಿ ಈಡೇರಿಸಿದ್ದು, ನಿಗದಿ ಪಡಿಸಿದ ಅವಧಿಗೂ 10 ತಿಂಗಳು ಮೊದಲೇ ರಿಲಾಯನ್ಸ್​ಅನ್ನು ಸಾಲಮುಕ್ತಗೊಳಿಸಿದ್ದಾರೆ.

  ನಾವು ಅಂದುಕೊಂಡಿದ್ದಕ್ಕಿಂತಲೂ ಮೊದಲೇ ರಿಲಾಯನ್ಸ್​ ಸಾಲವನ್ನು ತೀರಿಸಿದ್ದೇವೆ. ಈ ಮೂಲಕ ಷೇರುದಾರರಿಗೆ ನಾನು ನೀಡಿದ್ದ ಭರವಸೆಯನ್ನು ಪೂರೈಸಿದ್ದೇನೆ ಎಂದು ಅಂಬಾನಿ ಹೇಳಿದ್ದಾರೆ.

  ಕೇವಲ 78 ದಿನಗಳಲ್ಲಿ ರಿಲಾಯನ್ಸ್​ಗೆ 1,68,818.95 ಕೋಟಿ ರೂಪಾಯಿ ಹರಿದು ಬಂದಿದೆ.1,15,693 ಕೋಟಿ ರೂಪಾಯಿ ಹೂಡಿಕೆದಾರರಿಂದ ಸಂಗ್ರಹಿಸಿದರೆ, 53,124.20 ಕೋಟಿ ರೂಪಾಯಿ ಹಣವನ್ನು ಷೇರು ಮಾರಾಟದ ಮೂಲಕ ಪಡೆಯಲಾಗಿದೆ ಎಂದು ರಿಲಾಯನ್ಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

  ಇದನ್ನೂ ಓದಿ: ಜಿಯೋ ಪ್ಲಾಟ್​ಫಾರಂಗೆ 11ನೇ ಹೂಡಿಕೆ; 11,367 ಕೋಟಿಗೆ ಶೇ.2.32 ಷೇರು ಖರೀದಿಸಿದ ಸೌದಿ ಅರೇಬಿಯಾದ ಪಿಐಎಫ್

  ಮೊದಲ ಬಾರಿಗೆ ಅಮೆರಿಕದ ಟೆಕ್​ ಸಂಸ್ಥೆ ಫೇಸ್​ಬುಕ್ ಜಿಯೋದ ಶೇ.9.99 ಪಾಲನ್ನು ಖರೀದಿಸಿತ್ತು. ಇದರ ಮೌಲ್ಯ 43,574 ಕೋಟಿ ರೂಪಾಯಿ ಆಗಿದೆ. ಇನ್ನು, ಖಾಸಗಿ ಹೂಡಿಕೆ ನಿರ್ವಹಣಾ ಸಂಸ್ಥೆಯಾ ಸಿಲ್ವರ್ ಲೇಕ್ ಜಿಯೋದಲ್ಲಿ ಶೇ. 1 ಪಾಲನ್ನು 5,655.75 ಕೋಟಿ ರೂ.ಗೆ ಖರೀದಿಸಿತ್ತು. ಜಿಯೋದ ಶೇ.2.3 ಪಾಲನ್ನು 11,367 ಕೋಟಿ ರೂಪಾಯಿಗೆ ವಿಸ್ತಾ ಸಂಸ್ಥೆ ಪಡೆದುಕೊಂಡಿತ್ತು. ನಂತರ ಜಿಯೋ ಸಂಸ್ಥೆ ಶೇ. 1.34 ಪಾಲನ್ನು 6598.38 ಕೋಟಿ ರೂಪಾಯಿಗೆ ಜನರಲ್​ ಅಟ್ಲಾಂಟಿಕ್​  ಹಾಗೂ ಶೇ. 2.32 ಪಾಲನ್ನು 11,367 ಕೋಟಿ ರೂಪಾಯಿಗೆ ಕೆಕೆಆರ್​ ಖರಿದಿಸಿದ್ದು ಸೇರಿ ಒಟ್ಟು 11 ಹೂಡಿಕೆಗಳು ಜಿಯೋ ಮೇಲೆ ಆಗಿವೆ. ಇದರ ಜೊತೆ ಇತ್ತೀಚೆಗೆ ಆರ್​ಐಎಲ್ ರೈಟ್​ ಇಸ್ಯೂ (ಷೇರು ಮಾರಾಟ) ಮಾಡಿತ್ತು.

    
  First published: